ಬಹಳ ಕಾಡಿಸಿ ಪೀಡಿಸಿ ತಮ್ಮ ಶಾಲೆಯಲ್ಲಿ
ಭಾಷಣ ಮಾಡಿಸಲು ಅವರನ್ನು ಕರೆದು ತಂದಿದ್ದ
ಹೆಡಮಾಸ್ತರ್ ಹೆಮ್ಮೆಯಿಂದ ಭಾಷಣ ಮಾಡಿದರು
“ನನ್ನ ಕಳಕಳಿಯ ಕರೆಗೆ ಓಗೂಟ್ಟು ಬಂದು” ಇತ್ಯಾದಿ ಇತ್ಯಾದಿ
ಮಕ್ಕಳೆ ನಾನು ನಿಮ್ಮ ಮಾಸ್ತರರ ಕಳಕಳಿಯ ಕರೆಗೆ
ಓಗೂಟ್ಟು ಬಂದದ್ದಲ್ಲ, ಅವರ ಕರಕರೆ
ಸಾಕಾಗಿ ಬಂದದ್ದು ಎಂದರು
ಕಡಲತೀರದ ಭಾರ್ಗವ ನಿಷ್ಠುರ ಸತ್ಯವಾದಿ.
*****


















