
ಚಾಕ್ಪೀಸನ್ನು ಮೇಜಿನ ಮೇಲಿಟ್ಟು ಗುರುಗಳು ಮಾಮೂಲಿನಂತೆ ಏಯ್ ಕೋಣ ಯಾಕೆ ಲೇಟ್ ಎಂದು ಗುರ್ರೆಂದು ಗರಾಯಿಸುವುದಕ್ಕೆ ಗಂಟಲು ಸರಿಪಡಿಸುವಷ್ಟರಲ್ಲೇ ನಮ್ಮ ಜಾಣ ಗುಂಡ ನೇರವಾಗಿ ಅವರ ಬಳಿಗೇ ಹೋಗಿ ಕೊಟ್ಟುಬಿಟ್ಟ ಒಂದು ಕ್ಯಾಡ್ಬರೀಸ್ ಚಾಕಲೇಟ್. *****...
ಕಡುಬಿಸಿಲ ಬೇಸಿಗೆಯ ರೌದ್ರರೂಪದ ಯುರಿಯು ಝಳವಾಗಿ ಜುಳು ಜುಳನೆ ಇಳಿಯುತಿದೆ ಜಲಧರನ ರಾಜ್ಯದಾಚೆಯಾ ಗಡಿಯ ರವಿಯು ಸುರಿಸುವದೊ? ರಸವಲ್ಲ! ಬಿಸಿಲು ಉಸಿರಾಗಿದೆ ಕೆಂಡದಾ ಹೂವೊಂದು ಟೊಂಗೆ ಗಿಡವಿಲ್ಲದೆಯೇ ಅರಳಿಹುದು; ತಾಪದಾ ಪರಿಮಳವ ಸುರಿಸಿಹುದು ತನ್ನ ...
ಕಿಸೆಯಲ್ಲಿ ರೂಪಾಯಿ ಇದ್ದೂ ನಾನು ಬಡಪಾಯಿ; ಹೆಂಡತಿಯದು ಜೋರುಬಾಯಿ! *****...
ಇಂದು ನಾವು ಫಾಯಿವ್ಸ್ಟಾರ್ ಹೋಟಲಿನಲ್ಲಿ ಮಲಗಿದ್ದು ಮರೆಯಬಹುದು… ಆದರೆ… ಒಂದು ಕಾಲಕ್ಕೆ… ಒಂದು ದಿನ… ಯಾರದೊ ಕಟ್ಟೆಯ ಮೇಲೆ ಮಲಗಿದ್ದು ಮರೆಯಲೆಂತು ಸಾಧ್ಯ? ಹಾಂ… ಇವತ್ತಿನ ಮಿತಿಗೆ ಐವತ್ತು ವರ್ಷಗಳ ಹಿಂದಿನ ...
ಬಂದೇ ಬರುವುವು ಬಂಗಾರದ ಹೊಂಗಿರಣದ ನಾಳೆಗಳು, ಬಣ್ಣ ಬಣ್ಣದಾ ಬದುಕನು ಬರೆಯಲು ತೆರೆದಿದೆ ಹಾಳೆಗಳು. ಎಲ್ಲೆಲ್ಲೂ ಹೊಗೆಯಾಡಿದೆ ನೋವೇ ಅಳುಕದಿರಲಿ ಮನವು, ಕಲಕದೆ ಬಾಳು ತಿಳಿವುದೆ ಹೇಳು ಜಗದ ದುಃಖ ನೋವು? ನಾಳೆಯ ಬಾಳಿನ ಸವಿಯನು ಕನಸದ ಜೀವವಿಲ್ಲ ಜಗದ...
ರೊಟ್ಟಿ ಮತ್ತು ಹಸಿವು ಮುಖಾಮುಖಿಯಾದ ಪ್ರತಿಕ್ಷಣ ನಿರಾಳತೆ ಬೇರ್ಪಟ್ಟ ಮರುಕ್ಷಣ ಮತ್ತೆ ಚಂಚಲ ಕಾಡಿಸುವ ಕವಿತೆ. *****...
ಸೂರ್ಯ ಬೆಳಕ ಕೊಡುವ ಕಣ್ಣು ಚಂದ್ರ ಬೆಳಕ ಪಡೆದು ಮುಗುಳು ನಗುವ ಹೆಣ್ಣು! *****...
ಹೃದಯ ಆರಿಸುತ್ತಲಿದೆ ಒಂದು ಆಸರೆಗಾಗಿ ಈ ಧೂಳು ತುಂಬಿದ ಓಣಿಯಲಿ ಹೆಜ್ಜೆ ಸಪ್ಪಳಗಳೇ ಕೇಳಿಸುತ್ತಿಲ್ಲ | ಈ ಜೀವನ ಕೊಟ್ಟವನೇ ಕೇಳು ಪರಿತಪಿಸುತಲಿದೆ ಹೃದಯ ಒಂದು ಒಲವಿನ ಭೇಟಿಗಾಗಿ ಅಂತರಾಳದ ಮೂಕ ರಾಗ ಕೇಳಿಸುತ್ತಿಲ್ಲವೇ? ಎಲ್ಲೆಲ್ಲೋ ಹರಿದಾಡಿದ ಮನಸ...
ಓ ಬೆಂಕಿ! ಸಾಗರದ ನೂರ್ಲಕ್ಷ ಅಲೆಗಳಿಗೆ ಬೆಂಕಿ ಹೊತ್ತಿಸಿದಂತೆ ಕೆನ್ನಾಲಗೆಯನೆತ್ತಿ ಹೊರಳಿಸಿದೆ! ಈಗಿನ್ನು – ಕಳೆದಿಲ್ಲ ಅರೆಗಳಿಗೆ!- ದಡದ ಮರಳಿನ ಅಮಿತ ಸೇನೆಯನು ಹಿಂದೊತ್ತಿ, ತಡಿಯೆಲ್ಲ ತನಗೆಂದು, ಮುನ್ಮುಂದೆ ಒತ್ತೊತ್ತಿ, ಮೇಲೇರಿ, ಗರ್...
ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು ಅವಳು ಈ ಪರಿ ಬದಲಾಗಿದ್ದೇ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...
ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....















