ಅದ್ಭುತಂ ಓ ಕವಿಯೆ ನಿನ್ನ ಕಲ್ಪಕ ಶಕ್ತಿ
ಸುಂದರಂ ಬಂಧುರಂ ಮಂಗಲಂ ನಿನ್ನುಕ್ತಿ
ಜಗದಂತರಾಳಗಳ ಸೂತ್ರಧಾರನ ನಲಿಸಿ
ಕಣ್ಗೆ ಕಾಣದ ಭವ್ಯ ಚಿತ್ರಗಳ ನಳವಡಿಸಿ
ಮೆರುಗು ಮೆರುಗಿನ ಬಣ್ಣ ಬಣ್ಣಗಳ ಬಳಿ ಬಳಿದು
ನಿನ್ನ ಕಾಲಲಿ ಮೆಟ್ಟಿ ತರಬಲ್ಲೆ; ನೀಂ ಧೀರ
ಯಾರಿಗೂ ಕಾಣದುದು
ನಿನಗೆ ಕಾಣುವುದು
ಯಾರಿಗೂ ಕೇಳದುದು
ನಿನಗೆ ಕೇಳುವುದು!
ಮೃದು ಕಠಿಣ ಸಿಹಿ ಕಹಿಯು ರುಚಿ ನೀನೆ ನೀನಾಗಿ –
ರಸಿಕರನು ತಣಿಸುವೆಯೊ ಓ! ಮಾನ್ಯ ಧನ್ಯ!
*****
ಠಳಕವಾಡಿ: ೧೯೪೦

















