
ದೂರ ದೂರ ದೂರ ಮುಗಿಲ ದೂರ ದೂರ ನೋಡುವಾ ಆಳ ಆಳ ಆಳ ಕಡಲ ಆಳ ಆಳ ಸೇರುವಾ ದಂಡೆ ಇಲ್ಲ ಬಂಡೆ ಇಲ್ಲ ಆದಿ ಅಂತ ದಾಟುವಾ ನಾದವಿಲ್ಲ ನೋಟವಿಲ್ಲ ಮೌನವೀಣೆ ಮೀಟುವಾ ರಸದ ವಿಶ್ವ ಋತದ ವಿಶ್ವ ಸತ್ಯ ಶಾಂತಿಯನುಪಮಾ ಶಿವನ ಜ್ಯೋತಿ ಶಿವನ ಪ್ರೀತಿ ತಂಪು ತನನ ನಿರ...
ನಾವು ಜಾತ್ಯತೀತರು; ನಮ್ಮಲ್ಲುಂಟು ಜಾತಿಗೊಬ್ಬ ಜಗದ್ಗುರು! *****...
ಮರೆವಿಗೂ ನನಗೂ ಬಹು ಹಿಂದಿನಿಂದ ನಂಟು ಅಂಟಿಕೊಂಡು ಬಂದಿದೆ. ಮರೆವು ಅಂದರೆ ಇಲ್ಲಿ ಅರವತ್ತರ ಅರಳು ಮರಳೂ ಅಲ್ಲ; ನಿಜದ ನೆನಹನ್ನು ಮರೆತು, ನಿಂತ ಪಾರಮಾರ್ಥಿಕ ಮರೆವೂ ಅಲ್ಲ. ಜೀವನವನ್ನು ಎದುರಿಸುಲಿಕ್ಕಾಗದೆ, ಮರೆವಿನ ವಿಶಾಲ ಬಾಹುವಿನಲ್ಲಿ ಆಶ್ರಯ ...
ಚೈತ್ರ ಎಷ್ಟು ಬಂದವೋ ಕದವ ಬಡಿದು ನಡೆದವೋ ಹಕ್ಕಿ ಕೊರಳು ಕರೆಗಂಟೆಯ ಒತ್ತಿ ಒತ್ತಿ ದಣಿದವೋ ತೆರೆಯ ಬರದ ಬಾಗಿಲೇ, ನೆಲ ಹಾಯದ ನೇಗಿಲೇ ಇದ್ದರಾಯ್ತೆ ಬದುಕು ಬರಿದೆ ? ನುಡಿಯಬೇಕು ಮದ್ದಲೆ ಇರುವುದೇಕೆ ಕೊರಡು ಹೀಗೆ ಹೊರಚೆಲ್ಲದೆ ಬೆಂಕಿ, ಕೂಡಿ ಕಳೆದು...
ಹಸಿವಿಂಗಿಸಿದ ರೊಟ್ಟಿಯ ಧನ್ಯತೆ ರೊಟ್ಟಿಯ ಪಡೆಯಬಲ್ಲ ಹಸಿವಿನ ದಾರ್ಷ್ಟ್ಯದ ಎದುರು ಅಮುಖ್ಯ....
ಬುವಿಯ ಛಾಯಾ ಚಿತ್ರವ ಬಯಸಿ ಬಾನು ಕ್ಲಿಕ್ ಮಾಡಿದ ಪ್ಹ್ಲಾಷ್ ಮಿಂಚಾಗಿರ ಬೇಕು! *****...
ಗಾಳಿ ಸುಮ್ಮನೆ ಸರಿದು ಹೋಗಿದೆ ಎದೆಯ ತಳಮಳ ಕಂಪನ ಹೊತ್ತು ಈಗ ಸೂರ್ಯ ಮುಳುಗಿದ್ದಾನೆ ಕತ್ತಲೆಯ ಗೂಡಿನೊಳಗೆ ಹಕ್ಕಿಮರಿಗಳು ಏನೊಂದೂ ಹೇಳುವದಿಲ್ಲ ತಬ್ಬಿಮಲಗಿವೆ ಸುಮ್ಮನೆ ಒಂದನ್ನೊಂದು. ರಾತ್ರಿ ಚಿಕ್ಕಿಗಳು ಮೌನದಲಿ ಮಿನುಗುತ್ತಿವೆ ಸರಿದು ಹೋದಗಾಳಿ...
ಮುತ್ತಿನ ಸರೋವರದಲ್ಲಿ ಎದ್ದಿ ಮೃದುಮಾಡಿದರೂ ತೀರಲಾರದ ಪ್ರೀತಿಗೆ ಯೌವನ ಬರಿಯ ದಾಹ....
ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ ಹೊಸೆದು ಹಾಕುವ ಹೆಂಡತಿಯಿದ್ದಳು. ಪಕ್ಕದ ಪ್ರೈಮರಿ ಸಾಲೆಗೆ ...
ಬೇವುಬೆಲ್ಲ ತಿನ್ನಬೇಕು ಸಮಾಸಮ ಎಂದರೆ ನಲ್ಲ ಬೇವು ನಿನಗಿರಲಿ ಬೆಲ್ಲ ನನಗಿರಲಿ ಅಲ್ಲಿಗೆ ಸಮ ಅನ್ನುವನಲ್ಲ *****...
ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...















