ಒಂದಾನೊಂದು ಕಾಡಿನಲ್ಲಿ ಮದೋತ್ಕಟವೆಂಬ ಸಿಂಹವಿತ್ತು. ಅದಕ್ಕೆ ಹುಲಿ, ನರಿ, ಕಾಗೆಗಳು ಮಂತ್ರಿಗಳಾಗಿದ್ದುವು. ಅವು ಅಲ್ಲಲ್ಲಿ ತಿರುಗುತ್ತಿರುವಾಗ ಕ್ರಥನಕ ಎಂಬ ಒಂಟೆಯನ್ನು ಕಂಡುವು. ಸಿಂಹವು “ಇದೇನು ಈ ವಿಚಿತ್ರ ಮೃಗ! ಇದೇನು ಗ್ರಾಮದ ಮೃಗವೋ? ಅರಣ್ಯದ ಮೃಗವೋ? ತಿಳಿದು ಬನ್ನಿ? ಎಂದು ಅಪ್ಪಣೆ ಮಾಡಿತು. ...

ಅಪ್ಪಾಜಿ ಅಪ್ಪಾಜಿ ಎಲ್ಲಿಗೆ ಹೋಗಿದ್ದೆ? ಆಡಲು ನಿನಗೆ ಹುಣ್ಣಿಮೆ ಚೆಂಡನು ತರಲು ಹೋಗಿದ್ದೆ ಅಪ್ಪಾಜಿ ಅಪ್ಪಾಜಿ ಹೇಗೆ ಹೋಗಿದ್ದೆ? ಮೋಡವನೇರಿ ತಾರೆಗಳೂರಲಿ ಹುಡುಕಿ ಹೋಗಿದ್ದೆ ಅಪ್ಪಾಜಿ ಅಪ್ಪಾಜಿ ಮೋಡವೆಲ್ಲಿ ಈಗ? ನನ್ನನು ಇಳಿಸಿ ತನ್ನಯ ಊರಿಗೆ ಹಾರ...

ಮೇಷ್ಟ್ರು ವೆಂಕಟಸುಬ್ಬಯ್ಯ ಜನಾರ್ದನಪುರಕ್ಕೆ ರಂಗಣ್ಣ ಹಿಂದಿರುಗಿದ್ದಾಯಿತು. ತಿಮ್ಮರಾಯಪ್ಪ ಹೇಳಿ ಕೊಟ್ಟಿದ್ದ ಹಾಗೆ ಕಲ್ಲೇಗೌಡರಿಗೆ ಕಾಗದಗಳನ್ನು ಬರೆದದ್ದೂ ಆಯಿತು. ಕಡೆಗೆ ರಿಜಿಸ್ಟರ್ಡ್ ಕಾಗದವನ್ನೂ ಅದಕ್ಕೆ ಒಂದು ಜ್ಞಾಪಕದೋಲೆಯನ್ನೂ ಕಳಿಸಿದ್ದ...

ದೇವರೆಲ್ಲಿ ಎಂದು ಊರೂರು ನೋಡುವೆಯೇನು? ಪಶು-ಪಕ್ಷಿ ಗಿಡ-ಮರ ಪರಿಸರದಲ್ಲಿರುವನು ಅವುಗಳ ರಕ್ಷಿಸು ದೇವರೊಲಿವನು ನೋಡಾ! ಅವಳಿಯೆ ನಿನ್ನಳಿವು ಖಂಡಿತಾ ಮೂಡಾ! *****...

ನೀನು ಯೌವನದೊಡನೆ ಕೂಡಿಕೊಂಡಿರುವಾಗ ಕನ್ನಡಿಯು ನನ್ನ ವಯಸ್ಸನ್ನೆ ತೋರಿಸದು, ಆದರೀ ನಿನ್ನ ಹಣೆಯೊಳು ನೆರಿಗೆ ಕಂಡಾಗ ಇನ್ನು ಮುಗಿಯಿತು ನನ್ನ ಕಾಲ ಎನಿಸುವುದು ನಾ ನಿನ್ನೊಳಿರುವಂತೆ ನೀನಿರುವೆ ನನ್ನೊಳಗೆ, ನಿನ್ನ ಮೈಚೆಲುವೆಲ್ಲ ನನ್ನ ಆತ್ಮದ ತೊಡಿಗ...

ಶೌರ್ಯದಲಿ ಗೆದ್ದವನ ವಧುಗಳು ಕಾಶಿ ಮತ್ತು ಅಯೋಧ್ಯೆಗಳ ನಡುವಣ ಪುಟ್ಟ ಪಟ್ಟಣ ರಜತನಗರಿಯ ಛತ್ರದಲ್ಲಿ ರಾತ್ರಿ ತಂಗುವಾಗ ರಾಜಕುವರಿಯರಿಗೆ ಪ್ರತ್ಯೇಕ ಕೊಠಡಿಯೊಂದು ಸಿಗುವಂತೆ ಭೀಷ್ಮರು ಏರ್ಪಾಡು ಮಾಡಿದ್ದರು. ಮರುದಿನ ಅಯೋಧ್ಯೆಯಲ್ಲಿ ತಂಗಬೇಕಾಯಿತು. ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...