ಪಂಚ್ಮಿ ಬಂದೇತೆ ಪಂಚೇತ್ಯಾಗೇತೆ

ಪಂಚ್ಮಿ ಬಂದೇತೆ ಪಂಚೇತ್ಯಾಗೇತೆ
ಪುಂಗಿ ತಂಗಿಲ್ಲಾ ||ಪಲ್ಲ||

ಮೋಸಂಬ್ವನದಾಕಿ ತೆಂಗಿನ್ ಬನದಾಕಿ
ಇದ್ದಿದ್ಹಾಂಗ ಇಲ್ದಂಗಾದಿಯಾ
ಗಿಣಿಮೂಗು ಚಲುವಾಕಿ ಹೊಳಿತುಂ ಜಡಿಯಾಕಿ
ಅಗಸಿ ಆಚಿ ಚೊಗಚಿ ಆದಿಯಾ ||೧||

ಕಡೆಕಡೆ ಪಂಚ್ಮ್ಯಾಗಿ ಕಲ್ಲಂಗ್ಡಣ್ಣಾಗಿ
ಗಲ್‍ಗಲ್ಲಂತ ಕಲ್‍ಕಲ್ಲಾದಿಯಾ
ಅಣೋರಣ್ಣಣ್ಣಾ ಸುಳ್ಳಾರ್ ಸುಣ್ಣಣ್ಣಾ
ಸುಳ್‍ಸುಳ್ಳಂತ ಮಣ್‍ಮಣ್ಣಾದಿಯಾ ||೨||

ಜೂರ್‌ಜೂರ್ ಜೋಲಿನಾ ಜೋಕಾಲ್ಮ್ಯಾಲಿನಾ
ಜೀಕ್‍ಜೀಕ್ಕೊಂತ ಜೀವಾ ಕೊಂದಿಯಾ
ಬರ್ತೇನಣ್ಣಣ್ಣಾ ಬಂಗಾರಣ್ಣಣ್ಣಾ
ಅನ್ ಅನ್ಕೊಂತ ಬಾವಿಬಿದ್ದಿಯಾ ||೩||

ಬಾರ್‌ಬಾರಣ್ಣಣ್ಣಿ ಅಂಜೂರಣ್ಣಣ್ಣಿ
ತಾರೆ ಬಾರೆ ಯಾರೆ ಆದಿಯಾ
ಚಂಚಂಚಂದಾಗಿ ಚಂಪಕ್ಕಾಗಾಗಿ
ಕುಂಚಿಗೊಂಬಿ ಕುಣಿಯಾಕ್ಕುಂತಿಯಾ ||೪||

ತೌರೂರ್ ತುಂತುಂಬ ನಿಮ್ಮವ್ ನಿಂಗವ್ವ
ಹುಚ್ಚುಚ್ಚಾಗಿ ಕಿಚ್ಚಾ ಹಾರ್‍ಯಾಳೆ
ಚಿಂಚಿಂ ಚಿನ್ನಪ್ಪ ಚಿನ್ನಪ್ ನಿನ್ನಪ್ಪ
ಬಾಯ್‌ಬಾಯ್ ಬಿಟ್ಟು ಬಾವಿ ಬಿದ್ದಾನೆ ||೫||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೇಗೆ?
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೬೩

ಸಣ್ಣ ಕತೆ

 • ಅಹಮ್ ಬ್ರಹ್ಮಾಸ್ಮಿ

  ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

 • ಉಪ್ಪು

  ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

 • ಕರಿ ನಾಗರಗಳು

  ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

 • ಸ್ನೇಹಲತಾ

  ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

 • ಮನೆ “ಮಗಳು” ಗರ್ಭಿಣಿಯಾದಾಗ

  ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…