ನಾ ಚೆಲುವಿಯೆಂದು ಅತಿರೂಪ ಸುಂದರಿಯೆಂದು ಗೆಳತೀ ನಿನಗೇಕೆ ಮತ್ಸರ? ಅರಿತುಕೊ ಎಂದೆಂದಿಗೂ ಗುಣವೇ ಪ್ರಧ್ಯಾನವೆಂದು ಬಹಿರಂಗ ಚೆಲುವೆಲ್ಲಾ ನಶ್ವರ *****...
ಮತ್ತದೇ ತಪ್ಪು ರೈಲು ಹೋದ ಮೇಲೆ ಬಂದ ಟಿಕೇಟು ಕಷ್ಟ ಈ ರೈಲು ಹತ್ತುವುದು ಇಳಿಯುವುದು ದಾರಿಯಲ್ಲಿ ಎದುರಾದವ ರಿಗೆಲ್ಲ ಸಲಾಮು ತಿಳಿಯದೇ ಯಾರ ಮರ್ಮ ಯೋಚಿಸುತ್ತ ನಿಂತೆ ನಿಂತ ಲ್ಲೇ ನೀರಾಗಿ ಹರಿದೆ ಹತ್ತುವ ಯೋಗವಿಲ್ಲ ಬಿಡಿ ಬರಬಹುದು ಇನ್ನೊಂದು ರೈಲು...
ಧನಿಕನ ತಿಜೋರಿ ಕೀ ಅವನ ಸಂಪತ್ತನ್ನು ಮೆರೆಸಿ ಅವನೆದೆಯನ್ನು ಸುಖದೊಳದ್ದುವುದು; ಎಲ್ಲೊ ಒಮ್ಮೊಮ್ಮೆ ತೆರೆಯುವನು ಅವನು ಅದನ್ನು, ಇಲ್ಲವೋ ಅಪರೂಪ ಸುಖ ಹಳಸಿಹೋಗುವುದು. ಅವನಂತೆ ನಾನು ಸಹ. ಉದ್ದ ಎದೆಸರದಲ್ಲಿ ಎಲ್ಲೊ ಅಲ್ಲಲ್ಲಷ್ಟೆ ಹರಳು ಮಿಂಚುವುದು...
ಭುಗಿಲೆದ್ದ ಬೆಂಕಿ ಗಂಡನ ನಿವೃತ್ತಿ ಜೀವನವನ್ನು ಸಂತಸದಿಂದಲೇ ಸ್ವಾಗತಿಸಿದ್ದ ಸುಶೀಲಮ್ಮನಿಗೆ ನಡೆದ ಘಟನೆಯಿಂದಾಗಿ ತಮ್ಮ ಮುಂದಿರುವ ಇನ್ನೂ ಕೆಲವು ಜವಾಬ್ದಾರಿಗಳನ್ನು ಎಣಿಸಿ ಭಯಗೊಳ್ಳುವಂತಾಯಿತು. ಮೂರು ಮಕ್ಕಳ ವಿದ್ಯಾಭ್ಯಾಸ ಸಂಪೂರ್ಣ ಮಾಡಬೇಕು....
ಬಯಕೆ ಗಿರಲಿ ತೃಪ್ತಿಯ ಬೇಲಿ ಸಂತೃಪ್ತಿಯ ಮಾಲಿ. *****...
ಮಾಗಿದ ದೇಹವಿದು ತೂಗುತಿದೆ ದಿವಸ ನಿತ್ಯವೂ ಸಾಗಿಹುದು ಹಸಿವು ನೀಗಿಸಲು ಈ ಹರ ಸಾಹಸದ ಕೆಲಸ ಹಸಿ ಮೆಣಸಿನಕಾಯಿ ತಿನ್ನಲು ಹೊಟ್ಟೆ ಚುರ್ ಚುರ್ ಕಾಯಕ ಇಲ್ಲದೇ ಉಪವಾಸದಿ ಕುಳಿತರೂ ಹೊಟ್ಟೆ ಚುರ್ ಚುರ್ ಹೊಟ್ಟೆ ಪಾಡಿದು ಜೀವನಕೆ ಜೋಡು ಬಿಡದೇ ಕಾಡುವುದು...
ಸ್ಫೂರ್ತಿ ಬಂದಾಗಲೆಲ್ಲ ಕವನ ಬರೆ ಬರೆದು ಜುಬ್ಬದ ಜೇಬಿಗೆ ಸೇರಿಸುತ್ತಾ ಬಂದ ಕವಿಯ ಕಿಸೆಯಲ್ಲೇ ಕವನ ಸಂಕಲನ ಜುಬ್ಬ ಒಗೆಯುವ ಸಮಯ ಸಂಕಲನ ಬಿಡುಗಡೆ. ***** ೨೬-೦೩-೧೯೯೨...
‘ರಾಜಕೀಯ’ ಎಂಬ ಪದ ಮತ್ತು ಪರಿಕಲ್ಪನೆಗೆ ಪ್ರಜಾಪ್ರಭುತ್ವದಲ್ಲಿ ಅರ್ಥಪೂರ್ಣ ಆಯಾಮ ಒದಗಬೇಕು. ಆದರೆ ನಮ್ಮ ನಾಡಿನಲ್ಲಿ ವ್ಯರ್ಥಪೂರ್ಣ ಆಯಾಮ ಒದಗುತ್ತಿದೆ. ರಾಜಕೀಯವನ್ನು ಕುರಿತು ಮಾತನಾಡುವುದೇ ವ್ಯರ್ಥವೆಂಬ ವಿಷಾದ ಮತ್ತು ಹೇಸಿಗೆಯೆಂಬ ಜಿಗುಪ್ಸೆಯ...
ಅಂಜಿಕೆಯ ತೊಟ್ಟು ಕಳಚಿಟ್ಟು ಅವಳೊಳಗೆ ಒಂದಾದರೆ ಬದುಕು ಹಸನಾಗುವುದೆಂಬ ಕಲ್ಪನೆ ಭ್ರಮೆಯೂ ಇರಬಹುದು *****...
ಇದೇ ಭುವನಾ ಶಿವನ ಕವನಾ ನಾವು ದೇಗುಲ ವಾಗುವಾ ನುಡಿವ ದೇಗುಲ ನಡೆವ ದೇಗುಲ ವಿಶ್ವ ಜಂಗಮವಾಗುವಾ ಶಿವನ ಒಡ್ಡೋಲಗದಿ ನಾವೆ ನಂದಿ ಭೃಂಗಿ ಗಣಗಳು ನಾವೆ ಪಾರ್ವತಿ ಗಂಗೆ ಗೌರಿಯು ಬನ್ನಿ ಕುಣಿಯುವ ಗೆಳೆಯರು ಮಣ್ಣ ಭೂಮಿಯ ಮಂತ್ರ ಮಾಡುವ ಚಂದ ಸ್ವರ್ಗವ ಕಟ್...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...
ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...







