ದುಡಿಮೆಯೊಳನ್ನದೊಡಗೂಡಿ ಜ್ಞಾನವಿರುತಿರಲು ಗಾಡಿ ಪುಸ್ತಕಗಳದ್ಯಾಕೋ ಮಾಡಿ ಕಲಿಯದ ಮೇಲೆ ಕುಡಿದುಣದೆ ಬರಿದು ಟಾನಿಕ್ಕುಗಳಿಂದೇನಹುದು? ಬಡತನದೊಳತಿ ಬಡತನವಜೀರ್ಣದೊಡಲು ಮೌಢ್ಯದೊಳತಿ ಮೌಢ್ಯ ದುಡಿಯದುಂಬೊಲವು – ವಿಜ್ಞಾನೇಶ್ವರಾ *****...

ಇಂದಿನಿಂದ ನೂರು ವರ್ಷದ ನಂತರ ನನ್ನ ಕವಿತೆಯನ್ನು ಓದುವಾತ ನೀನು ಯಾರು.. ಹೃದಯದ ಒಲವಿನ ಲತೆಯಲ್ಲಿ ಚಿಗುರಿರುವ ವಸಂತದ ಬೆಳಗಿನ ಸರಳವಾದ ಸಖ್ಯವನ್ನು ನಿನಗೆ ಮುಟ್ಟಿಸಲು ಅನುವಾದದಲ್ಲಿ ಹೂವಿನ ಗಂಧ ಹಕ್ಕಿಯ ಹಾಡಿನ ಛಂದ ಇಂದಿನ ಬಣ್ಣದ ಹೊಳಪು ನೂರು ವ...

ನಮ್ಮ ಮನೆಯಲೆ ಹುಟ್ಟಿ ನಮ್ಮನೆಯ ಮಗಳಾಗಿ ಪ್ರೀತಿ ವಾತ್ಸಲ್ಯಗಳ ನಮಗೆ ಉಣಿಸಿ ನಮ್ಮ ಸುಖದುಃಖಗಳ ನಡುವೆ ನೀನು ನಲಿದಾಡಿ ಸಂತಸದಿ ನಗುನಗುತ ಬೆಳೆದು ಬಂದವಳು ನೀ ನಲ್ಲವೇ ನಮ್ಮ ಮಗಳಲ್ಲವೆ || ಸುಳ್ಳು ತಟವಟ, ಮೋಸ ವಂಚನೆಯ ಅರಿಯದಿಹ ಮುಗ್ಧ ಬಾಲೆಯು ನೀ...

ಹಿಂದೆ ಒಂದು ಕಾಲದಲ್ಲಿ ನಮ್ಮ ಬ್ರಹ್ಮಾಂಡದಲ್ಲಿ ಅಣುಗಳೆಲ್ಲ ಒಂದುಗೂಡಿ ಬಂಧಗೊಳ್ಳುತಿರಲು, ಅಲ್ಲಿ ಒತ್ತಡಕ್ಕೆ ಸಿಲುಕಿಕೊಂಡ ಬಳಿಕ ಸೂಕ್ತ ಸಮಯದಲ್ಲಿ ಮಹಾಸ್ಫೋಟದಿಂದ ಶಕ್ತಿ ಛಿದ್ರಗೊಂಡು ಚಲಿಸುವಲ್ಲಿ ಸೂರ್ಯನೊಂದು ಶಕ್ತಿಯಾಗಿ, ಅಷ್ಟಗ್ರಹವು ಸುತ್...

ಎಷ್ಟೊತ್ತಿನ ವರೆಗೆ ನಿನ್ನ ಕಣ್ಣ ಮುಚ್ಚಾಲೆ ನೀನು ಕಾಡಿದರೆ ನಾ ಸಹಿಸೆನು ಎನ್ನ ಮನದ ಭಾವಗಳು ನಿನಗಾಗಿ ಸೋತಿವೆ ನಿನ್ನ ರೂಪಕಾಣದೆ ನಾ ತಾಳೆನು ಏಸು ಮನುಜರಿದ್ದರೂ ನಾನು ತಬ್ಬಲಿ ಪ್ರಪಂಚ ಇದು ಕಾಣದ ಹೆಬ್ಬುಲಿ ಎದುರಾಳಿಯಂತೆ ನಿತ್ಯ ಹೋರಾಟವು ನನ್ನ...

ನೊಯ್ಯದಿರು ಮನವೇ ಯಾರೇ ತುಚ್ಯವಾಗಿ ಕಂಡರೂ| ತಳಮಳಿಸದಿರು ಜೀವವೇ ವಿಪರೀತ ಪೃಚ್ಚರ ಮಾತಿಗೆ|| ಅವಮಾನ ಮಾಡಲೆಂದೇ ಕಾಯುವವರು ಕೆಲವರು| ತಲ್ಲಣಿಸದಿರು ಜೀವವೇ ಕಾಲವೇ ಉತ್ತರಿಸುವುದು ಮೆಲ್ಲಗೆ|| ನಿನ್ನ ಒಳಮನಸನೊಮ್ಮೆ ಕೇಳು ಇದು ನಿನಗೆ ಸರಿಯೇ ಎಂದು|...

ಎರಡು ಪುಟ್ಟ ಹುಡುಗಿಯರು “ಟೂ, ಟೂ” ಎಂದು ಜೊತೆ ಬಿಟ್ಟರು. ಒಂದು ಪಟ್ಟು ಹುಡುಗ ಬಂದು ಕೇಳಿದ “ಏಕೆ ಟೂ ಬಿಡ್ತೀಯಾ?” ಎಂದು. “ಅಲ್ವೋ, ಅವಳು ನನ್ನ ಎಡಗಾಲಿನ ಚಪ್ಪಲಿ ಬಲಗಾಲಿನ ಕಡೆ ಇಟ್ಟಿದ್ದಾಳೆ. ನೀನೆ ಹೇಳು,...

ಬಡತನ ಬಂದಾಗ ಸಂಬಂಧ ಸುಟ್ಟಿತು ನಮ್ಮ ಕರುಳೇ ನಮಗೆ ಕೈಕೊಟ್ಟು ನಕ್ಕಿತು. ಬಿರುಕು ಬಿಟ್ಟ ಗೋಡೆ ಮುರುಕು ಮಾಳಿಗೆ ಮನೆ ಮಳೆಯು ಸುಂಟರಗಾಳಿ ಮನಸಾಗಿ ಮೂಡಿತು. ಸುಟ್ಟ ಬೂದಿಯ ಮ್ಯಾಲೆ ಸತ್ತ ಸಂಬಂಧಗಳು ಕೊಂಡಿ ಕಳಚಿ ಬಿದ್ದ ಕೈ ಕಾಲು ಮೂಳೆಗಳು. ಅಕ್ಕ ತ...

ವಿಲಿಯಂ ಬ್ಲೇಕ್ ರೋಮ್ಯಾಂಟಿಸಿಸಂನ ಆದ್ಯ ಹಾಗೂ ಪ್ರಮುಖ ಕವಿ. ಆದಾಗ್ಯೂ ಅನುಭಾವ ಹಾಗೂ ಸಚಿತ್ರ ಅಭಿವ್ಯಕ್ತಿಯಿಂದ ಸಶಕ್ತ ಸಾಹಿತ್ಯ ಆತನದು. ಆ ಮೂಲಕ ಕಾವ್ಯವನ್ನು ಪರಿಣಾಮಕಾರಿಗೊಳಿಸುತ್ತಾನೆ. ಪ್ರಾಣಿ ಪ್ರೀತಿ, ವಿವಿಧ ಆಯಾಮ ಹಾಗೂ ಪೃಕ್ರಿಯೆಗಳ ಮೂ...

೧ ಇನ್ನೊಮ್ಮೆ ಪಾಡುವೆನ್ ನನ್ನ ದೊರೆ ಕೃಷ್ಣನನ್ – ಇನ್ನೊಮ್ಮೆ ಪಾಡುವೆನ್ ರಾಜರ್ಷಿ ಕೃಷ್ಣನನ್. ನನ್ನ ದೊರೆಗೆನ್ನ ಪೊರೆದಾಳ್ದಂಗೆ, ನನ್ನೊಲವಿನಾಣ್ಮಂಗೆ, ನನ್ನುಸಿರ ಭಕ್ತಿಯೊಡೆಯಂಗೆ, ಭಕ್ತ ಕನಕಂಗೆ, ಕಲಿಕಾಲ ಜನಕಂಗೆ, ಕರ್ನಾಟಕ ಪ್ರೇಮಸಾಮ...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...