ಎರಡು ಪುಟ್ಟ ಹುಡುಗಿಯರು “ಟೂ, ಟೂ” ಎಂದು ಜೊತೆ ಬಿಟ್ಟರು.
ಒಂದು ಪಟ್ಟು ಹುಡುಗ ಬಂದು ಕೇಳಿದ “ಏಕೆ ಟೂ ಬಿಡ್ತೀಯಾ?” ಎಂದು.
“ಅಲ್ವೋ, ಅವಳು ನನ್ನ ಎಡಗಾಲಿನ ಚಪ್ಪಲಿ ಬಲಗಾಲಿನ ಕಡೆ ಇಟ್ಟಿದ್ದಾಳೆ. ನೀನೆ ಹೇಳು, ಬಲಗಾಲಿಗೆ ಎಡಗಾಲಿನ ಚಪ್ಪಲಿ ಹೋಗುತ್ತಾ? ಅದಕ್ಕೇ ಟೂ ಬಿಟ್ಟೆ” ಎಂದಳು.
“ಹೌದಾ ಹಾಗಾದರೆ ನಾನೂ ಟೂ ಬಿಡ್ತೀನಿ” ಎಂದ.
ಅಲ್ಲಿ ನಿಂತ ದೊಡ್ಡವರೊಬ್ಬರು ಮುಗ್ಧ ಮಕ್ಕಳನ್ನು ನೋಡಿ ಮುಸಿ ಮುಸಿ ನಗುತಿದ್ದರು.
*****