
ಹರಕು ಅಂಗಿಯ ಮುರುಕು ಮನೆಯ ಕೊಟ್ಟೆನೆಂದರೆ ದಾನವೆ ಹಳೆಯ ರೋಗದ ಕೊಳೆಯ ದೇಹವ ಬಿಟ್ಟೆನೆಂದರೆ ತ್ಯಾಗವೆ ಅಲ್ಪ ಕಾಲದ ಆಸೆಗಾಗಿ ಕ್ಷಣಿಕ ತ್ಯಾಗವು ಯೋಗ್ಯವೆ ದೇಹದಾಸೆಗೆ ಎಳೆತ ಸೆಳೆತಕೆ ಜಾರಿಬಿದ್ದರೆ ಜ್ಞಾನವೆ ಮಹಾದಾನಿ ಮಹಾಯೋಗಿ ಮಹಾತ್ಯಾಗಿ ಎನ್ನುವ...
ಬರೆಯಬೇಕು ನಾ ಏನನ್ನಾದರೂ ವರ್ಷಗಳಿಂದಲೂ ಮನ ತುಡಿಯುತ್ತಿದ್ದರೂ ಬರೆಯಬಲ್ಲೆನಾದರೂ ನಾನು ಉಳಿದಿರುವುದಾದರೂ ಏನು? ಶತಶತಮಾನಗಳಿಂದ ಬರೆದು ಬರೆದು ನವರಸಗಳೆಲ್ಲವ ಅರೆದು ಕುಡಿದು ಮಾಡಿ ಸರಸತಿಯ ಭಂಡಾರ ಲೂಟಿ ನನಗೇನು ಸಿಕ್ಕದು ಬರೀ ಪಾಟಿ. ಪಂಪ ರನ್ನ ...
ಅಂಬಿನ ಹಿಳಿಕಿನಲ್ಲಿ ಕಟ್ಟಿದ ವಿಹಂಗನ ಗರಿಯಂತೆ ತಾಗುವ ಮೊನೆಗಾಧಾರವಾಗಿ ದೂರ ಎಯಿದುವುದಕ್ಕೆ ಸಾಗಿಸುವ ಗುಣ ತಾನಾಗಿ ಕ್ರೀ ಅರಿವಿನ ಭೇದದ ನೆರಿಗೆಯ ಕಾಬನ್ನಕ್ಕ ಅರಿವು ಕುರುಹು ಎರಡೂ ಬೇಕೆಂದನಂಬಿಗ ಚೌಡಯ್ಯ [ಅಂಬಿನ-ಬಾಣದ, ಹಿಳಿಕಿನಲ್ಲಿ-ಹಿಂಬದಿಯ...
ತಿಳಿಗೊಳದ ತೀರದಿಹ ತನಿಗಲ್ಲ ಗದುಗೆ- ಯನೇರಿ ಸರದ ಸುಯ್ಯನೆ ಶೃತಿಯಲ್ಲಿ ಕೋಕಿಲ, ಶುಕ, ರವಂಗಳ ಹಿಮ್ಮೇಳದಲಿ ನವಿಲು ನೃತ್ಯಕೆ ತಾಳ ಮೇಳೈಸಿ ವೀಣಾತರಂಗ ತನ್ಮಯಳೆ ತಾಯೆ ತರವೇನೆ ನಿನಗೀಪರಿಯು? ಕನ್ನಡ ತಾಯ ತಾಪತ್ರಯಂಗಳಂ ಎವೆಯಿಕ್ಕದನುದಿನ ನೋಡಿ ನೋಡಿ...
ಚೈತ್ರ ವೈಶಾಖದ ಶುಕ್ಲ ಪೂರ್ಣಿಮೆ ಎಲ್ಲೆಲ್ಲೂ ಬೆಳದಿಂಗಳು ಹರಡಿದ ಬಯಲು. ಎಲ್ಲೇ ಕಂಡ ಬೆಳಕು ಎದೆಯೊಳಗೆ ಇಳಿದ ಭಾವ. ಅವಳು ದುಃಖದ ಮಗುವಿಗೆ ಹುಷಾರಾಗು ಎಂದು ಹಾಲು ಕುಡಿಸುತ್ತಿದ್ದಾಳೆ. ಜಗದ ಜನರ ಬದುಕಿನ ಘಮ ಅರಳಿ ಅಡುಗೆ ಮನೆಯ ತುಂಬ ಬಿಳಿಬಿಳಿ ಅ...
ಬಲ್ಲೆ ನಾನು ನಿನ್ನ ಅಂತರಂಗವ ಬಲ್ಲೆನೆಂದರಿಯದೆ ಬರಿದಾದ ಭಾವಗಳ ತುಡಿವ ಮನದಾಳಗಳ ಬಲ್ಲೆನೆಂದರಿಯದೆ ಕನಸುಗಳ ತಂದೆ ನೀನು ಅಂತರಂಗದಲಿ ಸುಳಿದ ನೋಟ ಕಪ್ಪೆ ಚಿಪ್ಪಿನಲಿ ಅಡಗಿದೆ ಮಾಯೆ ನೀನು ಮೌನ ಮಾತಾಗಿದೆ ಪ್ರೇಮ ಮಸುಕಾಗಿದೆ ಹಸೆಮಣೆ ಹಾಡಿದಂತೆ ಚೈತ...
ಪತ್ನಿಗೆ ಚಿನ್ನದ ಮೇಲೆ ವ್ಯಾಮೋಹ ಇದು ಪ್ರಕೃತಿಯ ಸಹಜ ಗುಣಮೋಹ ಸ್ತ್ರಿಗೆ ಆಸ್ತಿ ಅಂತಸ್ತುಗಳೇ ಪ್ರೀತಿ ನಿಸರ್ಗದ ಬಾಳಿಕೆಗೆ ಇದೇ ಜ್ಯೋತಿ ಇತಿಹಾಸಗಳಲೆಲ್ಲ ಸ್ತ್ರೀಯ ಒಡೆತನ ಕಂಡಾಗ ಸಂತಜನ ಸ್ತ್ರೀಯರಿಗೂ ಸಿರಿ ಅನುರಾಗ ತುಕಾರಾಮ ಮಡದಿಗೆ ಸಿರಿತನದ ...
ಗರ್ಭಿಣಿಗೆ ಊಟ ಉಪಚಾರ ಮಾಡಬೇಕೆಂಬ ಅರ್ತಿಯುಳ್ಳವರೆಲ್ಲರ ಲ್ಲಿಯೂ ಔತಣಕ್ಕೆ ಸಂದರ್ಭವಾಗಲಿಲ್ಲ. ಪ್ರಸೂತಕಾಲವು ಬಂದೊದಗಿತು. ಪ್ರಥಮ ಗರ್ಭವಾದ್ದರಿಂದ ಹೆಚ್ಚು ಜಾಗ್ರತೆ ತಕ್ಕೊಳ್ಳುವ ಅವಶ್ಯವಾಯಿತು. ಹೆಸರು ಹೋದ ಸೂಲಗಿತ್ತಿ ಸುಬ್ಬು, ತಿಮ್ಮ, ಅಕ್ಕು...
ಅಂದೆ ನೆಲವು ಪಡೆದೀತು ಅಮರ ಜೀವಂತ ಶಾಂತಿಯನ್ನು ಎಂದು ನಾಡ-ನಡೆವಳಿಕೆಯಲ್ಲಿ ನೆಲೆಗೊಂಬುದೊಂದೆ ನಿಜವು. ಆ ಪೂರ್‍ಣ ನಿಜದ ನೆಲೆ ಮೊಲೆಯ ಬಯಸಿ ಭಕ್ತಿಯಲಪೇಕ್ಷಿಸುವೆವು. ನೀ ಪೂರ್‍ಣ ಮಾಡು ಹೇ ದೊರೆಯೆ! ಎಲ್ಲಿಯೂ ಬಯ್ತ ಬಯಕೆಯನ್ನು. *****...
ಕೇದಾರ ಗೌಳ ಯಾರಿಗರುಪಿಸಲಿದನು ಮಾಲೆಯ- ನಾರ ಕೊರಳೊಳಗಿರಿಸಲಿ? ಯಾರಿಗೊಪ್ಪಿಸಿ ಕಣ್ಣೆದೆಯ ಬಾ- ಯಾರಿಕೆಯನಂತರಿಸಲಿ? ೧ ಮನಸು ಮೆಚ್ಚಿದ ಮಲರುಗಳನೇ ಎನಿತೆನಿತೊ ನಾನಾಯ್ದೆ. ಮನವನಿದರೊಳೆ ನಿಲಿಸಿ ಬಲು ಚೆಲು- ವೆನಿಪ ದಂಡೆಯ ಕೋದೆ. ಇನಿತು ವೇಳೆಯ ಬಣಗ...
ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...
ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...















