
ನನ್ನ ಕೆಲಸ ನಾ ಮಾಡಿದೆನೆಂದರೆ ಮುಂದಿನ ಕೆಲಸ ಯಾರು ನೋಡುವರು? ಕಾರ್ಯ ಸಂಪೂರ್ಣವಾದರೇನೇ ನಿನ್ನ ಕೆಲಸಕೆ ಬೆಲೆಯು ದೊರೆಯುವುದು|| ನಿನ್ನ ಕೆಲಸ ಮಾಡುವುದು ನಿನ್ನ ಕರ್ತವ್ಯ ಅದಕೆ ಸರಿ ಪ್ರತಿಫಲವ ನೀ ಪಡೆಯುವೆ| ಆದರೆ ಎಲ್ಲರೂ ನಿನ್ನಹಾಗೆ ಅವರವರ ಕೆ...
ನಾವು ಮುಟ್ಟಿ ನಿಂತ ಮರದ ಹೂವು ಉದುರಿತು ನಾವು ನಡೆದ ಹಾದಿ ಹಸಿರು ಉರಿದು ಹೋಯಿತು ನಾವು ಕರೆದ ಕೆಚ್ಚಲಲ್ಲಿ ಹಾಲು ಬತ್ತಿತು ನಾವು ಹುಡುಕಿ ಕಂಡ ಹೃದಯ ರಾಗ ಸತ್ತಿತು ಸೋತ ಮುಖದ ಮನೆಗೆ ಬಳಿಯೆ ಸುಣ್ಣ ಸಿಡಿಯಿತು ಬಡವರೆಂದು, ಕಡೆದ ಕಲ್ಲು ಕಣ್ಣ ಕಳೆ...
ಅಪರಾಧ ಮತ್ತು ಶಿಕ್ಷೆಗಳ ಮೇಲೊಂದು ನೋಟ “Crime and Punishment” ಜಾಗತಿಕ ಸಾಹಿತ್ಯ ರಂಗದಲ್ಲಿ ಶೇಷ್ಠ ಕಾದಂಬರಿಗಳಲ್ಲಿ ಒಂದಾದ ಈ ಕೃತಿ ದೋಸ್ತೋವಸ್ಕಿಯ ಮಾಸ್ಟರ ಪೀಸ್. ಅತಿ ಸಂಕೀರ್ಣವಾದ ಕಾದಂಬರಿ. ಬಹುಶಃ ಓದುಗನ ಮನಸ್ಸನ್ನು ತಟ್...
ಗುರುದೇವನ ಕೃತಿ ಸೃಷ್ಟಿಯು| ಹಿರಿದಾದುಪಕಾರ ಮನುಜ ಜನ್ಮದ ಮೇಲೆ || ಮರೆವುದು ಥರವಲ್ಲೆಚರ- ವಿರಿಸೆಲೆ ನೆನಪಿಲ್ಲವೇನು ಮರವಿನ ಮನವೇ || ಮಾಡಿದ ಗರ್‍ಭದಿ ಪಾಲನ | ದೂಡಿದ ಕಡುಕಷ್ಟ ದುಃಖ ವೇದನೆಗಳನು || ನೀಡಿದ ಮೊಲೆವಾಲ್ಧಾರೆಯ | ಗೂಢವು ನೆನಪಿಲ್ಲ...
ಗೋಪಿಯರೊಡನಾ ಬೃಂದಾವನದಲಿ ಲೀಲಾ ನಾಟಕವಾಡಿದ ನಲಿದು ಬೃಂದಾವನವೇ ಕೃಷ್ಣನ ಬಾಲ್ಯದ ತವರೂರಾಯಿತು ಜಸವನು ಮೆರೆದು. ಹಿರಿಯರು ಬಂದರು ಹಿರಿತನ ಮರೆದು ಎಳೆಯರು ಕುಣಿದರು ಕೃಷ್ಣನ ಕರೆದು ತರುಣಿಯರೆಲ್ಲರು ಮೋಹವ ತೊರೆದು ಕೊಳಲಿನ ಕೃಷ್ಣನ ರೂಪವ ನೆನೆದು ಕ...
ಬೇಲಿಯೇ ಇಲ್ಲದ ಸೂರ್ಯ ಮುಳುಗದ ದೇಶ ವೀರ ಜನತೆಯ ರಕ್ತ ಕೆಂಪಾದ ಜಲಿಯನ್‌ವಾಲಾ, ಆ ರಕ್ತದ ಮೇಲೆ ಬೆಳೆದ ಹಸಿರು ಮರದ ಟೊಂಗೆ ಟೊಂಗೆಯಲಿ ತಿರಂಗಾಧ್ವಜ ನೆಟ್ಟು ಗೂಟ ಕಟ್ಟಿ, ಗಳ ಹಿಡಿದು ಗೋಣು ಮೇಲೆತ್ತಿ ಗೌರವದ ಸೆಲ್ಯೂಟ್ ಕೊಟ್ಟು ರಾಗವಾಗಿ ಜನಗಣಮನ ಹ...
ಏನ ಬಯಸುವೆ ನೀನು ಓ ನನ್ನ ಮನಸೇ ಹೇಳಯ್ಯ ಮನಸೇ ಓ ಮನಸೇ ದಾರಿ ಮುಗಿದರೂ ಕತೆ ಮುಗಿಯದಿರಲೆಂದೇ ಕತೆ ಮುಗಿದರೂ ದಾರಿ ಮುಗಿಯದಿರಲೆಂದೇ ದಾರಿ ಕತೆ ಎರಡೂ ಜತೆ ಜತೆಗೆ ಇರಲೆಂದೇ ಹೂವು ಮುಗಿದರೂ ಪರಿಮಳ ಮುಗಿಯದಿರಲೆಂದೇ ಪರಿಮಳ ಮುಗಿದರೂ ಹೂ ಮುಗಿಯದಿರಲೆ...
“ಹಂಗಿನರಮನೆಗಿಂತ ಇಂಗಡದ ಗುಡಿಲೇಸು, ಭಂಗಬಟ್ಟೆಂಬ ಬಿಸಿಯನ್ನಕ್ಕಿಂತ ತಂಗುಳವೇ ಲೇಸು” ಎಂಬ ಸಮಾನ ಅರ್ಥಗಳುಳ್ಳ ಈ ನಾಣ್ಣುಡಿಗಳು ದಾಸ್ಯವೃತ್ತಿಯನ್ನು ಹೇಯವೃತ್ತಿಯೆಂದು ಬೋಧಿಸುತ್ತಿರುವವು; ದಾಸ್ಯ ವೃತ್ತಿಯಿಂದ ಪ್ರಗತಿಗೆ ಪೋಷಕಗಳಾದ...
ಮನೆಯಲ್ಲಿ ಬೆಳ್ಳಿಯ ತೊಟ್ಟಿಲು ಚಿನ್ನದ ಬಟ್ಟಲು ಬೆಣ್ಣೆ ತುಪ್ಪ ತಿಂದು ಬೆಳೆದ ಮಕ್ಕಳು ಮರಿ ಮಕ್ಕಳು ಎಲ್ಲೋ ಕಾಡಲ್ಲಿ ಬೆಳೆದ ಗೊಬ್ಬರ ನೀರೂ ಉಣಿಸದ ಬಿದಿರ ಊರುಗೋಲು ಎದುರಾದರೆ ಏನೋ ದಿಗಿಲು *****...
ಕತ್ತಲೆ ಎಷ್ಟಿದ್ದರೆ ಏನು? ಹಚ್ಚುವೆನು ದೀಪ ಕಿಟಕಿ ಬಾಗಿಲು ಮುಚ್ಚಿದರೇನು ಹರಡದೇನು ಧೂಪ //ಪ// ಮುಳ್ಳುಗಳೆಷ್ಟಿದ್ದರೆ ಏನು ಅರಳದೇನು ಹೂವು? ನೋವುಗಳೆಷ್ಟಿದ್ದರೆ ಏನು ಅರಸಬೇಕೆ ಸಾವು? ಗದ್ದಲ ಎಷ್ಟಿದ್ದರೆ ಏನು ಸಂತೆ ಸಾಗದೇನು? ತಂದ ಭಾರವ ಕಳೆಯ...
ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...
ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...















