ಏನ ಬಯಸುವೆ ನೀನು ಓ ನನ್ನ ಮನಸೇ
ಹೇಳಯ್ಯ ಮನಸೇ ಓ ಮನಸೇ

ದಾರಿ ಮುಗಿದರೂ ಕತೆ ಮುಗಿಯದಿರಲೆಂದೇ
ಕತೆ ಮುಗಿದರೂ ದಾರಿ ಮುಗಿಯದಿರಲೆಂದೇ
ದಾರಿ ಕತೆ ಎರಡೂ ಜತೆ ಜತೆಗೆ ಇರಲೆಂದೇ

ಹೂವು ಮುಗಿದರೂ ಪರಿಮಳ ಮುಗಿಯದಿರಲೆಂದೇ
ಪರಿಮಳ ಮುಗಿದರೂ ಹೂ ಮುಗಿಯದಿರಲೆಂದೇ
ಹೂವು ಪರಿಮಳ ಎರಡೂ ಜತೆಜತೆಗೆ ಇರಲೆಂದೇ

ಸಂಗೀತ ಮುಗಿದರೂ ಧ್ವನಿ ಮುಗಿಯದಿರಲೆಂದೇ
ಧ್ವನಿ ಮುಗಿದರೂ ಸಂಗೀತ ಮುಗಿಯದಿರಲೆಂದೇ
ಸಂಗೀತ ಧ್ವನಿ ಎರಡೂ ಜತೆಜತೆಗೆ ಇರಲೆಂದೇ

ಬೆಂಕಿ ಮುಗಿದರೂ ಬೆಳಕು ಮುಗಿಯದಿರಲೆಂದೇ
ಬೆಳಕು ಮುಗಿದರೂ ಬೆಂಕಿ ಮುಗಿಯದಿರಲೆಂದೇ
ಬೆಂಕಿ ಬೆಳಕು ಎರಡೂ ಜತೆಜತೆಗೆ ಇರಲೆಂದೇ

ಪ್ರೀತಿ ಮುಗಿದರೂ ನೀತಿ ಮುಗಿಯದಿರಲೆಂದೇ
ನೀತಿ ಮುಗಿದರೂ ಪ್ರೀತಿ ಮುಗಿಯದಿರಲೆಂದೇ
ಪ್ರೀತಿ ನೀತಿ ಎರಡೂ ಜತೆಜತೆಗೆ ಇರಲೆಂದೇ

ನಾಟಕ ಮುಗಿದರೂ ಬಣ್ಣ ಮುಗಿಯದಿರಲೆಂದೇ
ಬಣ್ಣ ಮುಗಿದರೂ ನಾಟಕ ಮುಗಿಯದಿರಲೆಂದೇ
ನಾಟಕ ಬಣ್ಣ ಎರಡೂ ಜತೆಜತೆಗೆ ಇರಲೆಂದೇ

ಭಾವ ಮುಗಿದರೂ ಅನುಭಾವ ಮುಗಿಯದಿರಲೆಂದೇ
ಅನುಭಾವ ಮುಗಿದರೂ ಭಾವ ಮುಗಿಯದಿರಲೆಂದೇ
ಭಾವ ಅನುಭಾವ ಎರಡೂ ಜತೆಜತೆಗೆ ಇರಲೆಂದೇ

ದೇವರು ಮುಗಿದರೂ ಪೂಜೆ ಮುಗಿಯದಿರಲೆಂದೇ
ಪೂಜೆ ಮುಗಿದರೂ ದೇವರು ಮುಗಿಯದಿರಲೆಂದೇ
ದೇವರು ಪೂಜೆ ಎರಡೂ ಜತೆಜತೆಗೆ ಇರಲೆಂದೇ
*****