ಪ್ರಗತಿ ಅಥವಾ ದಾಸ್ಯವಿಮೋಚನೆ – ೧೫ನೆಯ ಖಂಡ – ದಾಸ್ಯವಿಮೋಚನ

ಪ್ರಗತಿ ಅಥವಾ ದಾಸ್ಯವಿಮೋಚನೆ – ೧೫ನೆಯ ಖಂಡ – ದಾಸ್ಯವಿಮೋಚನ

“ಹಂಗಿನರಮನೆಗಿಂತ ಇಂಗಡದ ಗುಡಿಲೇಸು, ಭಂಗಬಟ್ಟೆಂಬ ಬಿಸಿಯನ್ನಕ್ಕಿಂತ ತಂಗುಳವೇ ಲೇಸು” ಎಂಬ ಸಮಾನ ಅರ್ಥಗಳುಳ್ಳ ಈ ನಾಣ್ಣುಡಿಗಳು ದಾಸ್ಯವೃತ್ತಿಯನ್ನು ಹೇಯವೃತ್ತಿಯೆಂದು ಬೋಧಿಸುತ್ತಿರುವವು; ದಾಸ್ಯ ವೃತ್ತಿಯಿಂದ ಪ್ರಗತಿಗೆ ಪೋಷಕಗಳಾದ ಗುಣಗಳನ್ನು ಪಡೆಯುವ ಮಾರ್ಗವು ಕಟ್ಟಾಗುತ್ತದೆ. ಕೇವಲ ಯಜಮಾನನ ಅನುವರ್‍ತಿಯಾಗುವದರಿಂದ ಸೇವಕನ ಆತ್ಮವಿಶ್ವಾಸವು ಲೋಪವಾಗುತ್ತದೆ, ಕಾರ್ಯಾಸಕ್ತಿಯು ಕಡಿಮೆಯಾಗುತ್ತದೆ ದುರಾಶೆಯು ಉತ್ಪನ್ನವಾಗುತ್ತದೆ, ಆಲಸ್ಯವು ಬೆಳೆಯುತ್ತದೆ, ಸದಭಿಮಾನವೂ, ದೈನೀಭಾವನೆಗಳೂ ರೂಪಾಂತರಿಸುತ್ತವೆ. ಹೀಗೆ ದಾಸ್ಯ ವೃತ್ತಿಯು ಒಂದಲ್ಲ, ಎರೆಡಲ್ಲ ಅನಂತದುರ್‍ಗುಣಗಳು ಸೇವಕನಲ್ಲಿ ಅಂಕುರಿಸಲು ಕಾಣೀಭೂತವಾಗುತ್ತದೆ.

ನಾವು ಇಲ್ಲಿಯವರೆಗೆ ವಿವೇಚಿಸುತ್ತ ಬಂದ ವಿವರಣೆಗಳ ಮೇಲಿಂದ ವಾಚಕರು ಗೊಂದಲದಲ್ಲಿ ಬಿದ್ದು ‘ಒಬ್ಬರ ಆಳಾದ ಹೊರ್‍ತು ನಮ್ಮ ಹೊಟ್ಟೆ ತುಂಬುವ ಹಾಗಿಲ್ಲದ್ದರಿಂದ ನಾವು ಮುಂದೇನು ಮಾಡಬೇಕು’ ಎಂಬ ಕಲ್ಪನೆಯನ್ನು ಮಾಡಬಹುದು; ಆದರೆ ಅವರಿಗೆ ನಮ್ಮ ಉತ್ತರವಿಷ್ಟೇ; ಒಬ್ಬರ ಆಧೀನನಾಗಿದ್ದ ಮನುಷ್ಯನು ತಾನು ಎಷ್ಟರ ಮಟ್ಟಿಗೆ ಒಬ್ಬರನ್ನು ಆಶ್ರಯಿಸಿರುವೆನು, ತನ್ನಲ್ಲಿ ಪೌರುಷಪ್ರಿಯತೆಯೂ, ಸ್ವಾತಂತ್ರ್ಯಪ್ರಿಯತೆಯೂ ಎಷ್ಟರಮಟ್ಟಿಗಿರುವುವು ಎಂಬದನ್ನು ತೂಗಿ ನೋಡಿಕೊಳ್ಳಬೇಕು. ಮತ್ತು ತನ್ನ ವಿಚಾರಸ್ವಾತಂತ್ರ್ಯವನ್ನಾದರೂ ಕಾಯ್ದುಕೊಳ್ಳಲಿಕ್ಕೆ ಅರ್ಹನಾಗ ಬೇಕು. ಮನಸ್ಸಿನಿಂದ ಸ್ಪಾತಂತ್ರ್ಯಸುಖವನ್ನು ಅನುಭವಿಸುತ್ತ ರೆಟ್ಟೆಯನ್ನು ಮುರಿದು (ದುಡಿದು) ಹೊಟ್ಟೆತುಂಬಿಕೊಳ್ಳುವದು ದಾಸ್ಯವಲ್ಲ.

ಒಬ್ಬನು ಮತ್ತೊಬ್ಬನನ್ನು ಆಶ್ರಯಿಸುವದರಲ್ಲಿ ಎರಡು ಪ್ರಕಾರಗಳುಂಟು. ಕೇವಲ ವ್ಯವಹಾರದ ಅಥವಾ ಗರಜಿನ, ಅಥವಾ ಕಾರ್‍ಯನಿಮಿತ್ಯದ ಮಟ್ಟಿಗೆ ಒಬ್ಬನು ಮತ್ತೊಬ್ಬನನ್ನು ಆಶ್ರಯಿಸಿ, ಉಳಿದ ಬಾಬುಗಳಲ್ಲಿ ಸ್ಪತಂತ್ರನಾಗಿ ಇರತಕ್ಕುವನು ಒಂದನೆಯ ವರ್‍ಗದವನು, ಕೇವಲ ಯಜಮಾನನ ಕೈಯೊಳಗಿನ ಕಲ್ಲಿನಂತೆ ಇದ್ದು, ತನ್ನ ನೈಸರ್ಗಿಕಪುರುಷ ಸ್ವಾತಂತ್ರ್ಯವನ್ನು ಅವನಿಗೊಪ್ಪಿಸಿ ತನ್ನ ಅತ್ಯಂತ ಶ್ರೇಷ್ಠವಾದ ಆಯುಷ್ಯವನ್ನು ಅವನ (ಅಂದರೆ ಯಜಮಾನನ) ಸೇವೆಯಲ್ಲಿ ಕಾಲಕಳೆಯುವವನು ೨ನೇ ವರ್‍ಗದವನು; ಈ ಎರಡನೇ ವರ್‍ಗದವನೇ ನಿಜವಾದ ದಾಸ್ಯವೃತ್ತಿಯವನು; ಇವನಲ್ಲಿ ಪೌರುಷವಿರುವದಿಲ್ಲ. ಕೇವಲ ಲಾಂಗೂಲಚಾಲನೆಯೇ ಇವನ ಉಚ್ಚತಮ ಧ್ಯೇಯವಾಗಿರುವದು.

ಈ ಎರಡನೇ ವರ್ಗದ ದಾಸ್ಯವನ್ನು ಮಹಾತ್ಮರಲ್ಲಿ ಇಲ್ಲವೆ ದೇವರಲ್ಲಿ ವಹಿಸಬೇಕಲ್ಲದೆ, ಮನುಷ್ಯರಲ್ಲಿ ವಹಿಸಲಾಗದು. ದೇವರಲ್ಲಿಯೂ, ಮಹಾತ್ಮರಲ್ಲಿಯೂ ವಹಿಸಿದ ದಾಸ್ಯವು ದಾಸನಿಗೆ ಉಚ್ಚ ಸ್ಥಿತಿಯ ಪ್ರಾಪ್ತಿಯನ್ನು ಮಾಡಿಕೊಡುತ್ತದೆ. ಮನುಷ್ಯರ ದಾಸ್ಯತ್ವವು ಆಧೋಗತಿಯನ್ನು ದೊರಕಿಸಿಕೊಡುತ್ತದೆ.

ಸ್ತ್ರೀಯರು ಜನ್ಮತಃ ಪರಾಧೀನರಾದ್ಧರಿಂದ ಅವರು ಪುರುಷನಲ್ಲಿ ಅಂದರೆ ಗಂಡನಲ್ಲಿ ದೈವೀಭಾವನೆಯಿಂದ ನಡೆದು ಪುರುಷನ ಆಶ್ರಯದಿಂದ ಪ್ರರುಷಾರ್ಥಗಳನ್ನು ಸಂಪಾದಿಸಿಕೊಳ್ಳಬೇಕಾಗುತ್ತದೆ. “ನ ಸ್ತ್ರೀ ಸ್ವಾತಂತ್ರ್ಯ ರ್ಮಹತಿ” (ಮನುಸ್ಮೃತಿ)

ಮುಖ್ಯವಾಗಿ ಈಗಿನ ದಾಸ್ಯವರ್ಗದ ಕೆಲವರಲ್ಲಿರುವ ದೊಡ್ಡ ದೋಷವೆಂದರೆ ಯಜಮಾನನ ಪ್ರಸನ್ನತೆಯನ್ನು ಪಡಕೊಳ್ಳುವದಕ್ಕಾಗಿ ಎಂಥ ನೀಚಕೆಲಸವನ್ನಾದರೂ ಮಾಡುವದು. ನೀಚಕೆಲಸವೆಂದರೆ (ಶೆಗಣೀ ಬಳಿಯುವ ಕೆಲಸವಲ್ಲ.) ಕೇಳಲಿಕ್ಕೆ ಹೇಳಲಿಕ್ಕೆ ಆಸಹ್ಯವಾದವುಗಳು. ಎಷ್ಟೋಜನ ನರಾಧಮರು ತಮ್ಮ ವರಿಷ್ಠರ ತೃಪ್ತಿಗಾಗಿ ತಮ್ಮ ಸಹಧರ್ಮಿಣಿಯಾದ ಹೆಂಡತಿಯನ್ನು ಸಹ ಅರ್‍ಪಿಸುವರಂತೆ! ಹಾಯ್‌! ಹಾಯ್‌! ಇದಕ್ಕೂ ಹೆಚ್ಚಿನ ನೀಚತನವನ್ನು ದಾಸ್ಯವರ್‍ಗದವರು ಇನ್ನೇನು ಮಾಡಬೇಕು?

ಒಟ್ಟಿನಮೇಲೆ ಕಾಯಾವಾಚಾಮನಸ್ಸಿನಿಂದ ಒಬ್ಬರ ಆಳು ಆಗುವದು ಅತಿ ನಿಂದ್ಯವಿರುವದರಿಂದ ತೇಜಸ್ವೀ ಪುರುಷನು ತನ್ನ ಕುಟುಂಬ ಪೋಷಣೆಗಾಗಿ ಮಂದಿಯ ಮೋರೆಯನ್ನು ನೋಡುತ್ತ, ಕುಳಿತುಕೊಳ್ಳಬಾರದು. ಸದಾ ಉದ್ಯೋಗಿಯಾಗಿ ಅರ್‍ಥಾತ್ ಪ್ರಗತಿಪರನಾಗಿ ದೈನವಿಲ್ಲದೆ ಖಂಬೀರತನದಿಂದ ಕಾಲಕ್ಷೇಪಮಾಡುವಷ್ಟು ಸಮರ್ಥನಾಗಬೇಕು. “ಅನಾಯಾಸೇನಮರಣಂ ವಿನಾದೈ ನ್ಯೇನ ಜೀವನಂ” ಎಂಬಿವು ತೇಜಸ್ವಿಗೆ ಲಭಿಸತಕ್ಕುವಾಗಿವೆ.

ದಸ್ಯವಿಮೋಚನವು ವ್ಯಕ್ತಿಗೂ, ಸಮಾಜಕ್ಕೂ, ರಾಷ್ಟ್ರಕ್ಕೂ ಅತ್ಯವಶ್ಯವು. ಅದರೆ ಅದನ್ನು ಹ್ಯಾಗೆ ಮಾಡಿಕೊಳ್ಳಬೇಕೆಂಬದನ್ನು ಮಾತ್ರ ಬಹು ಸ್ವಲ್ಪ ಜನರಹೊರತು ಉಳಿದವರಾರಿಗೂ ಗೊತ್ತಿಲ್ಲ. ಪ್ರಗತಿಹೊಂದುವವನು, ಅಂದರೆ ದಾಸ್ಯವಿಮೋಚನ ಮಾಡಿಕೊಳ್ಳುವವನು ಮೇಲೆ ಹೇಳಿದ ಎಲ್ಲ ಗುಣಗಳನ್ನು ತನ್ನಲ್ಲಿ ಹೆಚ್ಚು ಹೆಚ್ಚಾಗಿ ಸಂಗ್ರಹಿಸಬೇಕು. ಆ ಗುಣಗಳು ಪರಿಪೂರ್ಣವಾದವಾದಂತೆ, ಪ್ರಗತಿಯು ಆಗಿ, ದಾಸ್ಯ ವಿಮೋಚನೆಯಾಗುವದು; ಸಂಶೆಯವಿಲ್ಲ.
*****

ಉಪಸಂಹಾರ

ಪೂರ್‍ವಸಂಚಯದ ಪ್ರಗತಿಪ್ರವರ್ತಕನಿಗೆ ಪ್ರಗತಿಮಾರ್ಗಗಳನ್ನು ಬೇರೆಯವರು ತೋರಿಸುವ ಕಾರಣವಿಲ್ಲ; ಆದರೆ ಆ ಸಂಚಯವು ಸರ್ವರಿಗೂ ಇರುತ್ತದೆಯೆಂದು ಭಾವಿಸಿನಡೆಯುವದು ಮಾತ್ರ ಯೋಗ್ಯವಲ್ಲದ್ದರಿಂದ, ಪ್ರಗತಿಮಾರ್ಗಗಳನ್ನು ಕಂಡುಕೊಳ್ಳಿರೆಂದು ಸಾಮಾನ್ಯವಾಗಿ ಹೇಳುವದು ತಪ್ಪಾಗಲಾರದು.

ಪ್ರಗತಿಮಾರ್‍ಗಗಳು ಮೇಲೆ ಬರೆದವವಿಷ್ಟೇ ಇವೆಯೆಂದು ನಿಷ್ಕರ್‍ಷನಾಗಿ ಹೇಳಲಾಗುವದಿಲ್ಲ. ಇವುಗಳಲ್ಲದೆ ಇನ್ನೂ ಅನೇಕ ಮಾರ್‍ಗಗಳಿಂದ ಪ್ರಗತಿಹೊಂದಬಹುದಾಗಿದೆ. ಆದರೆ ಅವೆಲ್ಲ ಮಾರ್‍ಗಗಳು ಈಗ ವಿವರಿಸಿರುವ ಸ್ವಾತಂತ್ರ್ಯಪ್ರೀತಿ, ದೃಢನಿಶ್ಚಯ, ರೂಢಿ ವಿನಾಶಕ, ಸಾಧನಾಭಾವ, ಪ್ರತಿಕೂಲತೆ, ಸಮಯಸಾಫಲ್ಯ, ಆಶ್ರಯರುಜ್ಜು ಛೇದನ, ಸಂಕಲ್ಪಶಕ್ತಿ, ಸಾಮರ್ಥ್ಯ ಸಂಚಯ, ಉಪಹಾಸೋತ್ತೇಜನ, ಆಸ್ಥೆ-ಕಾಳಜಿ, ಪ್ರವಾಸ, ಪ್ರಸನ್ನತೆ, ದೈವೀಭಾವನೆ, ದಾಸ್ಯವಿಮೋಚನೆ ಮುಂತಾದ ಪ್ರಗತಿಪಥಗಳಲ್ಲಿಯೇ ಹೆಚ್ಚುಕಡಿಮೆ ಮಾನದಿಂದ ಅಡಕವಾಗಿರುತ್ತವೆ. ಹ್ಯಾಗೇ ಆಗಲಿ, ಯಾವದೇ ಮಾರ್‍ಗವನ್ನು ಹಿಡಿದೇ ಆಗಲಿ, ಮನುಷ್ಯನು ಪ್ರಗತಿಹೊಂದಲಿಕ್ಕೆ ಪ್ರಯತ್ನಿಸತಕ್ಕದ್ದು. ಇಲ್ಲಿ ಮಾರ್‍ಗಗಳ ಭೇದಗಳಿಗೆ ಮಹತ್ವವಿರದೆ, ಪ್ರಗತಿಗೆ ಮಹತ್ವವಿರುತ್ತದೆ.
******
ಸಂಪೂರ್‍ಣ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದಿಗಿಲು
Next post ಏನ ಬಯಸುವೆ ನೀನು

ಸಣ್ಣ ಕತೆ

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…