ಬೇಲಿಯೇ ಇಲ್ಲದ
ಸೂರ್ಯ ಮುಳುಗದ ದೇಶ
ವೀರ ಜನತೆಯ ರಕ್ತ
ಕೆಂಪಾದ ಜಲಿಯನ್‌ವಾಲಾ,
ಆ ರಕ್ತದ ಮೇಲೆ
ಬೆಳೆದ ಹಸಿರು ಮರದ
ಟೊಂಗೆ ಟೊಂಗೆಯಲಿ
ತಿರಂಗಾಧ್ವಜ ನೆಟ್ಟು
ಗೂಟ ಕಟ್ಟಿ, ಗಳ ಹಿಡಿದು
ಗೋಣು ಮೇಲೆತ್ತಿ
ಗೌರವದ ಸೆಲ್ಯೂಟ್ ಕೊಟ್ಟು
ರಾಗವಾಗಿ ಜನಗಣಮನ
ಹಾಡುವೆನು ನಾನು.
*****
ಬೇಲಿಯೇ ಇಲ್ಲದ
ಸೂರ್ಯ ಮುಳುಗದ ದೇಶ
ವೀರ ಜನತೆಯ ರಕ್ತ
ಕೆಂಪಾದ ಜಲಿಯನ್‌ವಾಲಾ,
ಆ ರಕ್ತದ ಮೇಲೆ
ಬೆಳೆದ ಹಸಿರು ಮರದ
ಟೊಂಗೆ ಟೊಂಗೆಯಲಿ
ತಿರಂಗಾಧ್ವಜ ನೆಟ್ಟು
ಗೂಟ ಕಟ್ಟಿ, ಗಳ ಹಿಡಿದು
ಗೋಣು ಮೇಲೆತ್ತಿ
ಗೌರವದ ಸೆಲ್ಯೂಟ್ ಕೊಟ್ಟು
ರಾಗವಾಗಿ ಜನಗಣಮನ
ಹಾಡುವೆನು ನಾನು.
*****