ಚಿನ್ನದ ವೈರಾಗ್ಯ

ಪತ್ನಿಗೆ ಚಿನ್ನದ ಮೇಲೆ ವ್ಯಾಮೋಹ
ಇದು ಪ್ರಕೃತಿಯ ಸಹಜ ಗುಣಮೋಹ
ಸ್ತ್ರಿಗೆ ಆಸ್ತಿ ಅಂತಸ್ತುಗಳೇ ಪ್ರೀತಿ
ನಿಸರ್ಗದ ಬಾಳಿಕೆಗೆ ಇದೇ ಜ್ಯೋತಿ

ಇತಿಹಾಸಗಳಲೆಲ್ಲ ಸ್ತ್ರೀಯ ಒಡೆತನ ಕಂಡಾಗ
ಸಂತಜನ ಸ್ತ್ರೀಯರಿಗೂ ಸಿರಿ ಅನುರಾಗ
ತುಕಾರಾಮ ಮಡದಿಗೆ ಸಿರಿತನದ ಕನಸು
ಆದರೆ ಸಂತರಿಗೆ ನಿರಾಶೆಯ ಮನಸು

ಬಾಪೂಜಿಯ ಅರ್ಧಾಂಗಿಗೆ ಚಿನ್ನದಲಿ ಆಸೆ
ಕಂಡೊಮ್ಮೆ ವಿಶದಸಿದರು ನಿನಗೋ ಆಸೆ
ಬೇಡ ನಿನಗೆ ಹೇಮದಲಿ ಲೋಭ
ನಮ್ಮ ಬಾಳಿಗೆ ತರುವುದಿಲ್ಲ ಶೋಭ

ಪರಮಹಂಸ ಸತಿ ಶಾರದೆ ಮಾತೆಗೆ
ಪ್ರಾರಂಭದಲಿತ್ತು ಚಿನ್ನದಲಿ ಚಿತ್ತ
ಕ್ಷಣ ಹೊತ್ತು ಅವರ ಅಂತರಂಗ ತೆರೆದರು
ಅಶಾಶ್ವತ ಚಿನ್ನ ಆಸ್ತಿ ಎಂದು ಬಿತ್ತಿದರು

ದೇವರೆ ನಮಗೆಂದೂ ಬಾರದಿರಲಿ
ಅಂತಸ್ತು ಲೋಭಗಳ ಬಯಕೆ
ಬಾಳನ್ನೆ ಪ್ರಪಾತಕ್ಕೆ ತಳ್ಳುವುದು
ಮಾಣಿಕ್ಯವಿಠಲ ನೆನೆಯದಿರೆ ನರಕಕ್ಕೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೨೬
Next post ಬಲ್ಲೆ ನಾನು

ಸಣ್ಣ ಕತೆ

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…