Home / Poem

Browsing Tag: Poem

ಮುಟ್ಟಿದ್ದೆಲ್ಲ ಚಿನ್ನ ಆಗುವ ನಿನ್ನ ಟಚ್ ಮಾಯವಾಗಿ ನೋಡಿದ್ದೆಲ್ಲ ವಿಜ್ಞಾನ ಮಾಡಿದ್ದೆಲ್ಲ ಸಂಶೋಧನೆಯಾಗಿ ಎಲ್ಲದಕ್ಕೂ ಕಂಪ್ಯೂಟರ್‍ ಟಚ್ ಆಗುತ್ತಿದೆಯಲ್ಲ ಮಿಡಾಸ್? *****...

ಮೂಡುವ ಬೆಳಕಿನ ಮುಂದೆ ಮೈ ಒಡ್ಡಿ ಮಲಗಿರುತ್ತೆ ಬೆತ್ತಲೆ ಮುದಿ ಕಡಲು ಬೆಳಕಿಗೆ ಬೇಕಿರುವುದು ಹನಿ ಹನಿ ಸುರಿಸುವ ಸುಂದರ ಯೌವನ ಮುಗಿಲು ಅದರ ಮೈಯೊಳಗೆ ತೂರಿ ಪಡೆಯಲು ಏಳು ಬಣ್ಣಗಳ ಬಿಲ್ಲು *****...

ರೆಕ್ಕೆಗಳಿಲ್ಲ ಎಂದು ಆಕಾಶ ಅವಮಾನಿಸಲಿಲ್ಲ ಗಿಡದೆತ್ತರ ಎಂದು ಮರ ಮೂದಲಿಸಲಿಲ್ಲ ಏನು ನಡೆಯೊ ಎಂದು ನದಿ ಅಣಕವಾಡಲಿಲ್ಲ ಸಣ್ಣವಳೆಂದು ಶಿಖರ ತಿರಸ್ಕರಿಸಲಿಲ್ಲ ಕೃಷ್ಣೆ ಎಂದು ಬೆಳದಿಂಗಳು ನಗೆಯಾಡಲಿಲ್ಲ ಮಾತು ಬರುವುದಿಲ್ಲ ಎಂದೇನೂ ಅಲ್ಲ ಮತ್ತೆ? ಎದೆ...

ನನ್ನೊಳಗೆ ನಿನ್ನ ಕಾಪಿಟ್ಟುಕೊಳ್ಳುದಕ್ಕೆ ಪಕ್ಕಾಗಿದ್ದೇನೆ. ಅನ್ಯಥಾ ನೀರಿನಲೆಗಳ ನಡುವೆ ಸುಳಿಯ ನರ್ತನಕೆ ಕುಣಿವ ತರಗಲೆಯಲ್ಲ ನಾನು ಗೋಣು ಅಲ್ಲಾಡಿಸುವುದ ಮರೆತುಬಿಟ್ಟವಳು. ಸೊಕ್ಕಿನವಳೆಂದು ಜರಿದು ಅನೇಕ ಮೂಗುತಿಗಳು ನನ್ನೊಂದಿಗೆ ಮಾತುಬಿಟ್ಟವು. ...

ನನಗೆ ನನ್ನ ಬೊಬ್ಬರ್ಯ ಬೇಕು ಕೆಂಪು ಮಣ್ಣಿನ ಹಾದಿ ಬೇಕು ದಾರಿಯಲಿ ಕಾಲುಗಳು ಸೊಲದಂತೆ ಕಲ್ಲು ಮುಳ್ಳುಗಳು ತಾಗದಂತೆ ನನಗೆ ನನ್ನ ಬೊಬ್ಬರ್ಯ ಬೇಕು ಕೆಂಪು ಮಣ್ಣಿನ ಹಾದಿ ಬೇಕು ಬಾಯಾರಿ ದಣಿದು ಬೆಂಡಾಗದಂತೆ ನಡುದಾರಿಯಲಿ ಕುಸಿದು ಬೀಳದಂತೆ ನನಗೆ ನನ್...

ಎಷ್ಟೋ ವರ್ಷಗಳ ನಂತರ ಕಾಣುತ್ತೇವೆ. ಸಭ್ಯತೆಯಿಂದ ಕೈ ಕುಲುಕಿ ‘ನೈಸ್ ಮೀಟಿಂಗ್ ಯೂ’ ಅನ್ನುತ್ತೇವೆ. ನಮ್ಮ ಹುಲಿಗಳು ಹಾಲು ಕುಡಿಯುತ್ತವೆ ನಮ್ಮ ರಣಹದ್ದುಗಳು ನೆಲದ ಮೇಲೆ ನಡೆಯುತ್ತವೆ ನಮ್ಮ ತಿಮಿಂಗಿಲಗಳು ನೀರೊಳಗೆ ಬಚ್ಚಿಟ್ಟುಕೊಳ್ಳುತ್ತವೆ ನಮ್ಮ ...

ಸಿಗದ ಅನಂತ ಆಕಾಶದೆದುರು ಸಿಕ್ಕದ್ದು ಒಂದು ಹಿಡಿ ಹೊಟ್ಟು, ಅದನ್ನೇ ತೊಟ್ಟು ಕೈಗೆ ಬಳೆಯಾಗಿ ಮುಡಿಗೆ ಹೂವಾಗಿ ಮರೆದಿದ್ದೇನೆ ನಾಚಿಕೆ ಬಿಟ್ಟು ನಾಚಿಕೆಯಿಲ್ಲ ನನಗೆ ನಾಚಿಕೆಯಿಲ್ಲ ಯಾಕೆ, ಇಲ್ಲಿ ಬೇರು ಬಿಟ್ಟು ಬೇರೆಲ್ಲೋ ಹೂ ಚೆಲ್ಲಿದೆನ? ಸಿಂಹದಂತೆ...

ಎಲ್ಲಿ ಅಡಗಿರುವೆ ಹೇಳೆ ಕೋಗಿಲೆ ನಿನ್ನ ದನಿಯು ಕೇಳಿ ಬರುತಿದೆ || ಯಾವ ರಾಗದ ಭಾವವೂ ಯಾವ ತಾಳದ ವೇಗವೂ ಯಾರ ಪ್ರೇಮದ ಪಲ್ಲವಿಯು ತಿಳಿದಿಲ್ಲ ಎನಗೆ ಹೇಳೆ ಕೋಗಿಲೆ || ಎಷ್ಟು ದೂರವಿರುವೇ ನೀನು ಯಾವ ಮರದಲ್ಲಡಗಿರುವೇ ನಿನ್ನ ಪ್ರೇಮ ಪಲ್ಲವಿಗೆ ಚರಣಗಳ...

1...3637383940...449

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...