ಮೂಡುವ ಬೆಳಕಿನ ಮುಂದೆ
ಮೈ ಒಡ್ಡಿ ಮಲಗಿರುತ್ತೆ
ಬೆತ್ತಲೆ ಮುದಿ ಕಡಲು
ಬೆಳಕಿಗೆ ಬೇಕಿರುವುದು
ಹನಿ ಹನಿ ಸುರಿಸುವ
ಸುಂದರ ಯೌವನ ಮುಗಿಲು
ಅದರ ಮೈಯೊಳಗೆ ತೂರಿ
ಪಡೆಯಲು
ಏಳು ಬಣ್ಣಗಳ ಬಿಲ್ಲು
*****

ಜರಗನಹಳ್ಳಿ ಶಿವಶಂಕರ್‍
Latest posts by ಜರಗನಹಳ್ಳಿ ಶಿವಶಂಕರ್‍ (see all)