ವಚನ ವಿಚಾರ – ಇದು ಇದ್ದರೆ ಅದು

ವಚನ ವಿಚಾರ – ಇದು ಇದ್ದರೆ ಅದು

ಅಂಬುವಿಲ್ಲದಿರ್‍ದಡೆ ಅಂಬುಜವನಾರು ಬಲ್ಲರು
ನೀರಿಲ್ಲದಿರ್‍ದಡೆ ಹಾಲನಾರು ಬಲ್ಲರು
ನಾನಿಲ್ಲದಿರ್‍ದಡೆ ನಿನ್ನನಾರು ಬಲ್ಲರು
ನಿನಗೆ ನಾ
ನನಗೆ ನೀ
ನಿನಗೂ ನನಗೂ ಬೇರೊಂದು ನಿಜವುಂಟೆ
ನಿಃಕಳಂಕ ಮಲ್ಲಿಕಾರ್‍ಜುನಾ

[ಅಂಬು-ನೀರು, ಅಂಬುಜ-ತಾವರೆ, ನೀರಿಲ್ಲದಿರ್‍ದಡೆ-ನೀರಿಲ್ಲದಿದ್ದರೆ]

ಇದು ಮೋಳಿಗೆ ಮಾರಯ್ಯನ ವಚನ. ಅರ್‍ಥ ಅನ್ನುವುದು ಇರುವುದು ದ್ವಂದ್ವಗಳಲ್ಲೇ. ವ್ಯತ್ಯಾಸಗಳೇ ಇರದಿದ್ದರೆ ಅರ್ಥವೂ ಇಲ್ಲ, ಬೇಕಾಗಿಲ್ಲ.

ಅಂಬು ಇರದಿದ್ದರೆ ಅಂಬುಜ ಯಾರಿಗೆ ಗೊತ್ತಾಗುತ್ತದೆ? ಹೇಗೆ ಇರುತ್ತದೆ? ನೀರು ಇರುವುದರಿಂದಲೇ ಹಾಲು ಅನ್ನುವ ಪದಾರ್‍ಥಕ್ಕೆ ಅರ್‍ಥ ಮತ್ತು ಬೆಲೆ. ನಾನೇ ಇರದಿದ್ದರೆ ನೀನು ಅನ್ನುವುದಕ್ಕೆ ಅರ್‍ಥವೆಲ್ಲಿ? ನಾನು ಇರದಿದ್ದರೆ ನಿನ್ನನ್ನು ಅರ್‍ಥಮಾಡಿಕೊಳ್ಳುವವರಾದರೂ ಯಾರು? ‘ನಾನು’ ಅನ್ನುವುದು ಇರುವುದರಿಂದಲೇ ‘ನೀನು’ ಅನ್ನುವುದಕ್ಕೆ ಅರ್‍ಥ. ನಿಜ. ಆದರೆ ಈ ಎಲ್ಲ ಇಮ್ಮೈ ದ್ವಂದ್ವಗಳಿಗೂ ಇರುವ ನಿಜ ಮಾತ್ರ ಒಂದೇ.

ನನಗೂ ನಿನಗೂ ಬೇರೊಂದು ನಿಜವುಂಟೆ ಎಂದು ದೇವರನ್ನು ಕೇಳುತ್ತಾನೆ. ನನ್ನ ಸತ್ಯ ಬೇರೆ, ನಿನ್ನ ಸತ್ಯ ಬೇರೆ ಅನ್ನುವುದು ನಿಜವಲ್ಲ. ಸತ್ಯ ಅನ್ನುವುದು ಒಂದೇ, ಎರಡೆಂಬಂತೆ ಕಾಣುವ ದ್ವಂದ್ವಗಳೆಲ್ಲಕ್ಕೂ ಸತ್ಯವೇ ಆಧಾರ. ಅದನ್ನು ಹೇಳುವುದಲ್ಲ ಕಾಣಲು ಸಾಧ್ಯವಾಗಬೇಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ನ ಕವಿತೆ
Next post ಕವನ ಸೃಷ್ಠಿ

ಸಣ್ಣ ಕತೆ

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

cheap jordans|wholesale air max|wholesale jordans|wholesale jewelry|wholesale jerseys