ರೆಕ್ಕೆಗಳಿಲ್ಲ ಎಂದು
ಆಕಾಶ ಅವಮಾನಿಸಲಿಲ್ಲ

ಗಿಡದೆತ್ತರ ಎಂದು
ಮರ ಮೂದಲಿಸಲಿಲ್ಲ

ಏನು ನಡೆಯೊ ಎಂದು
ನದಿ ಅಣಕವಾಡಲಿಲ್ಲ

ಸಣ್ಣವಳೆಂದು
ಶಿಖರ ತಿರಸ್ಕರಿಸಲಿಲ್ಲ

ಕೃಷ್ಣೆ ಎಂದು
ಬೆಳದಿಂಗಳು ನಗೆಯಾಡಲಿಲ್ಲ

ಮಾತು ಬರುವುದಿಲ್ಲ
ಎಂದೇನೂ ಅಲ್ಲ

ಮತ್ತೆ?

ಎದೆಯಲ್ಲಿ ವಿಷವಿಲ್ಲ
ನಾಲಗೆಯು ಮುಳ್ಳಲ್ಲ

ಪ್ರೀತಿಗೆ-ಮೈತ್ರಿಗೆ
ಮಿಗಿಲಿಲ್ಲ.
*****

ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)