Home / Kannada

Browsing Tag: Kannada

ನಿಮ್ಮೊಡನೆ ಇಂದು ಹೃದಯ ಬಿಚ್ಚಿ ಮಾತಾಡುತ್ತಿದ್ದೇನೆ. ಈಗ ಹಾಗೆ ಯಾರೂ ಮಾತಾಡುವವರಿಲ್ಲ. ಸ್ವಭಾವ, ನಡೆ, ನುಡಿ ಎಲ್ಲದರಲ್ಲೂ ಒಳಗೊಂದು ಹೊರಗೊಂದು. ನೀವೂ ಹಾಗೇ ಅಲ್ವಾ? ಹೇಳಿ, ನೀವು ಗಂಡಸರಾ, ಹೆಂಗಸರಾ? ನನ್ನನ್ನು ನೀವು ಹೇಗೆ ಬೇಕಾದರೂ ಕರೆಯಿರಿ,...

ಕಾಡುಬೆಟ್ಟ ಪರ್ವತಗಳು ಆಸೆಬುರುಕರ ಬುಲ್‌ಡೋಜರಿಗೆ ಸಿಕ್ಕು ಅಲ್ಲಲ್ಲಿ ಮನೆ ಮಠ ಪ್ಯಾಕ್ಟರಿ ಕ್ಲಬ್ ಥಿಯೇಟರ್‌ಗಳೂ ಆಗಿ ಭೂಗೋಲದ ಉಳಿದ ಪುಟ ಸೇರಿ ಇತಿಹಾಸವಾಗುತ್ತವೆ – ನಮ್ಮ ಮಕ್ಕಳು ಮೊಮ್ಮಕ್ಕಳಿಗೆ. *****...

ಎಷ್ಟೊಂದ್ ಕಷ್ಟ ನನ್ನೀ ಕೆಲ್ಸ ಕಪ್ಪೆಗ್ಳು ತಕ್ಕಡಿಲಿ ಕೂತ್ಕೊಳ್ತ ಇಲ್ಲ ಅಂತಾನೆ ಪುಟ್ಟ ಕಿಟ್ಟನಿಗೆ ಎಷ್ಟೊಂದ್ ಕೆಲ್ಸ ನನ್ನೀ ಕೆಲ್ಸ ತೆರೆಗಳು ಸುಮ್ಮನೆ ನಿಂತ್ಕೊಳ್ತ ಇಲ್ಲ ಅಂತಾನೆ ಕಿಟ್ಟ ಪುಟ್ಟನಿಗೆ ಕೇಳ್ಸ್ಕೊಂಡ ದೇವ್ರು ಪ್ರತ್ಯಕ್ಷನಾಗಿ ಬದಲ...

ಶ್ರೀಮಾನ್ ದ ರಾ ಬೇಂದ್ರೆಯವರಿಗೆ ದೋಷರಾಹಿತ್ಯದಾ ಕಲ್ಪನಾ ರಾಜ್ಯದೊಳು ಸಗ್ಗದೂಟವನುಣುವ ಹಿರಿಯ ಕಬ್ಬಿಗನೇ ನಿನ್ನ ಕಾಣಲು ಬಯಸಿ ಹಲವಾರು ದಿನಗಳಿಂ ಇಣಿಕಿಣಿಕಿ ನೋಡುತಿದೆ ಈ ಸಣ್ಣ ಮನವು ಕವಿಯ ಬರೆಹವ ಕಂಡ ರಸಬಿಂದುಗಳ ಸವಿಯೆ ಸುಳಿಯುತಿದೆ ಭೃಂಗದೊಲು...

ಜೀವನ: ಬಣ್ಣ ಬಣ್ಣದಾ ಬಾಲಂಗೋಚಿ! ಗಾಳಿಲಿ, ತೇಲಿ ತೇಲಿ ಸಾಗಿದೆ, ಪಟ ಪಟನೇ ಜೀವನಪಟದಿ- ಬದುಕು ಭಾರ! ದಾರದಲಿ ಸೂತ್ರವಿದೆ, ಜೀವವಿದೆ, ಮರೀಬೇಡ! ಜಗಕೆ ಸೂತ್ರವುಂಟು, ಜೀವ ಉಂಟು ನಂಬಬೇಡ. * ಹಾರಿ ಹಾರಿ, ರೆಕ್ಕೆ ಬಂದ, ಹಕ್ಕಿಯಾಗಲು ಸಾಧ್ಯವೇನು? ತ...

ಮುಂಜಾನೆ ಅರಳಿ ಸಂಜೆಗೇ ನಿನ್ನ ಮಣ್ಣ ತಣ್ಣನೆಯ ಮಡಲಿಗೆ ಮರಳಿಬಿಡುವ ಹೆಸರಿರದ ಸಣ್ಣ ಸಣ್ಣ ಬಣ್ಣ ಬಣ್ಣದ ಹೂವುಗಳಿಂದಾಗಿಯೇ ಧಾರಿಣೀ, ನೀನು ನವ ನವೋನ್ಮೇಶ ಶಾಲಿನಿ *****...

ಇವರ ಕಣ್ಣಿಗೆ ಇಲ್ಲೆಲ್ಲಾ ಓರೆಕೋರೆಗಳೇ ಕಾಣುತ್ತವೆ ನೇರಮಾಡಲು ಇವರು ಸೆಣಸುತ್ತಾರೆ ಇವರ ನೋಟಕತ್ತಿಗಳು ವಕ್ರತೆಗಳ ಕತ್ತರಿಸುವಂತೆ ನೋಡುತ್ತವೆ ಇವರ ಎದೆ ಏನೇನೋ ಹಾಡುತ್ತದೆ ಆ ಹಾಡ ಕಡಲಿಂದ ನುಡಿಬಟ್ಟಲಲ್ಲಿ ಇವರು ಮೊಗೆದೇ ಮೊಗೆಯುತ್ತಾರೆ ಅಸಂಖ್ಯ ...

ಪ್ರಿಯ ಸಖಿ, ನಮ್ಮ ಮನಸ್ಸಿನಲ್ಲಿ ಎಷ್ಟೊಂದು ಮಾತುಗಳು ಮೂಡಿ ಮರೆಯುಗುತ್ತಿರುತ್ತವಲ್ಲಾ? ಅದರಲ್ಲಿ ವೃಕ್ತವಾಗುವುದು ಕೆಲವು ಮಾತ್ರ. ಅವ್ಯಕ್ತವಾಗಿ ಎದೆಯೊಳದಲ್ಲೇ ಉಳಿದು ಬಿಡುವ ಮಾತುಗಳು ಹಲವಾರು. ನಮಗಿಷ್ಟವಿಲ್ಲದಿದ್ದರೂ ನಮ್ಮ ಅನುಮತಿಯಿಲ್ಲದೇ ಬ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...