
ಅರುಂಧತಿ ಅಪ್ಪನಿಗೆ ತಕ್ಕ ಮಗಳು ತೋರಿದ ದಾರಿಗುಂಟ ಮೌನವಾಗಿ ನಡೆದಳು ಹಡೆದಳು ಹತ್ತು ಪುತ್ರರ ವಶಿಷ್ಠರ ಆಶ್ರಮದಲ್ಲಿ ಕಾಮಧೇನು ಹಾಲು. ಪತಿಯ ಮಾತು ಚಾಚೂ ತಪ್ಪದ ಅವಳ ನಡುಗೆ ಮಹಾಮನೆ ನಿರ್ಮಿಸಿ ಬಯಲ ತುಂಬ ಹೂ ಹಣ್ಣು, ಹಸಿರು ತಾಯಿ ಒಡಲ ಕರೆಯ ನಾದ ...
ಭಗವನ ಒಂದೊಂದು ದಿನವೂ ಹೀಗೆ ವ್ಯರ್ಥವಾಗಿ ಹೋಗುತ್ತಿದೆ ತನ್ನ ತಾನಾಗೆ ನಿನ್ನ ಕಾಣುವ ಭಾಗ್ಯ ಯಾವ ಕ್ಷಣ ಅದೊ ನೀನಿರದ ಇಲ್ಲಿ ಮತ್ತೇನು ಇಹುದೊ ಬಾಲ್ಯದ ದಿನಗಳಲಿ ಆಟದಲ್ಲಿ ಕಳೆದೆ ತಾರುಣ್ಯದಲ್ಲಿ ಕಾಮನ ಮೋಹಿಸಿದೆ ಸಂಸಾರ ಸಾರದಲ್ಲಿ ನಿನ್ನೊಲುವ ಮರೆ...
ಕಟ್ಟಳೆಗನುಸಾರನಾಗಿ ಪ್ರಧಮತಃ ಮಾಡಬೇಕಾದ ಅಕ್ಕಿ ಮುಹೂ ರ್ತಕ್ಕೆ ದಿನ ನೋಡಬೇಕೆಂದು ಚಂಚಲನೇತ್ರರಿಂದ ಆಜ್ಞಾಪಿಸಲ್ಪಟ್ಟ ಮಠದ ಸೇವಕರೆಲ್ಲರೂ ಸಕಲ ಸಾಮಗ್ರಿಗಳನ್ನು ಸಂಗ್ರಹಿಸುವುದರಲ್ಲಿ ಅಮರಿದರು. ಒಮ್ಮೆ ಅವರನ್ನು ಪ್ರವೇಶವಾಗಲಿಕ್ಕೆ ಬಿಟ್ಟರೆ ಮುಂದ...
ಬ್ರಹ್ಮಾಂಡಕೆ ಕಾನ್ ಕೊಡುತಿದ್ದೆ, ಒಬ್ಬೊಂಟಿಗ ಶಮ-ಶಿಖರದಲೂ ಮುತ್ತಿತ್ತೋ ಗುಜುಗುಜು ನಾದಾ ಝಗಝಗಿಸುವ ನಿದ್ದೆಯೊಳದ್ದಿ, ಮಾನಸವನು ಸುತ್ತಿದೆ ಎತ್ತೂ ಮರ್ಮರಿಸುವ ನಿರ್ಭರ ಮೌನಾ. ಚಿರಶುಭ್ರ ಜ್ವಾಲಾ ಗೂಢಾ, ಮನನಕ್ಕೆ ಪ್ರಾಪ್ತ ಪದಾರ್ಥಾ ಜಿನುಗುಡುತ...
ಬಾಡದಿರುವಲರಂತ ಬಗೆಯನ್ನು ಮಾಡಿದರೆ ಬೈಯುವೆನೆ ನಿನ್ನ ತಾಯೇ ? ಹಾಡುತಿಹ ಕೊಳಲಂತ ಕೊರಳನ್ನು ಮಾಡಿದರೆ ಕುಂದಿಡುವನೇನು ತಾಯೇ ? ಮೂಡುವಾ ನೇಸರಿನ ತರ ಮೆಯ್ಯ ಮಾಡಿದರೆ ಮುಚ್ಚರಿಪರಾರು ತಾಯೇ, ಕೋಡುಗಲ್ಲಂತೆನ್ನ ಮನವ ನೆಲೆನಿಲಿಸಿದರೆ ಮುನಿವೆನೇ ಲೋಕಮ...
ಸೇವೆ ಮಾಡುವರು ಬೇಕಾಗಿದೆ ಕನ್ನಡದ ಸೇವೆ ಮಾಡುವವರು ಬೇಕಾಗಿದೆ|| ಸೇನೆ ಕಟ್ಟುವವರು ಬೇಕಾಗಿದೆ ಕನ್ನಡ ಸೇನೆ ಕಟ್ಟುವವರು ಬೇಕಾಗಿದೆ|| ಗಡಿಯ ಒಳಗೆ, ಗಡಿಯ ಹೊರಗೆ ಕನ್ನಡದ ಪಡೆಯ ಕಟ್ಟುವವರು ಹುಟ್ಟಬೇಕಾಗಿದೆ| ಗಲ್ಲಿ ಗಲ್ಲಿಯಲ್ಲಿ ಕನ್ನಡದ ಬಾವುಟ ಹ...
ಹೇಗೆ ಹೇಳಲಿ ನಿಮಗೆ ನನ್ನೊಳಗಿನ ಪಂಜಾಬು ಸ್ವರ್ಣ ದೇಗುಲದಲ್ಲಿ ಕರ್ಣ ಕಿವುಡು ಹೇಗೆ ಹೇಳಲಿ ನಿಮಗೆ ನನ್ನೊಳಗಿನ ಕಾಶ್ಮೀರ ಸೇಬು ತೋಟದ ತುಂಬ ಚೀರು ಚೂರು. ಹಾಳು ಬಾವಿಯ ಬದುಕ ಹೇಗೆ ಹೇಳಲಿ ನಿಮಗೆ ಬಿರುದ-ಬಾವಲಿ ಎಲ್ಲ ಹೂಳು ಚಿತ್ತ ಎಷ್ಟು ಕೊರೆದರ...
ಆಕೆ Blanche Dubois ತನ್ನ ಬಂಧುಗಳ ರೋಗ ರುಜಿನ, ಮರಣವೆಂದು ಇದ್ದ ಬಿದ್ದ ಸಂಪತ್ತು ಪಿತ್ರಾರ್ಜಿತ ಮನೆ, ಆಸ್ತಿಯನ್ನೆಲ್ಲಾ ಕಳೆದುಕೊಂಡು, ವೈವಾಹಿಕ ಬದುಕು ಜರ್ಜರಿತಗೊಂಡು ಬೇರೆ ಗತಿ ಕಾಣದೆ ಇದ್ದ ಒಬ್ಬ ತಂಗಿಯ ಆಶ್ರಯಿಸಿ Stellaಳ ಮನೆಗೆ ಬರುತ್...
ಬಂದಿತು ನಾಡಿಗೆ ಬೇಸಿಗೆಯು ಮುಗಿಯಿತು ವಾರ್ಷಿಕ ಪರೀಕ್ಷೆಯು ಮಕ್ಕಳಿಗಿದು ವಿಶ್ರಾಂತಿಯ ಕಾಲ ಆಟ ಕೂಟ ಬಿರು ಬಿಸಿಲಲ್ಲಿ ನೆಂಟರ ಊರಿಗೆ ತೆರಳುವರು ಹೊಸ ಹೊಸ ಸ್ಥಳಗಳ ನೋಡುವರು ಬಗೆ ಬಗೆ ಭಕ್ಷವ ಸವಿಯುವರು ನಂತರ ಊರಿಗೆ ಮರಳುವರು ಕೋಶವ ಓದು ದೇಶವ ನೋ...
ಸಿಗರೆಟ್ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್ಥಮಾಡಿ ಕೊಳ್ಳು...
“ಕಿಟ್ಟೂ…….! ಚಳಿಯೊ……! ಹೊಟ್ಟೆಯಲ್ಲಿ ನಡುಕ……! ಅಯ್ಯೋ ಸಾಯ್ತಿನೊ ……. ಕಿಟ್ಟೂ ….. ಅಯ್ಯೋ….. ಅಯ್ಯೋ…. ಹ….. ಯ್ಯೋ…. ಎಂಥಾ… ವೇಳೆ ತಂದೆಪ್ಪಾ ಭಗವಂತಾ!…. ಅಯ್ಯ...
ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...
ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...














