ಸುಧೆಯಂ ಪಡೆದುಂ ಮರಣವತಪ್ಪಿಸೆ ಕಡಲನು ಕಡೆದರು ದಾನವದಿವಿಜರು| ಅದರೊಳು ಪಡೆದರು ಈರೆಳು ಮಣಿಗಳ ಕುಣಿದರು ಅಗಣಿತ ಸಂತಸದಿ || ಸುಧೆಯೊಂದಿಗೆ ತಾ ಹೊರಟಿತು ಸುರೆತಾಕುಡಿಯುತ ದೈತ್ಯರು ಮದಿಸಿದರು| ಸುಧೆಯನು ಈ೦ಟುತೆ ಮರಣವ ತಪ್ಪಿಸಿ ಮೆರೆದರು ವಿಶ್ವದಿಬಿಡುಗಣ್ಣಿಗರೂ || ೧ || ಸುರೆಯಂ ಕುಡಿಯತೆ ಕಡುಮದದಿಂದಲಿ ಅಡ...

ಸಿದ್ದನಿವ ಸಿದ್ದನಿವ ಸಾಧನೆಯ ಗರ್ಭದಿಂ ಸಿದ್ಧಿಯನು ಪಡೆದ ಶ್ರೀ ಸಿದ್ದನಿವನು| ಅಂದು ನಾಡಾಗಿರಲು ಸಂದೇಹವಾಬೀಡು ಸಂದೇಹ ನೀಗಿಸಲು ಬಂದ ನಿವನು ಗೊಂದಲದಿ ಬಿದ್ದವರ ತಂದೆ, ಕೈ ಹಿಡಿದೆತ್ತಿ ಮುಂದಕ್ಕೆ ಕರೆತಂದು ಮೇಲೆತ್ತಿದೆ| ನೂರೆಂಟು ಹೀನಗಳ ದೂರ ಮ...

ಹೆಂಡದಂಗಡಿಯವನ ಹೆಂಡತಿಯ ಕಣ್ಗಳಲಿ ವಜ್ರದೊಡವೆಗಳು ತಂದ ಆನಂದದ ಮಿಂಚು ಗುಡುಗಿ ಗಡಂಗಿನಲಿ ಕಣ್ಣೀರ ಮಳೆಗರೆಯಿತು ಸಾವಿರಾರು ಕುಡುಕರ ಮಡದಿ ಮಕ್ಕಳ ಕಳಾಹೀನ ಕಣ್ಗಳಲಿ *****...

೧ ಕಾಂಡವೇ ಶಿಲೀಕೃತಗೊಂಡು ಕಲ್ಲಾದ ಪಳೆಯುಳಿಕೆ, ಮರಗಲ್ಲಿನಲಿ ಕೆತ್ತಿದ ಬುದ್ಧನಿಗೆ ಅವಳಡುಗೆ ಮನೆಯೀಗ ತಪೋವನ. ನೀಳ ಕಣ್ಣು ಮುಚ್ಚಿ ಧ್ಯಾನಕ್ಕೆ ಕೂತ ಅವನೊಂದಿಗೆ ಅವಳ ನಿತ್ಯ ಕಸುಬಿನಲ್ಲೇ ಮೌನ ಜುಗಲ್‌ಬಂದಿ. ೨ ಸೊಪ್ಪು ಸೋಸುತ್ತಾ ಕಾಳು ಬಿಡಿಸುತ್...

ಕತೆಗಾರ ಎಸ್. ಸುರೇಂದ್ರನಾಥ್ ಭರ್ಜರಿಯಾದ ಕಾದಂಬರಿಯೊಂದನ್ನು ಬರೆದಿದ್ದಾರೆ-ಹೆಸರು ‘ಎನ್ನ ಭವದ ಕೇಡು’ (ಛಂದ ಪ್ರಕಾಶನ, ಬೆಂಗಳೂರು, ೨ಂಂ೭)- ಹಾಗೂ ಆ ಮೂಲಕ ಕನ್ನಡ ಕಾದಂಬರೀ ಕ್ಷೇತ್ರವನ್ನು ಭರ್ಜರಿಯಾಗಿಯೇ ಪ್ರವೇಶಿಸಿದ್ದಾರೆ. ಎನ್ನ ಭವದ ಕೇಡು ಎ...

ತಾನನಂದ್ರ ನಾನೋ ತಾನತಂದ್ರ ನಾನೋ ತಂದಾನ ತೈದಾನೋ ತಾನಾನಾ || ೧ || ಶ್ವಾಮಿ ಇಂದ್ರ ಮೇನೋ ಭೂಮಿಯ ನೆನೆದಾನೋ ಶ್ವಾಮಿ ಶಂಕರನಾ ನೆನೆವೇನೋ || ೨ || ಶ್ವಾಮಿ ಶಂಕರನಾ ನೆನವ ಗುಂಬಳತಾಯೇ ಭೂಮಿ ಬಲ್ಲವರೇ ಹಾಡಾ ತೊಡಗಿರುವಾ || ೩ || ಬಲ್ಲವ್ರ ಹೇಳಿದ ಹ...

ಅಂತೆ ಗುಣಿಸಿದೊಡೆಂತಾತುರದೊಳ್ ಆನಂದವಧಿಕವಾಗಲಿ ಕೆಂದೆನುತಿಳೆಯಂತರಂಗವನು ಅವಗಣಿಸುತಲಿ ಎಂತು ನೋಡಿದೊಡಂ ಇಲ್ಲಿ ನಡೆವುದು ಬರಿದಪ್ಪ ಅಂಮರ ಲೆಕ್ಕ, ಕೂಡಿ ಕಳೆಯುವ ಲೆಕ್ಕ, ಹುಟ್ಟು ಸಾವಿನ ಲೆಕ್ಕ ಅಂತಿದನು ಗುಣಿಸಿದೊಡಂ ಭಾಗಿಸಿದೊಡಂ ಅಪಾಯ ಪಕ್ಕಾ &...

ಪಾಪು ತನ್ನ ಶಿಶುವಿಹಾರ ಟೀಚರ್‌ಗೆ ಕೇಳಿತು.. “ನಾನೇನೂ ಮಾಡದಿದ್ರೆ ನನಗೆ ಶಿಕ್ಷೆ ಕೊಡುವುದಿಲ್ಲಾ?” “ಏನೂ ಮಾಡದಿದ್ರೆ ಯಾರು ಶಿಕ್ಷೆ ಕೊಡ್ತಾರೆ ಮರಿ” “ಮೇಡಂ ನಾನಿವತ್ತು ಹೊಂವರ್ಕ್ ಮಾಡಿಲ್ಲ” *****...

ಅಚ್ಚರಿಯ ನೋಟವದೇಕೆ ನಿಟ್ಟುಸಿರ ಬಿಡುವಿರೇಕೆ ಅರೆಗಳಿಗೆ ದಿಟ್ಟಿಸಿ ನೋಡಿರಿ ಕಲಾವಿದನ ಕರಚಳಕದೆ ಅವಿರ್ಭವಿಸಿದ ಕಲ್ಪನೆಯ ಚಿತ್ರವೇ ದೇವನ ಸೃಷ್ಠಿಯ ವೈಚಿತ್ರವೇ ಅಲ್ಲ ನಿಮ್ಮೆದುರು ನಿಂತಿರುವ ನಾನೊಂದು ಬೋಳು ಮರ ಗತ ಕಾಲದೆ ನಾನಾಗಿದ್ದೆ ಫಲಭರಿತ ಸಂ...

ಇಬ್ಬರಿಗೊಂದಂಬ ತೊಡುವೆ ಗಡ ಕಾಮಾ ಅರಿದರಿದು ಬಿಲುಗಾರನಹೆಯೋ ಎಸೆದಿಬ್ಬರು ಒಂದನೀ ಹರು ಗಡ ಇದು ಹೊಸತು ಚೋದ್ಯವೀ ಸರಳ ಪರಿ ನೋಡಾ ಎನಗೆಯೂ ಉರಿಲಿಂಗದೇವಗೆಯೂ ತೊಟ್ಟೆಸು ನಾವಿಬ್ಬರೊಂದಾಗೆ ಬಿಲ್ಲಾಳಹೆ ಎಸೆಯಲೋ ಕಾಮ [ಚೋದ್ಯ-ಆಶ್ಚರ್ಯ, ಹರು – ತೆಗೆದು...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...