ನಟ ತೆರೆಯ ಮರೆಯಾದ ಆಟ ತೀರಿಸಿಕೊಂಡು, ಭಟ ಸಮರದಿಂದ ತೆರಳಿದ ಅರಸನರಮನೆಗೆ; ಪಟು ಪಾಡುಗಾರ ತುಟಿ ಮುಚ್ಚಿದನು ನಾಡು- ನುಡಿಗಳ ಹಾಡುಗಳನು ಹಾಡಿ. ಅಟಮಟದ ಮಾತಲ್ಲ; ನಾಡೆ ನಾರಾಯಣನು, ದಿಟವಾಗಿ ‘ನುಡಿಯೆ ಸಿರಿ’ ಎಂದು ಕೀರ್ತನೆಗೈದು ಹಟದಿ ಕೀರ್ತನಗಾರ ಬೆವರನೊರಿಸಲು ಹಿಂದೆ ಸರಿದ ವಿಶ್ರಾಂತಿಗಾಗಿ. ...

ಏರಿತು ಗಗನಕೆ ನಮ್ಮ ಧ್ವಜ! ಭಾರತ ಭಾಗ್ಯ ರವಿಯ ತೇಜ ! ೧ ಮರವೆಯಿಂದ ಜನಮನ ಜಾಗರಿಸಿ, ಪರದಾಸ್ಯದ ಜಾಲದ ಭಯ ಹರಿಸಿ, ಹುರುಳ ಹುರುಪನೀ ಬಾಳಲಿ ಬೆರಸಿ, ಏರಿತು ಗಗನಕೆ ನಮ್ಮ ಧ್ವಜ- ಭಾರತ ಶಕ್ತಿಯ ವೀರಭುಜ ! ೨ ‘ಎಲ್ಲಿದೆ ಬಂಧನ ಬಲದಾಕ್ರಮಣ ? ಎಲ್ಲಿದೆ...

ಪ್ರಕೃತಿ ದೇವಿಯೆ ಮೈ ತಾಳಿ ನಿಂತಿಹಳು ತೋಣ್ಣೂರು ಗ್ರಾಮದಲ್ಲಿ ಹಸಿರು ಸೀರೆಯ ಮೇಲೆ ಹಳದಿಯರಮಣಿ ಕಿಲಕಿಲನೆ ನಗುತಿಹಳು ಮನವ ಸೆಳೆಯುತಲಿ ಸುತ್ತ ನಿಂತ ಶಿಖರಗಳ ಸಾಲುಕೈಚಾಚಿ ಕರೆಯುತಿದೆ ನೋಡ ಬನ್ನಿ ಸುಂದರ ವನಪುಷ್ಪರಾಶಿಗಳ ನಡುವೆ ಮಣಿ ಮುತ್ತುಗಳೆ ...

ಯಂಗೀಸ್ಗ್ ಎಂಗೆ ಅರಸ್ನ ಕುಂಕ್ಮ- ಗಂಡೀಗ್ಗ್ ಅಂಗೆ ಯೆಂಡ. ವುಟ್ಟದ್ ಮನ್ಸ ರುಂಡಾಂತ್ ಅಂದ್ರೆ ಯೆಂಡದ್ ಬುಂಡೆ ಮುಂಡ. ೧ ಬೂಮೀ ಜನಗೊಳ್ ಯೆಂಡದ್ ಮರಕೆ ಊವು ಕಾಯ್ ಇದ್ದಂಗೆ. ಯೆಂಡದ್ ಮರಕೇ ಬತ್ತಿ ಕೊಟ್ರೆ ಮನ್ಸ ಬದಕೊದ್ ಎಂಗೆ? ೨ ಮನ್ಸಾಂತ್ ಅನ್ನೋ ...

ಹೊಗೆ ಮೋಡ ಹಿಂಜಿ, ಕಣ್ಮರೆಯಾಗುವಂತೆ, ನೆನೆ- ಸಿದ ರೂಪ ಹುಡಿಯಾಗತಿದೆ; ಮಬ್ಬು ಕವಿದು ಬರು- ತಿದೆ; ಸ್ವಪ್ನಲೋಕದೊಳು ಆಕಾರ ಪ್ರಳಯವಿರು- ವಂತೆ, ತುಂಬಿದೆ ನಿರಾಕಾರ ತಮ. ಚಿತ್ತಘನ ನಿಬಿಡ ವನ; ಹೊತ್ತು ಗೊತ್ತಿಲ್ಲ; ಮಿಸುಗುಡದೆ ಮನ ತನ್ನ ನುಂಗಿದೆ ...

ಹೌದ್ರೆಪಾ; ಜನರಿಗೆ ಸಮಾಧಾನ ಹೇಳುವದು ಸಸಾರ ಇರತದ. ಇದೇ ಪ್ರಸಂಗ ನಿಮ್ಮ ಮೇಲೆ ಬಂದಿದ್ದರ ನಿಮ್ಮ ಬಾಯಿಗೆ ಇಂಥ ಬೋಧಾಮೃತದ ಶೆಲಿ ಬೀಳ್ತಿದ್ದಲ್ಲ. ಅಂತ “ಈ ಜಗತ್ತಿನಲ್ಲಿ ಯಾರೂ ಚಿರಂಜೀವಿಯಲ್ಲ. ಎಲ್ಲರಿಗೂ ಇಂದಿಲ್ಲ ನಾಳೆ ಸಾವಿದ್ದದ್ದೇ. ಇಂ...

ಋತು ಮತಿಯನರಿಯುವ ಕಷ್ಟ ಮುತ್ತುವಾ ಕೀಟ ರೋಗಕರಿವ ಮದ್ದಿನ ಕಷ್ಟ ಅತ್ತಿತ್ತೋಡಾಡಲೆಮ್ಮ ಹಳ್ಳಿ ಮಾರ್ಗವು ಕಷ್ಟ ಹತ್ತಾಡುತಿರಲೂರವರೊಲಿಯೆ ಮಾಡುವ ಕಷ್ಟ ಮತ್ತೆಮ್ಮ ಮನೆಯಾಕೆಯೋಲೈಕೆ ಕಷ್ಟ ಕಷ್ಟ – ವಿಜ್ಞಾನೇಶ್ವರಾ *****...

ಕೋಲು ಕೋಲೆನ್ನ ಕೋಲೇ ರನ್ನದಾ ಕೋಲಂಬುದ ಮೇಲನ್ನಿರೇ ಹಡಗು ಹಳ್ಳಕೆ ಹೆಚ್ಚು ಗುಡುಗು ಮಳೆಗೆ ಹೆಚ್ಚು ನಕ್ಷತ್ರ ಹೆಚ್ಚು ಗಗನಕ್ಕೆ | ರನ್ನದಾ ಕೋಲು || ೧ || ಆಶೇ ಆಡುವರ ಕಂಡೆ ದೋಶೇ ಸುಡುವರ ಕಂಡೆ ದಾಶಪ್ನ ಕಂಡೆ ಗಿರಿಮೇನೇ || ೨ || ಹಾಡಗೆ ಹಾಡಲಲ್...

ಪಾದ್ರಿಗೆ ತನ್ನಲ್ಲಿ ಉಂಟಾದ ನಂಬಿಕೆಯಿಂದ ಮನಸ್ಸು ಕರಗಿ ಜೀನ್ ವಾಲ್ಜೀನನು ಅಲ್ಲಿಂದ ಮುಂದೆ ಒಳ್ಳೆಯ ನಡತೆಯಿಂದಿರು ವುದೇ ಉತ್ತಮವೆಂದು ಅನುಭವದಿಂದ ತಿಳಿದುಕೊಂಡು, ತನ್ನ ಜನ್ಮಾವಧಿಯ ಒಳ್ಳೆಯ ನಡತೆಯನ್ನೇ ತನ್ನ ಧೈಯವಾಗಿಟ್ಟು ಕೊಂಡನು, ಒಂದು ಸಣ್ಣ...

ರಾಮಾ, ಮನದಲಿ ಹರಿದು ಬರಲಿ ನೆನೆಯುವೆ ನಿತ್ಯ ನಿನ್ನ ನಾಮಾ ನಿನ್ನೊಂದು ನೆನಪೆ ನನಗೀಗ ಪಾವನವಾಗಿದೆ ನಾಮಾ ಬದುಕು ಬವಣೆಗಳ ಮಧ್ಯ ಸ್ವಾರ್ಥಗಳನು ಸಾಕಿ ಸಲುಹಿದೆ ನನ್ನವರ ಬಾಳಿಸಲು ನಿತ್ಯವೂ ಏನೆಲ್ಲ ಗಳಿಕೆಗೆ ತಿರುಗಿದೆ ಯಾವ ಕ್ಷಣಕ್ಕೂ ಬರಲಿಲ್ಲ ಆ ...

ಒಡದು ಕರ್ಮದ ಕಟ್ಟು – ಜಗದ ಮೋಹವ ಸುಟ್ಟು ಪಡೆದು ಸತ್ಯದ ದೃಷ್ಟಿ – ಜನಕೆ ತಿಳಿವನು ಕೊಟ್ಟು ಜಡ ಶರೀರದ ಮಮತೆ – ಕಾಮ ಮದಗಳ ಬಿಟ್ಟು ನುಡಿ ನುಡಿಗಹಿಂಸೆಯನ್ನು ಬೋಧಿಸುವೆ ಕೃಪೆಯಿಟ್ಟು. ಎಲ್ಲ ಹೃದಯವ ಹೊಕ್ಕು – ಅಳೆದು ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...