ಹೆಂಡದಂಗಡಿಯವನ
ಹೆಂಡತಿಯ ಕಣ್ಗಳಲಿ
ವಜ್ರದೊಡವೆಗಳು ತಂದ
ಆನಂದದ ಮಿಂಚು
ಗುಡುಗಿ ಗಡಂಗಿನಲಿ
ಕಣ್ಣೀರ ಮಳೆಗರೆಯಿತು
ಸಾವಿರಾರು ಕುಡುಕರ
ಮಡದಿ ಮಕ್ಕಳ
ಕಳಾಹೀನ ಕಣ್ಗಳಲಿ
*****