Home / Poem

Browsing Tag: Poem

ನಮ್ಮಮ್ಮ ಹೇಳಿದ್ಲು ‘ದೊಡ್ಡವ್ರು ಸತ್ರೆ ಆಕಾಶದಾಗೆ ಚುಕ್ಕಿ ಆಗ್ತಾರೆ ನಮ್ಮೊಂತೋರು ಸತ್ರೆ ಗುಡ್ಡದಾಗಿನ ಕಲ್ಲು, ಹೊಲದಾಗಿನ ಹುಲ್ಲು ಆಗ್ತೀವಿ’ ಅಂತ ಹುಡುಕುವುದಿಲ್ಲ ಸತ್ತ ಅಪ್ಪನ ಆಕಾಶದಲಿ ಕಳೆದುಹೋದ ಅಮ್ಮನ ಚುಕ್ಕಿಗಳಲಿ… ಎದುರಾಗುವ ಕಲ್...

ಈ ಬಾನು ಈ ಚುಕ್ಕಿ ಈ ಹೂವು ಈ ಹಕ್ಕಿ ತೇಲಿ ಸಾಗುವ ಮುಗಿಲು ಹರುಷವುಕ್ಕಿ ಯಾರು ಇಟ್ಟರು ಇವನು ಹೀಗೆ ಇಲ್ಲಿ ತುದಿಮೊದಲು ತಿಳಿಯದೀ ನೀಲಿಯಲಿ? ಒಂದೊಂದು ಹೂವಿಗೂ ಒಂದೊಂದು ಬಣ್ಣ ಒಂದೊಂದು ಜೀವಕೂ ಒಂದೊಂದು ಕಣ್ಣ ಯಾವುದೋ ಬಗೆಯಲ್ಲಿ ಎಲ್ಲರಿಗೂ ಅನ್ನ ...

ಇಂತಿಷ್ಟೇ ಎಲೆ ಹೂವು ಕಾಯಿಗಳಿರಬೇಕೆಂದೇನಾದರೂ ಕಾಯ್ದೆ ಇದೆಯೇ ಮರಕ್ಕೆ, ಹಾಗಾದರೆ ಅವುಗಳೆಲ್ಲ ಬಿದ್ದು ಉದುರಿ ಹೋದಾಗ? ಮತ್ತೆ ಕರೆಯುತ್ತದೆಯಲ್ಲ ವಸಂತನನ್ನು. *****...

ಚುಕು ಬುಕು ರೈಲು ಸಾಗುತಲಿತ್ತು ಮುಂದಕೆ ಮುಂದಕೆ ಓಡುತಲಿತ್ತು ಗಾವುದ ಗಾವುದ ಎದುರಿಗೆ ಇತ್ತು ಗಾವುದ ಗಾವುದ ಹಿಂದಕು ಬಿತ್ತು ಚುಕು ಬುಕು ರೈಲು ಸಾಗುತಲಿತ್ತು ಮುಂದಕೆ ಮುಂದಕೆ ಓಡುತಲಿತ್ತು ಆಚೆಗೆ ಬೆಟ್ಟ ಈಚೆಗೆ ಬಯಲು ಎಲ್ಲೋ ಹೊಲದಲಿ ನಡೆದಿದೆ ...

ಹರಿ ವಿರಂಚಿಯೂ ಕೂಡಿ ಗುರು ಬೃಹಸ್ಪತಿ| ಕೂಡಿ ಗುರು ಬೃಹಸ್ಪತಿ ಕರೆಸಿ ಕೇಳೆಯಾ ತಾರಕಾಸುರನ ಬಾಧೆಯ||ಪ|| ಹರನ ತಪವನುಽ ಕೆಡಿಸಿ ಸ್ಮರಗೆ ಬೋಧಿಸು| ಕೆಡಿಸಿ ಸ್ಮರಗೆ ಬೋಧಿಸು ಸುರರ ಬಾದೆಯ ಬ್ಯಾಗ ಪರಿಹರಿಸುವುದು||೧|| ಅಕ್ಷ ಮೂರ್ತಿಯಽ ತಪವು ಭ್ರಷ್ಟ...

ಬುದ್ಧನಾಗಲಿಲ್ಲ ನಾ ಕೇರಿಂದೆದ್ದು ಬರಲಾಗಲೇ ಇಲ್ಲ! ಬಿದ್ದಲ್ಲೆ ಬಿದ್ದು ಬಿದ್ದು… ಹಂದಿಯಂಗೆ ಹೊಲೆಗೇರಿಲಿ… ಎದ್ದು ಎದ್ದು… ಒದ್ದಾಡುತ್ತಿರುವೆ! ಕೇರಿಂದೆ ಹೊರಗೇ ಬರಲಾಗಲೇ ಇಲ್ಲ ಇನ್ನು ಬುದ್ಧನಾಗುವಾ ಬಯಕೆ ದೂರಾಯಿತಲ್ಲ! *...

ಹಗಲಿಗೆ ಸೂರ್ಯ ರಾತ್ರಿಗೆ ಚಂದ್ರ ಲಕ್ಷ ನಕ್ಷತ್ರ ಗಾಳಿ, ಬೆಂಕಿ, ನೀರೆಂಬ ವಿಚಿತ್ರ ಕಾಲ ಕಾಲಕ್ಕೆ ಮಳೆ ಬೆಳೆ ಸಮೃದ್ಧವಾದಿಳೆ ಇಷ್ಟಿದ್ದರೂ ನೀನು ಹಗಲೂ ರಾತ್ರಿ ಮುನ್ನೂರು ಅರವತ್ತೈದು ದಿನವೂ ಸುತ್ತುವುದೇಕೆಂದು ಕೇಳುವ ನನ್ನ ಮಕ್ಕಳ ಪ್ರಶ್ನೆ ಕೇಳ...

ಹಗಲ ಭಂಡವಾಳವು ಇರುಳ ಕಾರಖಾನೆಯ ಸೇರುವುದು ಹಲ್ಲು ಮಸೆದು ಕಬಳಿಸಿತು ಯಂತ್ರ ಮಂತ್ರವೂದಿ ಚೇತನಗೊಳಿಸಿತು ತಂತ್ರ ಅವರಿವರ ಭಂಡವಾಳಗಳ ಮೇಲೆ ಹೂಡಿದ ಬೃಹದುದ್ಯಮವಿದು ಬಡ್ಡಿಗೆ ಬಡ್ಡಿ ಸೇರಿ ಬೊಡ್ಡೆ ಬಲಿತಿದೆ ಮೂಲ ಅಸಲೆಲ್ಲೋ ಒಂದೆರಡು ಹನಿ, ಹನಿಹನಿ ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...