ಹಗಲಿಗೆ ಸೂರ್ಯ
ರಾತ್ರಿಗೆ ಚಂದ್ರ
ಲಕ್ಷ ನಕ್ಷತ್ರ
ಗಾಳಿ, ಬೆಂಕಿ, ನೀರೆಂಬ ವಿಚಿತ್ರ
ಕಾಲ ಕಾಲಕ್ಕೆ ಮಳೆ ಬೆಳೆ ಸಮೃದ್ಧವಾದಿಳೆ
ಇಷ್ಟಿದ್ದರೂ ನೀನು ಹಗಲೂ ರಾತ್ರಿ
ಮುನ್ನೂರು ಅರವತ್ತೈದು ದಿನವೂ
ಸುತ್ತುವುದೇಕೆಂದು ಕೇಳುವ
ನನ್ನ ಮಕ್ಕಳ ಪ್ರಶ್ನೆ ಕೇಳಿ
ನಗಲೋ ಅಳಲೋ? ಏನು ಮಾಡಲಿ
ಇದೆಲ್ಲವೂ ಇರುವುದು ನಾನು
ಸುತ್ತುವುದರಿಂದ ಎಂದು
ಅರ್ಥವಾಗುವಂತೆ ಅವರಿಗೆ ಹೇಗೆ ಹೇಳಲಿ.
*****