Home / Poem

Browsing Tag: Poem

ಸುತ್ತಲೂ ಕತ್ತಲು ನಂಬುವಂತಿಲ್ಲ ಯಾರೊಬ್ಬರನೂ ಕತ್ತಿ ಹಿಡಿದು ಮೇಲೇರಿ ಬಂದಂತೆ ಕಡ್ಡಿ ಗೀರಿದೆ ಮೆಲ್ಲಗೆ ದೀಪ ಹಚ್ಚಿದೆ ಬೆಳೆಯುತ್ತಾ ಹೋಯಿತು ಬೆಳಕು ಮುಟ್ಟಿದರೆ ಎದೆಯಾಳಕ್ಕೆ ಚುಚ್ಚಿಕೊಳ್ಳುವ ಮುಳ್ಳು ಪ್ರತಿ ಕೊಂಬೆಗೂ ತುದಿಯಲೊಂದು ಸಣ್ಣ ಮೊಗ್ಗು...

ಮರವು ತೂಗಾಡಿದವು ಬಳ್ಳಿ ಓಲಾಡಿದವು ಹೂವು ನಕ್ಕವು ಕುಲುಕಿ ಮೈಯನೆಲ್ಲ, ಮಂದಮಾರುತ ಸುಳಿದು ಗಂಧವನು ಹಂಚಿದನು ನೀ ಬಂದೆ ಎನ್ನುವುದು ತಿಳಿಯಲಿಲ್ಲ ನದಿ ಹಾಡಿ ಓಡಿತು, ಬೆಳುದಿಂಗಳಾಡಿತು ಮೆಚ್ಚಿ ಸವರಿತು ಬೆಳಕು ಮುಗಿಲ ಗಲ್ಲ, ಮಣ್ಣ ಕಣ ಕಣವೂ ಚಿನ್ನ...

ಎಂದಿನಂತೆಯೆ ಬಂದಿತೇ ನಾಡ ಹಬ್ಬ? ನಮ್ಮ ನಾಯಕರೆಮ್ಮನಾಳುವುದೆ ಹಬ್ಬ! ಅದು ಹೊರತು, ಹಸಿದವನ ಕೈಗಿತ್ತು ಕಬ್ಬ, ‘ಓದಿ ತಣಿ’ ಎಂದಂತೆ ನಾಡಹಬ್ಬ! ಬಣಜಿಗನ ಬೊಕ್ಕಸವು ತುಂಬಿತಿದೆ ಗಿಡಿದು; ಕಾರ್ಮಿಕರು ಕೆರಳಿಹರು ತಮ್ಮ ಕನಸೊಡೆದು; ಕ್ಷಾಮಮಾರಿಯ ಮುಂದೆ...

ಕಾಸಿದ ಹಸುವಿನ ಹಾಲಿನ ಬಣ್ಣ ಜಿಂಕೆಯ ಎರಡೂ ಕೊಂಬಿನ ಕಣ್ಣ ಕಿಟಕಿಯ ಹತ್ತಿರ ಇಣುಕುತ ನಿಂತ ತಾಳೆಯ ಮರದಿಂದ ದೊಪ್ಪಂತ ಬಿದ್ದ ಎದ್ದೊರೆಸಿಕೊಂಡು ಎಲ್ಲೋದ್ನಣ್ಣ ನಮ್ಮಯ ಮುದ್ದಿನ ಮೂನ್‌ಮೂನಣ್ಣ ಹಾಲಲ್ಲಿಲ್ಲ ನೀರಲ್ಲಿಲ್ಲ ಹುಡುಕಿ ನೋಡಿದರೆ ಎಲ್ಲೂ ಇಲ್...

ಒತ್ತರಿಸಿ ಒತ್ತಿರಿಸಿ ವಿಧಿಯ ದೂರಿರಿಸೆ ಕತ್ತಲೊಳು ಮಿಂಚೊಮ್ಮೆ ಬಂದು ಪೋಗುವುದು ಆಗುವುದು ಆಗುವುದು ಏನೇನೊ ಮನಕೆ ಭೋಗವನು ಚಣಕಾಲ ತಳ್ಳೆ ಪದತಲಕೆ ಮದಿಸಿತ್ತು ಮದಿಸಿತ್ತು ಮನಸು ಮದಿಸಿತ್ತು ಹದವನರಿಯದೆ ಎಲ್ಲೊ ಸುಳಿಯುತಿತ್ತು ಬಯಲಾಯ್ತು ಬಯಲಾಯ್ತ...

ಕಾದು ಕಾದು ಕೇರಿ ದೂರ ಸರಿತು ಊರಿಂದ! * ಊರೆಂಬಾ… ಬ್ರಹ್ಮ ರಕ್ಕಸನಿಗೆ- ಕೇರೆಂಬಾ… ಬೇತಾಳ! * ಈ ಊರುಕೇರಿ ಎರಡು ಕಣ್ಣುಗಳು! ಒಂದು-ಮೆಳ್ಳಗಣ್ಣು, ಮತ್ತೊಂದು- ಕುರುಡುಗಣ್ಣು! * ಈ ಊರು ಈ ಕೇರಿ ನದಿಯ ಎರಡೂ ದಡಗಳು! ಒಂದು: ಹೊಲಸು ಮ...

ಮೊನ್ನೆ ಸಂಜೆ ಗುರು ಶುಕ್ರರನ್ನೇ ಕಣ್ಣುಗಳಮಾಡಿ ಆಕಾಶವೇ ನಕ್ಕಂತೆ ನೀ ಬಿಡಿಸಿಟ್ಟ ಚಿತ್ರ, ಬಹಳ ವಿಚಿತ್ರ. ನಮ್ಮವರ ಚಂದ್ರಯಾನ ನಿನ್ನ ಮೇಲಿಳಿದಾಗ ಆಗಿದ್ದರೂ ಆಗಿರಬಹುದು ನಿನಗೊಂದಿಷ್ಟು ಕಚಗುಳಿ. ಆದರೆ ಮಧುಚಂದ್ರಕ್ಕೆ ಬಂದಿದ್ದಾರೆಂದೆಣಿಸಿ ಉದಾಸ...

ಬದುಕು ಬಡಿದಾಡುತ್ತ ಕಣ್ಣು ಹೊಸಕಿಕೊಳ್ಳುತ್ತ ಕ್ಯಾರಿಯರ್ ಹಿಡಿದುಕೊಂಡು ಕುಂಡಿಗೆ ಕಾಲು ಹಚ್ಚಿಕೊಂಡು ಓಡುತ್ತದೆ ಅಡಬುರಿಸಿ ಗಾರಾಡುತ್ತದೆ ಓಣಿಗಳಲ್ಲಿ ಬೀದಿಗಳಲ್ಲಿ ವಾಹನಗಳಲ್ಲಿ ಲಾರಿ ಬಸ್ಸುಗಳಲಿ ಸಾವಿರ ಸಾವಿರ ಹೆಜ್ಜೆಗಳು ನೆಲವನೊದ್ದು ಒದ್ದು ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...