Home / Poem

Browsing Tag: Poem

ಕಾಯುತ್ತಿದೆ ಈ ನೀರವ ಗಗನ ಕಾಯುತ್ತಿದೆ ಗಿರಿ ನದಿ ಆವರಣ ಮಾಯಿಸಿ ಹಿಂದಿನ ನೋವು ನಿರಾಸೆಯ ಆಗುತ್ತಿದೆ ಹೊಸ ವರ್ಷಾಗಮನ ಇರುಳಲಿ ಎಷ್ಟೇ ನೊಂದರು ಜೀವ ತುಡಿಯದೆ ಕನಸಿಗೆ ಬೆಳಗಿನ ಝಾವ? ಸಾಗಿದ ವರ್ಷವೊ ನೀಗಿದ ಇರುಳು ಹೊಸ ಹಾಡಿಗೆ ಅಣಿಯಾಗಿದೆ ಕೊರಳು ...

ಇರಬೇಕು ಮನೆ ಮನೆಯಲ್ಲಿ ಮುದ್ದು ಮಗು ತುಂಬಿ ತುಳುಕುವುದು ಸಂತಸದ ನಗು ದಿನಗಳುರುಳುವುವು ಬಲು ಬೇಗ ಸಂತಸದ ಕ್ಷಣಗಳ ಸಿರಿವೈಭೋಗ *****...

ಸೂರ್ಯ ಹೊರಳಿದ ಕಿಟಕಿಯಲಿ ಅವನ ಆಕೃತಿ ಸರಿದು ಕೌ ನೆರಳು ನೆನಪಿನ ಬೆರಳುಗಳು ಮೀಟಿ ನಡುವೆ ಅರಳಿದೆ ಜೀವ ವಿಕಾಸ ಕಾಪಿಡುವ ಕೈಗಳು ಬಿಗಿದಪ್ಪಿವೆ ನೀಲಬಾನು ಒಂದುಗೂಡಿದ ಘನ ಎಲ್ಲಾ ನದಿಗಳು ಹರಿದು ಸೇರಿವೆ ಕಡಲು ಚಿಮ್ಮಿವೆ ಜಗದಗಲ ತೆರೆಗಳ ಹೊಸ ಹಾಡು ...

ಎದೆ ತಂತಿ ಮಿಡಿದಾಗ ಸಿಡಿದ ತಾರಕೆಗಳನು ಮಾಲೆಯಾಗಳವಡಿಸಿ, ಉಷೆಯ ಚೆಂಗೊರಳಿನಲಿ ಹಾರವಾಗಿಡುವಾಸೆ ಮನವ ತುಂಬಿರಲಾನು ಹಿಗ್ಗಿನಲಿ ಕೂಡಿಸಿದೆ ಅವನೆಲ್ಲ. ಇರುಳಿನಲಿ ಬಚ್ಚಿಟ್ಟು, ಕಾಣದಿದ್ದಾ ಪೋರ, ರವಿಯೆದ್ದು, ಕಿಚ್ಚಿನಲಿ ಅವುಗಳನು ನೂಕಿದನು. ಅವು ಓ...

ಬೆಳಿಗೆ ಜಾವದಿ ಸೂರ್ಯೋದಯ ವೀಕ್ಷಿಸಿ ಮನ ಸೂರೆಗೊಂಡಿದೆ ಪ್ರಕೃತಿ ಆನಂದದಿ ಕರುಣೆಯ ಸುಂದರ ಸುಗಂಧದಿ ಗಾಳಿ ಬೀಸುತ್ತಿದೆ. ತನು ಎಲ್ಲಿಲ್ಲದ ಸಂತಸ ಕಂಡಿದೆ ಗಾಳಿ ಸೇವಿಸುತ್ತ ನಾ ಹೊರಟ್ಟಿದೆ ದೂರದಿ ಬೆಟ್ಟವ ನಾ ಹತ್ತಿದೆ ಮೇಲೆರುತ್ತಲೇ ಮನ ಹರ್ಷದಿ ಕ...

ಎಡೆಬಿಡದೆ ಸುತ್ತುವುದು ಅಪ್ಪುವಿನ ರೈಲು ಹೈದರಾಬಾದಿನ ಬಯಲು ಫಲಕ್‌ನುಮಾದಿಂದ ಬೋಲಾರಾಮಿಗೆ ಯಾಕೆ ಏನೆಂಬ ಗೊಡವೆಯಿಲ್ಲದೆ ಕರೆಯುವುದು ಮಂದಿಯನು ರಾತ್ರಿಹಗಲು ಮಲಕ್‌ಪೇಟೆ ಕಾಚಿಗುಡ ಸೀತಾಫಲ ಮಂಡಿ ಎಲ್ಲ ಕಡೆಗೂ ಇದೊಂದೇ ಬಂಡಿ ಬೆಳಿಗ್ಗೆ ಮಧ್ಯಾಹ್ನ ಸ...

ನನ್ನಪ್ಪ ದುಡಿಮೆಗಾರ ಹೆಣಗಾಡಿ ಕೊಂಡ ಗದ್ದೆಗಳ ಮತ್ತೆ ಹದಮಾಡಿ ಹಸನುಗೈದ ಅಸಲಿಗೆ ಈಗ ಅಲ್ಲಿ ಗದ್ದೆಗಳೇ ಇಲ್ಲ ಬದಲಿಗೆ ತೋಟಗಳು ತಲೆ ಎತ್ತಿದೆ ತೆಂಗು ಕಂಗು ವಾಣಿಜ್ಯ ಬೆಳೆಗಳು ನನ್ನಣ್ಣನ ಜೊತೆಗೂಡಿ ಎತ್ತರ ಜಿಗಿವಾಡುತ್ತಿದ್ದ ಗದ್ದೆ ಹಾಳಿಗಳು ಈಗ ...

ತನು ತುಂಬಿ ಮನ ತುಂಬಿ ಭಾವ ತುಂಬಿ ರಾಗ ತುಂಬಿ ತುಂಬಿತೋ ಭಕ್ತಿ ಎಂಬ ಕೊಡವು|| ಗಂಗೆ ತುಂಬಿ ಯಮುನೆ ತುಂಬಿ ತುಂಗೆ ತುಂಬಿ ಭದ್ರೆ ತುಂಬಿ ತುಂಬಿತೋ ಅತ್ತೆ ನಾದಿನಿಯರ ಪ್ರೇಮದ ಕೊಡವು || ಬಣ್ಣ ತುಂಬಿ ಬಿಂಕ ತುಂಬಿ ಬೆಡಗು ತುಂಬಿ ಬಿನ್ನಾಣ ತುಂಬಿ ತ...

ದಿನವೂ ಬಂದು ಬಿಂಕ ಬಿನ್ನಾಣ ಮಾಡಿ ಹೋಗುವ ಈ ಹವಳದ ಕಣ್ಣಿನ ಪಾರಿವಾಳ ಅವನ ಚೀಟಿಯನ್ನು ಕಾಲಿಗೆ ಕಟ್ಟಿಕೊಂಡು ಬರಬಹುದೆಂದು ಕಾದಿದ್ದೆ, ಆದರೆ ಚೀಟಿ ಬರಲಿಲ್ಲ, ಸದ್ಯ ಅವನೇ ಬಂದುಬಿಟ್ಟ. *****...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...