ಚಲನೆ

ಸೂರ್ಯ ಹೊರಳಿದ ಕಿಟಕಿಯಲಿ
ಅವನ ಆಕೃತಿ ಸರಿದು ಕೌ ನೆರಳು
ನೆನಪಿನ ಬೆರಳುಗಳು ಮೀಟಿ
ನಡುವೆ ಅರಳಿದೆ ಜೀವ ವಿಕಾಸ

ಕಾಪಿಡುವ ಕೈಗಳು ಬಿಗಿದಪ್ಪಿವೆ
ನೀಲಬಾನು ಒಂದುಗೂಡಿದ ಘನ
ಎಲ್ಲಾ ನದಿಗಳು ಹರಿದು ಸೇರಿವೆ
ಕಡಲು ಚಿಮ್ಮಿವೆ ಜಗದಗಲ ತೆರೆಗಳ

ಹೊಸ ಹಾಡು ಹೊಸ ರಾಗ
ಹೊರ ಹೊಮ್ಮಿದ ಹಕ್ಕೀ ಚಿಕ್ಕೀ ಹಾಡು
ಅಡಿಗಳಿಗೆ ಚಿಮ್ಮಿದೆ ನಿರಾಂತಕ ಹಸಿರು
ರಾಗಗಳ ಮಾಲಿಕೆ ಹೊತ್ತ ತಾಯಿ ಭೈರವಿ.

ಮಳೆ ಹೊಯ್ಯುತಿದೆ ಭೂಮಿ ತೊಯ್ಯುತಿದೆ
ಬಯಲ ತುಂಬ ಭದ್ರ ಕನಸುಗಳು
ಬೀಜಗಳು ಹರಡಿ ಜಾಡು ಹಿಡಿದ ನಡುಗೆ
ಪಂಚಭೂತಗಳ ಜೀವ ಮಿಸುಕಾಡಿದೆ.

ಯಾವ ಬಣ್ಣ ವಾಸನೆ ರುಚಿ ಇಲ್ಲ
ಸಾವಿನ ಮನೆಯ ನೆರಳಿಗೆ
ಬೆಳಕಿನ ಸವಾರಿ ಸೂರ್ಯ ಸವಾಲು
ಹುಟ್ಟಿಗೆ ದಾಖಲೆ ಇಟ್ಟವರಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎದೆ ತಂತಿ ಮಿಡಿದಾಗ
Next post ತೆಂಗು

ಸಣ್ಣ ಕತೆ

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…