ಪ್ರೀತಿಯ ಕಿಟಿ, ನೇರವಾಗಿಯೇ ಹೇಳುವೆ. ಇದು ಬಹು ನಿರಾಳದ ಕ್ಷಣಗಳು. ಮಮ್ಮಿ ಡ್ಯಾಡಿ ಹೊರಹೋಗಿದ್ದಾರೆ. ಮಾರ್‍ಗೊಟ್ ತನ್ನ ಕೆಲವು ಸ್ನೇಹಿತರೊಂದಿಗೆ ಪಿಂಗಪಾಂಗ್ ಆಡಲು ಹೋಗಿದ್ದಾಳೆ. ನಾನು ನನ್ನಷ್ಟಕ್ಕೆ ಪಿಂಗಪಾಂಗ್ ಆಡುತ್ತಲೇ ಇರುತ್ತೇನೆ. ಪಿಂಗಪಾಂಗಿಗಳಾದ ನಾವು ಐಸ್ಕ್ರೀಮ ಪಕ್ಷಪಾತಿಗಳು. ಅದರಲ್ಲೂ ಬೇಸಿಗೆಯ...

ಪಟೇಲ್ ಪುಟ್ಟಸಿದ್ದಪ್ಪ ನಾಯಕನ ಮನೆಯಲ್ಲಿ ಅಂದು ಅಮಲ್ದಾರ್ರಿಗೆ ಔತಣ. ತಾಲ್ಲೋಕಿನ ದಣಿಯೆಂದು ಅಮಲ್ದಾರ್ರಿಗೆ ಗೌರವವಾದರೆ, ಆಗರ್ಭ ಶ್ರೀಮಂತನೆಂದು ಪಟೇಲನಿಗೆ ಗೌರವ. ಸಾಲದೆ ದಿವಾನ್ ಪೂರ್ಣಯ್ಯನವರನ್ನೂ ತಮ್ಮ ಮನೆಗೆ ಕರೆದುಕೊಂಡು ಬಂದು ಫಲತಾಂಬೂಲ ...

ಜಾತ್ರೆ ಜಾತ್ರೆ ಜಾತ್ರೆ ಜೀವನದೀ ತಾಣವೇ ಜಾತ್ರೆ ಇಲ್ಲಿ ಬಂದು ನೀನು ನಿನ್ನ ಮರೆತು ಹಿಡಿದಿರುವೆ ನಿನಗಾಗಿ ಸ್ವಾರ್‍ಥ ಪಾತ್ರೆ ಇವರು ನಿನ್ನ ತಾಯಿ ತಂದೆಯರೇ ಇವರು ನಿನ್ನ ಬಾಳುರಂಗಿಸುವರೇ ನಿನ್ನ ಮೂಲದ ಪಾಲಕರ ಮರೆತರೆ ನಿನ್ನ ಮಾತ್ರ ಬಿಡದೆ ಹಂಗಿಸ...

ಏನೂ ಮಾಡದೆ ಏನೂ ತಡೆಯದೆ ನಾ ನೋಡುತ ಇದ್ದೇನೆ ಹೋದವರಾರೂ ಬಂದೇ ಇಲ್ಲ ಬಂದವರಿಗೊಂದೂ ಗೊತ್ತೇ ಇಲ್ಲ ನಾ ನೋಡುತ ಇದ್ದೇನೆ ಏನೂ ಮಾಡದೆ ಇದ್ದೇನೆ ವಾಹನ ಹೊರಟಿವೆ ಎಲ್ಲಿಗೊ ಸ್ವಾಮಿ ಹಾರುವ ಹಕ್ಕಿ ಆಡುವ ಕೀಟ ಹರಿಯುವ ನದಿ ಹರಿಯುತ್ತಲೆ ಇದೆ ಗಾಳಿಗೆ ಎಲ...

ಕದ್ದಿಂಗಳಿನಿರುಳು: ಬುವಿ ಬಾನಂತರವೆಲ್ಲವ ಕತ್ತಲು ತುಂಬಿರಲು, ದೆಸೆಯಳಿಯದೆ ನಿಲಲು ತಮಕಿವು ಸೇತುವೊ ಎನೆ ದಟ್ಟೈಸಿರೆ ತಾರೆಗಳು, ಭೂತ ಭವಿಷ್ಯವನು ಮುಸುಕಿನೊಳವಿತಿಟ್ಟಂತಿಳೆ ಹೊದೆದಿರೆ ಮೌನವನು, ಸೆರೆಬಿದ್ದಿಹ ಕಾಲ ಹುಯಿಲಿಡುವುದೊ ಎನೆ ಜಿರ್ರನೆ ...

ಜೋತು ಬಿದ್ದಿದೆ ಮೇಲೆ ಬಣ್ಣ ಬಣ್ಣದ ಕವಚ ಸತ್ತ ಮೌಲ್ಯಗಳ ಹೆಣಭಾರ. ಹೊತ್ತು ಸಾಗಿರುವೆ ಬಹುದೂರ ಹೀಗೇಯೇ ಮರುಮಾತಿಲ್ಲದೆ. ಸನಾತನ ಬೇರುಗಳು ಬಿಳಲುಗಳು ಆಳಕ್ಕಿಳಿದು ಕತ್ತಲೆ ತೊಟ್ಟಿಕ್ಕಿತ್ತು ಹೊತ್ತಿರುವ ಕವಚಕ್ಕೆ ಮೆತ್ತಿದೆ ಬೆವರಿನ ಜಿಡ್ಡು ಅಂಟು...

ದೇಹದ ಹೊರಗೆ ಆದ ರೋಗದ ಚಿನ್ಹೆಯನ್ನು ಸರಳವಾಗಿ ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುತ್ತದೆ. ದೇಹದ ಒಳಗೆ ಕಾಣಿಸಿಕೊಂಡ ಹುಣ್ಣು ಹೃದಯದ ನರ ತಡೆಯಾಗುವದು. ಮಿದುಳಿನಲ್ಲಿಯ ಕಾಯಿಲೆ, ಜಠರದಲ್ಲಿಯ ಕಾಯಿಲೆಗಳನ್ನು ಕಂಡು ಹಿಡಿಯಲು x ಕಿರಣಗಳಿಂದಲೂ ಸ್ಕ್ಯಾ...

ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ! ಹರಸು ತಾಯೆ, ಸುತರ ಕಾಯೆ, ನಮ್ಮ ಜನ್ಮದಾತೆಯೆ! ನಮ್ಮ ತಪ್ಪನೆನಿತೊ ತಾಳ್ವೆ, ಅಕ್ಕರೆಯಿಂದೆಮ್ಮನಾಳ್ವೆ; ನೀನೆ ಕಣಾ ನಮ್ಮ ಬಾಳ್ವೆ, ನಿನ್ನ ಮರೆಯಲನೆಮ್ಮೆವು- ತನು ಕನ್ನಡ, ಮನ ಕನ್ನಡ, ನುಡಿ ಕನ್ನಡವೆಮ್...

ಬೇಲೂರ ಗುಡಿಯಲ್ಲಿ ಕಲೆಯಾದ ಶಿಲೆಯಲ್ಲಿ ದೀನ ದುರ್ಬಲರೊಡಲ ಬಿಸಿಯುಸಿರಿದೆ ಆ ಬಿಸಿಯು ಮೈ ಸೋಕಿ ತೆರೆದ ಈ ಕಣ್ಮುಂದೆ ಕಪ್ಪು-ಇತಿಹಾಸ ಸಂಪುಟ ತೆರೆದಿದೆ ಭವ್ಯತೆಯ ಹಂಪೆಯಲಿ ಬೆವರು-ಕಂಬನಿ-ರಕ್ತ ಹೊಳೆ ತುಂಬೆ ಭದ್ರೆಯಾಗಿ ಹರಿದಾಡಿದೆ ಇದರಲ್ಲಿ ಮಿಂದೆ...

ಬಂಗಾಲದಲ್ಲಿ ಚೈತನ್ಯರೆಂಬ ಒರ್‍ವ ದೊಡ್ಡ ಭಕ್ತರಾಗಿ ಹೋದರು ವೈಷ್ಣವ ಧರ್‍ಮವು ಅಲ್ಲಿ ಬೆಳೆಯಲು ಅವರೇ ಕಾರಣರು. ಅಲ್ಲಿಯ ಜನಕೆ ಭಕ್ತಿಯ ರುಚಿ ಹಚ್ಚಿದರು ಪರಮಭಕ್ತರಾಗುವ ಪೂರ್‍ವದಲ್ಲಿ ಚೈತನ್ಯರು ದೊಡ್ಡ ಪಂಡಿತರೆಂದು ಹೆಸರಾಗಿದರು. ನ್ಯಾಯ-ಸದ್ಗುಣ ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...