ಪ್ರೀತಿಯ ಕಿಟಿ, ನೇರವಾಗಿಯೇ ಹೇಳುವೆ. ಇದು ಬಹು ನಿರಾಳದ ಕ್ಷಣಗಳು. ಮಮ್ಮಿ ಡ್ಯಾಡಿ ಹೊರಹೋಗಿದ್ದಾರೆ. ಮಾರ್‍ಗೊಟ್ ತನ್ನ ಕೆಲವು ಸ್ನೇಹಿತರೊಂದಿಗೆ ಪಿಂಗಪಾಂಗ್ ಆಡಲು ಹೋಗಿದ್ದಾಳೆ. ನಾನು ನನ್ನಷ್ಟಕ್ಕೆ ಪಿಂಗಪಾಂಗ್ ಆಡುತ್ತಲೇ ಇರುತ್ತೇನೆ. ಪಿಂಗಪಾಂಗಿಗಳಾದ ನಾವು ಐಸ್ಕ್ರೀಮ ಪಕ್ಷಪಾತಿಗಳು. ಅದರಲ್ಲೂ ಬೇಸಿಗೆಯ...

೧ ಮುದುಕರಿಗೆ ತಕ್ಕ ನಾಡಲ್ಲ ಅದು. ಪ್ರಾಯದ ಹೆಣ್ಣು ಗಂಡುಗಳೆಲ್ಲ ತೋಳತೆಕ್ಕೆಗಳಲ್ಲಿ, ಹಕ್ಕಿ ಮರಮರದಲ್ಲಿ – ಸಾವಿರುವ ಸಂತಾನ – ಹಾಡಿನುಬ್ಬರದಲ್ಲಿ, ಸ್ಯಾಮನ್ ಮೀನುಗಳ ಪಾತ, ಮೆಕರೆಲ್ ಕಿಕ್ಕಿರಿದ ಕಡಲು, ಗಾಳಿ ನೆಲ ಜಲ ಜೀವಕೋಟಿ ಎಲ...

ರಾತ್ರಿ ಒಂಭತ್ತರ ಸಂಖ್ಯೆಯಂತೆ ಮುದುಡಿಕೊಂಡು ಮಲಗುತ್ತಿದ್ದ ನನಗೆ ಎಂತಹದೋ ಭಯ… ಅಭದ್ರತೆ… ಕನಸುಗಳ ಹಾವಳಿ… ಕೇಳುತ್ತಿದ್ದ ‘ರಾಕ್ಷಸರ’ ಕತೆಗಳ ಪಾತ್ರಗಳು… ನನಗರಿವಿಲ್ಲದೇ ಚಾಪೆಯ ಮೇಲೆ ಮೂತ್ರ ವಿಸರ್‍ಜಿಸಿ ಬಿಡುತ್ತಿ...

ಆನೆ, ಮುದ್ದಾನೆ, ಮದ್ದಾನೆ ಬಂದಿತು ತಾನೆ, ಮುದಿಯಾನೆ! ಕಳೆದಿರಲು ಯೌವ್ವನದ ಹೊರಮಿಂಚು ಅನುದಿನವು ಸಿಂಹಗಳಿಗಿಂತು ಕೊನೆವರೆಗಂಜು- ತುತ್ತಮಾಂಗದ ಮುತ್ತು ಮುಗಿದಿರಲು, ಹಿರಿಬೇನೆ ಮುದವ ಹದಗೆಡಿಸಿರಲು, ಕೊಳದ ಬಳಿ ಬಂದಾನೆ ಸಾಯ್ವ ಪಣ ತೊಟ್ಟಿತದು ಹೊ...

ಪಕ್ಷಿ ಮಂಚವೆ ತಾಯ ಮಂಚವು ವೃಕ್ಷ ತೊಟ್ಟಿಲು ತೂಗಲಿ ಕಣ್ಣು ಕಮಲಾ ಹಾಲು ಅಮೃತ ಎದೆಯ ಗಾನವ ಉಣಿಸಲಿ ದೇಹ ದೇಗುಲ ಮನವೆ ಲಿಂಗವು ಆತ್ಮ ನಂದಾದೀಪವು ಪ್ರೀತಿಯೊಂದೆ ಮಧುರ ಪರಿಮಳ ಹೊನ್ನ ಅರಮನೆ ಗೀತೆಯು ಪಕ್ಷಿ ಇಂಚರ ಹೂವು ತರತರ ಹಸಿರು ಹೂವಿನ ನೂಪುರಾ ...

ನಿಯಮ ನಿಯಮಗಳ ನಡುವೆ ಶ್ರೇಷ್ಠ ಮಹಿಳಾ ಸಾಹಿತಿ ಸಾರಾ ಅಬೂಬಕ್ಕರರ ಒಂದು ಸಣ್ಣಕಥೆ. ಮುಸ್ಲಿಂ ಸಾಮಾಜಿಕ ವ್ಯವಸ್ಥೆಯಲ್ಲಿ ಅಮಾಯಕ ಹೆಣ್ಣು ಪುರುಷ ದೌರ್‍ಜನ್ಯಕ್ಕೆ ತುಳಿತಕ್ಕೆ ಒಳಗಾಗುವ, ಸಂಪ್ರದಾಯತೆಯ ಕಪಿಮುಷ್ಟಿಯಲ್ಲಿ ನಲುಗಿ ಹೋಗುವ, ಗಂಡಸಿನ ದೌರ...

‘ದುಡ್ ಉಳ್ಳೋರು ದುಡ್ ಇಲ್ದೋರು ಲೋಕಕ್ ಎಳ್ಡೇ ಜಾತಿ!’ ಅಂತಂದೌನೆ ನಮ್ಮೌನ್ ಒಬ್ಬ! ಏ ಹೈ ಸಚ್ಚಿ ಬಾತ್ಙಿ! ೧ ಪೈಲಾದೋರು ದುಡ್ಡಿಗ್ ದತ್ತು- ಔರ್ ಕಂಡಿಲ್ಲ ತ್ರುಪ್ತಿ! ಕಾಸ್ ಇಲ್ದಿದ್ರು ದುಸರೀಯೋರ್‍ಗೆ ಇದ್ದಿದ್ರಲ್ಲೆ ತ್ರುಪ್ತಿ! ೨ ದುಸರಿಯೋರ್‍...

ಎಲೆ ಸುಹೃದ, ಸರ್‍ವ ಭೂತಾಂತರಸ್ಥನೆ, ನರನ ನಾರಾಯಣನೆ, ನಿನ್ನ ಮೈತ್ರಿಯ ಉಗಾಭೋಗ ಉಸಿರು ಈ ಹಕ್ಕಿಯಲಿ; ತುಂಬು ಜೀವವ ದೇವ. ಯುಗಜುಗದ ಪರಿಪಾಕದಿಂದ ಬರಲಿರುವಂಥ ಸ್ನೇಹಸಾರದ ಹದವನರಿವೆವೇ? ಕ್ಷಣಜೀವಿ- ಗಳು ನಾವು, ಕಣ್ಣ ಆಚೆಗೆ ಕಾಣದಿರುವ ಕುರು- ಡರು...

ಎರಡು ಗುಡಿ ಗೋಪುರಗಳು ಒಂದರ ಹಿಂದೆ ಒಂದು ಇತ್ತು. ಒಂದರಲ್ಲಿ ಬಿಳಿ ಪಾರಿವಾಳಗಳು, ಇನ್ನೊಂದು ಗೋಪುರದಲ್ಲಿ ಕರಿ ಬಣ್ಣದ ಪಾರಿವಾಳಗಳು ವಾಸವಾಗಿದ್ದವು. ಎರಡು ಗುಂಪಿನ ಪಾರಿವಾಳಗಳು ಆಗಸದಲ್ಲಿ ಹಾರಾಡುವಾಗ ತಮ್ಮ ದೇವಾಲಯದ, ದೈವದ ಹೆಮ್ಮೆ ಸಾರುತ್ತಿದ...

ಎಲ್ಲರೆಲ್ಲವನು ಮಾಳ್ಪುದಳವಲ್ಲವಾದೊಡಂ ಎಲ್ಲರವರವರೆ ಊಟವನು ಶೌಚವನು ಕ್ಷುಲ್ಲವೆನದರಿತು ಮಾಳ್ಪವಸರ ಉಂಟು ಎಲ್ಲೆಲ್ಲೂ ಕೊಳಚೆಯೊಳಿಪ್ಪ ಖಾನಾವಳಿಯೆಮ್ಮ ಕಲಿಕೆಯ ಸೋಲನರುಹಿ ಪೇಳುತಿದೆ – ವಿಜ್ಞಾನೇಶ್ವರಾ *****...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...