ತ್ರುಪ್ತಿ

‘ದುಡ್ ಉಳ್ಳೋರು ದುಡ್ ಇಲ್ದೋರು
ಲೋಕಕ್ ಎಳ್ಡೇ ಜಾತಿ!’
ಅಂತಂದೌನೆ ನಮ್ಮೌನ್ ಒಬ್ಬ!
ಏ ಹೈ ಸಚ್ಚಿ ಬಾತ್ಙಿ! ೧

ಪೈಲಾದೋರು ದುಡ್ಡಿಗ್ ದತ್ತು-
ಔರ್ ಕಂಡಿಲ್ಲ ತ್ರುಪ್ತಿ!
ಕಾಸ್ ಇಲ್ದಿದ್ರು ದುಸರೀಯೋರ್‍ಗೆ
ಇದ್ದಿದ್ರಲ್ಲೆ ತ್ರುಪ್ತಿ! ೨

ದುಸರಿಯೋರ್‍ದು ತ್ರುಪ್ತಿ ಸತ್ರೆ
ಲೋಕಕ್ ಬಂತು ಚಟ್ಟ!
ಆಗಯಾರೆ ಚಟ್ಟಾಂತಂದ್ರೆ-
ಎಲ್ಲ ಘನ! ಮಟ್ಟ! ೩

ಬಡವರ್ ತ್ರುಪ್ತಿಗ್ ದಪ್ಫನ್ ಅಂದ್ರೆ
ಎಲ್ಲಾರ್ ಬಾಯ್ಗೂ ಮಣ್ಣು!
ದೊಡ್ದು ಚಿಕ್ದು ಸಬ್ಬಿ ಒಟ್ಗೆ
ಎಕ್ಕ ಉಟ್ಟೋಯ್ತಣ್ಣ! ೪

ಲೋಕಾನ್ ಬದಕ್ಸೋ ಇಸ್ನೂಂತ್ ಅಂದ್ರೆ
ದುಸರೀಯೋರ್‍ದು ತ್ರುಪ್ತಿ!
ಪೈಲಾದೋರ್‍ಗೆ ಉಸರಾಡ್ಸೋದೂ
ದುಸರಿಯೋರ್‍ದು ತ್ರುಪ್ತಿ! ೫

ದುಸರಿ ಜೊತ್ಗೆ ಪೈಲಾದೊರ್‍ದು
ತ್ರುಪ್ತಿ ಮಿಲಾಯ್ಸೋದ್ರೆ-
ಬೂಮೀಗ್ ಇರೋರ್‍ಗ್ ಯಾಕ್ ಬೇಕಣ್ಣ
ಸೊರ್‍ಗ ಗಿರ್‍ಗದ್ ತೊಂದ್ರೆ! ೬

(ಯೆಂಡಕ್‌ ಮುನ್ಯ ನೀರ್ ಗೀರ್ ಬೆರಸಿ
ಮೋಸ ಮಾಡೌನ್ ನೆಮ್ಸಿ;
ಅದಕೇ ಈವೊತ್ ಕನ್ನಡ್ ಪದಕೆ
ಬೆರಕ್ಯಾಗೈತೆ ಕ್ಸಮ್ಸಿ!) ೭
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಹೃದ
Next post ತ್ರಿವಳಿ ತಲಾಖ್ ನಿಷೇಧ-ಧರ್‍ಮದ ಕಂದಾಚಾರಕ್ಕೆ ಬಿದ್ದ ಮೂಗುದಾರ

ಸಣ್ಣ ಕತೆ

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

cheap jordans|wholesale air max|wholesale jordans|wholesale jewelry|wholesale jerseys