ಮರದೊಳೆಂತೋ ಅಂತೆ ತುಂಬೊಲುಮೆ ಸಂತನೆಡೆ ನಿಶ್ಶಂಕೆಯೊಳು ನೆರೆವ ಹಕ್ಕಿಗಳ ತೆರದಿ ನಿಸ್ತಬ್ಧನೆನ್ನೆಡೆಗೆ ಬಹ ಭೀರುಭಾವಗಳ ಕೆಳೆಯ ನೋನೋಡೆಂದು ಸರಸ ಕೌತುಕದಿ ನುಡಿಬೆರಳ ನೇವರಿಕೆಗಳವಡುವ ಹಲಕೆಲವ- ನಾದರಿಸಿ ತೋರುತಿಹೆ ವೃತ್ತ ವೃತ್ತದೊಳು ಜೀವ ಜೀವದ ನಡುವೆ ಹರಿದೆನ್ನ ಜೀವವಿದು ಪಡೆಯುತಿಹ ನಿರ್‌ ವೃತಿಯ ಚಿತ್ರ ಚ...

ಅಭಿಮಾನವಿರಲೀ, ದೇಶ, ಭಾಷೆಯ ರೀತಿ, ನೀತಿಯ ಸಿರಿಯುಸಿರಲಿ, ವಿಶ್ವಕೋಶದ, ಧಮನಿ ದಮನಿಯ, ಬಿತ್ತಿ ಬೆಳೆಸಿದ ತೋಳಲಿ…. ಎಲ್ಲ ಲೋಕದ, ನಾಕವಿದುವೆ ಪುಣ್ಯ, ಸಗ್ಗಕೆ ಭೂಮಿಕೆ, ಜ್ಞಾನವೆಲ್ಲಕೂ ಮೂಲವಿದುವೆ, ಧ್ಯಾನ ನಂದನ ಚಂದ್ರಿಕೆ, ಧೃವಗಳೆಲ್ಲಕೂ...

ಕುಂಬಾರಕಿ ಈಕಿ ಕುಂಬಾರಕಿ ಈ ಬ್ರಹಾಂಡವೆಲ್ಲ ತುಂಬಿಕೊಂಡಿರುವ ||ಪ|| ಚಿನ್ನ ಎಂಬುವ ಮಣ್ಣನು ತರಸಿ ತನು ಎಂಬುವ ನೀರನು ಹಣಸಿ ಮನ ಎಂಬುವ ಹುದಲನು ಕಲಸಿ ಗುಣ ಎಂಬುವ ಸೂಸನು ಹಾಕಿ ||೧|| ಭಕ್ತಿ ಎಂಬುವ ತಿಗರಿಯ ಮಾಡಿ ಧ್ಯಾನ ಎಂಬುವ ಬಡಗಿಯ ಊರಿ ಮುನ್...

ಎಲ್ಲಿ ನೀನು, ನಿನ್ನೆ ನೆಲೆಯು, ತಿಳಿವುದೆಂತು ನಿನ್ನೊಳದನಿ, ಬಣ್ಣವೇರಿ ನಿಂತ ಮೊಗಕೆ, ಕಾಣಬಹುದೆ ನಿಜ ದನಿ? ವಿಸ್ತೃತ ಜಗವೆ ಕಿರಿದು ಮಾಡಿ ಕೀರ್ತಿ ಶಿಖರವೇರಿ ನಿಂತು ನನ್ನ-ನಿನ್ನ ದೂರಮಾಡಿದೆ, ಸರಕು-ಸಂಸ್ಕೃತಿ ದಾಳದಲ್ಲಿ ಏನೆಲ್ಲ ಕಳೇದೀಡಾಡಿದೆ...

ಬಿದ್ದಿಯಬೇ ಮುದುಕಿ ನೀ ದಿನ ಹೋದಾಕಿ ಬಲು ಜೋಕಿ ಬಿದ್ದಿಯಬೇ ಮುದುಕಿ ||ಪ|| ಸಧ್ಯಕಿದು ಹುಲಗೂರ ಸಂತಿ ಗದ್ದಲದೊಳಗ ಯಾಕ ನಿಂತಿ ಬಿದ್ದು ಒದ್ದಾಡಿದರ ಎಬ್ಬಿಸುವರಿಲ್ಲಾ ಬುದ್ಧಿಗೇಡಿ ಮುದುಕಿ ನೀನು ಬಿದ್ದಿಯಬೇ ಮುದುಕಿ ||೧|| ಬುಟ್ಟಿಯೊಳು ಪಟ್ಟೇವನ...

ಶಿಖರ ಶೃಂಗಗಳೆನಿತೆನಿತೆ ಇರಲಿ ನಿನ್ನ ಸಾಧನೆಯ ಹಿರಿಮೆ ಗರಿಮೆಗೆ, ಪ್ರೀತಿ ಹಣತೆ ನಂದದಿರಲಿ, ಮಧುರ ಭಾವ ಬಂಧುರ ಬದುಕಿಗೆ ಇಂದು ನಾಳೆಗಳಲಿ ನೀನೆ ನಿನ್ನ ಪರಧಿಯ ನೇಸರ, ಒಂದರೊಳಗೊಂದಾಗೋ ಪ್ರೀತಿಗೆ ನೀನೆ ತಿಂಗಳಂಗಳ ಚಂದಿರ, ನಿನ್ನ ಭವತವ್ಯ ನಿನ್ನಲ...

ತಂಗಿ ನಮಗೆ ಕೊಡಿರೆಂದು ಕೊಟ್ಟಳ್ಹಂಗಿನರಕಿಯನು ||ಪ|| ಇಂಗಿತ ಅರಿದವ ಅಣ್ಣ ನೀ ಬಾರೆಂದು ಬಂಗಿ ಸೇದಿಸಿ ಬ್ರಹ್ಮಾಂಡದ ಬಯಲೊಳು ||ಅ.ಪ.|| ತನುತ್ರಯಕ್ಕೆ ತಾ ಬಾಧ್ಯಳೋ ಎನ್ನ ಘನ ಆತ್ಮಕ್ಕೆ ಪ್ರಸಿದ್ಧಳೋ ವನಜಾಕ್ಷಿಯು ತನ್ನ ಚಿನುಮಯ ರೂಪದಿ ಮನಮುಟ್ಟಿ...

ನಿನ್ನೆ ಧ್ಯಾನವೆ ನನ್ನ ಉಸಿರಲಿ, ಹಸಿರ ತೆರೆದಲಿ ನೆಲೆಸಲಿ… ನಿನ್ನೆ ದರುಶನವೆನ್ನೆ ಮನದಲಿ, ಬಾಳ ಭರವಸೆ ತುಂಬಲಿ…. ಇರುಳು ಕವಿದೆಡೆಯಲ್ಲಿ ನಿನ್ನಯ ಬೆಳಕಿನುತ್ಸವ ಕೊನರಲಿ, ಮನವು ಕದಡಲು ನಿನ್ನ ನೇಹದ ಮಧುರ ಗಾನವು ತಣಿಸಲಿ… ...

ಸಣ್ಣಹುಡಗಿಯೆ ನಿನ್ನ ಬಣ್ಣಿಸಲಳವೆ ಮುನ್ನಾ ಆಣಿದ ಜಾಲಕೆ ನಿನ್ನಾ ಬೆನ್ನ ಹತ್ತಿ ಮುನಿ ಜನ ನುಣ್ಣಗ ಸಂದಾನ್ನವರು ಮನುಜರು ಚನ್ನಚಲ್ವಿಕೆಗೆ ಸೋತು ಅರಣ್ಯದಿ ರನ್ನ ಸಿದ್ಧ ಋಷಿಗಳನು ಕೆಣಕಿ ಬಲಗಣ್ಣು ಸೊನ್ನಿಮಾಡಿ ಕಾಮ ಪಾಶದಿ ಮಣ್ಣುಗೂಡಿಸಿದೆ ಬಿಡು ಮ...

ಲ್ಲು ಲ್ಲಲೇ ನವಿಲೇ ನನ್ನ ಕಣ್ಣಗಳೇಸು ಕಣ್ಣ ಬಣ್ಣಗಳೇಸು ಎಣಿಸಲಾರೆ! ಎಲ್ಲ ರೂಪಿಸಿದವನು ಎಲ್ಲಿ ತಾನಡಗಿದನೆ ತಾಳಲಾರದು ಜೀವ ಹೇಳಬಾರೆ -ಮಧುರ ಚೆನ್ನ ಚೆಲುವಯ್ಯ ಹಿತ್ತಲಿನ ಬಣವೆಯಿಂದ ಬತ್ತದ ಹುಲ್ಲನ್ನು ಹಿರಿಯಲು ಕೈಹಾಕುತ್ತಿದ್ದಂತೆಯೇ ಗಾಬರಿಗೊಂ...

ಈ ನೆಲವು ಬರಿಯ ಮಣ್ಣಲ್ಲವೊ ಈ ನೆಲದ ನುಡಿ ಕಿರಿದಲ್ಲವೊ ಅರಿವಿಗಣ್ಣಿನ ನೋಟಕಿಲ್ಲಿ ವಿಶ್ವಂಬರನ ವಿಶ್ವರೂಪವು ತೆರೆದಿದೆ ಬಿಂಕ ಬೆಡಗಿನ ನುಡಿಯ ಸಂಕರ, ತುಂಬ ಬಹುದೆ ತಾಯ್ನುಡಿ ಸಾಗರ? ಒನಪಿನೊನಪಿನ ಶಬ್ದ ಡಂಗುರ ತೋರಬಹುದೆ ಸತ್ಯ ಶಿವ ಸುಂದರ…...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...