
ಕುಂಬಾರಗ ಪದ ಬರಕೊಟ್ಟೆನು ಸದ್ಗುರು ಸಾಂಬಾ ವಿದುಧೃತ ಬಿಂಬಾ ||ಪ|| ಅಂಬರ ತಿರುಗಿಯಮೇಲೆ ಅರಲು ನೀರು ತುಂಬಿದ ಕೆಸರಿನ ಕುಂಭ ಕೊರೆಯುವಂಥಾ ||ಅ.ಪ.|| ಮಣ್ಣಿನೊಳು ಬೆನಕ ಹುಟ್ಟಿಸಿ ಮೆರೆವಾ ತನ್ನ ಹಸ್ತ ಮಧ್ಯದೊಳಿರುತಿರುವಾ ಸಣ್ಣ ಹಸಿಯ ತಿಳಿಯಿಂದಲಿ...
ದೊಡ್ಡ ಟ್ರಾನ್ಸ್‌ಪೋರ್ಟ್ ಕಂಪನಿಯ ಟ್ರಕ್ ಡ್ರೈವರನೊಬ್ಬ ಮನೆ ಕಟ್ಟಿಸಿದ. ಗೃಹ ಪ್ರವೇಶಕ್ಕೆ ಬಹಳಷ್ಟು ಜನ ಬಂದಿದ್ದರು. ಮಧ್ಯಾಹ್ನ ಬಂದವರಿಗೆಲ್ಲ ಸುಗ್ರಾಸ ಭೋಜನ. ಮತ್ತೆ ರಾತ್ರಿ ತನ್ನ ಖಾಸಾ ಜನರಿಗೆ ಭಾರೀ ಹೊಟೇಲಿನಲ್ಲಿ ಭರ್ಜರಿ ಪಾರ್ಟಿ ಏರ್ಪಡಿ...
ಹೊಸತದೆಲ್ಲಿ, ಹೊಸತದೆಲ್ಲಿ ಹೊಸಬರಾರೋ ಲೋಕದಿ… ಇಂದಿನ್ಹೊಸತಿನೊಸಗೆಯಲ್ಲಿ, ನಾಳೆ ನಿನ್ನೆಗೆ ಬೆಸುಗೆಯು ಬರುವ ಚಣದ ಹೆಗಲಿನಲ್ಲಿ ಇತಿಹಾಸದ ಯಾತ್ರೆಯು… ಇದ್ದುದಿಲ್ಲೇ ಇರುವುದೆಂತೊ ಛಿದ್ರ ಮನಸಿಜ ಛಾಯೆಯು… ಇರುವ ಹಮ್ಮಿನ ಹೆಮ್...
ಓ ಸಖೀ ಪ್ರಿಯ ಸಖಿ… ನೀನೆ ನನ್ನಯ ಶಿವ ಮುಖಿ, ನೀನಿರದಿರೆ ಆ ಪರಶಿವನೆಂತಾಗುವನೆ ಶಿಖಿ? ನನ್ನ-ನಿನ್ನಾ ಸಾಂಗತ್ಯಕೆ ಕೊನೆ-ಮೊದಲುಗಳೆಲ್ಲಿವೆ? ಬಾನು-ಬುವಿಯ ದಾಂಪತ್ಯಕೆ ತರ-ತಮಗಳು ತಾನೆಲ್ಲಿವೆ? ನಿನ್ನ ಬಸಿರಲಿ ದಿನವೂ ಜಗವು ಬಾಳಿದೆ, ನಿನ್ನ...
ಏನ ಕೊಡ ಏನ ಕೊಡವಾ ಹುಬ್ಬಳ್ಳಿಮಾಟ ಏನ ಚಂದುಳ್ಳ ಕೊಡವಾ ||ಪ|| ತಿಕ್ಕಿಲ್ಲ ಬೆಳಗಿಲ್ಲ ತಳತಳ ಹೊಳಿತದ ಕಂಚಿಂದಲ್ಲ ತಾಮ್ರದ್ದಲ್ಲ ಮಿರಿ ಮಿರಿ ಮಿಂಚುತದ ||೧|| ಆರು ಮಂದಿ ಅಕ್ಕ-ತಂಗ್ಯಾರು ಲೋಲಾಡಿದ ಕೊಡ ಮೂರಮಂದಿ ಮುತ್ತೈದಿಯಾರು ಲೋಲಾಡಿದ ಕೊಡ ||೨...
ದಿನವು ದಿನಪನ ಬರವು ಕೋರಿದೆ ಶುಭದ ಹಾರೈಕೆ, ಜೊನ್ನ ರಂಗನು ಸುಮಕೆ ಚಿತ್ರಿಸೊ ನಭದ ಓಲೈಕೆ, ಹಸಿರು ಬೆಟ್ಟದ ಬಟ್ಟಲದ ತುಂಬ ಅಮೃತಾ ಫಲದಾ ಪೇಯವು ತೆರೆ-ತೊರೆ, ನದ ನದಿಗಳ ರಸ ಪೀಯೂಷ ಪಾನೀಯವು, ಬೀಸೋ ಚಾಮರ ಹೊತ್ತ ಸಮೀರ ನಿನದದಿ, ಹಾಸು-ಹೊಕ್ಕಾಗಿ ಮಿ...
ಮತ್ತೆ ಹಾಡುತಲಿರುವೆ ಏಕೆ ಹಳೆಯ ಪಾಡಿನ ಪಲ್ಲವಿ, ನಿತ್ಯ ಸಾಗುತಲಿರುವೆ ಗಾನಕೆ ಬರಲಿ ಸಮದಾ ಜಾಹ್ನವಿ, ಜ್ಞಾನ-ವಿಜ್ಞಾನದ ಹಾದಿ ಸಾಗಿದೆ ನೀಲನಭದಾ ಆಚೆಗೆ, ನಿತ್ಯ ಶೋಧನ ಯಾತ್ರೆ ಹೊರಟಿದೆ ಹುಟ್ಟು-ಸಾವಿನ ಅಂಚಿಗೆ, ಇನ್ನು ಬಿಡು ನೀ ಹಳೆಯ ಹಾಡಲಿ ಬಣ...
`ಗೋವಿನ ಹಾಡು’ ಕನ್ನಡದ ಕಥನಗಳಲ್ಲಿ ಬಹುವಾಗಿ ಓದಿಸಿಕೊಂಡಿರುವಂತದ್ದು. ಅಲ್ಲಿ ಬರುವ ಪುಣ್ಯಕೋಟಿಯೆಂಬ ಹಸು, ಅರ್ಬುತನೆಂಬ ಹುಲಿಗಳು ಓದುಗರಿಗೆ ನಿರಂತರವಾಗಿ ಸಂಕೇತಗಳಾಗಿ ಒದಗುತ್ತ ಬಂದಿರುವುದನ್ನು ನೋಡಿದಾಗ ಆದೊಂದು ಉತ್ತಮ ಸಾಂಸ್ಕೃತಿಕ...
ಜೋಗುಳ ಪಾಡಿರಮ್ಮಾ ಜಲಜಾಕ್ಷಿಯರೆಲ್ಲ ಜೋಗುಳ ಪಾಡಿರಮ್ಮಾ ||ಪ|| ಜೋಗುಳ ಪಾಡಿರಿ ಶ್ರೀ ಗುರುಯೆನುತಲಿ ಯೊಗಮಂದಿರದೊಳು ತೂಗುತ ಕಂದನ ||ಅ.ಪ.|| ಒಂದು ಹಿಡಿದು ಒಂಭತ್ತು ಬಾಗಿಲ ನಡು- ಹಂದರದಲಿ ಸಂಧಿಸಿದ ಮಂಟಪದೊಳು ಕುಂದಣ ಕೆಚ್ಚಿದ ತೊಟ್ಟಿಲೊಳಗೆ ಆ-...
ಶೀಗಿಹುಣ್ಣಿವೆದಿನ ಉಣ್ಣಲಿಕ್ಕೆ ಕರೆಯುವರೆಲ್ಲಾ ಕರೆದರೆ ಹೋಗದೆ ಬಿಡಲಿಲ್ಲಾ || ಪ || ಹುರಿಯಕ್ಕಿ ಹೋಳಿಗಿ ಹೂರಣಗಡಬು ಕಡಲೀ ಪಚ್ಚಡಿ ಕಟ್ಟಿನಾಂಬರಾ ಉಂಡಗಡಬು ಪುಂಡಿಯ ಪಲ್ಲೆ ಬುಟ್ಟಿಯೊಳಿಟ್ಟೆಲ್ಲಾ ಕೆಮ್ಮಣ್ಣು ಬುಟ್ಟಿಗೆ ಬಡದೆಲ್ಲಾ ಅದರನುಭವ ತಿಳ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...
ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....
ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...













