ಸದ್ಗುರು ಸಾಕಿದ ಮದ್ದಾನಿ ಬರುತಲಿದೆ
ಎದ್ದು ಹೋಗಿರಿ ಇದ್ದ ನಿಂದಕರು ||ಪ||

ಬಿದ್ದು ಈ ಭವದೊಳು ಒದ್ದಾಡು ಜನರನ್ನು
ಉದ್ಧಾರ ಮಾಡುತ ಬರುತಲಿದೆ ||೧||

ಆಕಾಶ ನೋಡುತ ವಾಯುವ ನುಂಗುತ
ಝೇಂಕರಿಸುತಲದು ಬರುತಲಿದೆ ||೨||

ಅಷ್ಟಮದಗಳೆಂಬೊ ಕೆಟ್ಟ ನೀಚರನ್ನು
ಸಿಟ್ಟಿಲೆ ಸೀಳುತ ಬರುತಲಿದೆ ||೩||

ಪ್ರಣವ ಸ್ವರೂಪವ ಅನುದಿನ ನೋಡುತ
ಘನಸುಖದಲಿ ಅದು ಬರುತಲಿದೆ ||೪||

ಮನವ ಶಿಶುನಾಳಧೀಶನೊಳು ಮಗ್ನವ ಮಾಡಿ
ಚಿನುಮಯಾತ್ಮಕವಾಗಿ ಬರುತಲಿದೆ ||೫||

*****