ಭಾರತ ಮಾತೆಯ
ಮಕ್ಕಳು ನಾವು
ಭಾರತೀಯರು ನಾವು
ಭಾಗ್ಯದಯವಾಗಲಿ
ಬೆಳಕಿನ ಕಿರಣ ಭಾರತೀಯರ ಜನಮನ
ಒಂದೇ ಒಂದೇ ಎನ್ನುವೆವು
ನಾವೆಲ್ಲ ಒಂದೇ ಎನ್ನುವೆವು || ಭಾ ||

ಮಣ್ಣಿನ ಮಕ್ಕಳು ನಾವೆ ನಾವು
ಈ ಮಣ್ಣಲಿ ಬೆಳೆದ ಸಸಿಗಳು
ಹಸಿರು ಒಂದೇ ಎನ್ನುವೆವು
ಉಸಿರು ಒಂದೇ ಎನ್ನುವೆವು || ಭಾ ||

ದಿಟ್ಟತನದಲ್ಲಿ ತೊಟ್ಟ ಮೇರು ಶಿಖರ
ನವನವೀನ ಕಿರೀಟಧಾರಿಗಳು
ತೊಟ್ಟ ಬಾಣಗಳು ಝೇಂಕರಿಸುವ
ಮುಗಿಲ ಕಾರ್‍ಮೋಡಗಳಂಚಿನ ಮಿಂಚುಗಳು || ಭಾ ||

ಕಾನನದ ಮೆರಗ ನೀಡುವ
ಅರಳುವ ಪುಷ್ಪಸಂಜಾತಗಳು
ಬಣ್ಣಗೊಂಚಲ ಬೀರಿದ ಋತುಮಾನ
ಸಂಸ್ಕೃತಿಯ ಹೂವುಗಳು ನಾವೇ ನಾವು

ಒಂದೇ ಒಂದೇ ಎನ್ನುವೆವು
ನಾವೆಲ್ಲ ಒಂದೇ ಎನ್ನವೆವು ||
*****