ಆಕಾಶದ ನೀಲಿಯಲಿ ಅದ್ದಿದ ಬಟ್ಟೆ,
ಕನಸುಗಳ ನೇಯ್ದು ಒಂದು ದಿವಸ,
ಬದುಕಿನ ವಸಂತ ಅರಳಿದ ಬಿಸಿಲಿನ
ದಗೆಗೆ ಕುಡಿಯುತ್ತಿರುವ ನೀರು ಆಕಾಶದ ಹನಿ.

ಗಜ ಬಟ್ಟೆಯ ಜೋಳಿಗೆಯ ತುಂಬ,
ಅವರಿವರ ಒಲವು ಮಾತು ಬಿರಿಸು,
ಮಾತಾಪು, ಮತ್ತೆ ನನ್ನ ನಲ್ಲನ ವಸಗೆ
ಮೋಡಗಳು ಎದೆತೆರೆದು ಹನಿ ಬೆಳದಿಂಗಳ ಇರುಳು.

ಈ ಅಸ್ತಿಯಲಿ ಮಾಗಿಯ ಚಳಿ ಇಳಿಯುತ್ತಿದ್ದಂತೆ,
ನೀನು ಹೊದಿಸಿದ ಬೆಚ್ಚನೆಯ ಕಂಬಳಿ ಹಾಸು,
ಒಲೆಯಲಿ ಕಟ್ಟಿಗೆ ಉರಿದು ಅಡುಗೆ ಮನೆ ತುಂಬ
ಹಸಿರು ಚಹಾದ ಎಲೆಗಳು ಕುದಿದು ಘಮ ಘಮ.

ಇಂದು ಎಲ್ಲವನ್ನು ಮಾತನಾಡೋಣ. ನಾಳೆಯ
ಬಣ್ಣ ಬದಲಾಯಿಸಿ ಏನು ಅನಾಹುತ ಕಾದಿದೆಯೋ?
ಹರಿದ ಕಾಗದದ ತುಂಡುಗಳು ಕೂಡಿಸಿ, ಒಂದು
ಕೃತಘ್ನತೆಯ ಕವಿತೆಯ ಸಾಲುಗಳ ಗಿಚೋಣ.

ನಮ್ಮ ವಸಂತಗಳನ್ನು ನಾವೀಗ ದಾಟಿದ್ದೇವೆ.
ಬದುಕಿನ ಚಳಿಗಾಲದ ಈ ಸಂಜೆಗಳನ್ನು
ಹಾಗೆಯೇ ಮುರಿದು ಕಳೆದು ಹೋದ ಮಾತುಗಳ,
ಒಂದು ಭರವಸೆಯ ಎಳೆಯಲಿ ಪೋಣಿಸೋಣ.
ಇದು ನೀ ತೆರೆದ ಆಕಾಶದಿಂದ ನನ್ನ ಮನೆಯ
ಬಾಗಿಲಿಗೆ ಬಂದು ನಿಲ್ಲುವ ಸರಿಯಾದ ಸಮಯ.
*****