ನರಿಯ ಸಾಕಿದೆ ನಾನೊಂದು ನರಿಯ ಸಾಕಿದೆ
ಮರವು ತಿಳಿದು ಅರಿವಿನ ಪಂಜರದೊಳು ||ಪ||

ಗಿಡಾ ಅಡವಿಯ ನರಿಯ ಕೆಡವಿತೆ ಒಡನಾಲುವ ನರಿಯು
ಹಿಡಿ ತುದಿಯನು ಮಹೇಶಮಂತ್ರ ಜಪ ನುಡಿದು ಬೈಲಾಗುವ ನರಿಯು ||೧||

ಉದಯಕಾಲದಿ ಎದ್ದು ಸದ್ಗುರುವಿಗೆ ಕಾಂಬುವ ನರಿಯು
ಮುದದಿ ವದನ ಕಂಡವರಿಗೆ ಮಹಿಮದ ಸದರೆತ್ತುವ ನರಿಯು ||೨||

ಮಂಡಲಾಗ್ರದ ನರಿಯು ಪುಂಡಲೀಕಾಂಡಕದ ನರಿಯು
ಪುಂಡ ಶಿಶುನಾಳಧೀಶ ಗುರುಗೋವಿಂದನ ಕರ ಚಂಡಕನರಿಯು ||೩||

*****