ಪ್ರೀತಿ-ಪ್ರೇಮಗಳ…
ಕಥೆಯನು ಹೆಣೆಯುತ
ದಿನ ಕಳೆಯುವ ಯುವಕರೆ

ಪ್ರೀತಿಯ ಬಳ್ಳಿಯನು
ಹರ್ಷದಿ ತಂದು…
ಮಲ್ಲಿಗೆ ಪಡೆಯುವ
ಕನಸನು ಕಂಡು… ನಿರಾಶೆಯಲಿ
ಮುಳ್ಳನು ಪಡೆಯುವ
ಹದಿಹರೆಯದ ಯುವ ಪ್ರೇಮಿಗಳೆ

ಆ ಚೆಲುವು ಮುಖದಲಿ
ತಿಳಿ ನಗೆಯ ಬಲೆಯಲಿ
ಪ್ರೇಮ ಪೂಜಾರಿಗಳ
ಮನ ಬರಿದಾಗಿಸಿ…
ಹೃದಯ ಭಗ್ನಗೊಳಿಸಿದ
ಮಾಯಾಂಗನೆಯರು ಕಡಿಮೆಯೇ

ರಸಿಕತೆಯ ರಸಪಾನದ
ನಿಶೆಯ… ಉಷೆಯನ್ನರಸುತ
ಕಲ್ಪನೆಯ ಕನಸನು ಕಾಣುತ
ಕಲುಷಿತ ಮನಸ್ಕರಾಗಿ
ಕವಲಾಗಿ ಪರಿತಪಿಸದೆ
ಕಡಿವಾಣದ ಕಾವಲೆ ವಾಸಿ

***