ಗಂಟೆಯ ಭಯೋತ್ಪಾದಕ

ಪಾತ್ರ ವರ್ಗ
* ೬ ಮಕ್ಕಳು

* ಗಂಟೆ ಕಳ್ಳ

* ಇಬ್ಬರು ಪ್ರಯಾಣಿಕರು

* ಒಂಭತ್ತು ವ್ಯಕ್ತಿಗಳು

* ಚಿನ್ನಮ್ಮ

* ಅಸ್ಥಿಪಂಜರ

* ದೊಡ್ಡೇಗೌಡ

* ಗುಂಡಣ್ಣ

* ಹೆಣ್ಣುಮಂಗ

* ಗಂಡುಮಂಗ

* ಏಳು ಮಂಗಗಳು

* ಪೂಜೆ ಭಟ್ರು.

ದೃಶ್ಯ -೧

(ಗಂಟೆಯ ಸದ್ದು- ಮಕ್ಕಳು ಕುಣಿಯುತ್ತಾ ಪ್ರವೇಶ)

ಹಾಡು : ಜಿಂಗಲ್ ಬೆಲ್ ಜಿಂಗಲ್ ಬೆಲ್ ಬೆಲ್ ಲಾಲ,ಲಾಲ,ಲಾ(೨)
ಚೆಂದದ ಗಂಟೆ ಅಂದದ ಗಂಟೆ
ಕಾಡಿಗೇಕೆ ಬಂತು?
ನಾಡಿನ ಗಂಟೆ ಚಿನ್ನದ ಗಂಟೆ
ಕಾಡಿಗ್ಯಾಕೆ ಬಂತು?
ಭಾರೀ ಸದ್ದಿನ ಗಂಟೆ
ಭೂತವು ಬೆದರೋ ಗಂಟೆ
ಭೂಮಿ ನಡುಗಿಸೋ ದೊಡ್ಡ ಗಂಟೆ ಕಾಡಿಗ್ಯಾಕೆ ಬಂತು
ಜಿಂಗಲ್ ಬೆಲ್ ಲಾಲ,ಲಾಲ,ಲಾ

ಕವನ : ಸಪಾಜೆ ಒಂದು ಸುಂದರವಾದ ಹಳ್ಳಿ.

ಧನ್ಯತಾ : ಹಳ್ಳಿಯ ಪೂರ್ವದಲ್ಲೊಂದು ಬೆಟ್ಟ.

ಸ್ನೇಹಲ್ : ಅದರ ಹೆಸರು ಮಾಟೆಕಲ್ಲು.

ಪ್ರತೀಕ್ಷಾ : ಬೆಟ್ಟದ ಮೇಲೊಂದು ಸುಂದರವಾದ ದೇವಾಲಯ.

ವಿನಯ : ಒಂದು ದಿನ, ಅಲ್ಲಿಗೊಬ್ಬ ನಿಗೂಢ ವ್ಯಕ್ತಿ ಬರುತ್ತಾನೆ.

ಎಲ್ಲರೂ : ಅವನೇನು ಮಾಡ್ತಾನೆ? ಏನು ಮಾಡ್ತಾನೆ?

(ಹಾಡು :ಪುನರಾವರ್ತನೆ-ಮಕ್ಕಳು ಕುಣಿಯುತ್ತಾ ನಿರ್ಗಮನ)
(ಹಿನ್ನಲೆಯಲ್ಲಿ ಚೆಂಡೆ ಸದ್ದು. ಸದ್ದಿಗೆ ಸರಿಯಾಗಿ ಹೆಜ್ಜೆ
ಹಾಕುತ್ತಾ ಕಳ್ಳನ ಪ್ರವೇಶ)

ಕಳ್ಳ : ಓ ದೇವರೇ, ನಿನ್ನನ್ನು ಎಲ್ಲರೂ ದಯಾಮಯನೆಂದು
ಕರೆಯುತ್ತಾರೆ. ದಯ ಬಿಡು, ನಿಂಗು ಧೈರ್ಯವೂ ಇಲ್ಲ.
ಇರುತ್ತಿದ್ದರೆ ಹೇಗೆ ನೀನು ಅಡಗಿಕೊಳ್ಳುತ್ತಿರಲಿಲ್ಲ.
ಧೈರ್ಯ ಇದ್ದರೆ ನನ್ನ ಎದುರು ಬಾ ನೋಡೋಣಾ? ನನ್ನನ್ನು ಎಲ್ಲರೂ
‘ಕಳ್ಳ’ ಎನ್ನುತ್ತಾರೆ. ಈ ಲೋಕದಲ್ಲಿ ಕಳ್ಳರಲ್ಲದವರು
ಯಾರಿದ್ದಾರೆ? ಹ್ಹ…ಹ್ಹ…ಹ್ಹ…. ಕೆಲವರು ಸಿಮೆಂಟ್
ಕದಿಯುತ್ತಾರೆ, ಕೆಲವರು ಚಿನ್ನ ಕದಿಯುತ್ತಾರೆ.
ಕೆಲವರು ಅಡಿಕೆ ಕದಿಯುತ್ತಾರೆ. ಚರಂಡಿ, ಕೊಳ್ವೆ ಬಾವಿ,
ಸೇತುವೆ ಇವುಗಳನ್ನೇ ಕದಿಯುತ್ತಾರೆ! ಎಂಥಾ ವಿಚಿತ್ರ
ನೋಡು!! ಯಾರಿಗೂ ಕಾಣ್ದ ಹಾಗೆ ಮನುಷ್ಯನ ದೇಹದ
ಒಳ್ಗೆ ನೀನೆ ಇರಿಸಿದ್ದೀಯಲ್ಲಾ, ಹೃದಯ…! ಅದನ್ನೇ
ಕದಿಯುವವರಿದ್ದಾರೆಂತೀನಿ. ಇನ್ನು ನಾನು ಯಾವ ಲೆಕ್ಕ?
ನೀನು ಒಳ್ಗೆ ಇದ್ದಿ. ನನಗಾಗಿ, ಹೊರಗೆ ಏನಾದರೂ
ಇಟ್ಟಿದ್ದೀಯಾ? ಹಾಂ…ಅಲ್ಲಿ ಒಂದು ಗಂಟೆ ಕಾಣುತ್ತದೆ.
(ಗಂಟೆಯ ಹತ್ತಿರ ಹೋಗುವನು. ಗಂಟೆಯನ್ನು ಹಿಡಿದು
ಸದ್ದು ಮಾಡಿ ಕುಣಿಯುವನು)

ಹಾಡು : ಬನ್ನಿರಿ ಗೆಳೆಯರೇ(೨)
ಬೆಕ್ಕಿಗೆ ಗಂಟೆ ಕಟ್ಟೋಣ
ಓ…. ಸರ್ವಶಕ್ತನೇ, ನೀನೆಷ್ಟು ದಯಾಮಯನು.
ಇದನ್ನಾದರೂ ನನಗೆ ಬಿಟ್ಟಿದ್ದೀಯಲ್ಲಾ?
ಅದಕ್ಕೆ ಹೇಳುವುದು ದೊಡ್ಡವರು, ಹುಟ್ಟಿಸಿದ ದೇವರು
ಹುಲ್ಲು ಮೇಯಿಸುವನೇ ಎಂದು ! ಇದನ್ನು ಮಾರಾಟ
ಮಾಡ್ತೇನೆ. ಇನ್ನು ಒಂದು ವಾರಕ್ಕೆ ಮೋಸ ಇಲ್ಲ.
(ಹಾಡುತ್ತಾ ಕಳ್ಳನ ನಿರ್ಗಮನ)

ದೃಶ್ಯ – ೨

(ಕಾಡು: ಕಳ್ಳನು ಹಾಡುತ್ತಾ ಹೋಗುತ್ತಿರುವನು. ಹಿನ್ನಲೆಯಲ್ಲಿ ಚೆಂಡೆಯ ಸದ್ದು)

ಕಳ್ಳ : ಬನ್ನಿರಿ ಗೆಳೆಯರೆ… ಲಾಲಾ… ಬನ್ನಿರಿ ಗೆಳೆಯರೇ
(ನಿಂತು ಆಲಿಸಿ) ಹಾಂ… ಅದೇನು….?
ಹುಲಿಯ ಗರ್ಜನೆ…..!
ಹುಲಿಗೆ ಗಂಟೆ ಕಟ್ಟುವುದು ಹೇಗೆ?
ಅಯ್ಯೋ……ಹುಲಿ ಬಂದೇ ಬಿಟ್ಟಿತು.
ಅಯ್ಯೋ ದೇವರೇ… ಹೇಗಾದರೂ ತಪ್ಪಿಸಿಕೊಳ್ಬೇಕು.
ಹುಲಿ…. —- ಇದೆ (ಹುಲಿಯ ಪ್ರವೇಶ).
(ಆಚೆ ಈಚೆ ಓಡುವನು. ಹುಲಿ ಅಟ್ಟಿಸಿಕೊಂಡು
ಹೋಗುವುದು ಹಿನ್ನಲೆಯಲ್ಲಿ ಚೆಂಡೆ ಸದ್ದು ನಿಧಾನವಾಗಿ
ತೀವ್ರತೆಯನ್ನು ಪಡೆಯುತ್ತಾ ಹೋಗುವುದು. ಹಿನ್ನೆಲೆಯಲ್ಲಿ
ಹುಲಿ ಕುಣಿತದ ಸ್ವರ)
ಅಯ್ಯೋ…. ಕಾಪಾಡಿ… ಕಾಪಾಡಿ (ಗಂಟೆ ಕೆಳಗೆ
ಬೀಳುವುದು ಹುಲಿ ಕಳ್ಳನನ್ನು ಕೊಂದು ಹಾಕುವುದು. ಹುಲಿ
ಕುಣಿತದ ಸದ್ದಿನೊಂದಿಗೆ ಹುಲಿಯ ನಿರ್ಗಮನ)

ದೃಶ್ಯ _೩

(ಮರುದಿನ – ಮಂಗಗಳ ಪ್ರವೇಶ)

ಹಾಡು : ಬಾಳೆಯ ತೋಟದ
ಪಕ್ಕದ ಕಾಡೊಳು
ವಾಸಿಸುತ್ತಿದ್ದವು ಒಟ್ಟಿಗೆ ಸೇರುತಾ
ತಕಥೈ ನಾಟ್ಯವನಾಡಿದವು
(ಎರಡು ಮಂಗಗಳು ಗುಂಪಿನಿಂದ ಹೊರಬಂದು ಅಲ್ಲೇ
ಬಿದ್ದಿದ್ದ ಗಂಟೆಯನ್ನು ನೋಡುವುವು)

೧ನೇ ಮಂಗ : (ಗಂಟೆಯನ್ನು ಇನ್ನೊಂದು ಮಂಗನಿಗೆ ತೋರಿಸುತ್ತಾ) ಇದು
ಏನು ? (ಗಂಟೆಯ ಸದ್ದು)

೨ನೇ ಮಂಗ : ಇದು ಯಾರದು?

೧ನೇ ಮಂಗ : ಇದು ಯಾಕೆ ಇಲ್ಲಿ ಬಿದ್ದಿದೆ?

೨ನೇಮಂಗ : ಇದರಲ್ಲಿ ಬಾಂಬು ಏನಾದರು ಇರಬಹುದೇ?

೧ನೇ ಮಂಗ : ಇಲ್ಲ,ಇಲ್ಲ, ಇಲ್ಲಿಗೆ ಅಂತಹವರು ಯಾರು ಬರುತ್ತಾರೆ?

೨ನೇ ಮಂಗ : ಹಾಗಾದರೆ ಏನು ಮಾಡೋಣ?

೧ನೇ ಮಂಗ : ಎಲ್ಲರನ್ನು ಕರೆಯೋಣಾ

ಎರಡೊ ಒಟ್ಟಿಗೆ : ಬನ್ನಿ ಗೆಳೆಯರೇ… ಬನ್ನಿ (ಮಂಗಗಳು ಬರುವುದಿಲ್ಲ)

೧ನೇ ಮಂಗ : ನಿಮ್ಮನ್ನು ಗೆಳೆಯರೇ ಅಂತ ಕರೆದ್ರೆ ಬರುವುದಿಲ್ಲ.

ಎರಡೂ ಒಟ್ಟಿಗೆ : ಬನ್ನಿ ಮಂಗಗಳೇ … ಬನ್ನಿ (ಮಂಗಗಳು ಬರುವುವು)

೩ನೇ ಮಂಗ : (ಗಂಟೆಯನ್ನು ಪರಿಕ್ಷಿಸಿ) ಇಂಥದ್ದೇ ವಸ್ತು ಐಸ್ ಕ್ಯಾಂಡಿ
ಮಾರುವವನಲ್ಲಿ ಇರತ್ತೆ. ಐಸ್ ಕ್ಯಾಂಡಿ…. ಐಸ್ ಕ್ಯಾಂಡಿ
(ಗಂಟೆ ಅಲ್ಲಾಡಿಸುವುದು).

೪ನೇ ಮಂಗ : ಇಂತಹದ್ದೇ ವಸ್ತು ಆಯುಧಪೂಜೆ ಮಾಡುವವ್ರಲ್ಲಿ ಇರತ್ತೆ

೫ನೇ ಮಂಗ : ಅಲ್ಲಿ ಬೆಟ್ಟದ ಮೇಲೆ ದೇವಸ್ಥಾನ ಉಂಟಲ್ಲಾ? ಅಲ್ಲಿ
ಇಂಥದ್ದು ಉಂಟು ಮಾರಾಯ್ರೇ.

೬ನೇಮಂಗ : ನೋಡಿ ಇದು ಶಬ್ದ ಹೊರಡಿಸುತ್ತದೆ (ಅಲ್ಲಾಡಿಸುವುದು)
(ಎಲ್ಲಾ ಮಂಗಗಳು ಗಂಟೆಯನ್ನು ಅಲ್ಲಾಡಿಸಿ ಶಬ್ದ ಮಾಡುವುವು )

೧ನೇಮಂಗ : ಹಾಗಾದರೆ…. ನಮ್ಮ ಕುಣಿತಕ್ಕೆ ತಕ್ಕ ಹಾಗೆ ಶಬ್ದ ಹೊರಡಿಸಿ ನೋಡುವ .

ಹಾಡು : ಬಾಳೆಯ ತೋಟದ ಪಕ್ಕದ ಕಾಡೊಳು….
(ಮಂಗಗಳು ಕುಣಿಯುತ್ತಾ ನಿರ್ಗಮನ )

ದೃಶ್ಯ – ೪

(ಇಬ್ಬರು ಪ್ರಯಾಣಿಕರ ಪ್ರವೇಶ)

ಹಾಡು : ಸಂತೆಗೆ ಹೋದನು ಭೀಮಣ್ಣ
ಹಿಂಡಿಯ ಕೊಂಡನು ಹತ್ತುಮಣ
ಕುದುರೆಯ ಬೆನ್ನಿಗೆ ಏರಿಸಿದ
ಕತ್ತೆಯ ಜತೆಯಲಿ ಸಾಗಿಸಿದ.

೧ನೇ ಪ್ರಯಾಣಿಕ : ಸಂತೆಯಿಂದ ಏನು ತಗೊಂಡಿದ್ದೀಯಾ?

೨ನೇ ಪ್ರಯಾಣಿಕ : ನಾನು, ನಮ್ಮ ಹೆಂಡ್ರಿಗಾಗಿ ಹೊಸ ಸೀರೆ ತಗೊಂಡೆ.
ನೀನೇನು ತಗೊಂಡೆ?

೧ನೇ ಪ್ರಯಾಣಿಕ : ಹೇ….ಹೆಂಡ್ತಿಗೆ ಬಹುವಚನ. ಗೆಳೆಯನಿಗೆ ಏಕವಚನ!

ನನ್ನ ಹೆಂಡ್ತಿ ಹಸಿರು ಗಾಜಿನ ಬಳೆ ಬೇಕೂಂತ ಆಸೆಪಟ್ಟಿದ್ಲು.
ಅದಕ್ಕೆ ಈ ಬಳೆ ತಗೊಂಡೆ.

೨ನೇ ಪ್ರಯಾಣಿಕ : ಹೋ…ಹೋ…ಹೋ… , ನಿನ್ನ ಹೆಂಡ್ರ ಹೊಟ್ಟೆ….?
(ಹೊಟ್ಟೆ ಮುಂದಕ್ಕೆ ಮಾಡಿ ಅಭಿನಯಿಸಿ ತೋರಿಸುವನು )

೧ನೇ ಪ್ರಯಾಣಿಕ : ಏ, ಏನು ? (ಮುಖದಲ್ಲಿ ಭೀತಿ)

೨ನೇ ಪ್ರಯಾಣಿಕ : ಎಲ್ಲಿ, ಏನು?

೧ನೇ ಪ್ರಯಾಣಿಕ : (ಮರದ ಬಳಿ ಇರುವ ಅಸ್ಥಿಪಂಜರದ ಕಡೆ ಬೆರಳು
ತೋರಿಸುವನು. ಅಸ್ಥಿ ಪಂಜರ ಎರಡು ಸಲ ಎದ್ದು ನಿಂತು
ಹ್ಹಿ…ಹ್ಹಿ…ಹ್ಹಿ… ಎಂದು ಹಲ್ಲು ಕಿರಿಯುವುದು)

೨ನೇ ಪ್ರಯಾಣಿಕ : ಅಯ್ಯೋ, ದೇವರೇ, ಅಸ್ಥಿಪಂಜರ.

೧ನೇ ಪ್ರಯಾಣಿಕ : ಮನುಷ್ಯನ ಎಲುಬುಗೂಡು.
(ಅಸ್ಥಿ ಪಂಜರ ಪುನಃ ಎದ್ದು ನಿಂತು ಸ್ವರ ಹೊರಡಿಸುವುದು)

೨ನೇ ಪ್ರಯಾಣಿಕ : ಓಡು ಗೆಳೆಯಾ . ಓಡು
ಅದರೊಳಗೆ ದೆವ್ವ ಸೇರಿರಬೇಕು.

ದೃಶ್ಯ – ೫
(ಹೊಲ ಉಳುವ, ನೇಜಿ ನೆಡುವ ದೃಶ್ಯ)

ಹಾಡು : ಗೋವಿಂದ ಬದನೆ | ಬದನೆತ್ತ್ ಕುದನೆ|
ಉದ್ದ ಉದ್ದ ಬದನೆ | ಬದನೆತ್ತ್ ಕುದನೆ|

(ಪ್ರಯಾಣಿಕರ ಪ್ರವೇಶ)

ವ್ಯಕ್ತಿ ೧ : ಹೇ…ನಿಲ್ಲಿ, ಯಾಕೆ ಓಡ್ತಾ ಇದ್ದೀರಿ?

೧ನೇ ಪ್ರಯಾಣಿಕ : (ಸುಸ್ತಾದವನಂತೆ) ಆ ಕಾಡಿನಲ್ಲಿ ಒಂದು ಅಸ್ಥಿ ಪಂಜರ.

೨ನೇ ಪ್ರಯಾಣಿಕ : ಓ ದೇವ್ರೇ , ಅದು ಎದ್ದು ನಿಂತು
ಹ್ಹಿ…ಹ್ಹಿ…ಹ್ಹಿ…ಅಂತ ಹಲ್ಲು ಕಿಸೀತು.

೧ನೇ ಪ್ರಯಾಣಿಕ : ಅಸ್ಥಿ ಪಂಜರಕ್ಕೆ ಜೀವ ಇದೆ.

೨ನೇ ಪ್ರಯಾಣಿಕ : ಅಲ್ಲಲ್ಲ. ಅದರೊಳಗೆ ದೆವ್ವ ದೇರಿಕೊಂಡಿದೆ. (ಗಂಟೆ ಶಬ್ದ)
(ಕೆಲಸ ಮಾಡುವವರು ಕೆಲಸ ನಿಲ್ಲಿಸಿ ಒಬ್ಬರನ್ನೊಬ್ಬರು ನೋಡುವರು)

ವ್ಯಕ್ತಿ ೧ : ಶಬ್ದ ಕೇಳಿಸ್ತಾ ಇದೆಯಾ?

೧ನೇ ಪ್ರಯಾಣಿಕ : ಹೌದು, ಅದು ಗಂಟೆಯ ಶಬ್ದ!

೨ನೇ ಪ್ರಯಾಣಿಕ : ಗಂಟೆಯ ಶಬ್ದ ಹೊರಡಿಸುವ ಭಯೋತ್ಪಾದಕ ಯಾರು?

೧ನೇ ಪ್ರಯಾಣಿಕ : ಅದು ಅಸ್ಥಿಪಂಜರ ದೆವ್ವವೇ ಇರ್ಬೇಕು.

ವ್ಯಕ್ತಿ ೨ : ದೆವ್ವ ಎಂದಾದರೆ ಅದು ಘಂಟಾಕರ್ಣನೇ ಇರ ಬೇಕು .

ವ್ಯಕ್ತಿ ೩ : ಹೌದು…ಹೌದು . ಘಂಟಾಕರ್ಣ ದೆವ್ವದ ಬಗ್ಗೆ ನಾನು
ಕತೆ ಕೇಳಿದ್ದೇನೆ.

ಎಲ್ಲರೊ : ಹೌದು…ಹೌದು ಘಂಟಾಕರ್ಣ ದೆವ್ವದ ಬಗ್ಗೆ ನಾನು ಕತೆ ಕೇಳಿದ್ದೇನೆ.

ಎಲ್ಲರಒ : ಹೌದು…ಹೌದು, ನಾವೂ ಕೇಳಿದ್ದೇವೆ.

ವ್ಯಕ್ತಿ ೪ : ನನ ಅಜ್ಜಿ ಹೇಳ್ತಿದ್ಲು. ಕಿವಿಯಿಂದ್ಲೇ ಗಂಟೆಯ ಸದ್ದು
ಹೊರಡಿಸುವ ದೆವ್ವ ಅಂತೆ ಅದು.

ವ್ಯಕ್ತಿ ೫ : ದೆವ್ವ ಅಂದ್ರೆ ಅಂತಿಂತ ದೆವ್ವ ಅಲ್ಲ .
ಸೂರ್ಯ… ಸೂರ್ಯನ ಹಾಗೆ ಧಗ ಧಗ!

ವ್ಯಕ್ತಿ ೬ : ಅದರ ಸ್ವರ ಗುಡುಗಿನ ಹಾಗೆ.

ವ್ಯಕ್ತಿ ೭ : ಅದರ ನೋಟ ಮಿಂಚಿನ ಹಾಗೆ.

ವ್ಯಕ್ತಿ ೮ : ಅದು ಹೆಜ್ಜೆ ಇಟ್ಟಾಗ ಭೂಕಂಪ.

ವ್ಯಕ್ತಿ ೯ : ಅದಿಲ್ಲಿ ಬಂದ್ರೆ ಜ್ವಾಲಾಮುಖಿ.

ಚಿನ್ನಮ್ಮ : ಹೇಯ್… ಏನು ಮಾತಾಡ್ತಿರಿ? ಕೆಲ್ಸ ಇಲ್ಲದವರು.

ಎಲ್ಲರು : ಯಾಕೆ ಚಿನ್ನಮ್ಮ….?

ಚಿನ್ನಮ್ಮ : ಇನ್ನೇನು ಇಲಿ ಹೋದಲ್ಲಿ ಹುಲಿ ಹೋಯ್ತು ಅಂತೀರಲ್ಲಾ?
ನೀವೇನು ನೋಡಿದ್ದೀರಾ? ಇದನ್ನೆಲ್ಲಾ ನಾನು
ನಂಬೋದಿಲ್ಲಾ. ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು
ಅಂದಿದ್ದಾರೆ ಹಿರಿಯರು. ಅಂತದ್ರಲ್ಲಿ ನೋಡದೆ
ಮಾತಾಡ್ತಿದ್ದೀರಲ್ಲಾ? (ಗಂಟೆಯ ಶಬ್ದ).

ಎಲ್ಲರೊ : ಸದ್ದು ಕೇಳಿಸೋದಿಲ್ವಾ? ಈಗ ಏನು ಹೇಳ್ತಿ?

ಚಿನ್ನಮ್ಮ : ಕೇಳಿಸ್ತಿದೆ. ಆದ್ರೆ…ನಿಮ್ಮ ಮಾತಿನ ಮೇಲೆ ನಂಬಿಕೆ
ಬರೋದಿಲ್ಲ. ಅಲ್ಲೇನೋ ರಹಸ್ಯ ಇದೆ. ಎಲ್ಲರೂ
ಒಟ್ಟಾಗಿ ಅಲ್ಲಿಗೆ ಹೋಗೋಣ. ಬನ್ನಿ… ಆ ರಹಸ್ಯವನ್ನು
ಭೇದಿಸೋಣ.

ಎಲ್ಲರೂ : ಇಲ್ಲ….ಇಲ್ಲ.ನಾವು ಬರೋದಿಲ್ಲ.
ನಾವು ಸಾಯೋದಿಕ್ಕೆ ತಯಾರಿಲ್ಲ.

ವ್ಯಕ್ತಿ ೧ : ನೀನೇ ಬೇಕಾದ್ರೆ ನೋಡಿ ಬಾ ಬನ್ನಿ. ನಾವು ಮನೆಗೆ
ಹೋಗೋಣ.

ವ್ಯಕ್ತಿ ೨ : ಹೇ… ನೀವು ಗಂಡಸ್ರಾ? ಸಮಸ್ಯೆ ಬಂದಾಗ ಹೆದರಿ
ಓಡೋದು ತಪ್ಪಲ್ವಾ? ಎಲ್ಲಾ ಬನ್ನಿ ಚಿನ್ನಮ್ಮ
ಹೇಳೋದನ್ನು ಸ್ವಲ್ಪ ಕೇಳೋಣ.

ಚಿನ್ನಮ್ಮ : ನಾವೆಲ್ಲಾ ಊರ ಗೌಡನ ಹತ್ರ ಹೋಗೋಣ. ಅವನೇ ಈ
ಸಮಸ್ಯೇನ ಪರಿಹಾರ ಮಾಡ್ತಾನೆ.

ಎಲ್ಲರೂ : ಇಲ್ಲ…ಇಲ್ಲ .ನಾವು ಬರೋದಿಲ್ಲ.
ನಾವು ಸಾಯೋದಿಕ್ಕೆ ತಯಾರಿಲ್ಲ.

ವ್ಯಕ್ತಿ ೧ : ನೀನೇ ಬೇಕಾದ್ರೆ ನೋಡಿ ಬಾ. ಬನ್ನಿ. ನಾವು ಮನೆಗೆ
ಹೋಗೋಣ.

ವ್ಯಕ್ತಿ ೨ : ಹೇ… ನೀವು ಗಂಡಸ್ರಾ? ಸಮಸ್ಯೆ ಬಂದಾಗ ಹೆದರಿ
ಓಡೋದು ತಪ್ಪಲ್ವಾ? ಎಲ್ಲಾ ಬನ್ನಿ. ಚಿನ್ನಮ್ಮ
ಹೇಳೋದನ್ನು ಸ್ವಲ್ಪ ಕೇಳೋಣ.

ಚಿನ್ನಮ್ಮ : ನಾವೆಲ್ಲಾ ಊರ ಗೌಡನ ಹತ್ರ ಹೋಗೋಣ . ಅವನೇ ಈ
ಸಮಸ್ಯೇನ ಪರಿಹಾರ ಮಾಡ್ತಾನೆ.

ಎಲ್ಲರೂ : ಹೌದು…ಹೌದು. ಅವಳು ಹೇಳೋದು ಸರಿ.

ವ್ಯಕ್ತಿ ೩ : ಹಳ್ಳಿಯ ಸಮಸ್ಯೆಗಳನ್ನು ಪರಿಹರಿಸೋದು ಅವನ
ಕರ್ತವ್ಯ ಅಲ್ವಾ?

(ದೊಡ್ಡೇಗೌಡ, ಸೇವಕ ಗುಂಡಣ್ಣನೊಡನೆ ಪ್ರವೇಶ)

ವ್ಯಕ್ತಿ ೪ : ಓ…ಗೌಡ್ರು ಬಂದೇ ಬಿಟ್ರು.

ಎಲ್ಲರೂ : ದೊಡ್ಡೇಗೌಡ್ರು ಬಂದ್ರು.
ದೊಡ್ಡೇ ಗೌಡ್ರು ಬಂದ್ರು.

ವ್ಯಕ್ತಿ ೧ : ಸ್ವಲ್ಪ ಸುಮ್ನೆ ಇರ್ತೀರಾ?

ಎಲ್ಲರೂ : ನಮಸ್ಕಾರ ಸ್ವಾಮೀ…. ನಮಸ್ಕಾರ ಗೌಡ್ರೆ.

ದೊಡ್ಡೇಗೌಡ : ನಮಸ್ಕಾರ… ನಮಸ್ಕಾರ . ಎಲ್ರೂ ಸೇರಿ ಒಂದೇ
ನಮಸ್ಕಾರ ಕೊಟ್ರೆ ಸಾಕು. (ಗುಂಡಣ್ಣ, ಕೊಡೆಹಿಡಿದು ನಿದ್ದೆ
ತೂಗುತ್ತಾ ಇರುವುದು ) ಇಲ್ಲೇನು ನಡೀತಾ ಇದೆ…? ಏನು
ಎಲ್ಲಾ ಸೇರಿದ್ದೀರಿ? ಸೋಮಾರಿಗಳು… ಸುಮ್ನೇ ನಿಂತು ಹರಟೆ
ಹೊಡೀತಿದ್ದೀರಿ. ಕೆಲ್ಸ ಅರ್ಧದಲೇ ಬಾಕಿ ಉಳಿದಿದೆ….!

ವ್ಯಕ್ತಿ ೧ : ಗೌಡ್ರೆ. ಆ ಬೆಟ್ಟದಲ್ಲಿ ದೆವ್ವ ಇದೆ.

ದೊ.ಗೌಡ : ದೆವ್ವನಾ…..!?

ವ್ಯಕ್ತಿ ೨ : ಹೌದು ಗೌಡ್ರೆ… ನಮ್ಗೆಲ್ಲಾ ತುಂಬಾ ಭಯ ಆಗ್ತಿದೆ.

ವ್ಯಕ್ತಿ ೩ : ಆ ದೆವ್ವ ಎಲ್ಲದ್ರೂ ಇಲ್ಲಿಗೇ ಬಂದ್ರೆ …?

ವ್ಯಕ್ತಿ ೪ : ನಮ್ಗೆ ಹೆದ್ರಿಕೆ ಆಗ್ತದೆ ಯಜ್ಮಾನ್ರೆ.

ವ್ಯಕ್ತಿ ೫ : ಈ ಊರನ್ನೇ ಬಿಟ್ಟೂ ಹೋಗೋಣಾಂತ ಯೋಚ್ನೆ ಬಂದ್
ಬಿಟ್ಟಿದೆ.

ದೊ.ಗೌಡ : ನಿಲ್ಸಿ ನಿಮ್ಮ ಮೂರ್ಖತನಾನ. ನೀವು ಅ ದೆವ್ವವನ್ನ
ನೋಡಿದ್ದೀರಾ?

ಎಲ್ಲರೂ : ಇಲ್ಲ…ಇಲ್ಲ್ಲ…ನಾವು ಅದನ್ನು ನೋಡಿಲ್ಲ.

ದೊ.ಗೌಡ : ಹಾಗಾದ್ರೆ ಅಲ್ಲಿ ದೆವ್ವ ಇದೇಂತಾ ಹೇಗೆ ಗೊತ್ತಾಯ್ತು?

೧ನೇ ಪ್ರಯಾಣಿಕ : ಯಜಮಾನ್ರೆ, ನಾವು ಕಾಡಲ್ಲಿ ಒಂದು ಅಸ್ಥಿಪಂಜರವನ್ನು
ನೋಡಿದೆವು.

೨ನೇ ಪ್ರಯಾಣಿಕ : ಅಷ್ಟೆ ಅಲ್ಲ. ಅದು ಎದ್ದು ನಿಂತು ನಗಾಡಿತು ಸ್ವಾಮಿ!

ದೊ.ಗೌಡ : ಅಸ್ಥಿಪಂಜರ ನಗಾಡಿತು!!

ಪ್ರಯಾಣಿಕರು
(ಒಟ್ಟಿಗೆ) : ಹೌದು ಒಡೆಯ.

೧ನೇ ಪ್ರಯಾಣಿಕ : ನಾವು ಗಂಟೆಯ ಶಬ್ದವನ್ನೂ ಕೇಳಿದೆವು (ಗಂಟೆಯ ಶಬ್ದ)

ಎಲ್ಲರೂ : ಕೇಳಿ…ಕೇಳಿ… ಈಗ ನಾವು ಹೇಳಿದ್ದು ಸುಳ್ಳಾ?

ದೊ. ಗೌಡ : ಹೌದು … ಕೇಳಿಸ್ತಾ ಇದೆ. ಆದ್ರೆ ಅದು ದೆವ್ವ
ಅನ್ನೋದಕ್ಕೆ ಏನು ಖಾತ್ರಿ? ಕಂಡು ಹಿಡಿಯುವುದು ಹೇಗೆ?

(ಗೌಡ ಸೇವಕನನ್ನ ಹುಡುಕುವನು)

ದೊ.ಗೌಡ : ಗುಂಡಣ್ಣಾ…..ಏ ಗುಂಡ. ಎಲ್ಲಿ ಹಾಳಾಗಿ ಹೋದ್ಯೋ
ಮನೆಹಾಳಾ?

ಗುಂಡಣ್ಣ : (ಕೊಡೆ ಹಿಡಿದು ಓಡಿಕೊಂಡು ಬರುವನು ಮತ್ತು ಗೌಡರಿಗೆ
ಕೊಡೆ ಹಿಡಿಯುವನು)

ಚಿನ್ನಮ್ಮ : ಗೌಡ್ರೇ……

ದೊ.ಗೌಡ : ಏನು ಚಿನ್ನಮ್ಮ?

ಚಿನ್ನಮ್ಮ : ನನಗೊಂದು ಉಪಾಯ ಹೊಳೀತಿದೆ. ನಾನು ಆ ದೆವ್ವವನ್ನು ಓಡಿಸಬಲ್ಲೆ.

ದೊ.ಗೌಡ : ಏನು? ನೀನು ಆ ದೆವ್ವವನ್ನು ಓಡಿಸಬಲ್ಲೆಯಾ?

ಚಿನ್ನಮ್ಮ : ಹೌದು ಸ್ವಾಮಿ. ನನಗೆ ನೀವು ಸಹಾಯ ಮಾಡಬೇಕು.

ದೊ ಗೌಡ : ನಾನು …ನಿನಗೆ ಸಹಾಯ…? ಏನು ಸಹಾಯ….?

ಚಿನ್ನಮ್ಮ : ಸದ್ಯಕ್ಕೆ ನಂಗೆ ಸ್ವಲ್ಪ ಕಾಸು ಕೊಡಿ.

ದೊ. ಗೌಡ : ಗುಂಡಾ…(ಗುಂಡಣ್ಣಾ ನಿದ್ದೆ ತೊಗುತ್ತಾ ಇರುವುದು)
ಗುಂಡಾ…. ಹಾಳು ನಿದ್ದೆ…… ಹೋದಲ್ಲೆಲ್ಲಾ
ತೂಕಡಿಸ್ತಿರತ್ತೆ ಕೋತಿ ಮುಂಡೇದು, ಏ ಬಾರೋ ಇಲ್ಲಿ.

ಗುಂಡಣ್ಣ : (ನಿದ್ದೆಯಿಂದ ದಡಬಡಿಸಿ ಎದ್ದು) ಯಜಮಾನ್ರೆ….
ಕರೆದ್ರಾ?

ದೊ.ಗೌಡ : ಚಿನ್ನಮ್ಮನಿಗೆ ಸ್ವಲ್ಪ ದುಡ್ದು ಕೊಡು.

ಗುಂಡಣ್ಣ : ಆಯ್ತು ಸ್ವಾಮಿ (ಪಂಚೆಯನ್ನು ಮೇಲೆತ್ತುವನು)

ಚಿನ್ನಮ್ಮ : ಛಿ…. ನಾಚಿಕೆ ಇಲ್ಲದವನು.

ಗುಂಡಣ್ಣ : ಹೇ…ನಿಂಗೆ ಹಣ ಬೇಡ್ವಾ? (ಒಳ ಚಡ್ಡಿಯ ಜೇಬಿನಿಂದ
ಹಣ ತೆಗೆಯುವನು) ತಗೋ.

ಚಿನ್ನಮ್ಮ : (ಹಣ ತೆಗೊಂಡು) ಸರಿ ಸ್ವಾಮಿ, ನಿಮ್ಮ ಆಶೀರ್ವಾದ
ನನಗಿರಲಿ.

ಗುಂಡಣ್ಣ : ಆಯ್ತು…ಆಯ್ತು. ಅದಕ್ಕೇನು? ಅದು ಎಷ್ಟು
ಬೇಕಾದ್ರೂ ಕೊಡುವ.

ದೊ.ಗೌಡ : ಹೇ….ಗುಂಡ ಸುಮ್ಮನಿರೋ ( ವಾಕಿಂಗ್ ಸ್ಟಿಕ್ನಿಂದ
ಗುಂಡನ ತಲಿಗೆ ಚಚ್ಚುವನು) ಬಾ ಇಲ್ಲಿ… ಕೊಡೆ
ಸರಿಯಾಗಿ ಹಿಡ್ಕೋ. ಹೋದಲ್ಲೆಲ್ಲಾ ಹಾಳು ನಿದ್ದೆ ನಿಂಗೆ.
(ಚಿನ್ನಮ್ಮನ ಕಡೆಗೆ ತಿರುಗಿ) ಚಿನ್ನಮ್ಮ, ಜೊತೆಯಲ್ಲಿ
ಯಾರಾದ್ರೂ ಸಹಾಯಕ್ಕೆ ಇರ್ಬೇಕಾ?

ಚಿನ್ನಮ್ಮ : ಬೇಕಾಗಲಾರದು ಸ್ವಾಮಿ ನಾನೊಬ್ಳೇ ಹೋಗಿ ಬರ್ತೀನಿ.

ದೊ.ಗೌಡ : ಹೋಗಿ ಬಾಚಿನ್ನಮ್ಮ. ನಿಂಗೆ ಒಳ್ಳೆದಾಗ್ಲಿ.
(ಜನರು ತಮ್ಮಕೆಲ್ಸದಲ್ಲಿ ತೊಡಗುವರು ಹಾಡು : ಗೋವಿಂದ ಬದನೆ ಹಿನ್ನೆಲೆಯಲ್ಲಿ.)

ದೃಶ್ಯ – ೬

(ಎರಡು ಮರಗಳ ಮಧ್ಯದ ಕೊಂಬೆಗೆ ಗಂಟೆ ಕಟ್ಟಿರುವುದು. ಮಂಗಗಳು ಹಾಡಿಗೆ ಸರಿಯಾಗಿ ಹಾರಿ,
ಕುಣಿದು ಗಂಟೆಯ ಶಬ್ದ ಮಾಡುವವು)

ಹಾಡು : ಬಾಳೆಯ ತೋಟದ ಪಕ್ಕದ ಕಾಡೊಳು…..

(ಗುಂಪಿನಲ್ಲಿದ್ದ ಒಂದು ಗಂಡು ಮತ್ತು ಇನ್ನೋಂದು ಹೆಣ್ಣು ಕೋತಿ, ಕೈ
ಕೈ ಹಿಡಿದು ಹಾಡು ಹೇಳಿಕೊಂಡು ಕುಣಿಯುತ್ತಾ ಗುಂಪಿನಿಂದ ಸ್ವಲ್ಪ ಮುಂದಕ್ಕೆ
ಬರುವವು. ಚಿನ್ನಮ್ಮ ಮರದ ಹಿಂದೆ ಅಡಗಿಕೊಂಡಿರುವಳು, ಅವಳ ತಲೆಯ ಮೇಲೆ
ಹಣ್ಣಿನ ಬುಟ್ಟಿ. ಬುಟ್ಟಿಯಿಂದ ಒಂದೊಂದೇ ಹಣ್ಣನ್ನು ಎರಡು ಮಂಗಗಳತ್ತ
ಎಸೆಯುವಳು ಮಂಗಗಳು ಹಣ್ಣಿಗಾಗಿ ಜಗಳವಾಡುವವು)

ಹೆಣ್ಣು ಮಂಗ :ನಂಗೆ ಕೊಡದೆ ನೀನೇ ತಿಂದಿಯಲ್ಲಾ…ನಿನ್ನಲ್ಲಿ ನಂಗೆ ಕೋಪ.
ನೀನು ನನ್ನ ಗಂಡನೇ ಅಲ್ಲ.

ಗಂಡು ಮಂಗ : ನಿಂಗೆ ಎಷ್ಟು ಉದಾಸೀನ? ಅಲ್ಲಿ ಇನ್ನೊಂದಿದೆ ಹೆಕ್ಕಿಕೋ.
(ಎರಡೂ ಹಣ್ಣನ್ನು ತಿನ್ನುವುದು). ಇನ್ನೂ ಇದೆ….
ಉಳಿದವರನ್ನು ಕರೆಯೋಣ. (ಮೊಬೈಲ್ ಫೋನ್
ಮೂಲಕ ಮಂಗಗಳನ್ನು ಕರೆಯುವುದು .)

ಗ,ಮಂಗ : ಹಲೋ…..ಹಲೋ…ಮಂಕಿ ಈಸ್ ಕಾಲಿಂಗ್.

೩ನೇ ಮಂಗ : ಕೇಳಿಸ್ತಾ ಇದೆ. ಲೈನ್ ಈಸ್ ಕ್ಲಿಯರ್ . ಪ್ರೊಸೀಡ್.

ಗ.ಮಂಗ : ಮಂಗ ಈಸ್ ಕಾಲಿಂಗ್.

೩ನೇ ಮಂಗ : ಮಂಗ ಇಸ್ ಆನ್ ದಿ ಲೈನ್.

ಗ.ಮಂಗ : ಬಾಳೆ ಹಣ್ಣು ಫಾಲಿಂಗ್. ಬೇಗ ಕಮಿಂಗ್ ಆಂಡ್ ಈಟಿಂಗ್

೩ನೇ ಮಂಗ : ಗುಡ್ ನ್ಯೂಸ್… ಕಂಗ್ರಾಟ್ಸ್.

ಗ.ಮಂಗ : ಓವರ್….. ಓವರ್.

೩ನೇ .ಮಂಗ : ಏ…. ಮಂಗಗಳೆ… ನಮ್ಮ ಆಹಾರ ಅಲ್ಲಿದೆ.

(ಎಲ್ಲಾ ಕೋತಿಗಳು ಬಂದು ಹಣ್ಣುಗಳ್ನು ತಿನ್ನುವ ದೃಶ್ಯ. ಚಿನ್ನಮ್ಮ ಮೆಲ್ಲನೆ
ಬಂದು ಗಂಟೆ ತೆಗೆದುಕೊಂಡು ಹೋಗುವಳು)

೪ನೇ ಮಂಗ : ನಮ್ಮ ಹೊಟ್ಟೆ ತುಂಬಿತು (ತೇಗುವುದು)

೫ನೇ ಮಂಗ : ನನ್ನ ಹೊಟ್ಟೆ ತುಳುಕಿತು.

೬ನೇ ಮಂಗ : ನನ್ನದು ಗುಡಾಣವಾಯಿತು.

೭ನೇ ಮಂಗ : ಸೂಪರ್… ರುಚಿಯಾದ ಹಣ್ಣುಗಳು.

೩ನೇ ಮಂಗ : ಹೇಯ್… ಅದೆಲ್ಲಿ…ಡೊಂಯ್…ಡೊಂಯ್….?

(ಮಂಗಗಳು ಗಂಟೆ ಕಾಣೆಯಾದುದಕ್ಕೆ ಜಗಳವಾಡುವವು)

ಎಲ್ಲಾ ಮಂಗಗಳು : ಹುಡುಕೋಣ.
( ಹುಡುಕುತ್ತಾ ನಿರ್ಗಮನ. ಹಿನ್ನಲಿಯಲ್ಲಿ ಬಾಳೆಯ
ತೋಟದ ಹಾಡು )

ದ್ರಶ್ಯ -೭

ದೊ.ಗೌಡ : (ಆಚೆ ಈಚೆ ಹೋಗುತ್ತಾ) ಚಿನ್ನಮ್ಮ ಯಾಕೆ ಇನ್ನೂ
ಬರ್ಲಿಲ್ಲಾ? ಪಾಪಾದ ಹೆಂಗ್ಸು. ಅವಳ ಕತೆ ಏನಾಯ್ತೋ?

ವ್ಯಕ್ತಿ ೧ : ಬಹುಶಃ ಘಂಟಾಕರ್ಣ ಅವಳನ್ನು ತಿಂದಿರಬೇಕು .

ವ್ಯಕ್ತಿ ೨ : ಹಣದ ಆಸೆಗಾಗಿ ತನ್ನ ಪ್ರಾಣವನ್ನೇ ಕಳಕೊಂಡ್ಳು.

ವ್ಯಕ್ತಿ ೩ : (ಸ್ವಲ್ಪ ಸಣಕಲು – ಪೈಲ್ವಾನ್ ನಟನೆಯಲ್ಲಿ) ನಮ್ಮಂತಹ
ಗಂಡಸರೇ ಇಂತಹ ವಿಷಯಗಳಿಗೆ ಹೆದರಿರುವಾಗ ಆ ಹೆಣ್ಣು
ಹೆಂಗ್ಸು ಯಾಕೆ ಅಲ್ಲಿ ಹೋಗ್ಬೇಕಾಗಿತ್ತು?

ವ್ಯಕ್ತಿ ೪ : ಆ ಯೂಸುಲೆಸ್ಸು ಹೆಂಗ್ಸು ಅಲ್ಲೇ ಸುತ್ತು ಹೋಗಿರಬೇಕು.

ಎಲ್ಲರೂ : ಹೌದು… ಹೌದು ಇಲ್ಲದಿದ್ರೆ ಇಷ್ಟೊತ್ತಿಗೆ ಅವಳು
ಬರ್ಬೇಕಿತ್ತು (ಪೂಜೆ ಭಟ್ರ ಪ್ರವೇಶ).

ಪೂಜೆ ಭಟ್ರು : ಗೌಡ್ರೆ… ಗೌಡ್ರೆ , ನಾನಿನ್ನು ಪೂಜೆ ಮಾಡಲ್ಲ ಸ್ವಾಮಿ.

ದೊ ಗೌಡ : ಯಾಕೆ? ನಿಮ್ಗೇನು ಬಂತು ರೋಗ ?

ಪು ಭಟ್ರು : ನನ್ನ ಹತ್ರ ಇದ್ದ ಒಂದೇ ಒಂದು ಗಂಟೆ ಕಾಣೆಯಾಗಿದೆ.

ದೂ. ಗೌಡ : ಭಟ್ರ ಗಂಟೆಯನ್ನು ಯಾರು ಕದೀತಾರೆ?

ಪೂ, ಭಟ್ರು : ನನ್ನ ಗಂಟೆ ಅಂದ್ರೆ, ದೇವಸ್ಥಾನದ ಪೂಜೆಯ ಗಂಟೆ. ಗಂಟೆ
ಇಲ್ಲದೆ ಪೂಜೆ ಮಾಡೋದು ಹೇಗೆ? ಅದು ದೇವರಿಗೆ
ಮೆಚ್ಚಿಗೆ ಆಗುತ್ತದಾ?

ವ್ಯಕ್ತಿ ೧ : ಪೂಜೆ ನಿಲ್ಸಿದ್ರೆ ದೇವರಿಗೆ ಸಿಟ್ಟು ಬರೋದು ಗ್ಯಾರಂಟಿ .
(ಗಂಟೆ ಶಬ್ದ)

ಎಲ್ಲರೂ : (ಓಡುವ ನಟನೆ) ಅಯೊ ದೇವ್ರೇ, ಘಂಟಾ ಕರ್ಣ ಇಲ್ಲಿಗೂ ಬಂದನೇ?

ಓಡಿ ..ಓಡಿ. ಜೀವ ಉಳಿಸಿಕೊಳ್ಳಿ. (ಚಿನ್ನಮ್ಮ ಗಂಟೆಯೋಂದಿಗೆ ಪ್ರವೇಶ)

ವ್ಯಕ್ತಿ ೧ : ಅವಳು ಬಂದ್ಲು…. ಅವಳು ಬಂದ್ಲು. (ಎಲ್ಲರೂ ಆ ಕಡೆ ತಿರುಗುವರು ).

ವ್ಯಕ್ತಿ ೨ : ಅವಳಿನ್ನೂ ಬದುಕಿದ್ದಾಳೆ.

ಚಿನ್ನಮ್ಮ : ಹೌದು ನಾನಿನ್ನೂ ಬದುಕಿದ್ದೇನೆ. (ಗಂಟೆ ಎತ್ತಿ ಹಿಡಿದು)
ಇದೋ ಇಲ್ಲಿದೆ ನೋಡಿ ನಿಮ್ಮ ಘಂಟಾಕರ್ಣ.

ಪೊ. ಭಟ್ರು : ಹೇ, ಇದು ನಂದು. ಇದೇ ನನ್ನ ಗಂಟೆ. ನೀನ್ಯಾವಾಗ ನನ್ನ ಗಂಟೆ ಕದ್ದದ್ದು?

ಚಿನ್ನಮ್ಮ : ಭಟ್ರ ಗಂಟೆ ಯಾರಿಗೆ ಬೇಕು ಇದು ನಾನು ತಂದದ್ದು.

ಪೂ, ಭಟ್ರು : ಏನೂ? ಹೆಂಗಸರೂ ಪೂಜೆ ಮಾಡ್ತಾರಾ?

ಚಿನ್ನಮ್ಮ : ಹೆಂಗಸರು ಪೂಜೆ ಮಾಡಿದ್ರೇನೇ ಗಂಡಸ್ರು ಸರಿಯಾಗೋದು.

ಪೂ ಭಟ್ರು : ಅದೆಲ್ಲಾ ಬೇಡ, ನನ್ನ ಗಂಟೆ ಕೊಡು (ಕಿತ್ತುಕೊಳ್ಳುವನು)
ಇದು ನಿನಗೆ ಎಲ್ಲಿ ಸಿಕ್ಕಿತು?

ಚಿನ್ನಮ್ಮ : ಮಂಗಗಳ ಕೈಯಲ್ಲಿತ್ತು.

ಎಲ್ಲರೂ : ಮಂಗಗಳ ಕೈಗೆ ಹೇಗೆ ಹೋಯ್ತು?

ವ್ಯಕ್ತಿ ೧ : ಮನುಷ್ಯರ ಹಾಗೆ ಮಂಗಗಳೊ ಮೋಸ ಮಾಡುವುದನ್ನು
ಯಾವಾಗ ಕಲಿತವು?

ದೊ ಗೌಡ : ಚಿನ್ನಮ್ಮ, ನೀನು ಗ್ರೇಟ್ ಕಣಮ್ಮ. (ಗಂಡಸರನ್ನು ತೋರಿಸಿ)
ಮೀಸೆ ಇದ್ದ ಮಾತ್ರಕ್ಕೆ ಯಾರೂ ಗಂಡಸರಾಗುವುದಿಲ್ಲ . ಇದ್ದರೆ ನಮ್ಮ ಚಿನ್ನಮ್ಮನ
ಹಾಗೆ ಇರಬೇಕು. ಇವಳಿಗೆ ನಾವೊಂದು ಸನ್ಮಾನ ಮಾಡ್ಬೇಕು.
ಗುಂಡಣ್ಣ…..ಹೇ ಗುಂಡಾ.

ಗುಂಡಣ್ಣ : (ಗುಂಡಣ್ಣ ನಿದ್ದೆಯಿಂದ ಎಚ್ಚೆತ್ತು) ಬಂದೆ ಸ್ವಾಮೀ.

ದೊ ಗೌಡ : ಹೋಗಿ, ಒಂದು ಗಂಧದ ಹಾರ ತಗೊಂಡು ಬಾ.
ಚಿನ್ನಮ್ಮನಿಗೆ ಸನ್ಮಾನ ಮಾಡೋಣ.

ಗುಂಡಣ್ಣ : (ಹಾರ ತೆಗೆದುಕೊಂಡು ಬರುವನು) ತಂದೆ ಸ್ವಾಮಿ, ನಾನೇ
ಇವಳಿಗೆ ಹಾಕಿ ಬಿಡ್ತೇನೆ. ಹಿ ಹಿ ಹಿ.

ದೊ ಗೌಡ : ಹೇ… ತಗೊಂಡು ಬಾ ಇಲ್ಲಿ. ಸನ್ಮಾನ ಮಾಡ್ಲಿಕ್ಕೊ ಒಂದು
ಯೋಗ್ಯ ಬೇಡ್ವಾ , ಮೂದೇವಿ!

ವ್ಯಕಿ ೧ : ನಾವೆಲ್ಲಾ ಸೇರಿ ಈ ಸಂತೋಷವನ್ನು ಹಂಚಿಕೊಳ್ಳೋಣ.

ವ್ಯಕ್ತಿ ೨ : ಚಿನ್ನಮ್ಮನಮ್ಮ ಊರ ತುಂಬಾ ಮೆರವಣಿಗೆ ಮಾಡೋಣ.
(ಚಿನ್ನಮ್ಮ, ದೊಡ್ಡೇಗೌಡ, ಗುಂಡಣ್ಣ ಕೊಡೆ ಹಿಡಿದು,
ಹಿಂದಿನಿಂದ ಜನರು ಘೋಷಣೆಗಳನ್ನು ಕೂಗುತ್ತಾ…)
“ಗಂಟೆ ಚಿನ್ನಮ್ಮನಿಗೆ – ಜಯವಾಗಲಿ
ಊರ ಗೌಡರಿಗೆ – ಜಯವಾಗಲಿ
ಚಿನ್ನಮ್ಮನಿಗೆ – ಜಯವಾಗಲಿ ”

(ನಿರ್ಗಮನ)

*****************************

ಕೀಲೀಕರಣ :

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯೌವನ
Next post ಒಂದು ಬೊಗಸೆ ನೀರು (ಬೀದಿ ನಾಟಕದ ಹಾಡು)

ಸಣ್ಣ ಕತೆ

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

cheap jordans|wholesale air max|wholesale jordans|wholesale jewelry|wholesale jerseys