ನಡಿಯಬಾರದೇ ಲುಟುಲುಟು
ನಡಿಯಬಾರದೇ                 ||ಪ||

ನಡಿಯಬಾರದೆ ಈ ಸರಿ ಕುದರಿಯೊಳು
ಮಿಡುಕುವದ್ಯಾತಕೆ ಕಡಲಿಯನಿಡುವೆ ನಾ    ||ಅ.ಪ||

ಹೊರಿ ಹುಲ್ಲಾಕಿದರೆ ಗಳಿಗಿರಿಸದು
ನೆಲವ ನೆಕ್ಕಿ ಹೇಕರಿಸುವ ಕುದರಿ         ||೧||

ದಾನಕೊಟ್ಟೇನಂದರಿದನ್ಯಾರು ಒಲ್ಲರು
ಏನು ಮಾಡಲಿ ಸದಾಶಿವ ಬ್ಯಾನಿ ಬರವಲ್ಲದಿದಕೆ        ||೨||

ಇಂದಿರೇಶನಿಗೆ ನಿಂದೆ ಮಾಡಿದ ಪರಿ
ಬಂಧನ ಬಿಡಿಸಿತು ಇಂದಿಗೆ ಶಿವ ಶಿವಾ        ||೩||

ವಸುಧಿಯೊಳಗೆ ಶಿಶುನಾಳಧೀಶನ ಕುದರಿ
ಕಸವಿಸಿಗೊಳ್ಳುವದಿದು ತುಸುದಿನದೊಳು ಗಡ        ||೪||

*****