
ಗಿರಣಿ ವಿಸ್ತಾರ ನೋಡಮ್ಮಾ ಶರಣಿ ಕೂಡಮ್ಮ ||ಪ|| ಧರಣಿಪತಿಯು ರಾಣಿ ಕರುಣಾಕ ರಾಜ್ಯಕೆ ತರಿಸಿದ ಘನಚೋದ್ಯವೋ ಚೀನಾದ ವಿದ್ಯವೋ ||ಅ.ಪ.|| ಜಲ ಆಗ್ನಿ ವಾಯು ಒಂದಾಗಿ ಕಲೆತು ಚಂದಾಗಿ ಜಲ ಅಗ್ನಿ ವಾಯು ಒಂದಾಗಿ ನೆಲದಿಂದ ಗಗನಕ್ಕೆ ಮುಟ್ಟಿದಂತೆಸೆವುದು ಚಲ...
ಮೊದಲ ಬಾರಿಗೆ ಕಲೇಜಿನಲ್ಲಿ ಕಾಣಿಸಿಕೊಂಡ ಅವಳ ಕಣ್ಣುಗಳ ಬೆಡಗಿಗೆ ಎಲ್ಲ ಹುಡುಗರು ಮಾರುಹೋದರು. ಸದಾ ಹಸನ್ಮುಖಿ, ಹಿತಮಿತ ಮಾತಿನ ಆ ಹುಡುಗಿ ಸ್ವಲ್ಪ ದಿನಗಳಲ್ಲೆ ಚಿರಪರಿಚಿತಳಾದಳು. ರೂಪ, ಬುದ್ಧವಂತಿಕೆ, ಅಂತಸ್ತಿನ ದೃಷ್ಟಿಯಲ್ಲಿ ಮೇಲುಸ್ತರದಲ್ಲಿದ...
ಪ್ರೀತಿ ಬಳ್ಳಿಯು ಹಬ್ಬಿದೆ ಧರಣಿಯೆದೆಯ ಹಾಸಿನಲ್ಲಿ, ನೀಲ ಮುಗಿಲ ಲೋಕದಲ್ಲಿ ಗಾನ ಸುಧೆಯು ಸಾಗಿದೆ… ನಾನೇ – ನೀನು, ನೀನೆ – ನಾನು, ಬುವಿಯೆ – ಬಾನು, ಬಾನೇ ಬುವಿಯು, ಸೇತುವಾಗಿ ಬೆಸೆದಿದೆ… ಮೊದಲು ಕೊನೆಗಳಿಲ್...
ಮಾನಿನಿ ಮಾತಾಡಬ್ಯಾಡಮ್ಮಾ ನೀ ಸುಮ್ಮನಿರು ಜಾಣ ಹೆಂಗಸರಾಟ ನೋಡಮ್ಮಾ || ಪ || ಕ್ಷೋಣಿಯೊಳಗತಿಗೇರಿ ಭಕ್ತರು ಪ್ರಾಣ ಮೂವರಿಗೊಬ್ಬ ಗುರು ಕಲ್ಯಾಣದಯ್ಯನ ಮಾಡಿಸಿದ ಪೌರಾಣದೊಳು ಪ್ರತಿ ಕಲಹವಾಯಿತು || ಅ. ಪ. || ಹರ ಶರಣ ಲೀಲಾಮೃತ ಕಥೆಯ ತೆರುದ್ಹೇಳುತಿ...
ಬಿರು ಬೇಸಿಗೆ ಒಂದು ಮಧ್ಯಾಹ್ನ ಪಾಟೀಲ್ ಸರ್ ಭೇಟಿಯಾದರು. ಹೊರ ಜಿಲ್ಲೆಯ ಹಳ್ಳಿಯ ಶಾಲೆಯೊಂದರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕವಾದ ನಂತರ ಅವರು ಕಂಡದ್ದು ಅದೇ ಮೊದಲು. ಉಭಯಕುಶಲೋಪರಿ ತರುವಾಯ ಹೊಟೇಲಿಗೆ ಹೋಗಿ ಕಾಫಿಗೆ ಆರ್ಡರ್ ಕೊಟ್ಟು ಪ...
ಏನು ಬರೆಯಲಿ ಏನು ಹಾಡಲಿ ದಿನದ ಕಾವ್ಯಕೆ ಶುಭನುಡಿ, ನಿತ್ಯದುದಯವು ಬರೆವ ಮುನ್ನುಡಿ ಪುಟ-ಪುಟಕೂ ನೀಡಲು ಕೆಂಗಿಡಿ, ನಿಸರ್ಗ ಸಗ್ಗವು ಬೆಂಗಾಡಾಗಿರೆ ಇನ್ನೆಲ್ಲಿ ಪೂಜೆಯು ಪ್ರಕೃತಿಗೆ, ಇಂಚರದ ಬಳಗಕೆ ಠಾವೆ ಇರದಿರೆ ಎಲ್ಲಿನ್ನೆಲ್ಲಿ ಗಾನವು ಕೊಳಲಿಗೆ,...
ಆರಗೊಡವಿನ್ನೇನು ಮಗಳೆ ಮುನ್ನೋಡಿ ಹಂಜಿ ನೂಲಮ್ಮಾ || ಪ || ದಾರಿಕಾರರು ನಿನ್ನ ಮಾರಿನೋಡಲು ಮಾರಿಯತ್ತಿ ನೋಡ ಬೇಕಮ್ಮಾ || ಅ. ಪ.|| ಆಸನ ದೊಡ್ಡಾ ಮಣಿಗಳ ಮಾಡಿ ಆ ಶಶಿ ರವಿಗಳ ಕುಂಭಗಳ್ಹೂಡಿ ಸೂಸುವ ಚಕ್ರದ ಎಲೆಗಳಮೇಲೆ ದಶವಾಯುಗಳೆಂಬ ನುಲಿಗಳ ಬಿಗಿದ...
ಒಂದಾನೊಂದು ಊರಿನಲ್ಲಿ ಒಬ್ಬ ರಾಜನಿದ್ದ.. ಎಂದು ಕಥೆ ಹೇಳಲು ಪ್ರಾರಂಭಿಸದೇ ಇದ್ದರೆ ಮಗಳಿಗೆ ರಾತ್ರಿ ನಿದ್ದೆಯೇ ಬರುತ್ತಿರಲಿಲ್ಲ.. ಗಂಡಾಗಲೀ ಹೆಣ್ಣಾಗಲೀ, ಮಗುವೊಂದಿರಲಿ ಎಂಬ ಮಂತ್ರದ ಆಧಾರದಂತೆ ಮಗಳು ಹುಟ್ಟಿ, ಅವಳಿಗೆ ಅಕ್ಷರ ಸಾಧತೆಯ ವಿವಿಧ ಮಜ...
ಅಲ್ಲಿ – ಇಲ್ಲಿ ಹುಡುಕುವೇತೆಕೆ, ಪ್ರೀತಿಯ ಬಳ್ಳಿಯ ಚಿಗುರಿಗೆ, ನಿನ್ನ ಮನದಲೆ ಬೇರು ಬಿಟ್ಟಿಹ ತರು-ಲತೆ ಸುಮದ ಮಾಟದ ಚೆಲ್ವಿಗೆ || ಅವರ – ಇವರಲಿ ಅರಸುವೇತಕೆ ನಿನ್ನ – ನೀನು ತಿಳಿಯದೆ, ಅನ್ಯ ಪ್ರೀತಿಯ ಕಣ್ಣಕೂಟಕೆ ಮುನ್ನ &...
ನಗಬಾರದಮ್ಮ ಲಗುಬಿಗಿ ಸುಮ್ಮನೆ ಬೀಸಮ್ಮ ||ಪ|| ಲಗುಬಿಗಿ ಸುಮ್ಮನೆ ಬೀಸಿ ತಗಿದಾಳೋ ಹಿಟ್ಟಿನ ರಾಶಿ ಬಿಗಿದ ಪುಟ್ಟಿಯೊಳು ಸೋಸಮ್ಮಾ ||೧|| ಚಕ್ರದಿ ಕರೆಕಲ್ಲು ಶುಕ್ರದಿ ಮುಕ್ಕುವ ಕಲ್ಲು ವಕ್ಕರಿಸಿ ಮುಕ್ಕನ್ಹಾಕಮ್ಮಾ ||೨|| ಅಚ್ಚ ನಗಬಾರದು ಬಾಳ ನಗಬ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...
ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....
ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...















