ಜೀವದುಸಿರೆ ಹೆಸರ ಹೇಳು ಏಕೆ ಬೇಸರ
ಭಾವದಲರೆ ಬದುಕು ನಿನಗೆ ದೇವನಾಸರ!
ಯುಗಯುಗಗಳು ನಿನ್ನುಡಿಯಲಿ ನಗುತ ಮಲಗಿವೆ
ಮುಗಿಯಿಲ್ಲದ ಮುಗಿಲದಾರಿ ಮುಂದೆ ಹಾಸಿವೆ
ಮಾತೆ ನೀನು ಮಾತು ಕಲಿಸಿ ಮನದೊಳಡಗಿಹೆ
ಗೀತೆ ನೀನು ಗಾನ ನುಡಿಸಿ ಕಿವಿಯೊಳಿಡಿಗಿಹೆ
ಕವಿದ ಕತ್ತಲನ್ನುದೂಡಿ ರವಿಯೆ ಉದಿಸಿದೆ
ಭವದ ಬಾಗಿಲನ್ನು ತೆರೆದು ಬಾಳ ಬೆಳಗಿದೆ
ವಸುಧೆಯಲ್ಲಿ ಅವತರಿಸಿಹ ವಾಸುದೇವನೆ
ಬಸಿರಿನಲ್ಲಿ ಒಡಮೂಡಿದ ಅಂತರಾತ್ಮನೆ
*****

















