ಮಲೆನಾಡ ಸಿರಿಯಲಿ
ಹಸಿರಾದ ಧರೆಯು
ಆ ಕೆರೆಯ ದಡದಲಿ
ಕನಸಿನಾಳದಲಿ-ನಾನಿರುವಾಗ

ನಿನ್ನಾ.. ಸವಿ ನೆನಪು
ಕೆದಕಿ… ಕೆದಕಿ ಬರುತಿರಲು
ತನು-ಮನ ದಾಹದಿ
ನಿನ್ನ ಸಂಗ ಬಯಸಿತು

ಜಿನಗು ಮಳೆಯಲಿ…
ತಂಪಾದ ಸುಳಿ-ಗಾಳಿಯಲಿ
ಮಾಗಿಯ ಚಳಿ ಮುತ್ತುತ…
ನಿನ್ನ ಸೇರುವಾಸೆ ಮೂಡಿತು

ನಮ್ಮ ಪ್ರೀತಿ-ಪ್ರೇಮ
ಅಮರ ಎಂದೆಂದೂ…
ಹೇಳುವಾ… ಸಾರಿ… ಜಗಕ್ಕಿಂದು

***