ಭ್ರಮಣ – ೮

ಭ್ರಮಣ – ೮

ಕಲ್ಯಾಣಿ ಮೊದಲು ನಾಗೇಶನ ಅವಸ್ಥೆ ಕಂಡು ಗಾಬರಿಯಾದಳು. ಯಾವ ಮುಚ್ಚುಮರೆಯೂ ಇಲ್ಲದೇ ಅವನು ತನ್ನೀ ಅವಸ್ಥೆಯ ಕಾರಣವನ್ನು ಹೇಳಿದಾಗ ಅವಳಿಗೆ ಸಿಟ್ಟು ತಡೆಯಲಾಗಲಿಲ್ಲ. ಆ ಸಿಟ್ಟನ್ನು ಹೊರಗೆಡಹಲೆಂಬಂತೆ ಅವನನ್ನು ತನ್ನ ಬೂಟುಗಾಲಿನಿಂದ ಬಲವಾಗಿ ಒದ್ದಳು. ಪೊಲೀಸಿನವರಿಂದ ವಿಚಿತ್ರ ಹಿಂಸೆ ಅನುಭವಿಸಿ ಬಂದಿದ್ದ ನಾಗೇಶನ ಮೇಲೆ ಅದು ಅದ್ಭುತ ಪ್ರಭಾವ ಬೀರಲಿಲ್ಲ. ಅಕ್ಕ, ಅವಳ ಆಜ್ಞೆ ಇಲ್ಲದೇ ತಾನು ಮಾಡಿದ ಸಾಹಸಕ್ಕೆ ಸಿಟ್ಟಾಗುತ್ತಾಳೆಂಬುವುದು ನಾಗೇಶನಿಗೆ ಗೊತ್ತಿತ್ತು. ಆಕೆಯ ಸಿಟ್ಟು ನಿಧಾನವಾಗಿ ಶಮನಗೊಳ್ಳುತ್ತಾ ಹೋದಂತೆ ಹೇಳಿದಳವಳು.

“ನೀನು ಬರಲು ಇಷ್ಟು ತಡವಾದ್ದದು ನೋಡಿ ಏನಾದರೂ ಅನಾಹುತವಾಗಿರಬಹುದೇನೋ ಎಂದು ಊಹಿಸಿದೆ, ನಿನ್ನ ಹುಡುಕಲು ಸಾಯಿಯನ್ನು ಕಳಿಸಿದ್ದೆ… ಬೊಗಳು ಅಲ್ಲಿ ಏನಾಯಿತು. ಆ ಇನ್ಸ್‍ಪೆಕ್ಟರ್ ನಿನ್ನನ್ಯಾಕೆ ಬಿಟ್ಟ.”

ಈಗಾಗಲೇ ತೇಜಾ ನಾಗೇಶನ ದೃಷ್ಟಿಯಲ್ಲಿ ಮಹಾನ್‌ವ್ಯಕ್ತಿ ಯಾಗಿಬಿಟ್ಟಿದ್ದ. ತನ್ನ ಭಾವುಕತೆಯನ್ನು ತಡೆಯುತ್ತಾ ಎಲ್ಲವನ್ನೂ ವಿವರವಾಗಿ ಹೇಳಿದ. ತೇಜಾ ಅವಳಿಗೆ ಹೇಳಲೆಂದ ಮಾತುಗಳನ್ನು ಒತ್ತಿ ಹೇಳಿದ. ಅವನು ಮಾಡಿದ ಉಪಕಾರದ ಕಾರಣ ನಾಗೇಶನ ಮಾತುಗಳಲ್ಲಿ ಹೊಗಳಿಕೆ ಹೆಚ್ಚಾಗಿತ್ತು. ಹಾಗೇ ಮನುಷ್ಯ ಸಹಜ ಗುಣದ ಕಾರಣ ಅವನ ದೃಷ್ಟಿಯಲ್ಲಿ ಹೀರೋ ಆದ ಇನ್ಸ್‌ಪೆಕ್ಟರನ ವಿಷಯದಲ್ಲಿ ತನ್ನ ಊಹೆಗಳನ್ನೂ ಸೇರಿಸಿದ್ದ.

ಅವನು ಹೇಳಿದ್ದನೆಲ್ಲಾ ಏಕಚಿತ್ತದಿಂದ ಕೇಳಿದ ಕಲ್ಯಾಣಿ ಯೋಚನೆಯಲ್ಲಿ ತೊಡಗಿದಳು. ಈ ಇನ್ಸ್‌ಪೆಕ್ಟರ್ ಉತೇಜ್ ಯಾವುದೋ ಹೊಸ ಯೋಜನೆ ರೂಪಿಸಿ ಬಂದಿದ್ದಾನೆ ಎನಿಸಿತು. ಅದೆಂತಹ ಯೋಜನೆಯಾಗಿರಬಹುದೆಂದವಳು ಯೋಚನೆಯಲ್ಲಿ ತೊಡಗಿದಳು. ಅದು ಯಾವ ಗುರಿಯನ್ನೂ ಮುಟ್ಟಲಿಲ್ಲ. ಕೈಗೆ ಆಯುಧಸಹಿತ ಬಂಧಿಯಾದ ಕ್ರಾಂತಿಕಾರಿಯನ್ನು ಯಾವ ಇನ್ಸ್‌ಪೆಕ್ಟರನೂ ಬಿಡುವುದಿಲ್ಲ. ಬಿಡುವುದಲ್ಲದೇ ಈ ವ್ಯಕ್ತಿ ನಾಗೇಶನಿಗೆ ತನ್ನ ಆಯುಧವನ್ನು ಮರಳಿಸಿದ್ದಾನೆ. ಇದರ ಮರ್ಮ ಅರ್ಥವಾಗುವುದು ಕಷ್ಟ. ಈ ರಾತ್ರಿ ಅವನ ಜಾತಕವೆಲ್ಲಾ ತನ್ನ ಕೈಗೆ ಸಿಗಬಹುದು. ಅದನ್ನು ನೋಡಿ ಅವನು ಎಂತಹ ವ್ಯಕ್ತಿ ಎಂಬುವುದು ತಿಳಿಯಬಹುದೇನೋ ಎಂದುಕೊಂಡು ಆ ವಿಷಯವನ್ನು ಅಲ್ಲಿಗೇ ಬಿಟ್ಟಳು.

ತಾವಿಲ್ಲಿ ಠಿಕಾಣಿ ಹೂಡಿ ಮೂರು ದಿನಕ್ಕೂ ಹೆಚ್ಚಾಗಿದೆ. ದೇವನಹಳ್ಳಿಯಲ್ಲಿನ ಸ್ಫೋಟದಿಂದ ಪೋಲೀಸಿನವರ, ತನ್ನ ಇತರ ಶತ್ರುಗಳ ಗಮನವನ್ನು ಬೇರೆ ಕಡೆ ತಿರುಗಿಸಬಹುದೆಂದುಕೊಂಡಿದ್ದಳು. ಆದರೆ ಈ ಉತೇಜನ ಆಗಮನದಿಂದ ಅದು ಸಾಧ್ಯವಾಗಿಲ್ಲ. ಅವರುಗಳಿಗೆ ತಾನಿನ್ನೂ ಬಂಡೇರಹಳ್ಳಿಯ ಆಸುಪಾಸಿನ ಕಾಡಿನಲ್ಲೆ ಇರುವನೆಂಬುವುದು ಗೊತ್ತಾಗಿದೆ. ಈ ಜಾಗ ಖಾಲಿ ಮಾಡುವ ಮುನ್ನ ಇಲ್ಲಿ ಇನ್ನೂ ತಾನೇನು ಮಾಡಬೇಕೆಂಬ ಕಡೆ ಗಮನ ಹರಿಸಿದಳು.

ಕಲ್ಯಾಣಿ ಆ ಚಿಂತನೆಯಲ್ಲಿ ತೊಡಗಿರುವಾಗಲೆ ಸಾಯಿ ಬಂದ. ನಾಗೇಶನನ್ನು ಅವನಲ್ಲಿ ನೋಡುತ್ತಲೆ ತನಗೆ ಹೆಚ್ಚು ಮಾತಾಡುವ ಅವಶ್ಯಕತೆ ಇಲ್ಲವೇನೋ ಎನಿಸಿತು. ನಾಗೇಶನನ್ನು ಪೋಲಿಸಿನವರು ಬಿಟ್ಟು ಬಿಟ್ಟಿರುವ ವಿಷಯ ತಿಳಿಯುತ್ತಲೇ ಅವನು ಬಂಡೇರಹಳ್ಳಿಯಲ್ಲಿನ ಬೇರೆ ಬೆಳವಣಿಗೆಗಳ ಕಡೆ ಗಮನ ಹರಿಸಿದ್ದ. ಅದೃಷ್ಟವಶಾತ್ ಅವನಿಗೆ ಗುಂಡು ತಾತಾನ ಭೇಟಿಯಾಗಿತ್ತು. ಅವರೊಡನೆ ಮಾತಾಡಿದಾಗ ತಿಳಿದ ಸಂಗತಿಗಳು ಅವನಲ್ಲಿ ದಿಗ್ಭ್ರಾಂತಿ ಹುಟ್ಟಿಸಿದ್ದವು. ಅದೇ ತಿಳಿಯಬೇಕೆಂಬಂತೆ ಮಾತಾಡಿದಳು ಕಲ್ಯಾಣಿ.

“ಇವನು ಮಾಡಿದ ಘನಕಾರ್ಯ ತಿಳಿಯಿತು. ಇನ್ನೇನಾದರೂ ವಿಷಯಗಳಿವೆಯೇ”

“ಈ ಇನ್ಸ್‌ಪೆಕ್ಟರ್ ಉತೇಜಾ ತಾ ಬಂದ ಒಂದು ದಿನದಲ್ಲೇ ಬಹಳಷ್ಟು ಸಾಧಿಸಿ ಬಿಟ್ಟಿದ್ದಾನಕ್ಕಾ!”

ಅದು ನಂಬಲಸಾಧ್ಯವೆಂಬಂತೆ ಧ್ವನಿಸಿತು ಸಾಯಿಯ ಮಾತು, ಸಾಯಿ ಹೀಗೆ ಮಾತಾಡುತ್ತಿದ್ದಾನೆಂದರೆ ಈ ಇನ್ಸ್‌ಪೆಕ್ಟರ್ ಅಪರೂಪದ ವ್ಯಕ್ತಿಯೇ ಇರಬೇಕೆಂದುಕೊಂಡು ನಿರ್ಭಾವ ದನಿಯಲ್ಲಿ ಕೇಳಿದಳು ಕಲ್ಯಾಣಿ.

“ಅದೇನು ಹೇಳು”

“ಆ ಗುಂಡು ತಾತಾ ಸಿಕ್ಕಿದ್ದುದರಿಂದ ನನಗಿಷ್ಟೆಲ್ಲಾ ತಿಳಿಯಿತು. ಇಲ್ಲದಿದ್ದರೆ…”

“ನೀನೂ ನಾಗೇಶನ ಹಾಗೆ ಭಾವುಕನಾಗುತ್ತಿರುವೆ ಮುಖ್ಯ ವಿಷಯಕ್ಕೆ ಬಾ”

ಅವನ ಮಾತನ್ನು ನಡುವೆಯೇ ಕತ್ತರಿಸಿ ಕಟುವಾದ ದನಿಯಲ್ಲಿ ಹೇಳಿದಳು ಕಲ್ಯಾಣಿ. ಆ ಮಾತಿನಿಂದ ತನ್ನ ತಾ ಸಂಭಾಳಿಸಿಕೊಂಡು ನಿಧಾನವಾಗಿ ನಿರ್ಭಾವುಕ ದನಿಯಲ್ಲಿ ಮಾತಾಡತೊಡಗಿದ ಸಾಯಿ.

“ಸಿದ್ಧಾನಾಯಕನ ಸೊಕ್ಕು ಅಣಗಿಸಿದ್ದಾನಂತೆ. ಸಾರಾಯಿಖಾನೆ ತೆಗೆಯುವ ಮುಚ್ಚುವ ವೇಳೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ವ್ಯವಸ್ಥೆ ಮಾಡಿದ್ದಾನಂತೆ. ಹಳ್ಳಿಗರಲ್ಲಿ ಒಬ್ಬನಾಗಿ ಬಿಟ್ಟಿದ್ದಾನಂತೆ. ಹಿರಿಯರೊಡನೆ ಅತಿ ಗೌರವ ಮರ್ಯಾದೆಗಳಿಂದ ಮಾತಾಡುತ್ತಿದ್ದಾನಂತೆ. ಅಚವ್ವ ಸಾಯುವ ಸ್ಥಿತಿಯಲ್ಲಿದ್ದಾಗ ಪೋಲಿಸ್ ಜೀಪಿನಲ್ಲಿ ಅವಳನ್ನು ಆಸ್ಪತ್ರೆಗೆ ಸಾಗಿಸಿದ್ದಾನಂತೆ. ಇವತ್ತು ರಾತ್ರಿ ಹಳ್ಳಿಯ ಮೈದಾನದಲ್ಲಿ ಹಾಡು, ಭಜನೆಗಳ ಕಾರ್ಯಕ್ರಮವಿದೆಯಂತೆ. ಅದರಲ್ಲಿ ಕ್ರಾಂತಿಗೀತೆಗಳೂ ಇವೆಯಂತೆ. ಹಳ್ಳಿಯಲ್ಲಿ ಅವನನ್ನು ಹೊಗಳುವವರೇ, ಯಾರು ಅವನ ಬಗ್ಗೆ ಕೆಟ್ಟ ಮಾತಾಡಿದ್ದನ್ನು ನಾ ಕೇಳಿಲ್ಲ”

ಅವನ ಉದ್ದನೆಯ ಮಾತು ಮುಗಿಯುತ್ತಲೇ ಉತ್ಸಾಹದ ದನಿಯಲ್ಲಿ ಉದ್ಗರಿಸಿದ ನಾಗೇಶ

“ನಾ ಹೇಳಿರಲಿಲ್ಲವೇ ಅಕ್ಕ!”

“ನೀ ಬಾಯಿ ಮುಚ್ಚು ಮಾತಾಡಿಸಿದರಷ್ಟೆ ಮಾತಾಡು” ಕಟುವಾಗಿ ಆಜ್ಞಾಪಿಸಿದಳು ಕಲ್ಯಾಣಿ. ಅವಳು ತನ್ನದೇ ಯೋಚನೆಯಲ್ಲಿ ಸ್ವಲ್ಪ ಹೊತ್ತು ತೊಡಗಿ ಕೇಳಿದಳು.

“ನನ್ನ ಬಗ್ಗೆಯಾಗಲಿ ಕ್ರಾಂತಿಕಾರಿಯರ ಬಗ್ಗೆಯಾಗಲಿ ಅವನು ಯಾವ ಮಾತನ್ನೂ ತೆಗೆಯಲಿಲ್ಲವಂತೆಯೋ?”

ಇಲ್ಲ! ಆದರೆ ಒಂದು ಸಲ ಮಾತ್ರ ತಾತನೆದುರು ಹೇಳಿದ್ದನಂತೆ, ಈ ಕಲ್ಲಕ್ಕ ಅದ್ಭುತ ಹೆಣ್ಣಿನ ಹಾಗಿದ್ದಾಳೆ. ಆಕೆಯನ್ನು ಒಂದು ಸಲ ಭೇಟಿಯಾದರೆ ನನ್ನ ಪುಣ್ಯವೆಂದು” ಆಕೆಯ ಮಾತು ಮುಗಿಯುತ್ತಲೇ ಈಸಲ ಪೂರ್ತಿ ನಿರ್ಭಾವುಕ ದನಿಯಲ್ಲಿ ಹೇಳಿದ ಸಾಯಿ. ಬಾಯಿಗೆ ಬಂದ ಯಾವುದೋ ಮಾತನ್ನು ನುಂಗಿಕೊಂಡ ನಾಗೇಶ.

ಈ ಉತೇಜ್ ಎಂತಹ ವ್ಯಕ್ತಿ ಇರಬಹುದೆಂಬ ಯೋಚನೆಯಲ್ಲಿಯೇ ತೊಡಗಿದಳು ಕಲ್ಯಾಣಿ. ಒಬ್ಬೊಬ್ಬರಾಗೇ ದಳದ ಸದಸ್ಯರೆಲ್ಲರೂ ಬಂದರು. ಉತೇಜ್‌ನ ಬಗೆಗಿನ ಪೂರ್ತಿ ವಿವರ ತರಲು ಹೋಗಿದ್ದ ಹರಿಗಾಗಿ ಕಾಯುತ್ತಿದ್ದಳು. ಕಲ್ಯಾಣಿ, ಯಾವ ಕೆಲಸವೂ ಇಲ್ಲದೇ ಕುಳಿತ ದಳದವರಿಗೆ ತಮ್ಮ ತಮ್ಮ ಆಯುಧಗಳನ್ನು ಶುಚಿಗೊಳಿಸಿಕೊಳ್ಳುವಂತೆ ಹೇಳಿದಳು. ಅವಳ ಮೈ ಮನದ ತುಂಬಾ ಆ ಇನ್ಸ್‌ಪೆಕ್ಟರನೇ ತುಂಬಿದ್ದ. ಹರಿ ತಂದ ವಿವರ ಓದಿ ತಮ್ಮ ಠಿಕಾಣಿ ಬದಲಾಯಿಸುವ ನಿರ್ಣಯ ತೆಗೆದುಕೊಂಡರು.
* * *

ತನ್ನ ಪೇದೆಯರು ಲಂಚ ತೆಗೆದುಕೊಳ್ಳುತ್ತಿದ್ದಾರೆಂದು ಆ ಯುವಕರು ಹೇಳಿಹೋದ ಬಳಿಕ ಗುಂಡುತಾತನ ಮನೆಗೆ ಹೋಗಿದ್ದ ತೇಜಾ, ಅವನನ್ನು ಅಲ್ಲಿ ಕಂಡು ಎಲ್ಲರಿಗೂ ಆಶ್ಚರ್ಯ! ಒಬ್ಬ ಪೋಲೀಸ್ ಅಧಿಕಾರಿ ತಾತನ ಮನೆಗೆ ಬರುವದೆಂದರೇನು? ಅವರು ಪೋಲಿಸ್ ಸ್ಟೇಷನಿನ್ನಲ್ಲಿ ಕುಳಿತೀ ಯಾರನ್ನು ಬೇಕಾದರವರನ್ನು ಕರೆಸಿಕೊಳ್ಳಬಹುದು. ಅಂತಹವರು ಒಬ್ಬ ಬಡವನ ಮನೆಗೆ ಬಂದಿದ್ದಾರೆಂದರೆ ಸಾಮಾನ್ಯ ಮಾತಲ್ಲ. ಸೊಕ್ಕು ಸೆಡವು ಇಲ್ಲದ ಸರಳ ಮನುಷ್ಯ. ತಮ್ಮ ತಮ್ಮ ಮನೆಯ ಬಾಗಿಲುಗಳಲ್ಲಿ ಗುಂಪುಗೂಡಿ ಅವನು ತಾತನ ಮನೆಯಲ್ಲಿ ಹೋಗುವುದನ್ನು ನೋಡಿದ್ದರು.

ಗುಂಡು ತಾತನೊಡನೆ ಅಲ್ಲಿಯ ಯುವಕರ ಬಗ್ಗೆ ಮಾತು ತೆಗೆದಿದ್ದ ತೇಜ. ಅವನಲ್ಲಿ ಒಬ್ಬರಿಬ್ಬರು ಹಾಡುಗಳನ್ನು ಚೆನ್ನಾಗಿ ಬರೆಯುವವರಿದ್ದಾರೆಂದು ತಿಳಿದಾಗಲೇ ಅವನ ತಲೆಯಲ್ಲಿ ಆ ರಾತ್ರಿ ಮಾಡಬೇಕಾದ ಕಾರ್ಯಕ್ರಮ ರೂಪುಗೊಂಡಿತ್ತು. ಅಲ್ಲಿ ಕಾಫಿಯ ಉಪಚಾರವಾದ ಮೇಲೆ ಆ ಹಿರಿಯನೊಡನೆ ಹೊರಬಿದ್ದಿದ್ದ. ಮುಖ್ಯ ದಾರಿಗೆ ಬಂದಾಗ ಅಂತಹ ಪ್ರತಿಭೆ ಇರುವ ಎಲ್ಲ ಹುಡುಗರನ್ನೂ ತನ್ನ ಮನೆಗೆ ಕರೆತರುವಂತೆ ಹೇಳಿ, ಅವನು ತನ್ನ ಮನೆಯ ದಾರಿ ಹಿಡಿದಿದ್ದ.

ಅಡುಗೆಯ ಮನೆಯ ಕೆಲಸದಾಳು ಗಂಗವ್ವ ಮನೆಯನ್ನು ಶುಭ್ರಗೊಳಿಸುವದಲ್ಲದೇ ಅದಕ್ಕೆ ಒಂದು ಮನೆಯ ಕಳೆಯನ್ನು ತಂದಿದ್ದಳು. ದಣಿದಿದ್ದ ಅವನು ಆರಾಮ ಕುರ್ಚಿಯಲ್ಲಿ ಕುಳಿತ ಹತ್ತು ನಿಮಿಷದಲ್ಲೇ ಕಾಫಿಯ ಲೋಟವನ್ನು ಹಿಡಿದು ಬಂದಳವಳು. ಅಕ್ಕ ಬದುಕಿದ್ದರೆ ಇದೇ ರೀತಿ ತನ್ನ ನೋಡಿಕೊಳ್ಳುತ್ತಿದ್ದಳೇನೋ ಎನಿಸಿತು. ಅವಳು ಕ್ಯಾನ್ಸರಿನಿಂದ ಅಕಾಲ ಮರಣಕ್ಕೆ ಗುರಿಯಾಗಿದ್ದಳು. ತೆಗೆದುಕೊಳ್ಳುತ್ತಾ ಕೇಳಿದ ತೇಜಾ,

“ನಿನಗೆಷ್ಟು ಜನ ಮಕ್ಕಳು ಗಂಗವ್ವ”

“ನಾಲ್ಕು ಜನ ಧಣಿ! ಎಲ್ಲರದೂ ಮದುವೆಯಾಗಿದೆ. ಒಬ್ಬನೇ ಗಂಡು ಮಗ ಅವನ ಜತೆ ಇದ್ದೇನೆ”

ಕಾಫಿಯ ಲೋಟ ಕೊಟ್ಟ ಅವಳು ದೂರ ನಿಂತು ತಲೆತಗ್ಗಿಸಿ ಮಾತಾಡಿದ್ದಳು.

“ನೀನು ಬೆಳಿಗ್ಗೆ ಇಲ್ಲಿ ಬಂದು ಎಲ್ಲಾ ಕೆಲಸ ನೋಡಿಕೊಂಡು ರಾತ್ರಿಯ ಅಡುಗೆ ಮಾಡಿಟ್ಟು ಹೋಗಲು ಸಾಧ್ಯವೆ. ಅದಕ್ಕೆ ನಾನು ತಕ್ಕ ಸಂಬಳ ಕೊಡುತ್ತೇನೆ”

ತೇಜಾ ಹೇಳಿದ ಆ ಮಾತಿಗೆ ಕೂಡಲೇ ಅವಳಿಂದ ಉತ್ತರ ಬಂತು

“ತಾತ ಹಾಗೇ ಮಾಡಲು ಹೇಳಿದ್ದಾರೆ, ಅದಕ್ಕೆ ಬೆಳಗ್ಗೆ ಬಂದ ನಾನು ಮನೆಗೇ ಹೋಗಿಲ್ಲ”

ಬೆಳಗಿನಿಂದ ಇವಳು ಇಲ್ಲೇ ಇದ್ದಾಳೆಂಬ ವಿಷಯ ತನಗ್ಯಾಕೆ ಹೊಳೆಯಲಿಲ್ಲ ಎಂದುಕೊಂಡಾಗ ತಾತ ತನ್ನ ಎಲ್ಲಾ ಬೇಕುಬೇಡಗಳ ಕಡೆ ಗಮನವಿಟ್ಟಿದ್ದಾನೆ ಎನಿಸಿ ಅವನನ್ನು ಮತ್ತೊಮ್ಮೆ ಮೆಚ್ಚಿಕೊಳ್ಳದೇ ಇರಲಾಗಲಿಲ್ಲ. ಇನ್ನೂ ಏನಾದರೂ ಮಾತಾಡುವುದಿದೆಯೋ ಎಂಬಂತೆ ನಿಂತಿದ್ದ ಗಂಗವ್ವನಿಗೆ ಕೊನೆಯ ಮಾತೆಂಬಂತೆ ಹೇಳಿದ

“ಯಾವ ಸಂಕೋಚವೂ ಇಲ್ಲದೇ ನನಗೆ ಮಾಡಿದ ಅಡುಗೆಯನ್ನ ಊಟ ಮಾಡು. ಎಷ್ಟು ಸಲ ನಿನಗೆ ಬೇಕೋ ಅಷ್ಟು ಸಲ ಕಾಫಿ ಮಾಡಿಕೊಂಡು ಕುಡಿ ಹಣವೇನಾದರೂ ಬೇಕಾದರೆ ಕೇಳು, ಈಗ ಏನಾದರೂ ಬೇಕೆ?”

“ಬೇಡ ಧಣಿ! ಈಗೇನೂ ಬೇಡ, ತಿಂಗಳಾದ ಮೇಲೆ ಕೊಡಿ”

“ಹೋಗು! ಒಟ್ಟಿನಲ್ಲಿ ನಾ ಹೇಳುವುದು ಇಷ್ಟೆ ಇದನ್ನು ನಿನ್ನ ಮನೆಯೆಂದುಕೋ”

“ಇದು ನಿಮ್ಮ ದೊಡ್ಡ ಮನಸ್ಸು ಸ್ವಾಮಿ” ಎಂದ ಅವಳು ಅಡುಗೆಮನೆಯ ಕಡೆ ಹೋದಳು.

ತೇಜಾ ಕಾಫಿ ಕುಡಿದು ಮುಗಿಸುವುದರಲ್ಲಿ ಎಂಟು ಹತ್ತು ಯುವಕರೊಡನೆ ಬಂದ ಗುಂಡುತಾತ. ಅವರೆಲ್ಲ ಒಂದಲ್ಲ ಒಂದು ಪ್ರತಿಭೆ ಇರುವವರೇ. ಅವರಲ್ಲಿ ಇಬ್ಬರು ಕವಿಗಳು. ಅವರಿಗೆ ಲಂಚದಿಂದ ಆಗುತ್ತಿರುವ ದೇಶದ ಅಧೋಗತಿಯ ಕುರಿತು, ಕುಡಿತದಿಂದ ಆಗುತ್ತಿರುವ ಸಂಸಾರಗಳಂಥ ಪತನ ಕುರಿತು, ಹೆಣ್ಣುಗಳ ಹುಚ್ಚಿನಿಂದ ಹುಟ್ಟಿಕೊಳ್ಳುತ್ತಿರುವ ಮಹಾಮಾರಿಯ ಕುರಿತು ಕುರ್ಚಿಯ ಆಸೆಗೆ ಅಧಿಕಾರಕ್ಕೆ ಅಂಟಿಕೊಂಡಿರುವಾಗ ಭ್ರಷ್ಟ ರಾಜಕಾರಣಿಗಳು ದೇಶವನ್ನು ಮಾರಿಕೊಳ್ಳುವ ಸ್ಥಿತಿಗೆ ತಲುಪಿರುವ ಕುರಿತು ಹಾಡುಗಳನ್ನು ಆಡುಭಾಷೆಯಲ್ಲಿ ಬರೆಯಲು ಹೇಳಿದ. ಆವರೆಗೆ ಆ ಯುವಕರನ್ನು ಯಾರೂ ಮರ್ಯಾದೆಯಿಂದ ಮಾತಾಡಿಸಿ ಕೂಡ ಇರಲಿಲ್ಲ. ಒಬ್ಬ ಇನ್ಸ್‌ಪೆಕ್ಟರ್ ತಮ್ಮನ್ನು ಮನೆಗೆ ಕರೆಸಿಕೊಂಡು ಕವನ, ಹಾಡು ಬರೆಯುವಂತೆ ಹೇಳುವುದು ಅವರಲ್ಲಿ ಎಲ್ಲಿಲ್ಲದ ಉತ್ಸಾಹ ಹುಟ್ಟಿಸಿತು. ನೋಡು ನೋಡುತ್ತಿದ್ದಂತೆ ಕಾಗದ ಪೆನ್ನುಗಳು ಬಂದವು. ಆ ಇಬ್ಬರೂ ಯುವಕರು ಒಂದೊಂದು ಮೂಲೆಗೆ ಕುಳಿತು ತಮಗೆ ತೋಚಿದ್ದನ್ನು ಬರೆಯತೊಡಗಿದರು. ಆಗಲೇ ಗುಂಡುತಾತನಿಗೆ ಆ ಸಂಜೆ ಆರೂವರೆಗೆ ಹಳ್ಳಿಯ ಮೈದಾನದಲ್ಲಿ ಹಾಡು, ನಾಟಕ, ಹಾಸ್ಯದ ಸಾಂಸ್ಕೃತಿಕ ಕಾರ್ಯಕ್ರಮವಿದೆ ಎಂದು ಊರಿಗೆಲ್ಲಾ ಡಂಗುರ ಸಾರುವಂತೆ ಹೇಳಿದ ತೇಜ.

ಅವರಲ್ಲಿ ಒಬ್ಬ ಹಾಸ್ಯಚಟಾಕಿಗಳನ್ನು ಹಾರಿಸುವಲ್ಲಿ, ಬೇರೆಯವರ ದನಿಯಲ್ಲಿ ಅವರಂತೆಯೇ ಮಾತಾಡುವಲ್ಲಿ ಪ್ರತಿಭೆ ಹೊಂದಿದವ. ಅವನಿಗೆ ಆ ರಾತ್ರಿ ತಾ ಹೇಳಿದ ವಿಷಯಗಳ ಬಗ್ಗೆ ಆ ಊರಿಗೆಲ್ಲಾ ಗೊತ್ತಿರುವ ವ್ಯಕ್ತಿಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುವುದನ್ನು ಅವರ ದನಿಯಲ್ಲಿ ಅವರುಗಳು ಕೈಕಾಲು, ದೇಹವನ್ನು ಆಡಿಸುವಂತೆಯೇ ಆಡಿಸಿ ತೋರಿಸಲು ಹೇಳಿದ. ಒಂದು ಕಡೆ ಹೋಗಿ ಅದನ್ನು ಅಭ್ಯಾಸ ಮಾಡುವಲ್ಲಿ ತೊಡಗಿದನವ.

ಬಂದ ಯುವಕರಲ್ಲಿ ಕಾನ್ಸ್ ಟೇಬಲರು ಲಂಚ ತೆಗೆದುಕೊಳ್ಳುತ್ತಿದ್ದಾರೆಂದು ಹೇಳಲು ಬಂದವರೂ ಇದ್ದರು. ಆ ಇಬ್ಬರಲ್ಲಿ ಒಬ್ಬನಿಗೆ ಲೇಖಕನಾಗುವ ಹುಮ್ಮಸ್ಸು. ತೇಜಾನ ಸಹಾಯ ಸಲಹೆಯಿಂದ ಬಂದು ಮೂರು ಪಾತ್ರಗಳ ನಾಟಕ ಸಿದ್ಧವಾಗತೊಡಗಿತು.

ಈ ನಡುವೆ ಗಂಗವ್ವನಿಗೆ ಎಲ್ಲರಿಗೂ ಕಾಫಿ ತಿಂಡಿಗಳನ್ನು ಒದಗಿಸುವ ಏರ್ಪಾಟು ಮಾಡಲು ಹೇಳಿದ. ಅದಕ್ಕೆ ಪಾತ್ರೆಗಳು ಬೇಕು. ಆ ವ್ಯವಸ್ಥೆ ತಾವು ನೋಡಿಕೊಳ್ಳುವುದಾಗಿ ಹೇಳಿದರು ಯುವಕರು ಉತ್ಸಾಹದಿಂದ ಹೊರಹೋದರು.

ಉತೇಜ್‌ನ ಬಂಡೇರಹಳ್ಳಿಯ ಮನೆಯಲ್ಲಿ ಆ ದಿನ ಸಡಗರವೋ ಸಡಗರ. ಕವಿಗಳು ತಾವು ಬರೆದ ಹಾಡನ್ನು ಹಾಡಿ ತೋರಿಸಿದಾಗ ಅದನ್ನು ತಿದ್ದಿ ಅಸಲು ಭಾವ, ವಿಷಯ ಹೊರತರುವಂತೆ ಸಲಹೆಗಳನ್ನು ಕೊಟ್ಟ. ಇಬ್ಬರು ಯುವಕರು ಓಡಿ ಎಲ್ಲಿಂದಲೋ ಡೋಲು ಡಪ್ಪುಗಳನ್ನು ತಂದರು.

ಆ ದೊಡ್ಡ ಮನೆಯಲ್ಲಿ ಎಲ್ಲ ಬಗೆಯ ಕಾರ್ಯಕ್ರಮಗಳ ರಿಹರ್ಸಲ್‌ನ ಗದ್ದಲವೋ ಗದ್ದಲ, ಹಲವಾರು ಜನ ಹೆಣ್ಣು, ಗಂಡು, ಮಕ್ಕಳು ಯಾವ ತಾರತಮ್ಯವೂ ಇಲ್ಲದಂತೆ ನಡೆದಿರುವುದನ್ನು ನೋಡಲು ಬಾಗಿಲಲ್ಲಿ ಗುಂಪುಗೂಡಿದರು. ಅವರೆಲ್ಲಾ ಒಳಗೆಲ್ಲಿ ನುಗ್ಗುತ್ತಾರೋ ಎಂಬಂತಹ ಸ್ಥಿತಿ ಬಂದಾಗ ಆ ಯುವಕರಲ್ಲೇ ಮೂವರು ಅವರನ್ನು ನಿಯಂತ್ರಿಸಲು ಹೋದರು.

ತನ್ನ ತಲೆಯಲ್ಲಿ ಬಹು ಚಿಕ್ಕ ರೂಪ ತಾಳಿದ ಒಂದು ವಿಚಾರ ಹೀಗೆ ಮಾರ್ಪಡುವದೆಂದು ತೇಜಾ ಊಹಿಸಿರಲಿಲ್ಲ. ಅವನೂ ಆ ಯುವಕರಲ್ಲಿ ಒಬ್ಬನಾಗಿ ಪ್ರತಿಯೊಂದಕ್ಕೂ ತನ್ನ ಸಲಹೆ, ಸಹಕಾರಗಳನ್ನು ಒದಗಿಸಿದ.

ಆ ಸಂಜೆ ಆರೂವರೆಗೆ ಬಂಡೇರಹಳ್ಳಿಯ ಮೈದಾನದಲ್ಲಿ ಮನರಂಜನೆಯ ಕಾರ್ಯಕ್ರಮವಿದೆ ಎಂದು ಯಾರಿಗೂ ಸಾರಿ ಹೇಳುವ ಅವಶ್ಯಕತೆಯೇ ಇರಲಿಲ್ಲ. ಬಾಯಿಯಿಂದ ಬಾಯಿಗೆ ಆ ಮಾತು ಉರಲ್ಲೆಲ್ಲಾ ಹಬ್ಬಿಬಿಟ್ಟಿತು.

ಮೈದಾನದ ಒಂದು ಕೊನೆಗೆ ತಾತ ತನ್ನ ಕೆಲ ನಡುವಯಸ್ಸಿನ ಸ್ನೇಹಿತರನ್ನು ಕಲೆ ಹಾಕಿ ಬಂಡೆಗಳನ್ನು ಜೋಡಿಸಿ ಅದರ ಮೇಲೆ ದೊಡ್ಡ ದೊಡ್ಡ ಮೂರು ಹಲಗೆಗಳನ್ನು ಹಾಕಿ ಎತ್ತರದ ಸ್ಟೇಜನ್ನು ತಯಾರಿಸಿದ. ವಯಸ್ಸಿನ ಬೇಧವಿಲ್ಲದೆ ಹಣ್ಣು, ಗಂಡಿನ ಬೇಧವಿಲ್ಲದೇ ಎಲ್ಲರಿಗೂ ಈ ಕಾರ್ಯಕ್ರಮ ಹೇಗೆ ನಡೆಯುತ್ತದೆಯೋ ಎಂದು ನೋಡುವ ಉತ್ಸಾಹ.

ಆರರ ಸುಮಾರಿಗೆ ಒಂದು ಸಲ ಮೈದಾನವನ್ನು ನೋಡಿ ಬಂದ ತೇಜ. ಆಗಲೇ ಅಲ್ಲಿ ಜನ ಸೇರುವುದು ಆರಂಭವಾಗಿತ್ತು. ಅವನಿಗೆ ಕಾರ್ಯಕ್ರಮ ಹೇಗೆ ನಡೆಯುವದೋ ಎಂಬ ಆತಂಕ. ಅದರೊಡನೆಯೇ ಇಲ್ಲಿ ನಡೆಯುತ್ತಿರುವ ಜನರನ್ನು ಕಂಡು ಮೊದಲೆಂದೂ ಇಲ್ಲದಂತಹ ಹುಮ್ಮಸ್ಸು, ತೇಜಾನಿಗೆ ತನ್ನ ಕಾಲೇಜಿನ ದಿನಗಳ ನೆನಪಾಯಿತು. ಕಾರ್ಯಕ್ರಮದ ಸಮಯ ಹತ್ತಿರವಾಗುತ್ತಿದ್ದಂತೆ ಅವನ ಆತಂಕ ಹೆಚ್ಚತೊಡಗಿತು.

ಸಂಜೆ ಆರೂವರೆಯ ಹೊತ್ತಿಗೆ ಬಂಡೇರಹಳ್ಳಿಯ ನಾಗರಿಕರಿಂದ ತುಂಬಿಬಿಟ್ಟಿತ್ತು ಮೈದಾನ. ಕತ್ತಲಾದರೆ ಆ ಜಾಗವನ್ನು ಬೆಳಗಿಸಲು ಪೆಟ್ರೋಮ್ಯಾಕ್ಸ್‌ಗಳನ್ನು ತರಿಸಿದ್ದ ತೇಜಾ. ಆ ಕಾರ್ಯಕ್ರಮಕ್ಕೆ ಆಗುತ್ತಿರುವ ಖರ್ಚೆಲ್ಲಾ ಅವನದೇ.

ಮೊದಲೇ ಮಾತಾಡಿಕೊಂಡಂತೆ ಗುಂಡುತಾತ ವೇದಿಕೆಯ ಮೇಲೆ ಬಂದು ಜನರಿಗೆ ಸುಮ್ಮನಾಗುವಂತೆ ಕೈ ಮಾಡಿ ಹೇಳಿದ.

“ಇದು ಮೊದಲ ಬಾರಿ ನಮ್ಮ ಹಳ್ಳಿಯವರೇ ನಮ್ಮ ಸುಖದುಃಖಗಳನ್ನು ಹಂಚಿಕೊಳ್ಳುವ ಕಾರ್ಯಕ್ರಮ. ಹೊಟ್ಟೆ ತುಂಬಾ ನಗುವ, ನೋವಿನಿಂದ ಕಣ್ಣಲ್ಲಿ ನೀರು ತರಿಸುವ ಕಾರ್ಯಕ್ರಮ. ಎರಡೇ ದಿನದಲ್ಲಿ ಬಂಡೇರಹಳ್ಳಿಯವರೇ ಆಗಿಬಿಟ್ಟ ಇನ್ಸ್‌ಪೆಕ್ಟರ್ ಸಾಹೇಬರು ರೂಪಿಸಿದ ಕಾರ್ಯಕ್ರಮ. ನೋಡಿ ನಕ್ಕು, ನಲಿದು ಮನೆಗೆ ಹೋಗಿ ಮಲಗುವಾಗ ಇದರ ಬಗ್ಗೆ ಯೋಚಿಸಿ. ಈಗ ನಮ್ಮ ಯುವಕರಿಂದ ಹಾಡುಗಳು” ಎಂದ ತಾತ ಎರಡೂ ಕೈಗಳನ್ನು ಮೇಲೆತ್ತಿ ನಮಸ್ಕರಿಸಿದ.
ಕೂಡಲೇ ಕಿವಿ ಕಿವುಡಾಗುವಂತಹ ಚಪ್ಪಾಳೆ ಸದ್ದು.

ಅವನ ಪುಟ್ಟ ಭಾಷಣ ಮುಗಿದ ಕೂಡಲೇ ಡೋಲು, ಡಪ್ಪುಗಳನ್ನು ಹಿಡಿದು ಯುವಕರು ಹಾಡಲು ವೇದಿಕೆ ಏರಿದರು, ಕರತಾಡನ ನಿಂತಿತು. ತಾತ ತೇಜಾನ ಹತ್ತಿರ ಬರುತ್ತಲೇ ಅಸಮಾಧಾನದ ದನಿಯಲ್ಲಿ ಕೇಳಿದ

“ನನ್ನ ಹೆಸರು ಯಾಕೆ ತೆಗೆದಿರಿ? ಅದು ಬೇಡವೆಂದು ನಾನೆಷ್ಟು ಸಲ ಹೇಳಿದ್ದೆ”

“ನಿನ್ನ ಹಸರು ಎಲ್ಲಿ ತೆಗೆದ ಬರೀ ಇನ್ಸ್‌ಪೆಕ್ಟರ್ ಎಂದೆನಷ್ಟೆ” ಹಗುರ ದನಿಯಲ್ಲಿ ಹೇಳಿದ ತಾತ.

“ಅದನ್ನು ಕೂಡ ಹೇಳಬಾರದೆಂದಿದ್ದೆ” ತನ್ನ ಅಸಮಾಧಾನ ಹೊರಗೆಡಹಿದ ತೇಜಾ.

“ನಾ ಹೇಳಬೇಕೆಂದುಕೊಂಡಿರಲಿಲ್ಲ. ಮನದಾಳದಲ್ಲಿದ್ದ ಮಾತು ತಾನೇ ತಾನಾಗಿ ಬಾಯಿಗೆ ಬಂದು ಬಿಟ್ಟಿತು.”

ಆ ಮಾತು ಅಲ್ಲಿಗೆ ನಿಂತು ಇಬ್ಬರ ಗಮನವೂ ವೇದಿಕೆಯ ಮೇಲೆ ಹರಿಯಿತು. ಜಾನಪದ ಶೈಲಿಯ ಹಾಡು ನಗೆ ಉಕ್ಕಿಸುವಂತಿತ್ತು. ಹೆಣ್ಣುಗಳ ಚಪಲದಿಂದ ಏಡ್ಸ್ ಅಂಟಿಸಿಕೊಂಡು ಹಾಸಿಗೆ ಹಿಡಿದವನ ವೃತ್ತಾಂತ. ಅದನ್ನು ಅವನೇ ಹೇಳುತ್ತಿರುವಂತೆ ಹಾಡನ್ನು ಕಟ್ಟಲಾಗಿತ್ತು. ಮೊದಲುನಗಿಸಿ ನಗಿಸಿ ಏಡ್ಸ್ ಆದ ಮೇಲಿನ ಶೋಚನೀಯ ಸ್ಥಿತಿ ಎಂತಹವರ ಮನವನ್ನ ಆಗಲಿ ಕದಡುವಂತಿತ್ತು. ಕೊನೆಗೆ ಹಂಡತಿ ಮಕ್ಕಳು ಸಂಸಾರವೇ ಹೇಗೆ ಗತಿ ಎಂಬ ಮಾತು. ಹಾಗೇ ವಿವಿಧ ವಿಷಯಗಳ ಮೇಲೆ ಮೂರು ಹಾಡುಗಳಾದವು. ಡೋಲು ಡಪುಗಳ ಸಹಕಾರದಿಂದ ಹಾಡಿದ ಆ ಹಾಡುಗಳು ನೆರೆದ ಜನರನ್ನು ಕಟ್ಟಿ ಹಿಡಿದವು. ಅದರ ಬಳಿಕ ಮಿಮಿಕ್ರಿ. ಆ ಯುವಕ ಅದನ್ನು ತಾತನ ಭಾಷಣದಿಂದಲೇ ಆರಂಭಿಸಿದ. ಅವನ ಮುಖದ ಹಾವಭಾವ, ಕೈಗಳು ಆಡಿಸುವುದು, ದನಿ ಅಚ್ಚೊತ್ತಿದಂತೆ ತಾತನ ಹಾಗೇ ಇತ್ತು. ಅವನ ಪ್ರತಿ ಮಾತಿಗೂ ಜನರಲ್ಲಿ ನಗೆಯ ಅಲೆ ಏಳುತ್ತಿತ್ತು. ನಂತರ ಸಿದ್ದಾನಾಯಕನ ಪಾತ್ರ. ಅವನೇ ತನ್ನದೇ ಸಾರಾಯಿ ಅಂಗಡಿಯಲ್ಲಿ ಕುಳಿತು ಕುಡಿದು ಇನ್ಸ್‌ಪೆಕ್ಟರರೊಡನೆ ಹೇಗೆ ವರ್ತಿಸುದ್ದಾನೆ ಹೇಗೆ ಮಾತಾಡುತ್ತಿದ್ದನೆಂಬ ನಟನೆ. ಪ್ರತಿ ಮಾತು ನಾಯಕ್ ಮತ್ತು ಉತ್ತೇಜ್‌ನೇ ಆಡಿದಂತಿತ್ತು. ಅದನ್ನು ಕೇಳುತ್ತಿದ್ದ ತೇಜಾನಿಗೆ ತಾನೆ ಅಲ್ಲಿ ಮಾತಾಡುತ್ತಿದ್ದೇನೇನೋ ಎಂಬಂತೆನಿಸಿತು. ಅವನ ಒಂದೊಂದು ಮಾತಿಗೆ ಜನ ಸಮುದಾಯದಿಂದ ನಗೆಬುಗ್ಗೆ ಎದ್ದು ಮುಂದಿನ ಮಾತು ಕೇಳಲು ಜನ ಮೌನವಾಗುತ್ತಿದ್ದರು.

ಅದರನಂತರ ಬಂಡೇರಹಳ್ಳಿಯ ಸಮಸ್ಯೆಗಳನ್ನು ಕುರಿತಾದುದೇ ಒಂದು ಮೂರು ಪಾತ್ರಗಳ ನಾಟಕ, ಅದೂ ಜನರ ಮನವನ್ನು ರಂಜಿಸಿತು. ಕೊನೆಗೆ ಇನ್ಸ್‌ಪೆಕ್ಟರ್‌ ಉತ್ತೇಜ್ ವೇದಿಕೆಯ ಮೇಲೆ ಬಂದು ಎರಡು ಮಾತು ಹೇಳಬೇಕೆಂದು ಕೋರಿಕೊಂಡ ತಾತ.

ವೇದಿಕೆಯ ಮೇಲೆ ಬಂದ ತೇಜಾ ಎಲ್ಲರಿಗೂ ನಮಸ್ಕರಿಸಿ ಹೇಳಿದ “ನಾವು ಪೋಲಿಸಿನವರು ನಿಮ್ಮ ಶತ್ರುಗಳಲ್ಲ. ಅವರನ್ನು ನೋಡಿ ಭಯಪಡಬೇಕಾಗಿಲ್ಲ. ನಾವು ನಿಮ್ಮ ಸ್ನೇಹಿತರು ಕಷ್ಟದ ಸಮಯದಲ್ಲಿ ಸಹಾಯ ಮಾಡುವವರು ಎಂತಹದೇ ಸಮಸ್ಯೆ ಇದ್ದರೂ, ಯಾವ ಸಮಯದಲ್ಲಾದರೂ ನೀವು ನನ್ನ ಬಳಿ ಬರಬಹುದು. ನಿಮ್ಮ ಸಹಾಯಕ್ಕೆ ನಾನು ಸಿದ್ಧನಿರುತ್ತೇನೆ. ನಾವೆಲ್ಲಾ ಸೇರಿ ಬಂಡೇರಹಳ್ಳಿಯನ್ನು ಸ್ವರ್ಗ ಮಾಡುವಂತಹ ಕನಸು ಕಾಣುವ… ನಮಸ್ಕಾರ”

ಮಾತು ಮುಗಿಸಿದ ತೇಜಾ ಕೆಳಗಿಳಿಯುತ್ತಿದ್ದಂತೆ ಜನಸಮೂಹವೆಲ್ಲಾ ಎದ್ದು ನಿಂತು ಚಪ್ಪಾಳೆ ಬಾರಿಸುತ್ತಿದ್ದರು. ಅವನಿಗಾಗೇ ಕಾದಂತೆ, ಮಾತಾಡಿದ ತಾತ, ಯುವಕರು, ನಡು ವಯಸ್ಕರು ಎಲ್ಲರೂ ಅವನನ್ನು ಸುತ್ತುವರೆದರು. ಬಂಡೇರಹಳ್ಳಿಯ ಇತಿಹಾಸದಲ್ಲೇ ಅಂತಹ ಕಾರ್ಯಕ್ರಮವಾಗಿಲ್ಲವೆಂದು ಹೊಗಳಿದರು.

ಕಾರ್ಯಕ್ರಮದ ಆರಂಭದಿಂದ ಕೊನೆಯವರೆಗೆ ಕಂಬಳಿ ಹೊದ್ದ ಕಲ್ಯಾಣಿ ಎಲ್ಲವನ್ನೂ ನೋಡಿದ್ದಳೆಂಬುವುದು ಕೆಲವರಿಗೆ ಮಾತ್ರ ಗೊತ್ತಿತ್ತು.
* * *

ಎಲ್ಲರೊಡನೆ ಮಾತು ಮುಗಿಸಿ ತೇಜಾ ಮಲಗಿದಾಗ ಹನ್ನೆರಡು ಸಮೀಪಿಸುತ್ತಿತ್ತು ಸಮಯ. ಮನಸ್ಸಿಗೆ ಒಂದು ತರಹದ ತೃಪ್ತಿ. ಆ ಯುವಕರು ಹೇಳಿದ ಕೆಲಸವನ್ನು ಇಂದು ಮಾಡಲಾಗಲಿಲ್ಲವಲ್ಲ ಎಂಬ ಅಸಂತೋಷ ಈಗಲೂ ಕಳ್ಳತನದಿಂದ ಸಾರಾಯಿ ಮಾರಾಟವಾಗುತ್ತಿರಬಹುದೆಂಬ ಯೋಚನೆ ಅವನನ್ನು ಅಸ್ಪಸ್ಥನನ್ನಾಗಿ ಮಾಡಿತು. ಬಹಳ ದಣಿವಿನ ಕಾರಣ ಈ ಯಾವ ಯೋಚನೆಗಳೂ ಅವನನ್ನು ಹೆಚ್ಚು ಹೊತ್ತು ಕಾಡಲಿಲ್ಲ. ಅವನಿಗರಿವಿಲ್ಲದ ಹಾಗೆ ನಿದ್ದೆ ಅವನನ್ನು ಆವರಿಸಿಬಿಟ್ಟಿತು.

ಯಾರೋ ಬಲವಾಗಿ ಅಲಗಿಸುತ್ತಿರುವಂತಾಗಿ ಎಚ್ಚರಗೊಂಡ ತೇಜ. ಬೆಡ್‌ಲ್ಯಾಂಪು ಸಾಕಷ್ಟು ಪ್ರಕಾಶ ಬೀರಿರಲಿಲ್ಲ. ಕಣ್ಣಗಲಿಸಿ ಮಂಚದ ಬದಿಗೆ ನಿಂತ ವ್ಯಕ್ತಿಯನ್ನು ನೋಡಿದ. ಅವನ ಮುಖದ ಮೇಲೆ ನೆರಳು ಬಿದ್ದಿತು. ಯಾರೆಂಬುವುದು ಗುರುತಿಸಲಾಗಲಿಲ್ಲ. ಅವನು ಎದ್ದು ಕುಳಿತಾಗ ಮಾತಾಡಿದನಾ ವ್ಯಕ್ತಿ

“ನೀನು ಕಲ್ಲಕ್ಕನನ್ನು ಭೇಟಿಯಾಗುವೆಯಾ”

ಕಲ್ಲಕ್ಕ ಎಂದ ಕೂಡಲೇ ಅವನ ನಿದ್ದೆಯ ಗುಂಗಲ್ಲಾ ಮಾಯವಾಯಿತು. ಕೂಡಲೇ ಹೇಳಿದ.

“ಹೂಂ! ಭೇಟಿಯಾಗುತ್ತೇನೆ”

“ನಡಿ ಹೋಗುವ” ನಿರ್ಭಾವ ದನಿಯಲ್ಲಿ ಬಂತವನ ಮಾತು. ಲಗುಬಗೆಯಿಂದ ಎದ್ದ ತೇಜ ಬಟ್ಟೆ ಬದಲಿಸುತ್ತಿರುವಾಗ ಹೇಳಿದನಾ ವ್ಯಕ್ತಿ.

“ನಿನ್ನ ರಿವಾಲ್ವರ್‌ಗಾಗಿ ಹುಡುಕಬೇಡ. ಅದು ನನ್ನ ಬಳಿ ಇದೆ”

ಆಶ್ಚರ್ಯವಾಯಿತು ತೇಜಾನಿಗೆ ಆದರೂ ಏನೂ ಹೇಳಲಿಲ್ಲ. ಕೈಗಡಿಯಾರ ನೋಡಿದ. ನಾಲ್ಕು, ಎಷ್ಟು ಅನಾಯಾಸವಾಗಿ ಈ ವ್ಯಕ್ತಿ ಬಾಗಿಲು ತೆಗೆದುಕೊಂಡು ಬಂದಿರಬಹುದು ಎಂದು ಯೋಚಿಸುತ್ತಲೇ ಕಾಲಿಗೆ ಬೂಟುಗಳನ್ನು ಏರಿಸಿದ. ಅದು ಮುಗಿದ ಮೇಲೆ ಸಿದ್ಧವಾದವನಂತೆ ಹೇಳಿದ

“ನಡಿ”

“ಗಡಿಯಾರವನ್ನೂ ಬಿಚ್ಚಿಡು. ಅದೂ ಬೇಡ” ಎಂದನಾ ವ್ಯಕ್ತಿ. ಅದು ಯಾವ ಅಪಾಯಕಾರಿ ವಸ್ತುವೆಂದು ಯೋಚಿಸುತ್ತಲೇ ಗಡಿಯಾರ ಬಿಚ್ಚಿ ಹಾಸಿಗೆಯ ದಿಂಬಿನ ಕೆಳಗಿಟ್ಟ. ಅದನ್ನು ನೋಡಿ ಹೇಳಿದ ಆ ವ್ಯಕ್ತಿ

“ನೀ ಮುಂದೆ ನಡಿ”

ಮರು ಮಾತಿಲ್ಲದೇ ಅವನ ಆಜ್ಞೆಯನ್ನು ಪಾಲಿಸಿದ. ಇಬ್ಬರೂ ಹೊರಬಂದ ಮೇಲೆ ಅವನೇ ಮುಂಬಾಗಿಲಿನ ಬೋಲ್ಟನ್ನು ಎಳೆದ.

ಇನ್ನೂ ಗಾಡಾಂಧಕಾರ ಆವರಿಸಿಯೇ ಇತ್ತು. ದಾರಿ ತೋರಕನಂತೆ ಮುಂದೆ ಬಂದ ಆ ವ್ಯಕ್ತಿ. ಅವನ ಹಿಂದೆ ನಡೆಯುತ್ತಾ ತೇಜ ಕಾಡನ್ನು ಹೊಕ್ಕ. ಆ ಕಾಡಿನಲ್ಲಿ ಹೊಸ ವ್ಯಕ್ತಿ ಸ್ವಲ್ಪ ದೂರ ಹೋದರೆ ಮತ್ತೆ ಬಂಡೇರಹಳ್ಳಿಯನ್ನು ಸೇರುವುದು ಕಷ್ಟ. ಹಾಗೇ ಅವನು ಕಾಡಿನಲ್ಲೇ ಅಲೆಯುತ್ತಿರಬೇಕೆಂಬುವುದು ತೇಜಾನಿಗೆ ಗೊತ್ತಿತ್ತು. ಕಾಡಿನಲ್ಲಿ ನಾಲ್ಕು ಹೆಜ್ಜೆ ನಡೆದ ಮೇಲೆ ಅವನನ್ನು ಕರೆದೊಯ್ಯಲು ಬಂದವ ಹೇಳಿದ

“ಸರಿಯಾಗಿ ನನ್ನ ಹಿಂದೆ ಬಾ. ಇಲ್ಲದಿದ್ದರೆ ಅಪಾಯ”

ಅದಕ್ಯಾವ ರೀತಿಯಲ್ಲೂ ಪ್ರತಿಕ್ರಿಯಿಸದೇ ಅವನನ್ನು ಅಂಟಿಕೊಂಡ ನಡೆಯುತ್ತಿರುವಂತೆ ಹೆಜ್ಜೆ ಹಾಕುತ್ತಿದ್ದ.

ಗಾಡಾಂಧಕಾರದಲ್ಲಿ ಕಾಡು ತನ್ನದೇ ಶಬ್ದಗಳನ್ನು ಹೊರಡಿಸುತ್ತಿತ್ತು. ಮುಂದೆ ನಡೆಯುತ್ತಿದ್ದ ವ್ಯಕ್ತಿ ದಾರಿ ತನಗೆ ಚೆನ್ನಾಗಿ ಗೊತ್ತಿರುವಂತೆ ನಡೆಯುತ್ತಿದ್ದ. ಆಗಾಗ ಅವರ ದೇಹಗಳಿಗೆ ಅಕ್ಕಪಕ್ಕದ ಟೊಂಗೆಗಳು ಸವರಿ ಹೋಗುತ್ತಿದ್ದವು. ಒಂದೊಂದು ಸಲ ಮುಂದೆ ನಡೆಯುತ್ತಿದ್ದವನ ನಡುಗೆಯ ವೇಗ ಕಡಿಮೆಯಾಗುತ್ತಿತ್ತು. ಅಸ್ಪಷ್ಟವಾಗಿ ಅವನ ಆಕಾರ ತೇಜಾನಿಗೆ ಕಾಣುತ್ತಿತ್ತು. ಅಡ್ಡ ಬರುತ್ತಿರುವ ಗಿಡಗಂಟೆಗಳಿಂದ ತಪ್ಪಿಸಿಕೊಳ್ಳಲು ಅವನು ಬಗ್ಗುತ್ತಿದ್ದ. ಅದನ್ನು ಗಮಿಸಿದ ತೇಜಾ ಕೂಡ ಹಾಗೇ ಮಾಡುತ್ತಿದ್ದ.

ಹದವಾದ ಚಳಿ ಕಾಡಿನಲ್ಲಿ ಇನ್ನೂ ಹೆಚ್ಚಾಗಿತ್ತು. ನಡುಗೆ ವೇಗ ತೇಜಾನ ದೇಹವನ್ನು ಬಿಸಿ ಮಾಡಿತು. ದಾರಿ ಒಂದೊಂದು ಸಲ ಪರ್ವತದ ಮೇಲೇರುತ್ತಿರುವಂತೆ ಕಂಡರೆ ಮತ್ತೊಂದು ಸಲ ಯಾವುದೋ ಕಂದಕದಲ್ಲಿ ಇಳಿಯುತ್ತಿರುವಂತಹ ಭಾಸ ಹುಟ್ಟಿಸುತ್ತಿತ್ತು. ಆಗಿಂದಾಗ ಅವನ ದಾರಿ ತೋರಕ ಹೇಗೆ ನಡೆಯಬೇಕೆಂಬ ಎಚ್ಚರಿಕೆಯ ಮಾತುಗಳನ್ನು ಹೇಳುತ್ತಿದ್ದ. ಅವನ ಆದೇಶವನ್ನು ಪಾಲಿಸುತ್ತಿದ್ದ ತೇಜಾ.

ಹಾಗೆ ಅವನು ಎಷ್ಟು ಹೊತ್ತು ನಡೆದಿರಬಹುದೆಂಬ ಅಂದಾಜು ಇರಲಿಲ್ಲ ತೇಜಾನಿಗೆ. ಹಕ್ಕಿಗಳು ಎಚ್ಚರಗೊಂಡ ಸದ್ದು ಕಾಡನ್ನೆಲ್ಲಾ ತುಂಬುತ್ತಾ ಬರತೊಡಗಿತು. ಬರೀ ಆ ಚಿಲಿಪಿಲಿ ಶಬ್ದಗಳೇ ಕಿವಿಗಳನ್ನು ತುಂಬಿದ್ದಂತೆ ಭಾಸವಾಗುತ್ತಿತ್ತು. ಇದು ಬೆಳಗಾಗುತ್ತಿರುವ ಸೂಚನೆಗಳು ಅಂದರೆ ತಾವು ಅರ್ಧ ಗಂಟೆ ನಡೆದಿರಬಹುದೇ, ಮುಕ್ಕಾಲು ಗಂಟೆ ನಡೆದಿರಬಹುದೆ ಅಥವಾ ಸುಮಾರು ಒಂದು ಗಂಟೆಯಿಂದ ನಡೆಯುತ್ತಲೇ ಇದ್ದೇವೆಯೇ ಎಂಬ ಲೆಕ್ಕಾಚಾರ ಹಾಕುವುದರಲ್ಲಿ ತೊಡಗಿದ ತೇಜ. ಎಷ್ಟು ಹೊತ್ತು ಆಗಿರಬಹುದೆಂಬ ನಿಖರ ಅಂದಾಜು ಹಾಕುವುದರಲ್ಲಿ ಅಸಫಲವಾಯಿತವನ ಮೆದುಳು. ಆಗ ಅವನಿಗೆ ಈ ವ್ಯಕ್ತಿ ತನಗೆ ಗಡಿಯಾರವನ್ನು ಯಾಕೆ ಜತೆಗೆ ತರಬೇಡವೆಂದು ಹೇಳಿದ್ದಾನೆಂಬುವುದು ಹೊಳೆಯಿತು. ಇಷ್ಟು ಚಿಕ್ಕ ವಿಷಯ ಅರಿಯಲು ಇಷ್ಟು ಹೊತ್ತೇ ಎಂದು ತನ್ನ ತಾನು ಬೈದುಕೊಂಡ.

ಹಕ್ಕಿಗಳ ಚಿಲಿಪಿಲಿಯೊಡನೆ ಕತ್ತಲನ್ನು ಓಡಿಸುವ ಯತ್ನವನ್ನು ಆರಂಭಿಸುತ್ತಿದ್ದಂತೆ ಕದಡಿತು ಬೆಳಕು. ಈಗಲೇ ತೇಜಾ ಹಗುರವಾಗಿ ಬೆವರತೊಡಗಿದ. ಈ ನಡುಗೆ ಸಾಕು ಎಲ್ಲಾದರೂ ಕುಳಿತು ಸ್ವಲ್ಪ ವಿಶ್ರಮಿಸಬೇಕು ಎನಿಸುತ್ತಿತ್ತು. ದಾರಿ ಮೇಲೆ ಹೋಗುತ್ತಿದ್ದುದಂತಹ ಭಾಸ. ಹಾಗೆ ಹೇಳಿದ ದಾರಿ ತೋರಕ ವ್ಯಕ್ತಿ

“ಸರಿಯಾಗಿ ನನ್ನ ಹಿಂದೆಯೇ ನಡಿ, ಹೆಜ್ಜೆ ಸ್ವಲ್ಪವಾದರೂ ಅತ್ತಿತ್ತ ಬಿದ್ದರೆ ಸಾಯುತ್ತೀ”

ಮೊದಲು ಅಕ್ಕಪಕ್ಕದಲ್ಲಿ ಕಂದಕಗಳಿರಬಹುದೇ ಎಂಬ ಯೋಚನೆ ಬಂತು. ಕೆಲಕ್ಷಣಗಳ ಚಿಂತನೆಯ ಬಳಿಕ ಸುತ್ತೂ ಲ್ಯಾಂಡ್‌ಮೈನ್ಸ್ ಹರಡಲಾಗಿರಬಹುದು ಎಂದುಕೊಂಡ. ಒಂದು ವೇಳೆ ಅದೇ ನಿಜವಾಗಿದ್ದರೆ ತಾನೇ ಅಲ್ಲ ಅವನೂ ಸಾಯುತ್ತಾನೆ ಎನಿಸಿತ್ತು. ಅವನ ಅನಿಸಿಕೆ ನಿಜವೆಂಬಂತೆ ಮುಂದೆ ನಡೆಯುತ್ತಿರುವ ವ್ಯಕ್ತಿಯ ನಡುಗೆಯ ವೇಗ ಕಡಿಮೆಯಾಯಿತು. ಅಂದರೆ ತಾವು ಗುರಿಯನ್ನು ಸಮೀಪಿಸುತ್ತಿದ್ದೇವೆ ಎಂದುಕೊಂಡ ತೇಜಾ. ಒಂದು ಪರ್ವತಶಿಖರದ ಮೇಲೆ ಏರುತ್ತಿರುವಂತಹ ಹಾಗೇ ಎಷ್ಟು ಹೊತ್ತು ಮೇಲೇರುತ್ತಾ ಹೋದವೆಂಬ ಅರಿವಿಲ್ಲ. ನಿರಂತರ ನಡುಗೆಯ ಹಿಂಸೆಯ ಕಾರಣ ಅದರ ಬಗ್ಗೆ ಯೋಚಿಸಲೂ ನಿರಾಕರಿಸಿತವನ ಮೆದುಳು.

“ಬನ್ನಿ, ಮಿಸ್ಟರ್ ಉತ್ತೇಜ್! ಬನ್ನಿ. ನಾವು ದೇಶವನ್ನು ಉದ್ಧಾರ ಮಾಡಲು ಎಷ್ಟು ಕಷ್ಟಪಡುತ್ತಿದ್ದೇವೆಂಬುದು ನಿಮಗೀಗಲಾದರೂ ಗೊತ್ತಾಗಿರಬಹುದು”

ಪ್ರಭಾವಶಾಲಿ ಹೆಣ್ಣು ಕಂಠ ಕೇಳಿಸಿತು. ಎದುರಿಗೆ ನಡೆಯುತ್ತಿದ್ದವ ಬದಿಗೆ ಸರಿದ. ಚಿಕ್ಕ ಮೈದಾನದಲ್ಲಿ ಕಲ್ಲು ಬಂಡೆಗಳಿರುವುದು ಕಾಣುತ್ತಿತ್ತು. ಬಿಗಿಯಾದ ಜೀನ್ಸ್ ಮತ್ತು ಜಾಕೆಟ್ ತೊಟ್ಟ ಹೆಣ್ಣು ಬಂಡೆಗಾನಿ ನಿಂತಿದ್ದಳು. ಅವಳು ಹಣ್ಣೆಂದು ಗುರುತಿಸಲು ಎರಡು ಸಂಕೇತಗಳು ಅವಳು ತಲೆಗೆ ಕಟ್ಟಿದ ಕೂದಲ ಗಂಟು ಮತ್ತು ಉಬ್ಬಿದ ಎದೆ ಭಾಗ, ನಡುಗೆಯ ತನ್ನ ದಣಿವನ್ನು ಆರಿಸಿಕೊಳ್ಳುತ್ತಾ ಸುತ್ತೂ ನೋಡಿದ. ಗಿಡಗಂಟೆಗಳಿಂದ ಮುಕ್ತವಾದ ಚಿಕ್ಕ ಮೈದಾನ, ಕಲ್ಯಾಣಿ ನಿಂತ ಕಡೆ ಎತ್ತರಕ್ಕೇರಿದ ಬಂಡೆಗಳ ಸಮೂಹ. ಒಂದು ಬಂಡೆ ಎತ್ತರಕ್ಕೇರಿದ್ದರೆ ಅದರ ಅಕ್ಕಪಕ್ಕದಲ್ಲಿ ಎತ್ತರ ತಗ್ಗುತ್ತಾ ಬಂದು ನೆಲಕ್ಕೆ ಸಮಾನವಾದಂತಹ ಬಂಡೆಗಳು. ತೇಚಾನಿಗದು ಪೈಂಟರ್ ಒಬ್ಬ ಊಹಿಸಬಹುದಾದಂತಹ ಸುಂದರ ದೃಶ್ಯದಂತೆ ಕಂಡಿತು. ಏದುಸಿರು ಕಡಿಮೆಯಾದ ಮೇಲೆ ಹೇಳಿದ ತೇಜಾ.

“ನಿನ್ನ ನೋಡಲು ಬಂದೆ ಕಲ್ಯಾಣಿ, ಇಷ್ಟು ಕಷ್ಟಗಳನ್ನು ಅನುಭವಿಸುತ್ತಾ ನೀನು ಹೇಗೆ ಬದುಕುತ್ತಿರುವೆ ಎಂಬುದನ್ನು ನೋಡಲು ಬಂದೆ”

“ಕೂಡಿ! ದಣಿವನ್ನು ಆರಿಸಿಕೊಳ್ಳಿ. ನಿಮ್ಮೊಡನೆ ಕೆಲ ವಿಷಯಗಳು ಮಾತಾಡಬೇಕೆನಿಸಿತು. ಅದಕ್ಕೆ ಕರೆಸಿದೆ… ಇದೊಂದು ಹಿಲ್ ಸ್ಟೇಷನ್ ಎಂದುಕೊಳ್ಳಿ. ಈಗ ನಿಮಗೆ ಕಾಫಿ ಬರುತ್ತದೆ”

ನೆಲದ ಮೇಲೆ ಕುಳಿತ ತೇಜಾನಿಗೆ ಅಲ್ಲೇ ಮುಗಿಸಿಬಿಡಬೇಕೆನಿಸಿತು. ಆ ಯೋಚನೆಯನ್ನು ತಕ್ಷಣ ಬದಿಗೆ ತಳ್ಳಿ ಮತ್ತೆ ಸುತ್ತೂ ನೋಡಿದ. ಅವಳ ವಿನಹ ಅವಳ ತಂಡದವರಾರೂ ಕಾಣಲಿಲ್ಲ. ಸಮಯ ವ್ಯರ್ಥ ಮಾಡಬಾರದೆಂದು ಕೊಳ್ಳುತ್ತಾ ಮಾತಾಡಿದ.

“ನಾಗೇಶ ಹೇಗಿದ್ದಾನೆ?”

“ಕಾಡಿನಲ್ಲಿ ಪ್ರಾಣಿಗಳಂತೆ ಅಲೆಯುವವರಿಗೆ ಏನೂ ಆಗುವುದಿಲ್ಲ. ಅವನನ್ನು ನೀವು ಸರಿಯಾಗಿ ನೋಡಿಕೊಂಡಿರಿ ಅದಕ್ಕೆ ಥ್ಯಾಂಕ್ಸ್ ಹೇಳಬೇಕೆ ಬೇಡವೇ ಎನ್ನುವುದೇ ನನಗಿನ್ನೂ ಅರ್ಥವಾಗಿಲ್ಲ”

ಅದಕ್ಕೆ ತೇಜಾ ಉತ್ತರಿಸಲು ಹೋದಾಗ ಒಬ್ಬ ಅವನ ಕೈಗೆ ಕಾಫಿಯ ಲೋಟ ಕೊಟ್ಟು ಮಾಯವಾದ. ತನ್ನ ಮನೆಗೆ ಬಂದ ಅತಿಥಿಯನ್ನು ಕೇಳುವಂತೆ ಕೇಳಿದಳು ಕಲ್ಯಾಣಿ.

“ನೀರು ಬೇಕೇ?”

“ಬೇಡ!… ಅಂತೂ ನೀವಿಲ್ಲಿ ಫೈವ್‌ಸ್ಟಾರ್ ಹೋಟಲಿನಲ್ಲಿ ಇದ್ದ ಹಾಗೆ ಇದ್ದಂತೆ ಕಾಣುತ್ತದೆ” ಉತೇಜನ ಮಾತಿನಲ್ಲಿ ಅಚ್ಚರಿ, ಅಣಕದ ಭಾವಗಳಿದ್ದವು. ಅದಕ್ಕೆ ಕೂಡಲೇ ಬಂತು ಕಲ್ಯಾಣಿಯಿಂದ ಪ್ರತಿಕ್ರಿಯೆ.

“ನಾನು ಜನರನ್ನು ಲೂಟಿ ಮಾಡಿ ಮಜಾ ಮಾಡುತ್ತಿಲ್ಲ ಉತೇಜ್. ಈ ವ್ಯಂಗ್ಯದ ಮಾತುಗಳನ್ನು ನಿಮ್ಮ ಎಸ್.ಪಿ. ಮತ್ತು ಸಿದ್ದಾನಾಯಕ್‌ರಿಗೆ ಹೇಳಿ. ಇಲ್ಲಿ ನನ್ನ ಅಭಿಮಾನಿಗಳು, ಹಿತೈಷಿಯರು ದೇಶದ ಹಿತ ಬಯಸುವವರು ನನಗೆ ಬೇಕಾದುದೆಲ್ಲವನ್ನು ಒದಗಿಸುತ್ತಾರೆ”

ತಕ್ಷಣ ತಾನು ಹಾಗೆ ಮಾತಾಡಿದ್ದು ಸರಿಯಲ್ಲವೆನಿಸಿತು ತೇಜಾನಿಗೆ.

ತನ್ನ ಯೋಜನೆಯ ಪ್ರಕಾರ ಮೊದಲು ತಾನವಳ ವಿಶ್ವಾಸವನ್ನು ಸಂಪಾದಿಸಬೇಕು. ಮುಂದಿನ ಮಾತುಗಳಲ್ಲಿ ಅದನ್ನು ತಿದ್ದಿಕೊಳ್ಳುವ ಎಂದುಕೊಳ್ಳುತ್ತಾ ಕಾಫಿ ಕುಡಿಯುವ ಕಡೆ ಗಮನಹರಿಸಿದ. ದಣಿವಿನ ಕಾರಣ ಅದವನಿಗೆ ಬಹು ಆಹ್ಲಾದಕರ ಅನುಭವ ನೀಡುತ್ತಿತ್ತು.

ಬೆಳಕು ಹೆಚ್ಚಾಗಿ ಸೂರ್ಯ ಉದಯಿಸಲಿರುವ ಲಕ್ಷಣಗಳು ಕಂಡುಬರತೊಡಗಿದವು. ಕಾಫಿಯ ಗ್ಲಾಸನ್ನು ಕೆಳಗಿಟ್ಟ ತೇಜಾ ಕೆಲಕ್ಷಣ ತದೇಕಚಿತ್ತದಿಂದ ಕಲ್ಯಾಣಿಯನ್ನು ನೋಡಿದ. ಆ ಮನಮೋಹಕ ದೃಶ್ಯದ ಹಿನ್ನೆಲೆಯಲ್ಲಿ ಅವಳಿನ್ನೂ ಸುಂದರವಾಗಿ ಕಂಡಳು.

“ನೀವು ಫೂಲನ್‌ದೇವಿಯ ಹಾಗೆ ಇರಬಹುದೆಂದುಕೊಂಡಿದ್ದೆ. ಇಷ್ಟು…”

“ನಾಟಕ ಬೇಡ ಉತೇಜ್! ನೀವು ನನ್ನ ಬಗ್ಗೆ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿಯೇ ಇಲ್ಲಿ ಬಂದಿದ್ದೀರಿ. ನನ್ನ ಹಲವಾರು ಫೋಟೋಗಳನ್ನು ನೀವು ನೋಡಿರಬಹುದು. ಮೊದಲು ನಾ ನಿಮ್ಮ ಜಾತಕವನ್ನು ಓದುತ್ತೇನೆ ಮುಂದೆ ನಾವು ಮಾತಾಡಲು ಅದು ಸುಲಭವಾಗಬಹುದು” ಎಂದ ಕಲ್ಯಾಣಿ ಜೀನ್ಸ್ ಕಿಸೆಯಿಂದ ಒಂದು ಕಾಗದ ತೆಗೆದು ಓದಲಾರಂಭಿಸಿದಳು.

“ನಿಮ್ಮ ತಂದೆ ತಾಯಿ ತೀರಿಕೊಂಡಿದ್ದಾರೆ. ಇದ್ದ ಒಬ್ಬ ಅಕ್ಕ ಕ್ಯಾನ್ಸರ್‌ನಿಂದ ಮರಣಿಸಿದ್ದಾಳೆ. ಕಾಲೇಜು ಮುಗಿಯುತ್ತಲೇ ಯಾರ ಶಿಫಾರಸು ಇಲ್ಲದೇ ನೀವು ಪೊಲೀಸ್ ಖಾತೆಯನ್ನು ಸೇರಿದಿರಿ. ಅಪರಾಧಿಗಳನ್ನು ಸದೆಬಡಿದು ದೇಶವನ್ನು ಉದ್ಧಾರ ಮಾಡುವ ಮಹತ್ವಾಕಾಂಕ್ಷೆ ನಿಮ್ಮಲ್ಲಿ ತುಂಬಿತ್ತು. ಲಂಚ ತೆಗೆದುಕೊಳ್ಳುವವರನ್ನು ಹೇಸಿಸಿಕೊಳ್ಳುತ್ತಿದ್ದೀರಿ. ಅದರಿಂದ ನಿಮಗೆ ಒಂದು ಪೋಲೀಸ್ ಸ್ಟೇಷನ್ನಿನಿಂದ ಇನ್ನೊಂದಕ್ಕೆ ವರ್ಗವಾಗಲಾರಂಭವಾಯಿತು. ಎಸ್.ಐ. ಆಗಿದ್ದಾಗ ಒಂದು ಸಲ ದೇವಿಯಾದವ ಅನಿರಿಕ್ಷಿತವಾಗಿ ಕಳ್ಳಮಾಲಿನೊಡನೆ ನಿಮಗೆ ಸಿಕ್ಕಿಬಿದ್ದ. ಅವನಾಗ ಒಬ್ಬ ಮರಿ ರೌಡಿಯಾಗಿದ್ದ. ಅವನನ್ನು ನೀವು ಪೋಲಿಸ್ ಸ್ಟೇಷನ್ನಿಗೆ ತಂದು ತದಕುತ್ತಿದ್ದಾಗ ಕಮೀಷನರ್ ಫೋನ್ ಮಾಡಿ ಅವನನ್ನು ಬಿಟ್ಟು ಬಿಡುವಂತೆ ಆಜ್ಞಾಪಿಸಿದರು. ಅವನು ನಿಮಗೆ ಬಾಯಿಗೆ ಬಂದ ಹಾಗೆ ಬೈದು ರಾಜಾರೋಷವಾಗಿ ಮುಕ್ತನಾದ. ಈಗ ನಾನವನನ್ನು ಮುಗಿಸಿದ್ದು ನಿಮ್ಮಲ್ಲಿ ಸಂತಸ ಹುಟ್ಟಿಸಿರಬೇಕು. ಒಬ್ಬ ಮಂತ್ರಿಯ ಮಗನ ಕೊಲೆಗಾರನನ್ನು ಒಂದು ತಿಂಗಳೊಳಗೆ ಪತ್ತೆ ಹಚ್ಚಿ ಬಂದಿಸಿದಕಾರಣ ನಿಮಗೆ ಬೇಗ ಪ್ರಮೋಷನ್ ಬಂತು. ಎಸ್.ಐ.ನಿಂದ ಇನ್ಸ್‌ಪೆಕ್ಟರ್ ಆದಿರಿ. ಆದರೆ ಲಂಚದ ವಿರುದ್ಧ ಹೋರಾಡುವ ನಿಮ್ಮ ಅವಗುಣವನ್ನು ನೀವು ಬಿಡಲಿಲ್ಲ. ಅದಕ್ಕೆ ಈಗ ಕಂಟ್ರೋಲ್‌ರೂಂನಲ್ಲಿ ಅಂದರೆ ಸೆಂಟ್ರಲ್ ಕ್ರೈಮ್ ಸ್ಟೇಷನ್ನಿನಲ್ಲಿದ್ದಿರಿ… ಈಗ ಮಾತು ಮುಂದುವರಿಸುವುದು ಸುಲಭ”

ಬರೆದುಕೊಂಡ ಭಾಷಣ ಓದುವಂತಹ ಅವಳ ಶೈಲಿಯೂ ಆಕರ್ಷಕವಾಗಿತ್ತು. ಅದು ನಿಂತಕೂಡಲೇ ಚಪ್ಪಾಳೆ ತಟ್ಟಿ ಹೇಳಿದ ತೇಜ

“ಶಭಾಶ್ ಬಹಳ ಚೆನ್ನಾಗಿ ಭಾಷಣ ಮಾಡುತ್ತೀರಿ. ಅದಕ್ಕಾಗೇ ನಾಗೇಶನಂತಹ ಹಸುಳೆಯರು ನಿಮ್ಮ ಬಲೆಯಲ್ಲಿ ಸಿಕ್ಕಿದ್ದಾರೆ”

“ಈಗ ನಿಮಗೆ ಗೊತ್ತಾಗಿರಬಹುದು. ನನ್ನ ಅಭಿಮಾನಿಯರು ಎಲ್ಲೆಲ್ಲಿ ಹರಡಿದ್ದಾರೆಂಬುವುದು. ನಾನ್ಯಾರನ್ನೂ ಬಲೆಯಲ್ಲಿ ಹಾಕಿಕೊಳ್ಳುವುದಿಲ್ಲ, ಅವರೇ ನನ್ನೆಡೆ ಸೆಳೆಯಲ್ಪಡುತ್ತಾರೆ…” ಅವನ ಮಾತು ಮುಗಿಯುತ್ತಲೇ ಹೇಳಿದಳವಳು.

“ಅದನ್ನೇ ಹೇಳಬಯಸಿದ್ದೇನೆ ಕಾಲ್ಯಾಣಿ! ನಿನ್ನ ಈ ಜನಪ್ರಿಯತೆಯನ್ನು ನೀನ್ಯಾಕೆ ಸದುಪಯೋಗಪಡಿಸಿಕೊಳ್ಳುವುದಿಲ್ಲ. ಹಿಂಸೆಯಿಂದ ಏನನ್ನೂ ಸಾಧಿಸಲಾಗುವುದಿಲ್ಲ. ಪ್ರೇಮ, ಪ್ರೀತಿ, ವಿಶ್ವಾಸದಿಂದ ಏನನ್ನು ಬೇಕಾದರೂ ಸಾಧಿಸಬಹುದು. ಕೂಡಲೇ ಮಾತಾಡಿದ ತಜಾ ಅವನಿಗರಿವಿಲ್ಲದಂತೆ ಏಕವಚನವನ್ನು ಉಪಯೋಗಿಸಿದ್ದ. ಅವಳೂ ಏಕವಚನದಲ್ಲಿ ಮಾತಾಡುವುದೇ ಸರಿ ಎಂದುಕೊಂಡು ಹೇಳಿದಳು.

“ನೀತಿ, ನಿಜಾಯತಿ ಕಾರ್ಯದಕ್ಷತೆಯಿಂದ ನೀ ಹೇಳಿದ ಹಾಗೆ ಪ್ರೀತಿ, ಪ್ರೇಮ, ವಿಶ್ವಾಸದಿಂದ ನೀನೇನು ಸಾಧಿಸಿರುವೆ ಹೇಳು. ಒಬ್ಬ ಕೊಲೆಗಾರನನ್ನು ಬಂಧಿಸಿದ್ದಕ್ಕಾಗಿ ನಿನಗೆ ಪ್ರಮೋಷನ್ ಸಿಕ್ಕಿದೆ. ಎಷ್ಟು ಜನ ಪೋಲಿಸಿನವರು ಎಷ್ಟು ಜನ ಕೊಲೆಗಾರರನ್ನು ಬಂಧಿಸಿಲ್ಲ. ಅವರಿಗೆಲ್ಲಾ ಪ್ರಮೋಶನ್ ಸಿಕ್ಕಿದೆಯೇ! ಇಲ್ಲ. ನಿನಗೆ ಸಿಕ್ಕಿದೆ ಯಾಕೆಂದರೆ ನೀನೊಬ್ಬ ಮಂತ್ರಿಯ ಮಗನ ಕೊಲೆಗಾರನನ್ನು ಬಂಧಿಸಿರುವಿ. ಈ ದೇಶದಲ್ಲಿ ನೀತಿ ನಿಜಾಯಿತಿಯಿಂದ ಏನನ್ನೂ ಸಾಧಿಸಲಾಗುವುದಿಲ್ಲ. ಭಯ! ಆಡಳಿತ ವರ್ಗದವರಲ್ಲಿ ಭಯವನ್ನು ಹುಟ್ಟಿಸಿ ಏನನ್ನಾದರೂ ಸಾಧಿಸಬಹುದು. ಅದೇ ನಾ ನಿನಗೆ ಹೇಳಲು ಕರೆಸಿದ್ದು, ನಿನಗೆ ಹೆಂಡತಿ ಮಕ್ಕಳ ಗೋಳಿಲ್ಲ. ಈ ಪ್ರೀತಿ ಪ್ರೇಮಗಳ ಹುಚ್ಚು ಅರ್ಥಹೀನ ಭಾವುಕತೆಯನ್ನೂ ಮನಸ್ಸಿನಿಂದ ತೆಗೆದುಹಾಕಿ ನಮ್ಮಲ್ಲಿ ಸೇರಿಕೋ ನಮ್ಮಿಂದಾದಷ್ಟು ಬಡಬಗ್ಗರ ನಿರ್ಗತಿಕರ ಸಹಾಯ ಮಾಡೋಣ… ಯೋಚಿಸುತ್ತಿರು. ನಾನೀಗ ಬರುತ್ತೇನೆ. ಅಡ್ಡಾಡಬೇಕೆನಿಸಿದರೆ ಇಲ್ಲೇ ಅಡ್ಡಾಡುತ್ತಿರು. ದೂರ ಹೋಗಬೇಡ ಅಪಾಯ”

ತನ್ನ ಉದ್ದನೆಯ ಮಾತು ಮುಗಿಸಿ ಕಲ್ಲು ಬಂಡೆಗಳ ಹಿಂದೆ ಮರೆಯಾದಳು ಕಲ್ಯಾಣಿ.

ತಾ ಕುಳಿತಲ್ಲಿಂದ ಎದ್ದ ತೇಜಾ ಮೈಮುರಿದು ಬಂದು ಒಂದು ಬಂಡೆಗೆ ತನ್ನ ಬೆನ್ನನು ಆನಿಸಿ ಕುಳಿತ. ಈಗ ತನ್ನ ವಾದವನ್ನು ಮುಂದಿಡುವುದು ಹೇಗೆ, ಅವರನ್ನು ದಾರಿಗೆ ತರುವುದು ಹೇಗೆ ಎಂಬ ಬಗ್ಗೆ ಯೋಚಿಸುತ್ತಿದ್ದ ತೇಜಾ, ಮನುಷ್ಯ ಸ್ವಭಾವದ ಎಲ್ಲಾ ಭಾವನೆಗಳಿಂದ ಮುಕ್ತರಾಗಿ ತಮ್ಮ ಗುರಿಯನ್ನು ಸಾಧಿಸುವದೊಂದೇ ಈ ಕ್ರಾಂತಿಕಾರಿಯರ ಉದ್ದೇಶ. ಅದನ್ನು ಕದಡಿ ನೋಡಬೇಕು ಎಂದುಕೊಂಡ. ಅದೇ ಚಿಂತನೆಯಲ್ಲಿದ್ದಾಗ ಬಂಡೆಗಳ ಹಿಂದಿನಿಂದ ಬಂದ ಕಲ್ಯಾಣಿ ಹೇಳಿದಳು.

“ನಿನ್ನ ಸಾಂಸ್ಕೃತಿಕ ಕಾರ್ಯಕ್ರಮ ನೋಡಿದೆ. ಒಳ್ಳೇ ಸಿನಿಮಾ ಒಂದು ಒದಗಿಸಬಹುದಾದಂತಹ ಮೋಜನ್ನದು ಒದಗಿಸಿತು ಅದು. ಎಷ್ಟು ಸುಲಭವಾಗಿ ಜನರನ್ನು ಕೆಲ ಸಮಯವಾದರೂ ಅವರ ಬಡತನದ ಬವಣೆಯಿಂದ ದೂರ ಒಯ್ಯಬಹುದಲ್ಲವೇ… ನಿನ್ನ ಭಾಷಣ ಕೂಡ ಚೆನ್ನಾಗಿತ್ತು. ಅದರ ಫಲ ಆದಷ್ಟು ಬೇಗ ನಿನಗೆ ಸಿಗುತ್ತದೆ.”

“ಅಂದರೆ?” ಅಚ್ಚರಿಯ ದನಿಯಲ್ಲಿ ಕೇಳಿದ.

“ಅಂದರೆ ಇದು ಬಂಡೇರಹಳ್ಳಿ, ಪಟ್ಟಣವಲ್ಲ. ಅದೇನಾಗುವುದು ಎಂದು ನಿನಗೆ ಗೊತ್ತಾಗುತ್ತದೆ.. ಅದು ಹೋಗಲಿ ಮುಖ್ಯ ವಿಷಯಕ್ಕೆ ಬರುವ ನಾ ಹೇಳಿದರ ಬಗ್ಗೆ ಏನನ್ನಾದರೂ ಯೋಚಿಸಿದ್ದೀಯಾ?” ಆ ವಿಷಯ ಮುಖ್ಯವಲ್ಲವೆಂಬಂತೆ ಮೊದಲಿನ ಮಾತಿಗೆ ಬಂದಳು ಕಲ್ಯಾಣಿ.

ಇಲ್ಲೀಗ ನಿನ್ನ ಸಹಚರರು, ಸಹಾಯಕರು ಯಾರಾದರೂ ಇದ್ದಾರೆಯೋ?” ಕೇಳಿದ ತೇಜಾ.

ಅನುಮಾನದ ದನಿಯಲ್ಲಿ ಕೇಳಿದಳು ಕಲ್ಯಾಣಿ.

“ಯಾಕೆ?”

ಅವಳ ಮುಖವನ್ನೇ ನೋಡುತ್ತಾ ಮುಗುಳ್ನಗೆ ನಕ್ಕು ಹೇಳಿದ ತೇಜಾ.

“ಭಯ ಬೇಡ! ನಾನೇನೂ ದೇವಿಯಾದವನಲ್ಲ. ಕೆಲ ವಿಷಯಗಳು ಮಾತಾಡುವುದಿತ್ತು. ಅದನ್ನು ಬೇರೆ ಯಾರೂ ಕೇಳಿಸಿಕೊಳ್ಳಬಾರದೆಂದು ಕೇಳಿದನಷ್ಟೆ”

ನಕ್ಕಳು ಕಾಣಿ. ವ್ಯಂಗ್ಯದ ಮುಗುಳ್ನಗೆ, ಆ ನಗು ಅವಳನ್ನು ಇನ್ನೂ ಸುಂದರವಾಗಿಸಿದೆ ಎನಿಸಿತು ತೇಜಾನಿಗೆ. ನಗೆ ಹೋಗಿ ತುಟಿಗಳು ಒಂದಾಗುತ್ತಿದ್ದಂತೆ ಹೇಳಿದಳು

“ಯಾರೂ ಇಲ್ಲ! ಆದರೂ ನನ್ನ ಮತ್ತು ನನ್ನ ಸಹಚರರ ನಡುವೆ ಯಾವ ಮುಚ್ಚುಮರೆಯೂ ಇಲ್ಲ”

“ನಿನ್ನ ಸಹಚರರಲ್ಲಿ ನಿನಗೆ ಎಲ್ಲರಿಗಿಂತ ಹತ್ತಿರವಾದವನು ನಾಗೇಶ ಅಲ್ಲವೆ?” ಅವಳ ಮಾತು ಮುಗಿಯುತ್ತಲೇ ಕೇಳಿದ ತೇಜಾ. ಈ ಅನಿರೀಕ್ಷಿತ ಪ್ರಶ್ನೆ ಅರೆಕ್ಷಣ ಅವಳನ್ನು ಗೊಂದಲಕ್ಕೀಡು ಮಾಡಿದಂತೆ ಕಂಡಿತು. ತಕ್ಷಣ ಸುಧಾರಿಸಿಕೊಂಡು ನಿರ್ಭಾವ ದನಿಯಲ್ಲಿ ಹೇಳಿದಳು

“ಇಲ್ಲ”

“ನೀನು ಸುಳ್ಳು ಹೇಳುತ್ತಿದ್ದಿ. ಎಲ್ಲರನ್ನೂ ಕಳೆದುಕೊಂಡ ನಾಗೇಶ ನಿನ್ನಲ್ಲಿ ಅವನ ತಾಯಿಯನ್ನೋ, ಅಕ್ಕನನ್ನೋ ಹುಡುಕುತ್ತಿದ್ದಂತೆ ಕಾಣುತ್ತದೆ.”

ಹಗುರ ಸಿಟ್ಟಿನ ದನಿಯಲ್ಲಿ ಪ್ರತಿ ಮಾತನ್ನೂ ಒತ್ತಿ ಹೇಳಿದ ತೇಜಾ.

ಅವಳ ಮುಖದಲ್ಲಿ ಒಂದು ಬಗೆಯ ನೋವು ಕಾಣಿಸಿಕೊಂಡು ಮಾಯವಾಯಿತು. ಆದರೂ ಅದೇ ಮೊದಲಿನಂತಹದೇ ನಿರ್ಭಾವ ದನಿಯಲ್ಲಿ ಹೇಳಿದಳು.

“ಅವನಿನ್ನೂ ಮೆಚೂರ್ ಆಗಿಲ್ಲ. ಭಾವುಕ. ಆ ಭಾವುಕತೆಯ ಹೊಳೆಯಲ್ಲಿ ಹೊಯ್ದಾಡುತ್ತಿದ್ದಾನೆ. ಸಮಯ ಅವನನ್ನು ತಾನೇ ಸರಿಪಡಿಸುತ್ತದೆ.

“ಯಾವುದೇ ಮನುಷ್ಯ ನಿರ್ಭಾವುಕನಾಗಿರುವುದು ಅಸಂಭವ. ಅಂತಹವನು ಯಾರಾದರೂ ಇದ್ದರೆ ಅವನನ್ನು ಆಬ್‌ನಾರ್ಮಲ್ ಎನ್ನುತ್ತದೆ ಮನಶ್ಯಾಸ್ತ್ರ… ಅದು ಹೋಗಲಿ ನೀನು ಶೀಲವತಿಯೋ?”

ತೇಜಾನ ಮೊದಲ ಮಾತಿಗೆ ಅವಳು ಏನು ಹೇಳಬೇಕೆಂದು ಯೋಚಿಸುತ್ತಿರುವಾಗಲೆ ಅನಿರೀಕ್ಷಿತವಾಗಿ ಬಂತು ಪ್ರಶ್ನೆ. ಅದಕ್ಕೆ ಕೂಡಲೇ ಪ್ರತಿಕ್ರಿಯಿಸಿದಳು

“ಅಂದರೆ?”

“ಶೀಲ ಅಂದರೇನೆಂಬುದು ನಿನಗೆ ಗೊತ್ತಿಲ್ಲವೆ? ಈ ಶೀಲದ ಹರಣದ ಕಾರಣವಾಗಿಯೇ ಬಂಡೇರಹಳ್ಳಿಯ ಹೆಣ್ಣುಗಳ ಕೊಲೆ ಕೂಡ ಆಗಿರಬಹುದು. ಈಗಲಾದರೂ ಗೊತ್ತಾಯಿತೇ ಶೀಲವಂತರೇನೆಂಬುವುದು?”

ಬೇಕೆಂತಲೇ ತೇಜಾ ಪ್ರತಿ ಶಬ್ದವನ್ನೂ ಒತ್ತಿ ಹೇಳಿದ. ಎರಡನೆಯ ಸಲ ನಕ್ಕಳು ಕಲ್ಯಾಣಿ ತಿಳಿಯಾದ ಹುಡುಗಾಟಿಕೆಯ ಮುಗುಳ್ನಗೆ ನಗು ತುಟಿಗಳಿಂದ ಮಾಯವಾಗುತ್ತಿದ್ದಂತೆ ಕೇಳಿದಳು.

“ಯಾಕೆ ನೀನಿಲ್ಲಿ ನನ್ನ ಮದುವೆಯಾಗಲು ಬಂದಿದ್ದೀಯಾ?”

“ಅಂತಹ ಬಂಧನದಲ್ಲಿ ಸಿಕ್ಕಿಬೀಳುವ ಇಷ್ಟ ನನಗಿಲ್ಲ. ನಾ ಸತ್ತರೆ ನನಗಾಗಿ ಅಳುವವರು ಯಾರೂ ಇರಬಾರದು… ಹೋಗಲಿ ಮಾತು ಎಲ್ಲಿಂದಲ್ಲಿಗೋ ಹೋಗುತ್ತಿದೆ. ನನ್ನ ಪ್ರಶ್ನೆಗೆ ನೀನು ಉತ್ತರಿಸಲಿಲ್ಲ. ನೀನು ಶೀಲವಂತೆಯೇ?” ಹಗುರ ದನಿಯಲ್ಲಿ ಮಾತನ್ನು ಆರಂಭಿಸಿ ಗಂಭೀರ ಪ್ರಶ್ನೆಯಲ್ಲಿ ಅದನ್ನು ಮುಗಿಸಿದ ತೇಜಾ, ಅವಳೂ ಅದಕ್ಕೆ ನಿರ್ಭಾವುಕ ದನಿಯಲ್ಲಿಯೇ ಉತ್ತರಿಸಿದಳು.

“ಹೌದು! ಆ ದೃಷ್ಟಿಯಿಂದ ನೋಡಿದರೆ ನಾನಿನ್ನೂ ಶೀಲವತಿ, ಆ ಪ್ರಶ್ನೆ ಯಾಕೀಗ?”

ಅವಳ ಯೌವ್ವನದಿಂದ ತುಂಬಿದ ದೇಹದ ತಿರುವು ಮುರುವುಗಳನ್ನು ಅಳೆಯುವಂತೆ ನೋಡಿ ಮಾತಾಡಿದ ತೇಜಾ.

“ಇಷ್ಟು ಜನ ಗಂಡಸರ ನಡುವೆ ಈ ಕಾಡಿನಲ್ಲಿ ನೀನೊಬ್ಬಳೇ ಇರುತ್ತಾ ನೀನು ನಿನ್ನ ಶೀಲವನ್ನು ಕಾಪಾಡಿಕೊಂಡು ಬಂದಿರುವೆ ಎಂಬ ಮಾತನ್ನು ನಂಬುತ್ತೇನೆ. ಆದರೆ ಅದನ್ನು ಇನ್ನೂ ಯಾಕೆ ಕಾಪಾಡುತ್ತಿರುವಿ ಎಂಬುವುದೇ ನನ್ನ ಪ್ರಶ್ನೆ, ಈವರೆಗೂ ನಿನ್ನ ದೇಹ ಪುಳಕತಿಗೊಂಡಿಲ್ಲವೇ? ಗಂಡಿನ ದೇಹದ ಸುಖವನ್ನು ಆಶಿಸಲಿಲ್ಲವೇ? ಅಥವಾ ನಿನ್ನಲ್ಲಿನ ಹೆಣ್ಣುತನ ಸತ್ತುಹೋಗಿದೆಯೋ?”

“ನನಗದರ ಬಗ್ಗೆ ಯೋಚಿಸಲು ಸಮಯವಿಲ್ಲ. ಅದೂ ಅಲ್ಲದೇ ಅದು ನನಗಷ್ಟು ಮುಖ್ಯವೂ ಅಲ್ಲ” ಕೂಡಲೇ ಉತ್ತರಿಸಿದಳು ಕಲ್ಯಾಣಿ.

“ಸುಳ್ಳು ಕಲ್ಯಾಣಿ ಸುಳ್ಳು! ನಿನಗದರ ಬಗ್ಗೆ ಯೋಚಿಸಲು ಇಲ್ಲಿ ಸಾಕಷ್ಟು ಸಮಯ ಸಿಗುತ್ತದೆ. ಒಂದು ವಯಸ್ಸಿನ ಬಳಿಕ ಅದು ಊಟದಷ್ಟೇ ಮುಖ್ಯವಾಗಿಬಿಡುತ್ತದೆ. ನಿಜ ನಾ ಹೇಳುತ್ತೇನೆ. ಕಾಲಾನುಕಾಲದಿಂದ ಅದು ಪಾಪವೆಂದು ನಮ್ಮವರು ಹೇಳಿಕೊಟ್ಟ ಪಾಠ ಅದಕ್ಕೆ ಬೇಕಾದ ಸಂಸ್ಕಾರ, ಸಂಪ್ರದಾಯ ಕೂಡ ನಿನ್ನ ನರನರಗಳಲ್ಲಿ ತುಂಬಿದೆ ಎನ್ನಬಹುದು. ಆ ಕಾರಣಕ್ಕಾಗೇ ನೀನಿನ್ನೂ ಶೀಲವತಿಯಾಗಿದ್ದಿ”

“ಅದು ನಿನ್ನ ಭ್ರಮೆಯಷ್ಟೆ” ಅವನ ಮಾತು ಮುಗಿಯುತ್ತಲೇ ಹೇಳಿದಳು ಕಲ್ಯಾಣಿ.

“ಹಾಗೇ ಹೇಳಿ ನಿನ್ನ ನೀನು ಮೋಸಮಾಡಿಕೊಳ್ಳುತ್ತಿರುವಿ ಯೋಚಿಸು ಈ ಹಿಂಸೆಯ ಮಾರ್ಗದಿಂದ ಏನನ್ನೂ ಸಾಧಿಸಲಾರೆ. ನಿನ್ನೊಡನೆ ಬಹಳ ಮಾತಾಡಬೇಕು ಮಳೆ ಬರುವ ಲಕ್ಷಣಗಳು ಕಾಣಿಸುತ್ತಿದೆ. ಮತ್ತೊಮ್ಮೆ ಬರುತ್ತೇನೆ” ಎಂದು ಎದ್ದ ತೇಜಾ ಎರಡು ಹೆಜ್ಜೆ ಮುಂದೆ ಹಾಕಿದ ಒಮ್ಮೆಲೇ ಕೂಗಿದಳು ಕಲ್ಯಾಣಿ

“ನಿಲ್ಲು! ಎಲ್ಲಿ ಹೋಗುತ್ತಿ”

“ಬಂಡೇರಹಳ್ಳಿಯ ನನ್ನ ಪೋಲಿಸ್ ಸ್ಟೇಷನ್ನಿಗೆ ಈಗಾಗಲೇ ಅಲ್ಲಿಯವರು ನನ್ನ ಹುಡುಕಾಡುತ್ತಿರಬಹುದು” ಹಿಂತಿರುಗಿ ನೋಡದೇ ಹೇಳಿದ ತೇಜಾ.

“ಮಾರ್ಗದರ್ಶನವಿಲ್ಲದೇ ನೀನಿಲ್ಲಿಂದ ಎಲ್ಲಿಗೂ ಹೋಗಲಾರೆ. ಕಾಡಿನಲ್ಲಿ ಹುಚ್ಚನಂತೆ ಅಲೆಯುತ್ತಿರಬೇಕಾಗುತ್ತದೆ” ಹೇಳಿದಳು ಕಲ್ಯಾಣಿ. ಅವಳ ಮಾತನ್ನು ಲೆಕ್ಕಿಸದಂತೆ ಇನ್ನೆರಡು ಹೆಜ್ಜೆ ಮುಂದೆ ಹಾಕಿ ಹೇಳಿದ ತೇಜಾ.

“ಅದು ನೋಡೇಬಿಡುವ. ನಾಲ್ಕಾರು ಗಂಟೆ ಅಲೆಯಬೇಕಾಗಿ ಬರಬಹುದು. ಹೇಗಾದರೂ ಅಲ್ಲಿ ತಲಪುತ್ತೇನೆ”

“ನಾಲ್ಕಾರು ಗಂಟೆಯಲ್ಲ ನಾಲ್ಕಾರು ತಿಂಗಳು ಅಲೆದರು ನಿನಗೆ ದಾರಿ ಗೊತ್ತಾಗುವುದಿಲ್ಲ. ತಾಳು ನಮ್ಮವರು ಬಂದಮೇಲೆ ಹೋಗುವಿಯಂತೆ”

ಅವಳ ಮಾತು ಲೆಕ್ಕಿಸದೇ ನಡೆಯುತ್ತಾ ಹೇಳಿದ ತೇಜಾ.

“ಅದನ್ನೂ ಪರೀಕ್ಷಿಸಿಯೇಬಿಡುತ್ತೇನೆ. ಈ ಉತ್ತೇಜ್‌ಗೂ ಎಷ್ಟು ಬುದ್ಧಿಯಿದೆ ಎಂಬುವುದು ಗೊತ್ತಾಗುತ್ತದೆ”

ಓಡಿ ಬಂದ ಕಲ್ಯಾಣಿ ಅವನ ತೋಳನ್ನು ಬಲವಾಗಿ ಹಿಡಿದು ಆರ್ತ ದನಿಯಲ್ಲಿ ಹೇಳಿದಳು.

“ಮುಂದೆ ಒಂದು ಹೆಜ್ಜೆಯೂ ಹಾಕಬೇಡ, ಎಲ್ಲಾ ಕಡೆ ಲ್ಯಾಂಡ್ ಮೈನ್ಸ್ ಹರಡಿದ್ದೇವೆ”

ಅವಳ ಕಡೆ ವಿಚಿತ್ರ ನೋಟ ಬೀರಿದ ತೇಜಾ, ಆಗಲೇ ಮಳೆಹನಿಗಳು ಆರಂಭವಾದವು. ಒಂದು ಕ್ಷಣ ಇಡೀ ಆಕಾಶವನ್ನೇ ಬೆಳಗುವಂತೆ ಮಿಂಚಿ ಗುಡುಗಿನ ಶಬ್ದ ಬಂತು. ಅದರೊಡನೆಯೇ ಧಾರಾಕಾರವಾದ ಮಳೆ ಬೀಳಲಾರಂಭಿಸಿತು. ಕದಲದೇ ಹಾಗೇ ನಿಂತಿದ್ದ ತೇಜಾ ಕೇಳಿದ

“ನಾ ಸತ್ತರೆ ನಿನಗೇನಂತೆ! ನೀ ಒಬ್ಬ ಪೋಲೀಸಿನವನನ್ನು ಯಾಕೆ ಕಾಪಾಡಬೇಕು?”

ಧಾರಾಕಾರವಾದ ಮಳೆಯ ಸದ್ದಿನಲ್ಲೂ ಅವನ ಮಾತು ಸ್ಪಷ್ಟವಾಗಿ ಕೇಳಿಸುವ ಹಾಗಿತ್ತು. ಆಗಲೇ ಆ ಮಳೆಯಲ್ಲಿ ಅವರಿಬ್ಬರೂ ಸಾಕಷ್ಟು ನೆನೆದಿದ್ದರು. ಕದಲದೇ ಕಲ್ಲಿನಂತೆ ನಿಂತಿದ್ದ ತೇಜಾ. ಅವನನ್ನು ಬಲವಂತವಾಗಿ ಎಳೆದು ಹೇಳಿದಳು.

“ನಿನ್ನ ಕಾಪಾಡುತ್ತಿರುವುದು ನನ್ನ ಸ್ವಾರ್ಥಕ್ಕೆ. ಅದೇ ಮಾತಾಡುವ ಬಾ… ಓಡು”

ಪೂರ್ತಿಯಾಗಿ ಮಳೆಯಲ್ಲಿ ನೆನೆದಿದ್ದ ಅವಳು ಅವನ ಕೈಯನ್ನು ಹಿಡಿದು ಓಡುತ್ತಾ ಬಂಡೆಗಳ ಹಿಂದೆ ಬಂದಳು. ಹಿಂಭಾಗದಲ್ಲಿ ಬಂಡೆಗಳು ಕವಲು ಬಿಟ್ಟು ಒಂದು ಗುಹೆ ಏರ್ಪಟ್ಟಿತ್ತು. ಆ ಗುಹೆಯೊಳ ಹೋಗಲು ಒಬ್ಬರು ತೂರಬಹುದಾದಂತಹ ಸಂದು ತೆಗೆದುಕೊಂಡಿತ್ತು. ಕಲ್ಯಾಣಿಯ ಹಿಂದೆ ಅದರೊಳ ದೂರಿದ ತೇಜಾ. ಒಳಗಿದ್ದ ವಿಶಾಲವಾದ ಸ್ಥಳ ಅವನಲ್ಲಿ ಅಚ್ಚರಿ ಹುಟ್ಟಿಸಿತು. ಪ್ರಕೃತಿ ಮಾಡಿದ ಮನೆ.

ನೆನೆದಿದ್ದ ತೇಜಾ ತನ್ನ ಶರ್ಟನ್ನು ಕಳಚಿದ. ನೆನದ ತನ್ನ ಬಟ್ಟೆಯನ್ನು ಏನು ಮಾಡಬೇಕೆಂದು ಯೋಚಿಸುತ್ತಿದ್ದಂತೆ ಕಂಡಳು ಕಲ್ಯಾಣಿ, ಅವಳ ಕಡೆ ನೋಡಿದ ತೇಜಾ, ಪೂರ್ತಿ ನೆನೆದ ಕಾರಣ ಅವಳ ದೇಹದ ಏರುತಗ್ಗುಗಳೂ ಇನ್ನೂ ಸ್ಪಷ್ಟವಾಗಿ ಕಾಣುತ್ತಿದ್ದವು. ಅವಳ ಮೇಲಿಂದ ನೋಟ ಸರಿಸದೇ ಹತ್ತಿರ ಬಂದ. ಭಯ ನಾಚಿಕೆಗಳಿಂದ ಅವಳು ಮುದುಡಿ ನಿಂತಳು. ಅವಳ ಭುಜದ ಮೇಲವನು ಕೈ ಹಾಕಿದಾಗ

“ಬೇಡ! ಬೇಡ!” ಎಂದಳವಳು. ಅವಳ ದನಿಯಲ್ಲಿ ನಾಚಿಕೆಯೊಡನೆ ಉನ್ಮಾದವು ಬೆರೆತಿತ್ತು. ಆ ಮಾತನ್ನು ಕೇಳಿಸಿಕೊಳ್ಳದವನಂತೆ ಬಹು ಜಾಗರೂಕತೆಯಿಂದ ಅವಳ ನೆನೆದ ಬಟ್ಟೆಗಳನ್ನು ಕಳಚತೊಡಗಿದ. ಇನ್ನೂ ತಾಳಲಾರದವಳಂತೆ ಅವನನ್ನು ಬಿಗಿದಪ್ಪಿದಳು ಕಲ್ಯಾಣಿ. ಅವಳ ದೇಹದ ಮೇಲೆ ತನ್ನ ಹಿಡಿತವನ್ನು ಬಿಗಿಪಡಿಸಿ ತನ್ನ ಕೆಲಸವನ್ನು ಮುಂದುವರೆಸಿದ.

ನೋಡನೋಡುತ್ತಿದ್ದಂತೆ ಆ ಎರಡೂ ದೇಹಗಳು ಬತ್ತಲಾದವು. ಅರೆ ಬೆಳಕು ಅರೆ ಕತ್ತಲಿರುವ ಗುಹೆ. ಹೊರಗೆ ಧಾರಕಾರವಾದ ಮಳೆ, ಗುಹೆಯೊಳಗೆ ಅವರಿಂದ ಸ್ವಲ್ಪ ದೂರದಲ್ಲಿ ಮಾರಕಾಯುಧಗಳು, ಭಯಂಕರ ಬಾಂಬುಗಳನ್ನು ತಯಾರಿಸಬಹುದಾದಂತಹ ವಿವಿಧ ವಸ್ತುಗಳು, ಮಳೆಯೊಡನೆ ಗುಹೆಯಲ್ಲಿ ಬೀಸುತ್ತಿದ್ದ ತಣ್ಣನೆಯ ಗಾಳಿ ಅವರನ್ನು ಇದೆಲ್ಲವನ್ನೂ ಮರೆಯುವಂತೆ ಮಾಡಿತು. ಇಹಲೋಕದ ಪರಿವೆಯೇ ಇಲ್ಲದವರಂತೆ ಒಂದಾಗುವ ಯತ್ನ ಆರಂಭಿಸಿದವು ಆ ದೇಹಗಳು.

ಕಲ್ಯಾಣಿಯ ದೇಹದ ಮೇಲೆಲ್ಲಾ ಪ್ರತಿ ಮೂಲೆ ಸಂದುಗಳಲ್ಲೆಲ್ಲಾ ಕೈ ಆಡುತ್ತಿದ್ದಾಗ ಹೊಸದೊಂದು ಅನುಭವ, ತನ್ಮಯನಾಗಿ ಹೋಗುವಂತಹ ಸುಖ. ಆ ಸುಖದ ಆಟವನ್ನು ಅರಿಯುವ ಅನುಭವಿಸುವ ಉನ್ಮಾದದಲ್ಲಿದ್ದ ತೇಜಾ ತನಗೆ ಪ್ರಿಯನಾದ ಒಬ್ಬ ಗಂಡಿನ ಸ್ಪರ್ಷ ತನಗೆ ಇಂತಹ ಅನುಭೂತಿಯನ್ನು ಕೊಡಬಹುದೆಂದು ಊಹಿಸಿರಲಿಲ್ಲ ಕಲ್ಯಾಣಿ. ಅವನ ಅಗಲವಾದ ಎದೆಯ ಮೇಲೆ ತನ್ನ ಕಪೋಲಗಳನ್ನು ಸವರುತ್ತಾ ಎರಡು ಕೈಗಳನ್ನು ಅವನ ದೇಹದ ಮೇಲೆಲ್ಲಾ ಆಡುತ್ತಾ ಎಲ್ಲಾ ಸುಖವನ್ನು ಒಮ್ಮೆಲೆ ಹೀರಿಬಿಡಬೇಕೆಂಬ ಆತುರ ತೋರುತ್ತಿದ್ದಳು.

ವಾತವರಣದಲ್ಲಿದ್ದ ಚಳಿಯ ಅನುಭವದಿಂದ ಮುಕ್ತವಾದ ಆ ಎರಡು ದೇಹಗಳು ಕಾವಿನ ಪರಮಾವಧಿಗೆ ಹೋಗಿ, ಪ್ರಕೃತಿ ಮಾನವ ಕುಲಕ್ಕೆ ನೀಡಿರುವ ಒಂದೇ ಒಂದು ಪರಮಸುಖ ಪರಮಾವಧಿಗೆ ಹೋಗಿ ಮತ್ತೆ ನಿಧಾನವಾಗಿ ಇಹಲೋಕಕ್ಕೆ ಆ ಕಾಡಿನಲ್ಲಿದ್ದ ಗುಹೆಗೆ ಮರಳತೊಡಗಿದವು.

ಅವಳನ್ನಪ್ಪಿ, ಅವಳ ಕಪೋಲದ ಮೇಲೆ ತನ್ನ ಕಪೋಲವನ್ನು ಸವರುತ್ತಾ ಯಾವುದೋ ಬೇರೆಯ ಲೋಕದಿಂದ ಮಾತಾಡುತ್ತಿರುವಂತಹ ದನಿಯಲ್ಲಿ ಹೇಳಿದ ತೇಜಾ.

“ಇದರಲ್ಲಿ ಇಂತಹ ಸುಖವಿದೆ ಎಂದು ನನಗೆ ಗೊತ್ತಿರಲಿಲ್ಲ.”

“ನನಗೂ ಗೊತ್ತಿರಲಿಲ್ಲ” ಅವನ ತಲೆಕೂದಲಲ್ಲಿ ಬೆರಳಾಡುತ್ತಾ ಅದನ್ನು ಇನ್ನೂ ಹತ್ತಿರ ಎಳೆದುಕೊಳ್ಳುತ್ತಾ ಹೇಳಿದಳು ಕಲ್ಯಾಣಿ.

“ಸ್ವರ್ಗ ಸುಖವೆಂದರೆ ಇದೇ ಇರಬಹುದು” ಅವಳ ಕಿವಿಯ ಬಳಿ ಪಿಸುಗುಟ್ಟಿದ ತೇಜಾ.

“ಇರಬಹುದು” ನಿಶೆಯಲ್ಲಿರುವಂತಹ ದನಿಯಲ್ಲಿ ಅವನ ಮಾತನ್ನು ಒಪ್ಪಿಕೊಂಡಳವಳು. ಹಾಗೆ ಇನ್ನೂ ಸ್ವಲ್ಪ ಸಮಯ ಕಳೆದಮೇಲೆ ತೇಜಾನ ತಲೆಯ ಮೇಲೆ ತನ್ನೆರಡೂ ಕೈಗಳನಿಟ್ಟು ಹೇಳಿದಳು ಕಲ್ಯಾಣಿ.

“ಈ ಕ್ಷಣದಿಂದ ನೀನು ನನ್ನ ಪತಿ”

ಅವಳ ಕಪೋಲವನ್ನು ಹಗುರವಾಗಿ ಚುಂಬಿಸಿ, ತನ್ನೆರಡೂ ಕೈಗಳಿಂದ ಅವಳ ತಲೆಯನ್ನು ಹತ್ತಿರ ಎಳೆದುಕೊಂಡು ಹಣೆಗೆ ಮುದ್ದಿಟ್ಟು ಹೇಳಿದ ತೇಜಾ.

“ಇವತ್ತು ನನ್ನ ಮದುವೆಯಾಯಿತು. ಆದರೆ ಹೀಗಾಗುತ್ತದೆ ಎಂದು ಕೊಂಡಿರಲಿಲ್ಲ”

“ಇದೇ ತಾಳಿ ಕಟ್ಟುವ ಶುಭಮುಹೂರ್ತವೆಂದುಕೊಳ್ಳುವ. ಮಂತ್ರ ಘೋಷಗಳೊಡನೆ ಆಣೆ ಪ್ರಮಾಣಗಳನ್ನು ಮಾಡಿಸುತ್ತಾರಲ್ಲ. ಅದನ್ನು ನಾವೇ ಮಾಡುವ” ಆಲಿಂಗನದ ಬಿಗಿತವನ್ನು ಹೆಚ್ಚಿಸಿ ಕಣ್ಣು ಮುಚ್ಚಿಕೊಂಡು ಹೇಳಿದಳು ಕಲ್ಯಾಣಿ.

“ನಾನು ನಿನಗಾಗಿ ಪ್ರಾಣವನ್ನೂ ಕೂಡ ಕೊಡುತ್ತೇನೆ” ಎಂದ ತೇಜಾ.

“ನಾನೂ ನಿನಗಾಗಿ ಏನು ಬೇಕಾದರೂ ಮಾಡುತ್ತೇನೆ. ಒಬ್ಬರ ವಿಚಾರಧಾರೆಗೆ ಇನ್ನೊಬ್ಬರು ಅಡ್ಡ ಬರಬಾರದು. ಗಂಡ ಹೆಂಡಿರದಿಬ್ಬರದೂ ಸಮಾನ ಅಧಿಕಾರ” ಹೇಳಿದಳು ಕಲ್ಯಾಣಿ.

“ಸಮಾನ ಅಧಿಕಾರ, ಚರ್ಚೆ ವಿಚಾರವಿಮರ್ಶೆ ಮಾಡಿ ಯಾವುದೇ ವಿಷಯದ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಕು” ಹೇಳಿದ ತೇಜಾ.

“ಚರ್ಚೆ ವಿಚಾರ ವಿಮರ್ಶೆಯ ನಂತರವೂ ಬೇಧವಿದ್ದರೆ ಒಬ್ಬರ ವಿಚಾರಕ್ಕೆ ಇನ್ನೊಬ್ಬರು ಮರ್ಯಾದೆ ಕೊಡಬೇಕು” ಹೇಳಿದಳು ಕಲ್ಯಾಣಿ.

“ತಥಾಸ್ತು” ಎಂದ ತೇಜ.

“ತಥಾಸ್ತು” ಎಂದಳು ಕಲ್ಯಾಣಿ.

ಇವೆಲ್ಲಾ ಪ್ರಮಾಣ ವಚನಗಳು ಒಬ್ಬರ ದೇಹದ ಮೇಲೆ ಒಬ್ಬರು ಕೈ ಆಡಿಸುತ್ತಲೇ ನಡೆಸಿದ್ದರು. ದೇಹಗಳು ಮತ್ತೆ ಕಾವೇರತೊಡಗಿದವು. ಇನ್ನು ಯಾವ ಅವಸರವೂ ಇಲ್ಲದೇ ಅವರು ಮತ್ತೊಮ್ಮೆ ಪರಮಾನಂದದ ಶಿಖರಕ್ಕೇರಿ ಇಳಿದರು.

ಮಳೆಯ ರಭಸ ಮೊದಲಿನಷ್ಟಿರಲಿಲ್ಲ. ಬಟ್ಟೆ ತೊಟ್ಟ ತೇಜ ಮತ್ತು ಕಲ್ಯಾಣಿ ಗುಹೆಯ ದ್ವಾರವಾದ ಚಿಕ್ಕ ಸಂದಿನಲ್ಲಿ ಒಬ್ಬರಿಗೊಬ್ಬರು ಅವಚಿಕೊಂಡು ಕುಳಿತು ಹೊರಗಿನ ದೃಶ್ಯವನ್ನು ನೋಡುತ್ತಿದ್ದರು. ಆ ಕಡೆ ಕಲ್ಲು ಬಂಡೆಗಳಾದ ಮೇಲೆ ಚಿಕ್ಕ ಬಯಲು ಅದನ್ನು ದಾಟುತ್ತಲೇ ಆಳವಾದ ಕಂದಕವೆಂದು ಹೇಳಿದಳು ಕಲ್ಯಾಣಿ. ಮುಂದೆ ಕಂದಕವಿದೆ ಎಂದು ಯಾರೂ ಊಹಿಸಲೂ ಸಾಧ್ಯವಿಲ್ಲ. ಹಾಗೆ ಬೆಳೆದುಬಿಟ್ಟಿದ್ದವು ಗಿಡಮರಗಳು. ತುಂತುರು ಮಳೆಯಲ್ಲಿ ಆ ದೃಶ್ಯ ಮನಮೋಹಕವಾಗಿ ಕಾಣುತ್ತಿತ್ತು.

“ಎಷ್ಟು ಮನಮೋಹಕವಾಗಿದೆಯಲ್ಲವೇ ಈ ದೃಶ್ಯ” ಹೇಳಿದ ತೇಜಾ ಅವನ ಹೆಗಲ ಮೇಲೆ ತಲೆ ಇಟ್ಟು ಹೇಳಿದಳು ಕಲ್ಯಾಣಿ

“ಹೂಂ! ಇಂತಹದನ್ನು ನಾಶ ಮಾಡುತ್ತಿರುವ ವೀರಪ್ಪನ್‌ನನ್ನು ಬಿಟ್ಟು ನಮ್ಮ ಹಿಂದೆ ಬಿದ್ದಿದೆ ಸರಕಾರ”

ಅವಳ ತಲೆ ಕೂದಲಲ್ಲಿ ಬೆರಳುಗಳನಾಡುತ್ತಾ ಹೇಳಿದ ತೇಜಾ.

ಅವನು ಕಾಡನ್ನು ಮಾತ್ರ ನಾಶ ಮಾಡುತ್ತಿದ್ದಾನೆ. ನೀವು ಮನುಷ್ಯರನ್ನು, ಅವರು ಉಪಯೋಗಿಸುವ ವಾಹನಗಳನ್ನು ಅಂದರೆ ಜನ ಸಂಪತ್ತಿಯಾದ ರೈಲು, ಬಸ್ಸುಗಳನ್ನು ನಾಶಮಾಡುತ್ತಿದ್ದೀರಿ”

ಅವನ ಹೆಗಲ ಮೇಲಿಂದ ತಲೆ ಸರಿಸದೇ ಕಾಡನ್ನೇ ನೋಡುತ್ತಾ ಹೇಳಿದಳು ಕಲ್ಯಾಣಿ

“ನನ್ನ ದಳದವರು ರೈಲು, ಬಸ್ಸುಗಳ ತಂಟೆಗೆ ಹೋಗುವುದಿಲ್ಲ, ಧನವಂತರಿಂದ ಹಣ ಸುಲಿಗೆ ಮಾಡುವುದಿಲ್ಲ. ದೇವಿಯಾದವನಂತಹ ನೀಚರನ್ನು ಕೊಲೆ ಮಾಡುತ್ತೇವೆ. ಅದರಿಂದ ಅಂತಹ ಬೇರೆಯವರಲ್ಲಿ ಭಯ ಹುಟ್ಟಿ ಅವರು ಸರಿಯಾದ ಮಾರ್ಗದಲ್ಲಿ ನಡೆಯುತ್ತಾರೆ”

“ಆದರೆ ಬೇರೆ ದಳದ ಕ್ರಾಂತಿಕಾರಿಗಳು ಮಾಡುತ್ತಾರಲ್ಲ” ಹೇಳಿದ ತೇಜಾ

ಅದಕ್ಕೆ ನಮ್ಮ ನಮ್ಮಲ್ಲೇ ವಿಚಾರ ವಿಬೇಧಗಳು ಬಂದು ಈ ಚಳುವಳಿ ತುಂಡು ತುಂಡಾಗಿರುವುದು. ತುಂಡಾದ ತುಂಡುಗಳಲ್ಲಿ ಮತ್ತೆ ತುಂಡುಗಳು. ಸರಕಾರಕ್ಕೂ ಅದೇ ಬೇಕಾಗಿದೆ. ಈಗ ನಮ್ಮವರೇ ಹೊಡೆದಾಡಿಕೊಂಡು ಸಾಯುತ್ತಿದ್ದಾರೆ” ಒಂದು ಬಗೆಯ ನೋವಿತ್ತು ಕಲ್ಯಾಣಿಯ ಮಾತಿನಲ್ಲಿ. ಅದು ತೇಜಾನಿಗೆ ಗೊತ್ತಿದ್ದ ವಿಷಯವೇ ಆಗಿತ್ತು. ಏನೋ ಯೋಚಿಸುತ್ತಾ ಕೇಳಿದ

“ಅಂದರೆ ನೀನು ಕ್ರಾಂತಿಕಾರಿ ಅಲ್ಲವೇ?”

“ಯಾರು ಏನು ಬೇಕಾದರೂ ಕರೆದುಕೊಳ್ಳಲಿ ನನಗದರಿಂದ ಯಾವ ವ್ಯತ್ಯಾಸವೂ ಆಗುವುದಿಲ್ಲ. ನನ್ನ ಕೈಲಾದಷ್ಟು ಭ್ರಷ್ಟ ರಾಜಕಾರಣಿಯರನ್ನು, ರೈತರನ್ನು ಒತ್ತೆ ಆಳಾಗಿಸಿಕೊಂಡು ಅವರ ಬದುಕನ್ನು ನಾಯಿಗಿಂತ ಅಧ್ವಾನ ಮಾಡುತ್ತಿರುವ ಭೂಮಾಲಿಕರನ್ನು, ಕೊಟ್ಯಾಂತರ ಸಂಪಾದಿಸುತ್ತಾ ಕಾರ್ಮಿಕರಿಗೆ ಸರಿಯಾದ ಸ೦ಬಳ ಕೊಡದ ಉದ್ಯಮಪತಿಗಳನ್ನು ಮುಗಿಸುತ್ತಾ ಹೋಗುತ್ತೇನೆ” ಅವಳ ಮಾತು ಬಹು ಮಲ್ಲನೆ ಬಂದರೂ ಅದೊಂದು ದೃಢನಿರ್ಧಾರದಂತಿತ್ತು. ತಲೆಯಿಂದ ಅವಳ ಬೆನ್ನ ಮೇಲೆ ತನ್ನ ಕೈ ತಂದ ತೇಜಾ ಬೆನ್ನನ್ನು ಅಪ್ಯಾಯತೆಯಿಂದ ಸವರುತ್ತಾ ಮಾತಾಡಿದ.

“ನೋಡು ಕಲ್ಯಾಣಿ ನೀನು ಹಾಗೆ ಎಷ್ಟು ಜನರನ್ನು ಕೊಲ್ಲುತ್ತಾ ಹೋಗುತ್ತಿ. ಒಬ್ಬ ದೇವಿಯಾದವ ಸತ್ತರೆ ಮತ್ತೊಬ್ಬ ಹುಟ್ಟಿಕೊಳ್ಳುತ್ತಾನೆ. ಇದಕ್ಕೆ ಕೊನೆ ಇಲ್ಲ. ಇದರಿಂದ ಏನೂ ಸಾಧಿಸಲಾಗುವುದಿಲ್ಲ. ನಮ್ಮ ಬದುಕು ನಿರರ್ಥಕವಾಗುತ್ತದಷ್ಟೆ ನಾವೇ ನಾಶವಾಗುತ್ತೇವೆ”

“ದೊಡ್ಡಣ್ಣ ಇಲ್ಲಿ ಬರುವ ಮೊದಲು ಬಂಡೇರಹಳ್ಳಿಯ ಸ್ಥಿತಿ ಹೇಗಿತ್ತು ಗೊತ್ತೇ ತೇಜಾ! ಹೊಲದಲ್ಲಿ ಎತ್ತುಗಳಂತೆ ದುಡಿದರೂ ಅವರಿಗೆ ಎರಡು ಹೊತ್ತಿನ ಊಟ ಸಿಗುತ್ತಿರಲಿಲ್ಲ. ಈಗ ಹೇಗಿದ್ದಾರೆ ನೋಡಿದ್ದೀಯಾ, ಅದೇ ನಾವು ಸಾಧಿಸಿರುವುದು. ಹಾಗೇ ಇನ್ನೂ ಹಲವಾರು ಕಡೆ ಮಾಡಿದರೆ ನನ್ನ ಜೀವನ ಸಾರ್ಥಕವಾದಂತೆ”

ಅವನ ಮಾತು ಮುಗಿದ ಕೂಡಲೇ ಹೇಳಿದಳು ಕಲ್ಯಾಣಿ. ಸ್ವಲ್ಪ ಹೊತ್ತು ಮೌನವಾವರಿಸಿತು. ಮಳೆ ಹನಿಗಳ ಶಬ್ದ. ಗಾಳಿಗೆ ತೂಗಾಡುತ್ತಿದ್ದ ಮರಗಳ ಶಬ್ದ ಬಿಟ್ಟರೆ ಇನ್ನೇನೂ ಕೇಳಿಸುತ್ತಿರಲಿಲ್ಲ. ತನ್ನದೇ ಚಿಂತನೆಯಲ್ಲಿ ತೊಡಗಿದ ತೇಜಾ ತಾನೇ ಮೌನ ಮುರಿದ.

“ನೀ ಸಾಧಿಸಿದ್ದನ್ನು ಬೇರೆ ದಾರಿಯಿಂದಲೂ ಸಾಧಿಸಬಹುದು. ನೋಡುನಾ ಬಂದ ಕೂಡಲೇ ಹೇಗೆ ಸಾರಾಯಿ ಮಾರಾಟದ ಮೇಲೆ ನಿಯಂತ್ರಣ ತಂದನೋ ಹಾಗೇ ಬೇರೆ ಕೆಲಸಗಳನ್ನು ಕೂಡ ಮಾಡುತ್ತಾ ಹೋಗುತ್ತೇನೆ. ಆ ಕೆಲಸಗಳೆಲ್ಲಾ ನಿಧಾನವಾಗಬಹುದು. ಆದರೂ ಆಗುತ್ತದೆ. ಅದರ ಬಗ್ಗೆ ನಿನ್ಯಾಕೆ ಯೋಚಿಸಬಾರದು”

ಒಮ್ಮೆಲೆ ತನ್ನ ಕೈಯನ್ನು ಅವನ ಭುಜದ ಸುತ್ತೂ ಹಾಕಿ ಗಟ್ಟಿಯಾಗಿ ಹಿಡಿದು ಚಿಕ್ಕ ಮಗುವನ್ನು ಅಲುಗಿಸುವಂತೆ ಅತ್ತ ಇತ್ತ ಅಲುಗಿಸುತ್ತಾ ಹೇಳಿದಳು ಕಲ್ಯಾಣಿ. ಅವಳು ಮಾತಾಡುವ ಧೋರಣೆ ಚಿಕ್ಕ ಮಕ್ಕಳೊಡನೆ ಮಾತಾಡುವಂತಿತ್ತು.

“ಓ ತೇಜಾ! ನನ್ನ ತೇಜಾ! ನೀನಿನ್ನೂ ಎಂತಹ ಮುಗ್ಧ ಕೂಸು. ಯಾವಾಗಂದರಾಗ ಸಾರಾಯಿ ಬಂಡೇರಹಳ್ಳಿಯಲ್ಲಿ ದೊರೆಯುವುದು ನಿಲ್ಲುವುದಿಲ್ಲ! ನಾ ಮೊದಲೇ ಹೇಳಿದ ಹಾಗೆ ನೀನು ಏರ್ಪಡಿಸಿದ ಕಾರ್ಯಕ್ರಮವೂ ಸರಕಾರಕ್ಕೆ ಇಷ್ಟವಾಗುವುದಿಲ್ಲ. ನೀನು ನಿನ್ನ ಬುದ್ಧಿಯನ್ನೆಲ್ಲಾ ಉಪಯೋಗಿಸಿ, ಸುಳ್ಳಿನ ಕಥೆಗಳನ್ನು ಕಟ್ಟಿದರೆ ಮಾತ್ರ ನಿನ್ನ ವರ್ಗಾವಣೆ ಆಗದಿರುವುದು ಸಾಧ್ಯ. ಇಷ್ಟು ಕಾಲದಿಂದ ನೀನು ಪೋಲಿಸ್ ಖಾತೆಯಲ್ಲಿ ಕೆಲಸ ಮಾಡುತ್ತಿರುವ ನಿನಗಿಷ್ಟು ಗೊತ್ತಾಗುವುದಿಲ್ಲವೇ?”

ಅವಳು ಹೇಳಿದ ಮಾತಿನಲ್ಲಿ ಅತಿಶಯೋಕ್ತಿ ಇಲ್ಲವೆನಿಸಿತು ತೇಜಾನಿಗೆ. ಆದರೂ ಸ್ಕ್ವಾಡಿನ ಮುಖ್ಯಸ್ಥ ಶ್ರೀವಾಸ್ತವ ಕೊಟ್ಟ ಆಶ್ವಾಸನೆಯಿಂದ ಅದು ಅವಳು ಹೇಳಿದ ಹಾಗಾಗಲಿಕ್ಕಿಲ್ಲ ಎನಿಸಿತು. ಮತ್ತೆ ಆವರಿಸಿದ ಮೌನವನ್ನು ಆತುರ ದನಿಯಲ್ಲಿ ಮುರಿದಳು ಕಲ್ಯಾಣಿ.

ಇದೆಲ್ಲಾ ಹೋಗಲಿ ಮುಖ್ಯ ವಿಷಯ ಹೇಳುವುದು ಮರೆತಿದ್ದೆ. ಆ ಸಿದ್ಧಾನಾಯಕ್ ಬಹಳ ಅಪಾಯಕಾರಿ ವ್ಯಕ್ತಿ, ಅವನ ವ್ಯಾಪಾರ ರಾಮನಗರದಲ್ಲೂ ಇದೆ. ಅವನು ತನ್ನ ಕೆಲಸ ಸಾಧಿಸಲು ಸೇಡು ತೀರಿಸಿಕೊಳ್ಳಲು ಏನು ಮಾಡಲೂ ಹೇಸುವುದಿಲ್ಲ. ಅವನಿಂದ ಎಚ್ಚರವಾಗಿರು. ಇವತ್ತು ನಮ್ಮ ಭೇಟಿಯಾಗಿ ಈ ಮದುವೆಯ ಸಮಾರಂಭ ನಡೆಯದಿದ್ದರೆ ಅವನ್ನು ಮುಗಿಸುವ ಯೋಜನೆ ಇತ್ತು. ನೀನಿಗಾಗಲೇ ಅವನ ಶತೃತ್ವ ಕಟ್ಟಿಕೊಂಡಿದ್ದಿಯಾದ್ದರಿಂದ ನಾನು ಹಾಗೆ ಮಾಡುವ ಹಾಗಿಲ್ಲ. ಅವನನ್ನು ನಿನ್ನ ತಂಟೆಗೆ ಬರದಂತೆ ನಾ ಹೆದರಿಸಬಹುದು. ಹಾಗೆ ಮಾಡಿದರೂ ಅವನು ನಿನ್ನನ್ನು ಸಿಕ್ಕಿಸಲು…”

“ಕಲ್ಯಾಣಿ! ನಾನೇನೂ ಮಗುವಲ್ಲ. ನನ್ನ ನಾನು ರಕ್ಷಿಸಿಕೊಳ್ಳಬಲ್ಲೆ. ನೀನವನ ತಂಟೆಗೆ ಹೋಗಬೇಡ, ನಿನ್ನ ಬಗ್ಗೆ ಯೋಚಿಸು. ನಮ್ಮ ಭವಿಷ್ಯದ ಬಗ್ಗೆ ಯೋಚಿಸು.” ಅವಳಿಗೆ ಮಾತು ಪೂರ್ತಿ ಮಾಡುವ ಅವಕಾಶ ಕೊಡದೇ ಹೇಳಿದ ತೇಜ. ಅದಕ್ಕೆ ಕೂಡಲೇ ಪ್ರತಿಕ್ರಿಯಿಸಿದಳು ಕಲ್ಯಾಣಿ.

ಅದರ ಬಗ್ಗೆಯೂ ಇನ್ನೊಂದು ಸಲ ವಿವರವಾಗಿ ಮಾತಾಡುವ. ನೀನು ಒಬ್ಬನೇ ಕಾಡಿನ ಕಡೆ ಆಯುಧ ಜತೆಗಿಲ್ಲದೇ ಸುಳಿದಾಡಬೇಡ. ನನ್ನ ಶತ್ರು ದಳದವರೂ ಆಗಾಗ ಅತ್ತ ಬರುತ್ತಿರುತ್ತಾರೆ. ನಿನಗೆ ನನ್ನ ತುರ್ತಾಗಿ ಕಾಣುವುದಿದ್ದರೆ ತಾತನಿಗೆ ಹೇಳು. ನನ್ನ ಹೆಸರನ್ನು ಬಹಳ ಜನ ಉಪಯೋಗಿಸಿ ಜನರನ್ನು ಹೆದರಿಸುತ್ತಿದ್ದಾರೆ, ಸುಲಿಯುತ್ತಿದ್ದಾರೆ. ನಾನಿನ್ನ ಕಾಣಬಯಸಿದಾಗ ಕಾಳಿ ಎಂಬ ಹೆಸರನ್ನು ಮಾತ್ರ ಉಪಯೋಗಿಸಿದರೆ ಅವರನ್ನು ನಂಬು, ಕಲ್ಲಕ್ಕ ಮತ್ತಿನ್ಯಾವುದಾದರೂ ಹೆಸರನ್ನು ಉಪಯೋಗಿಸಿದರೆ ಅವನ್ನು ಅನುಮಾನದಿಂದ ನೋಡಿ ಮಾತಾಡು. ಅರ್ಥವಾಯಿತೆ”

“ಸರಿ! ನನಗಂತೂ ಈಗ ಇಲ್ಲಿಂದ ಹೋಗಬೇಕೆನಿಸುತ್ತಿಲ್ಲ. ಮಳೆ ಇನ್ನೂ ನಿಂತಿಲ್ಲ. ಒಳಗೆ ಹೋಗಿ ಸ್ವಲ್ಪ ಹೊತ್ತು ಬೆಚ್ಚಗೆ ಮಲಗುವ ನಡಿ” ಎನ್ನುತ್ತಾ ಅವಳನ್ನು ಎಬ್ಬಿಸಿದ ತೇಜಾ, ಹೆಚ್ಚು ಬಲವಂತವಿಲ್ಲದೆ ಎದ್ದಳವಳು.

ಮತ್ತೆ ಗುಹೆಯೊಳ ಹೋದ ಅವರು ಆಗ ತಾನೆ ತಾವು ಆವಿಷ್ಕರಿಸಿದ ಪರಮಾನಂದ ಕಾರ್ಯಕ್ರಮವನ್ನು ಮತ್ತೆ ಆರಂಭಿಸಿದರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮರೆಯದಿರಿ
Next post ನಮನ

ಸಣ್ಣ ಕತೆ

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

cheap jordans|wholesale air max|wholesale jordans|wholesale jewelry|wholesale jerseys