ಸುಭದ್ರೆ – ೧೭

ಸುಭದ್ರೆ – ೧೭

ಶಂಕರರಾಯನಿಗೆ ಕ್ರಮಕ್ರಮವಾಗಿ ಆರೋಗ್ಗಭಾಗ್ಯವು ಒದಗಿ ಬಂದಿತು. ಮಾಧವನನ್ನು ಬಂದ ಎರಡು ವಾರದೊಳಗಾಗಿ ಕೋ ಲೂರಿಕೊಂಡು ನಡೆಯುವಷ್ಟು ಶಕ್ತಿಯುಂಟಾಯಿತು. ಒಂದು ದಿನ ಅವನು ಮಾಧವನನ್ನು ಕುರಿತು .ಅಪ್ಪಾ! ಮಾಧವ! ವಿಶ್ವನಾಥಪಂತ ರಿಗೆ ಸುಭದ್ರೆಯನ್ನು ಕೂಡಲೆ ಕಂದುಕೊಂಡು ಬರುವಂತೆ ನನ್ನ ಹೆಸ ರಿನಲ್ಲೊಂದು ಕಾಗದವನ್ನು ಬರೆ“ ಎಂದನು, ಮಾಧವನು ಕಂಬನಿ ದುಂಬಿದವನಾಗಿ, “ಅಪ್ಪಾಜಿ ! ನನ್ನ ವಿಷಯದಲ್ಲಿ ತಾವು ತೋರಿಸಿ ರುವ ಮಮತೆಯು ಅನಾದೃಶವಾದುದು, ಅದಕ್ಕೆ ನಾನು ಎಷ್ಟು ಕೃತಜ್ಞನಾಗಿದ್ದರೂ ಸ್ವಲ್ಪವೇ ಇದೆ. ಆದರೆ ನಾವು ಒಂದನ್ನು ಯೋಚಿಸಿದರೆ “ದೈವವು ಬೇರೊಂದನ್ನು ಯೋಚಿಸುವುದು ಎಂ ದನು. ಶಂಕರರಾಯನು ಗಾಬರಿಯಿಂದ, ,,ಏನು ಸಮಾಚಾರ? ನನ ಗೇತಕ್ಕೆ ಇದುವರೆಗೆ ತಿಳಿಸಲಿಲ್ಲ?“ ಎಂದನು.

ಮಾಧವ -“ತಮ್ಮ ಶರೀರ ಸ್ಕಿ ತಿಯು ವೃತ್ಕಾ ಸವಾದೀ ತೆಂಬ ಭಯದಿಂದ ಯಾವುದನ್ನೂ ಹೇಳಲಿಲ್ಲ.“ ಅಷ್ಟು ಹೊತ್ತಿಗೆ ಸರಿಯಾಗಿ, ಸೇವಕನೊಬ್ಬನು ಒಂದು ಹಳ ದಿಯ ಲಕೋಟೆಯನ್ನು ತಂದು ಮಾಧವನ ಕೈಯಲ್ಲಟ್ಟನು. ಅವನ ದನ್ನು ಅತ್ಯಾತುರದಿಂದ ಒಡೆದುನೋಡಿ, “ಸಿಕ್ಕಿದಳು, ಸಿಕ್ಕಿದಳು“ ಎಂದು ಕೂಗಿಕೊಂಡನು. ಶಂಕರರಾಯನ್ನು ಆ “ಟೆಲಿ ಗ್ರಾಮ” ನ್ನು ಕೈಗೆ ತೆಗೆದುಕೊಂಡು ನೋಡಿದನು. . ಮಾಧವನು ಅದನ್ನು ತಂದ ಸೇವಕನಿಗೆ ತನ್ನ ತಲೆಯಮೇಲಿನ ಬಿಲೆಯುಳ್ಳ ಪೇಟಾವನ್ನೆ ತೆಗೆದು ಕೊಟ್ಟುಕಳು ಹಿಸಿದನು.

ಶಂಕರರಾಯನು, “ಮಗು ! ಇದೇನು ? ಸುಭದ್ರೆಯು ಹೈದರಾಬಾದಿಗೇತಕ್ಕೆ ಹೋದಳು ? ” ಎಂದನು . ಮಾಧವನು ಆ ದಿನ ರಾತ್ರಿ ತಂದೆಯು ಆಜ್ಞೆಮಾಡಿದುದು ಮೊದಲ್ಗೊಂಡು ನಡೆದ ಸಮಸ್ತವನ್ನೂ ತಂದೆಗೆ ಅರಿಕೆಮಾಡಿದನು. ಶಂಕರರಾಯನು “ನನ್ನ ಅವಿವೇಕದಿಂದಲ್ಲವೆ ಇಷ್ಟು ಆನರ್ರಥಕ್ಕೆ ಕಾರಣವಾಯಿತು! ” ಎಂದು ನಿಟ್ಸುಸಿರುಬಿಟ್ಟನು.

ಮಧ್ಯಾಹ್ನ ಮಾಧವನೂ ಗಂಗಾಬಾಯಿಯೂ ಹೈದರ ಬಾದಿಗೆ ಹೋಗಿ ಸುಭದ್ರೆಯನ್ನು ತರೆತರುವುದಾ?\ ಶಂಕರರಾಯ ನಿಗೆ. ಹೇಳಿದರು. . ಅವನು ತಾನೂ. ಬರುತ್ತೇನೆಂದನು. ಗಂಗಾ ಬಾಯಿಯು ನಿಮಗೆ. ಇನ್ನೂ ಸಂಪೂರ್ಣವಾಗಿ ಗುಣವಾಗಿಲ್ಲ. ಈಗ ಪ್ರಯಾಣಮಾಡಿದರೆ ತೊಂದರೆಯಾಗುವುದಿಲ್ಲವೆ! ” ಎಂ ದಳು. ಅದಕ್ಕವನು *ಆದರಾಗಲ್ಲಿ, ನಾನು ಬಂದೇ ತೀರಬೆಕು“ ಎಂದು ಮುಷ್ಣರ ಹಿಡಿದನು.

ಆದಿನವೇ . ಮೂವರೂ ಪುನಹೆಯಿಂದ ಹೊರಟು ಮಾರ ಣೆಯ ದಿನ ಸಾಯಂಕಾಲಕ್ಕೆ ಮುಂಚೆ ಹೈದರಾಬಾದನ್ನು ಸೇರಿ ದರು. ರೈಲ್ವೆ ಸ್ಟೇಷನ್‌ ನಲ್ಲಿ ನವಾಬನ್ಜು ಕಾದಿದ್ದನು. . ಅವನೂ ನಿರ್ಮಲಕ್ಕೆ ಹೊರಡಲು ಸಿದ್ದನಾಗಿಯೆ ಇದ್ದನು. ಮಾಧವನು ನವಾಬನನ್ನು ಸ್ತೋತ್ರಮಾಡಿ, ತಂದೆಗೂಅವನಿಗೂ ಪರಿಚಯವನ್ನು ಮಾಡಿಸಿದನು. ಶಂಕರರಾಯನೂ ನವಾಬನನ್ನು ಶ್ಲಾಘಿಸಿ “ನೀವು ಮಾಡಿದ ಉಪಕಾರಕ್ಕೆ ಎಂದೆಂದಿಗೂ ನಾವು ಕೃತಜ್ಞರಾಗಿರಬೇಕು” ಎಂದನು. ನವಾಬನು, “ಮಹರಾಜ್ ! ಇದರಲ್ಲಿ ನಾನು ಮಾಡಿದು ದೇನೂ ಇಲ್ಲ. ತಮ್ಮ ಮಗನಿಂದ ನಾನು ಪಡೆದಿರುವ ಉಪಕಾರದಲ್ಲಿ ಇದು ಸಾವಿರದಲ್ಲೊಂದುಪಾಲೂ ಆಗಲಾರದು. ತಮ್ಮ ಮಗನನ್ನು ನನ್ನ ಕುಟುಂಬದವರೆಲ್ಲರೂ ತಂದೆಯೆಂದೇ ಭಾವಿಸಿದ್ದೇವೆ“ ಎಂದನು.

ಹೈದರಾಬಾದಿನಿಂದ ಅವರಲ್ಲರೂ ಆ ರಾತ್ರಿಯೆ ಮುಂದಕ್ಕೆ ಪ್ರಯಾಣಮಾಡಿ ನಿರ್ಮಲವನ್ನು ಸೇರಿದರು. . ನವಾಬನು ಪೋಲೀಸು ಠಾಣೆಗೆ ಆಳನ್ನು ಕಳುಹಿಸಿ ಗಂಗಾರಾಮನನ್ನು ಬರಮಾಡಿಕೊಂಡನು. ಗಂಗಾರಾಮನು ನಡೆದ ಸಂಗತಿಯನ್ನೆಲ್ಲಾ ತಿಳಿಸಿದನು. ಅವನು ಸುಭ ದ್ರೆಯ ಸ್ಥಿತಿಯನ್ನು ವಿವರಿಸುತ್ತಿದ್ದಾಗ್ಗೆ ನವಾಬನು ಮೊದಲಾಗಿ ಎಲ್ಲರೂ ಕಣ್ಣೀರುಬಿಟ್ಟರು. ಗಂಗಾರಾಮನಿಗೇ ಗದ್ಗದಸ್ವರ ವುಂಟಾಯಿತು. ಅನಂತರ ಆಸ್ಪತ್ರೆಗೆ ಹೋಗಿ ಸುಭದ್ರೆಯನ್ನು ನೋಡಲು ಮುಖ್ಯವೈದ್ಯನ ಅಪ್ಪಣೆಯನ್ನು ಕೇಳಲಾಗಿ ಅವನು ತಲೆಯನ್ನಲ್ಲಾಡಿಸಿ “ಈಗ ಆಕೆಗೆ ಶುದ್ರಾಂಗವಾಗಿ ವಿಶ್ರಾಂತಿ ಬೇ ಕಾಗಿದೆ. ಒಂದು . ವಾರದದಿನ ದಯವಿಟ್ಟು ವಿರಾಮವನ್ನು ಕೊಡಿ” ಎಂದನು. ಶಂಕರರಾಯನು, .ಆಕೆಯ ದೇಹಸ್ಸಿತಿ ಹೇಗಿದೆ? ತಿಳಿಯ ಬಹುದೆ ? ” ಎಂದು ಕೇಳಿದುದಕ್ಕೆ ವೈದ್ಯನು, “ಮೊದಲು ನಾನು ಬರೀಉಪವಾಸದಿಂದ ಬಂದ ವ್ಯಾಧಿಯೆಂದು ತಿಳಿದು ೨-೩ ದಿನದ ಲ್ಲಿಯೇ ಗುಣವಾಗುವುದಾಗಿ ತಿಳಿದಿದ್ದೆನು, ಈಗ ನೋಡುವಲ್ಲಿ ಆಕೆಗೆ ಯಾವುದೋ ಮನೋವ್ಯಾವ್ಯಥೆಯಿರುವಂತೆ ಕಾಣುವುದು. ಎಷ್ಟು ಉಲ್ಲಾಸವನ್ನುಂಟುಮಾಡುವ ಮಾತನಾಡಿದರೂ ಹಸನ್ಮುಖಿಯಾಗು ವುದೇ ಇಲ್ಲ. ಅನ್ನಾ ಹಾರಗಳನ್ನೂ. ತೆಗೆದುಕೊಳ್ಳುವುದಿಲ್ಲ. ನನಗೆ ಯಾವುದೂ ಮುಂತೋಚುವುದೇ ಇಲ್ಲ. ಎಂದನು. ಶಂಕರರಾ ಯನು ಅವನೊಂದಿಗೆ ಏಕಾಂತವಾಗಿ . ಕೆಲವು ಮಾತುಗಳನ್ನು ಹೇಳಿ ಮಾಧವನನ್ನು ಅವನ ಜತೆಯಲ್ಲಿ ಕಳಿಹಿಸಿ ಕೊಟ್ಟನು. ಶಂಕ ರರಾಯನೂ, ನವಾಬನೂ, ಗೆಂಗಾಬಾಯಿಯನ್ನು ಬಿಡಾರದಲ್ಲಿ ಬಿಟ್ಟು, ಪೋಲೀಸುಕಾಣೆಗೆ ಹೋದರು.

ಆತ್ಮಾ ರಾಮನು ಶಂಳರರಾಯನನ್ನು ಕಂಡೊಡನೆಯೆ ಅವನ ಕಾಲುಗಳ . ಮೇಲೆಬಿದ್ದು ” ಸ್ವಾಮಿ ನನ್ನಂತಹ ಪಾಪಿಯನ್ನು ನೋಡಲು ದಯೆಮಾಡಿದಿರಾ ! ನನ್ನನ್ನು ನಿಮ್ಮ ಕೈಯಿಂದಲೇ ಸಂಹ ರಿಸಿ ನನ್ನ ಜನ್ಮವನ್ನು. ಪುನೀತವಾದುದನ್ನಾ ಗಿ ಮಾಡುವುದಿಲ್ಲವೆ ! ನಾನು ಸ್ವಾಮಿದ್ರೋಹಿ

ನನ್ನನ್ನು ಕಾಲಿನಿಂದಾದರೂ ಒದೆಯಿರಿ“ ಎಂದು . ಬಹಳವಾಗಿ ರೋದನಮಾಡಿದನು. ಶಂಕರರಾಯನು, ‘ಅತ್ಮಾ ರಾಮ ! ಸುಮ್ಮನೆ ಏತಕ್ಕೆ ರೋದಿಸುವೆ ? ನೀನು ಏನು ಮಾಡಿದರೂ ಈ ಸಾರಿ ನ್ಯಾಯಸ್ಥಾನದ ಕೈಯಿಂದ ತಪ್ಪಿಸಿಕೊಂಡು ಹೋಗಲಾರೆ. ಸುವ್ಮನೆ ಮರುಳುಮಾಡುವ ಮಾತುಗಳನ್ನೇತಕ್ಕಾ ಡುವೆ?” ಎಂದನು.

ಆತ್ಮಾ ರಾಮ -~ಮಹಾಪ್ರಭೋ! ನನ್ನ ಹೃದಯವನ್ನು ಬಿಚ್ಛಿ ತೋರಿಸಲವಶಾಶವಿದ್ದರೆ ಎಲ್ಲನೂ ತಮಗೆ ವ್ಯಕ್ತ ವಾಗುತ್ತಿತ್ತು. ಸರ್ವಾತ್ಮನಾ ಈ. ಪಾಪಿ ಶರೀರವ ನ್ನಿಟ್ಟುಕೊಂಡು ನನಗೆ ಜೀವಿಸಲು ಇಷ್ಟವಿಲ್ಲ. ತಾವು ನನ್ನ ಪೂರ್ವದ ತಪ್ಪಿತಗಳನ್ನು ಮನಸ್ಸಿನಲ್ಲಿಡುವುದಿಲ್ಲ ವೆಂದೂ ನನ್ನ ಹೆಸರಿನ ಮನುಷ್ಯನೊಬ್ಬನು ಇದ್ದ ನೆಂ ಬುದನ್ನು. ಮರೆತು ಬಿಡುವುದಾಗಿಯೂ ವಾಗ್ದಾನ ಮಾಡಿದರೆ ನಿರಾಳವಾಗಿ ಪ್ರಾಣವನ್ನು ಬಿಡುವೆನು,

ಶಂ- ಸುಭದ್ರೆಯ ವಿಷಯದಲ್ಲಿ ನೀನು. ತೋರಿಸಿರುವ ನಿಷ್ಕಾ ರುಣ್ಯವನ್ನು ಎಂದಿಂದಿಗೂ ಕ್ಷಮಿಸಲಾರಿನು. ನೀನು ಅವಳನ್ನು ನಿನ್ನ ಮನೆಯಲ್ಲಿಟ್ಟುಕೊಂಡಿದ್ದುದ ರಿಂದ ನನ್ನ ವಂಶಕ್ಕೆ ಅಪಕೀರ್ತಿಯುಂಟಾಗಿದೆ. ಇದನ್ನು. ಹೇಗೆ ಸಹಿಸಲಿ ?

ಅತ್ಮಾ-ಮಹಾಸ್ನಾಮಿ ! ನಾನು ಅರಿಕೆಮಾಡುವುದನ್ನು ಲಾಲಿಸಬ್ಗೇ ಕು. ನಾನು ಸುಭದ್ರಾಬಾಯಿಯವರನ್ನು ಬಹಳವಾಗಿ ಹಿಂಸೆಪಡಿಸಿದುದೇ ನೋ ನಿಜ. ಅವರು ನನಗೆ ತಾಯಿಯು ಮಗುವಿಗೆ ಶುಶ್ರೂಷೆಮಾಡುವಂತೆ ಮಾಡುತ್ತಿದ್ದರೆ ಹೊರತು ಅನ್ಯಥಾ ಇಲ್ಲ. ಅಲ್ಲದೆ ಅವರು ಇನ್ನೂ ಕನ್ಕಾವಸ್ಥೆಯಲ್ಲಿರುವುದರಿಂದ ತಮಗೆ ಲೋಕಾಪವಾದವೆಂದಿಗೂ ಬರಲಾರದು.

ಶಂ—ನಿನಗೆ ಓದು ಬರಹೆ ಬರುತತದೆಯೆ ?

ಅತ್ಮಾ__ಈಚಿಗೆ ಕಲಿತುಕೊಂಡಿದ್ದೇನೆ.

ಶಂ_-ಹಾಗಾದರೆ ಯಥಾರ್ಥವಾಗಿ, ನಡಿದ ಸಂಗತಿಯನ್ನು ಯಾವವಿಧವಾದ ಸಂದೇ ಹಕ್ಕೂ ಅಸ್ಪದವಿಲ್ಲದಂತೆ, ವಿವ ರಿಸಿ ಒಂದು ಕಾಗದವನ್ನು ಬರೆದು, ಒಬ್ಬ “ಮ್ಯಾಜಿ ಸ್ಟ್ರೇಟರ ಸಮಕ್ಷಮ ರುಜುವನ್ನು ಹಾಕಿ, ನನ್ನ ಕೈ ಯಲ್ಲಿ, ಕೊಟ್ಟಕೂಡಲೆ ನಿನ್ನ ತಪ್ಪಿತಗಳನ್ನೆ ಲ್ಲವನ್ನೂ ಮನ್ತಿ ಸುವುದಲ್ಲದೆ ಪುನಃ ನನ್ನ ಸೇವೆಯಲ್ಲಿರಲು ನಿನಗೆ ಇಷ್ಟವಿದ್ದ ರೆ ಅದಕ್ಕೂ, ಅವಕಾಶವನ್ನು ಕೊಡುವೆನು.

ಆತ್ಮಾ–ತಮ್ಮ ವಾಗ್ದಾನಕ್ಕೋಸ್ಕರ ನನ್ನ ಹೃದಯವು ಕೃತಜ್ಗತೆಯಿಂದ ಉಬ್ಬಿಬಿರಿಯುತ್ತಿದೆ. ದಯವಿಟ್ಟು ‘ ಮ್ಯಾಜಿಸ್ಟ್ರೇಟ’ ರನ್ನು ಕರೆದುತರೋಣಾಗಲಿ.

ಶಂಕರರಾಯನೂ ನವಾಬನೂ ಹೊರಟು ಹೋದರು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸದಾಶಿವಗೆ
Next post ಆಕಾಶದ ಬೇರು

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…