ಶ್ರೀಗುರುವಿಗಾಗಿ ತನುಧಾರಿಯಾಗಿ ಬಂದಂಥ ಸದಾಶಿವಗೆ
ಅನಂತಾನಂತ ನತಿಯ ಉಪಕೃತಿಯ ಒಪ್ಪಿಸುವೆವು ಇವಗೆ.
ಎಷ್ಟು ದುಡಿದೆ ನೀನೆಷ್ಟು ಪಡೆದೆ ಹೇ ನಮೋನಮೋ ನಿನಗೆ.

ಕಷ್ಟವೇನು, ಸಂಘರ್ಷವೇನು, ಪಾಡೇನು, ತಾಳ್ಮೆಯೇನು?
ನಮಗಾಗಿ ಕಲ್ಪ, ನಮಗಾಗಿ ಶಿಲ್ಪ ಸಾಧಿಸಿದೆ ನಮಗೆ ನೀನು.

ಬಾಗಿ ಕೂಗಿ ಬೇಡುವೆವು ನಿನಗೆ ಅರೆಚಣವು ಕೂಡ ನೋಡು
ನಮ್ಮ ಸಂಪದವು ನಿನ್ನ ಪ್ರಾಪ್ತಿ ಇದ ಮರೆಯದಂತೆ ಮಾಡು.
*****