ಕುಂಟ ಕುರುಡರೆಂಟು ಮಂದಿ ರಂಟಿ ಹೊಡೆಯಲೋ
ಸೊಂಟರಗಾಳಿಗೆ ಸಿಗದೇ ಈ ಲೋಕವ ರಂಟಿ ಹೊಡೆಯಲೋ ||ಪ||

ಸುಜ್ಞಾನವೆಂಬು ಕುಂಟಿಯ ಹೂಡಿ ರಂಟಿ ಹೊಡೆಯಲೋ
ಪ್ರಜ್ಞಾನವೆಂಬು ಕೂರಿಗಿ ಹೂಡಿ ಬೀಜಾ ಬಿತ್ತಲೋ ||೧||

ಕರಿಯಬೀಜಾ ಬಿಳಿಯಬೀಜಾ ಬೀಜಾ ಹಿಡಿಯಲೋ
ಅರಿಯದಾದ ಮಾತು ಇದರ ಮರ್ಮ ತಿಳಿಯಲೊ ||೨||

ಬಣ್ಣ ಕೆಂಪು ಹಸರು ಹಳದಿ ವರಣಾ ತಿಳಿಯಲೋ
ಧರಣಿಪತಿ ಶಿಶುವಿನಾಳ ಮರ್ಮವರಿಲೋ ||೩||

*****