
ದಿನವಿಡೀ ಭುವಿಯನ್ನು ಬಿಸಿಲಿನ ಜಳದಿಂದ ತೋಯಿಸಿದ್ದ ಸೂರ್ಯ ನಿಧಾನವಾಗಿ ಪಶ್ಚಿಮದಲ್ಲಿ ಮುಳುಗುತ್ತಿದ್ದ. ಸೂರ್ಯನೆಲ್ಲಾದರೂ ಮುಳುಗುವುದು ಸಾಧ್ಯವೆ? ಭೂಮಿಯ ಒಂದು ಮೈಯನ್ನು ಕತ್ತಲೆ ಮಾಡಿ ಮತ್ತೊಂದನ್ನು ಮುತ್ತಿ ತೋಯಿಸುವ ಸೂರ್ಯನ ಈ ಚಕ್ಕಂದ ಅದೆಷ್...
ನಾನೇ ಟೀಚರ್ ಆಗಿದ್ರೆ ಅಪ್ಪ ಅಮ್ಮ ಎಲ್ಲರಿಗೂ ಸರಿಯಾಗ್ ಪರೀಕ್ಷೆ ಮಾಡ್ತಿದ್ದೆ ಕರೆಕ್ಟು ಮಾರ್ಕ್ಸ್ ಕೊಡ್ತಿದ್ದೆ! ಅಪ್ಪನ ಜೋರಿಗೆ ಇಪ್ಪತ್ತು ಅಜ್ಜಿಯ ಮುದ್ದಿಗೆ ಎಪ್ಪತ್ತು ಚಿವುಟೀ ಗುದ್ದಿ ಅಳಿಸೋ ಅಣ್ಣನ ಕೀಟಲೆ ಬುದ್ಧಿಗೆ ಒಂಬತ್ತು! ಆಟ ಆಡಿಸೋ...
ಮದುವೆ ಆದ ಮೊದಲ ವರ್ಷ ಗಂಡ ಮಾತನಾಡುತ್ತಾನೆ. ಹೆಂಡತಿ ಅವನ ಮಾತು ಕೇಳುತ್ತಾಳೆ. ಎರಡನೇ ವರ್ಷದಲ್ಲಿ ಹೆಂಡತಿ ಮಾತನಾಡುತ್ತಾಳೆ; ಗಂಡ ಕೇಳುತ್ತಾನೆ. ಮೂರನೇ ವರ್ಷದಿಂದ ಗಂಡ ಹೆಂಡತಿ ಇಬ್ಬರೂ ಜೊತೆಯಾಗಿ ಮಾತಾಡುತ್ತಾರೆ. ತಮಾಷೆಯಂದರೆ ಇವರಿಬ್ಬರ ಮಾತನ...
ನಿರಾಳ ಲಿಂಗವ ಕಾಂಬುದಕ್ಕೆ ಮನ ಮತ್ತೊಂದೆಡೆಗೆ ಹರಿಯದಿರಬೇಕು. ನೆನಹು ಲಿಂಗವಲ್ಲದೆ ಮತ್ತೊಂದ ನೆನೆಯದಿರಬೇಕು. ತನುವಿನಲ್ಲಿ ಮರಹಿಲ್ಲದಿರಬೇಕು. ಕಾಳಿಕೆ ಹೋಗದಿರಬೇಕು. ಇಂತು ನಿಶ್ಚಿಂತವಾಗಿ, ಚಿತ್ತಾರದ ಬಾಗಿಲವ ತೆರೆದು, ಮುತ್ತುಮಾಣಿಕ ನವರತ್ನ ತ...
ಮರಮರವನು ಸುತ್ತಿಮುತ್ತಿ ಕೊಂಬೆ ರೆಂಬೆ ಸವರಿ ಏರಿ ಎಲೆಎಲೆಯನು ಎಣಿಸುವಂಥ ಹುಚ್ಚು ಹಂಬಲಾ ಹೂವ ಹೂವ ಮೂಸುವಂಥ ಆಶೆ ಬೆಂಬಲಾ ಗುಡ್ಡ ಗುಡ್ಡ ಏರಿ ಇಳಿದು ಸೆಡ್ಡು ಹೊಡೆದು ಸೆಟೆದು ನಿಂತು ಅಡ್ಡ ಹಾದಿಯಲ್ಲಿ ಬಹರ ತರಿವ ಆಶಯಾ ಕಡ್ಡಿಯೆ ಬ್ರಹ್ಮಾಸ್ತ್ರ...
ಮೊದಲಿನಿಂದಲೂ ಅಂದರೆ ಪ್ರಾಚೀನಕಾಲದಿಂದಲೂ ಈ ಮೀಸಲಾತಿ ಇದ್ದಿತೆ? ಸ್ವಾತಂತ್ರ್ಯಾನಂತರ ಹರಿಜನರ ಉದ್ಧಾರಕ್ಕಾಗಿ ಸರ್ಕಾರ ಮೀಸಲಾತಿ ಜಾರಿಗೆ ತಂದಿತು. ಈಗ ಇದರ ಬಗ್ಗೆ ಕಿಸರುಗಣ್ಣುಬಿಡುವವರ ಸಂಖ್ಯೆ ಹೆಚ್ಚುತ್ತಿದೆ, ಮೀಸಲಾತಿ ಪಡೆಯುವವರ ಬಗ್ಗೆ ಅಸೂಯ...
ದೇವನೊಬ್ಬ ನಾಮ ಹಲವು ದಾನವನೊಬ್ಬ ಕ್ರೈಮು ಹಲವು ಮಾನವನೊಬ್ಬ ಮನಸ್ಸು ಹಲವು ಒಲವು ಒಂದೆ ಪರಿಯು ಹಲವು! *****...
ನಮಗೆ ಭಾವನೆಗಳಿವೆ ರೆಂಬೆ ಕೊಂಬೆಗಳಂತೆ ಗಟ್ಟಿಯಾಗಿ ಹರಡಲು ಬೇರುಗಳಿಲ್ಲ ನಿಮಗೆ ಬೇರುಗಳಿವೆ ಆದರೆ ಹರಡಲು ಭಾವನೆಗಳಿಲ್ಲ. ನಾವು ಮೃದು ಹೃದಯಿಗಳು ಅಂತೆಯೇ ನಮ್ಮ ತಲೆದಿಂಬುಗಳು ತೋಯುತ್ತವೆ ನೀವು ಕಠೋರ ಹೃದಯಿಗಳು ನಿಮ್ಮನ್ನು ಸರಾಯಿ ಅಂಗಡಿಗಳೇ ತೋಯ...
ಇಲ್ಲಿ ಹಿಂದೊಮ್ಮೆ ಕೋಣೆಗಳ ತುಂಬ ಸಿಗರೇಟು ತುಂಡುಗಳಿದ್ದವು. ಹರಿದ ಕಾಗದಗಳಲ್ಲಿ ಅಕ್ಷರಗಳು ಚೂರಾಗಿ ಎಲ್ಲೆಲ್ಲೂ ಬಿದ್ದಿದ್ದವು. ಪುಸ್ತಕದ ಅಟ್ಟಳಿಕೆಯಲ್ಲಿ ಅನಂತಮೂರ್ತಿ, ಲಂಕೇಶ ಒಟ್ಟಿಗೇ ಕುಳಿತ್ತಿದ್ದರು. ಮೇಜಿನ ಮೇಲಿದ್ದ ಮೈಸೂರಿಂದ ತಂದ ಆನ...
ನಮ್ಮ ಪಿಂಜ್ರಾಪೋಲ್ ಗೋಮಾತೆಯಲ್ಲವಯ್ಯ; ಕಾಮಧೇನುವೆಂಬ ಅಪರೂಪದ ಹಸು; ಅದು ಸ್ವರ್ಗದಲ್ಲಿದೆಯಂತೆ, ಅದನ್ನು ಪಡೆದವನು ಮೂರು ಲೋಕದೊಡೆಯ ಇಂದ್ರ ದೇವೇಂದ್ರ, ಬರೇ ಕೇಳಿದ ಕಥೆ ಅನ್ನು: ಅದರ ಸೌಂದರ್ಯವನ್ನು ಕಂಡವರೂ ಇಲ್ಲ, ಅದರ ಹಾಲು ಕುಡಿದವರಾರು ವಾಪ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...
ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....















