ಗಂಟಲಲ್ಲಿ ಸಿಕ್ಕಿಕೊಂಡ ಹೊಟ್ಟೆ

ಇವರ ಡೊಳ್ಳು ಹೊಟ್ಟೆಗಳನೆಲ್ಲ
ನಗಾರಿ ಬಾರಿಸಬೇಕು ಒಡೆಯುವವರೆಗೆ
ಇವರ ಮುಖವಾಡಗಳ ಕಿತ್ತೆಸೆದು
ಇವರ ಕತ್ತೆ ಮುಖಗಳ
ಕತ್ತುಹಿಡಿದು ಹೊಲೆಗೇರಿಗಳ
ಕೊಳಚೆಗಳಲ್ಲದ್ದಬೇಕು
ಇವರು ಕಟ್ಟಿದ ಸಂಚುಕೋಟೆಗಳ
ನುಡಿಗುಂಡುಗಳಿಂದ ಒಡೆಯಬೇಕು
ಇವರು ಹಾಕಿದ ಲಕ್ಷ್ಮಣರೇಖೆಗಳನೆಲ್ಲ
ಅವಲಕ್ಷಣವಾಗಿ ಅಳಿಸಿ
ಸೀಮೋಲ್ಲಂಘನ ಮಾಡಬೇಕು

ಇವರ ಹೂದೋಟಗಳಲ್ಲೆಲ್ಲ
ಇವರ ತೊಗಲು ಮಾಂಸಗಳ
ಕಿತ್ತು ಹಾಕಿ ಇವರಸ್ಥಿಪಂಜರಗಳು
ಅದೆಷ್ಟು ಅಸ್ಥಿರ ಎಂಬುದ
ಜಗತ್ತಿಗೇ ತೋರಿಸಬೇಕು;
ಕಂಡದ್ದನ್ನೆಲ್ಲಾ ಕೆಂಡಕಾರಿ ಸುಡಬೇಕು,

ಇವರ ಮಕಮಲ್ಲ ಬಟ್ಟೆಗಳ ಕಳಚಿ ಒಗೆದು
ಮಣ್ಣಿನುಡಿಗೆಗಳನುಡಿಸಿ
ದುಡಿಯಹಚ್ಚಬೇಕು,
ಇವನೆಲ್ಲ ಬೇಕು ಮಾಡಲು
ಘೋಷಣೆ ಕೂಗಲು ಬಾಯ್ದೆರೆದಾಗ
ಗಂಟಲಲ್ಲಿ ಸಿಕ್ಕಿಕೊಂಡು ಹೊಟ್ಟೆ
ಮಾತುಗಳನೆಲ್ಲ ನುಂಗಿ
ಬೇತಾಳದಂತೆ ಮುಂದೆ ನಿಂತಿತು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಂಡು ಮೆಟ್ಟಿನ ನಾಡಿನ ಗಂಡುಗಲಿ ಮದಕರಿ ನಾಯಕ
Next post ಲಿಂಗಮ್ಮನ ವಚನಗಳು – ೭೨

ಸಣ್ಣ ಕತೆ

  • ದೇವರ ನಾಡಿನಲಿ

    ೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ.... ದಕ್ಷಿಣ ಕನ್ನಡ ಜಿಲ್ಲೆಯಲ್ಲಿ... ಹರ್ಷದಿ,… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…